ಮೊನ್ನೆ ತಾನೇ ಟೆಸ್ಲಾ-ಟ್ವಿಟರ್ ಮಾಲೀಕ ಎಲೋನ್ ಮಸ್ಕ