Dragon Fruit: ಈ ಯುವಕ ಡ್ರ್ಯಾಗನ್ ಫ್ರೂಟ್ ಬೆಳೆದು ಕೈತುಂಬಾ ಸಂಪಾದಿಸುತ್ತಿದ್ದಾನೆ, ನೀವೂ ಬೆಳೆಯಬಹುದು‌..ಫುಲ್ ಡೀಟೆಲ್ಸ್ ಇಲ್ಲಿದೆ

ಚಿತ್ರದುರ್ಗ (Chitradurga) ಜಿಲ್ಲೆಯ ಸಿರಿಗೆರೆ ಸಮೀಪದ ಬೀರವಾರದ ಪದವೀಧರ ದರ್ಶನ್​ ಎಂಬುವವರು ಒಂದು ಜಮೀನಿನಲ್ಲಿ ಡ್ರ್ಯಾಗನ್‌ ಫ್ರೂಟ್‌ (Dragon Fruit) ಬೆಲೆಯುವ ಮೂಲಕ ಹೊಸ ಪ್ರಯೋಗಕ್ಕೆ ಕೈ ಹಾಕಿದ್ದಾರೆ. ಈ ಮೂಲಕ ಸುತ್ತಮುತ್ತಲಿನ ರೈತರ ಗಮನ ಸೆಳೆದಿದ್ದಾರೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಚಿತ್ರದುರ್ಗ (ಮಾರ್ಚ್ 23): ಕೊರೋನಾ (Corona) ಹಾವಳಿಯ ನಂತರ ಅದೆಷ್ಟೋ ಪದವೀಧರರು ನಿಧಾನವಾಗಿ ಕೃಷಿಯತ್ತ ಒಲವನ್ನು ತೋರುತ್ತಿದ್ದಾರೆ ಎಂದರೂ ತಪ್ಪಾಗಲಾರದು. ಅದೇ ರೀತಿ ಇಲ್ಲೊಬ್ಬ ಪದವೀಧರ ಕೃಷಿಯಲ್ಲಿ ತೊಡಗಿಕೊಂಡು ಯಶಸ್ಸು ಪಡೆಯುವ ಮೂಲಕ ಎಲ್ಲರಿಗೂ ಮಾದರಿಯಾಗಿದ್ದಾನೆ. ಹೌದು, ಪ್ರತಿಬಾರಿಯೂ ಹತ್ತಿ, ಮೆಕ್ಕೆಜೋಳದಂತಹ ಬೆಳೆ ಬೆಳೆದು ಕೈ ಸುಟ್ಟಿಕೊಳ್ಳುತ್ತಿದ್ದ ರೈತ ಈ ಬಾರಿ ತನ್ನ ಜಮೀನಿನ ಒಂದು ಎಕರೆಯಲ್ಲಿ ನೂತನ ಪ್ರಯೋಗ ಮಾಡುವ ಮೂಲಕ ಉತ್ತಮ ಫಸಲಿನ ನಿರೀಕ್ಷೆಯಲ್ಲಿದ್ದಾನೆ. ಚಿತ್ರದುರ್ಗ (Chitradurga) ಜಿಲ್ಲೆಯ ಸಿರಿಗೆರೆ ಸಮೀಪದ ಬೀರವಾರದ ಪದವೀಧರ ದರ್ಶನ್​ ಎಂಬುವವರು ಒಂದು ಜಮೀನಿನಲ್ಲಿ ಡ್ರ್ಯಾಗನ್‌ ಫ್ರೂಟ್‌ (Dragon Fruit) ಬೆಲೆಯುವ ಮೂಲಕ ಹೊಸ ಪ್ರಯೋಗಕ್ಕೆ ಕೈ ಹಾಕಿದ್ದಾರೆ. ಈ ಮೂಲಕ ಸುತ್ತಮುತ್ತಲಿನ ರೈತರ ಗಮನ ಸೆಳೆದಿದ್ದಾರೆ. ಇನ್ನು, ಅಂತರಾಷ್ಟ್ರೀಯ (International) ಮಟ್ಟದಲ್ಲಿ ಈ ಬೆಳೆಗೆ ಉತ್ತಮ ಬೇಡಿಕೆ ಇರುವುದರಿಂದ ಅನೇಕ ರೈತರು ಈ ಬೆಳೆಯತ್ತ ಆಸಕ್ತಿ ತೋರುತ್ತಿದ್ದಾರೆ.

ಡ್ರ್ಯಾಗನ್‌ ಫ್ರೂಟ್‌ ಬೆಳೆಯುವ ವಿಧಾನ ಹೇಗೆ?:

ಡ್ರ್ಯಾಗನ್‌ ಫ್ರೂಟ್‌ ಬೆಳೆಯಲು ನೀವು ಮೊದಲಿಗೆ ಜಮೀನನ್ನು ಹದ ಗೊಳಿಸಿ, ಬದುಗಳನ್ನು ನಿರ್ಮಿಸಿಕೊಳ್ಳಬೇಕು. ಬಳಿಕ ಈ ಬದುಗಳ ಮೇಲೆ ಕಲ್ಲುಕಂಬ ನಿಲ್ಲಿಸಿ. ನಂತರ 1 ಕಂಬದ ಮೇಲೆ ಕಬ್ಬಿಣದ ಸರಳುಗಳನ್ನು ಜೋಡಿಸಿ. ಆದರೆ 1 ಕಂಬದಿಂದ ಇನ್ನೊಂದು ಕಂಬಕ್ಕೆ ಕನಿಷ್ಠ ಪಕ್ಷ 8 ಅಡಿ ಅಂತರವಿರಬೇಕು. ಅಲ್ಲದೇ ಒಂದು ಬದುವಿಂದ ಮತ್ತೊಂದು ಬದುವಿಗೆ 12 ಅಡಿ ಅಂತರ ಕಾಯ್ದುಕೊಳ್ಳಬೇಕು. ಈ ರೀತಿ ಮಾಡಿದ್ದಲ್ಲಿ 1 ಎಕರೆಗೆ ಸರಿಸುಮಾರು 500 ಕಂಬಗಳನ್ನು ನಿಲ್ಲಿಸಬಹುದು ಎಂದು ರೈತ ದರ್ಶನ್​ ಹೇಳುತ್ತಾರೆ.

ನಾಟಿ:

ಪ್ರತಿ ಕಂಬಕ್ಕೆ 4 ರಿಂದ 5 ಹಣ್ಣಿನ ಸಸಿಗಳಂತೆ ಒಟ್ಟು 2000ಕ್ಕೂ ಹೆಚ್ಚು ಕೆಂಪು, ಗುಲಾಬಿ ಬಣ್ಣದ ತುಂಡುಗಳನ್ನು ತಂದು ನಾಟಿ ಮಾಡಿದ್ದೇನೆ. ಇವುಗಳಿಗೆ ಹನಿ ನೀರಾವರಿ ಮೂಲಕ ನೀರನ್ನು ನೀಡುಲಾಗುತ್ತಿದ್ದು, ಒಂದು ಎಕರೆಗೆ ಸುಮಾರು 5 ರಿಂದ 6 ಲಕ್ಷ ಖರ್ಚು ಮಾಡಲಾಗಿದೆ. ಇನ್ನ, 15 ರಿಂದ ರಿಂದ 18 ತಿಂಗಳ ಒಳಗೆ ಡ್ರ್ಯಾಗನ್‌ ಫ್ರೂಟ್‌ ಕಟಾವಿಗೆ ಬರುತ್ತದೆ. ಅಲ್ಲದೇ ಕಡಿಮೆ ನೀರಿನಲ್ಲಿ ಈ ಬೆಳೆ ಬೆಳೆಯಬಹುದಾಗಿದ್ದು, ಕೊಟ್ಟಿಗೆ ಗೊಬ್ಬರ, ಕೋಳಿ ಗೊಬ್ಬರಗಳನ್ನು ಅಗತ್ಯಕ್ಕೆ ತಕ್ಕಷ್ಟು ಪೂರೈಸಿದರೆ ಸಾಕು. ಜೊತೆಗೆ 1 ಸಿಸಿಗೆ 60 ರೂ. ನೀಡಿ ಮಹಾರಾಷ್ಟ್ರದಿಂದ ತಂದಿರುವುದಾಗಿ ರೈತ ಹೇಳಿದ್ದು, ಸ್ವಲ್ಪ ತಡ ಎನಿಸಿದರೂ ಉತ್ತಮ ಫಸಲಿ ಬರುವ ನಿರೀಕ್ಷೆಯಿದೆ ಎಂಬ ಅಭಿಪ್ರಾಯವನ್ನು ತಿಳಿಸಿದ್ದಾರೆ.

ಇದನ್ನೂ ಓದಿ: Dragon Fruit ಬೆಳೆಗಾರರಿಗೆ ಸಿಹಿ ಸುದ್ದಿ.. ಭರ್ಜರಿ ಸಬ್ಸಿಡಿ ಘೋಷಿಸಿದ ಸರ್ಕಾರ..

ಡ್ರ್ಯಾಗನ್‌ ಫ್ರೂಟ್‌ ನ ನಿರ್ವಹಣೆ:

* ಈ ಬೆಳೆಗೆ ಹೆಚ್ಚು ನೀರು ಬೇಕಾಗಿಲ್ಲ, ಕಡಿಮೆ ನೀರಿನಲ್ಲಿ ಈ ಬೆಳೆಯನ್ನು ಬೆಳೆಯಬಹುದಾಗಿದೆ.
* ಬೇಸಿಗೆ ಕಾಲದಲ್ಲಿ ಒಂದು ಗಿಡಕ್ಕೆ ಒಂದು ವಾರಕ್ಕೆ ಕನಿಷ್ಠ 10 ಲೀಟರ್‌ ನೀರು ನೀಡದರೂ ಸಾಕಾಗುತ್ತದೆ.
* ಒಮ್ಮೆ ಸಸಿ ನೆಟ್ಟ ನಂತರದಲ್ಲಿ ಇದರ ನಿರ್ವಹಣೆ ಸುಲಭವಾಗಿದೆ.
* ಬಹುಮುಖ್ಯವಾಗಿ ಡ್ರ್ಯಾಗನ್‌ ಫ್ರೂಟ್‌ ಗಿಡಕ್ಕೆ ಯಾವುದೇ ರೀತಿಯ ಕೀಟ-ರೋಗ ಸಮಸ್ಯೆಗಳು ಬಾದಿಸುವುದು ತೀರಾ ಕಡಿಮೆ.
* ಅಲ್ಲದೇ ನಿರಂತರ ಆದಾಯವನ್ನು ನೀಡುತ್ತದೆ.

ಡ್ರ್ಯಾಗನ್‌ ಫ್ರೂಟ್‌ ನ ಮಾರುಕಟ್ಟೆ:

ಡ್ರ್ಯಾಗನ್‌ ಹಣ್ಣಿಗೆ ಆಸ್ಟ್ರೇಲಿಯಾ, ಶ್ರೀಲಂಕಾ, ಥೈಲ್ಯಾಂಡ್‌, ಅಮೆರಿಕಾ ದೇಶಗಳಲ್ಲಿ ಹೆಚ್ಚು ಬೇಡಿಕೆ ಇದೆ. ಈಗ ಮಾರುಕಟ್ಟೆಯಲ್ಲಿ 1 ಕೆಜಿ ಡ್ರ್ಯಾಗನ್‌ ಪ್ರೂಟ್ಸ್‌ಗೆ 180 ರಿಂದ 250 ರೂ. ವರೆಗೆ ಬೆಲೆಯಿದ್ದು, ಮುಂಬೈ, ಬೆಂಗಳೂರು, ಮಹಾರಾಷ್ಟ ಮುಂತಾದ ಕಡೆಗಳಿಂದ ಖರೀದಿದಾರರು ಬರುತ್ತಾರೆ ಎಂದು ದರ್ಶನ್ ಮಾಹಿತಿ ನೀಡಿದರು.

ಇದನ್ನೂ ಓದಿ: Dragon fruit: ಡ್ರ್ಯಾಗನ್ ಹಣ್ಣು ಸೇವಿಸುವುದರಿಂದ ಇಷ್ಟೆಲ್ಲಾ ಪ್ರಯೋಜನವಿದೆಯಾ...!

ಏನಿದು ಡ್ರ್ಯಾಗನ್‌ ಫ್ರೂಟ್ಸ್‌? ಇದರ ಪ್ರಯೋಜನಗಳೇನು?:

ಡ್ರ್ಯಾಗನ್‌ ಫ್ರೂಟ್ಸ್‌ ತಿನ್ನಲು ರುಚಿಕರವಾಗಿರುವಂತಹ ಒಂದು ಜಾತಿಯ ಹಣ್ಣು. ಇದರಲ್ಲಿ ಔಷಧೀಯ ಗುಣಗಳೂ ಹೊಂದಿದ್ದು, ಹೀಗಾಗಿ ಇದು ಬಹುಬೇಡಿಕೆ ಹಣ್ಣಿಗಿದೆ. ಇದು ಹೆಚ್ಚು ನೀರಿನಾಂಶ, ಪ್ರೋಟೀನ್‌ ಒಮೆಗಾ-3, 6 ಹಾಗೂ ಕೊಬ್ಬಿನ ಆಮ್ಲಗಳಿಂದ ಸಂಮೃದ್ಧವಾಗಿದೆ. ಅಲ್ಲದೆ ಬಿ.ಪಿ, ಹೃದಯಸಂಬಂಧಿ ಕಾಯಿಲೆ, ಸಕ್ಕರೆ ಕಾಯಿಲೆ, ಗ್ಯಾಸ್ಟಿಕ್‌, ಕೊಲೆಸ್ಟ್ರಾಲ್‌ ಕಡಿಮೆಗೊಳಿಸುವಲ್ಲಿ ಸಹಾಯಕವಾಗಿದೆ. ಜೊತೆಗೆ ನಮ್ಮದ ದೇಹದಲ್ಲಿ ಬಿಳಿರಕ್ತಕಣಗಳನ್ನು ಹೆಚ್ಚಿಸುವಲ್ಲಿ ಮತ್ತು ಡೆಂಗಿ ಜ್ವರಕ್ಕೆ ಮತ್ತು ಕ್ಯಾನ್ಸರ್‌ ಸೇರಿದಂತೆ ಅನೇಕ ಕಾಯಿಲೆಗಳಿಗೆ ಈ ಹಣ್ಣು ರಾಮಬಾಣವಿದ್ದಂತೆ. ಅಲ್ಲದೆ ಪ್ರಮುಖವಾಗಿ ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿಸುವಲ್ಲಿ ಇದು ಬಹಳ ಉತ್ತಮವಾಗಿದೆ. ಜೊತೆಗೆ ಇದರ ಸಿಪ್ಪೆ ತೆಗೆದು ಚರ್ಮ ಕಾಯಿಲೆ ಇರುವವರು 2 ರಿಂದ 3 ಬಾರಿ ಸ್ನಾನ ಮಾಡಿದರೆ ಚರ್ಮ ಕಾಯಿಲೆ ದೂರವಾಗುತ್ತದೆ ಎಂದು ಹೇಳಲಾಗುತ್ತದೆ.
Published by:shrikrishna bhat
First published: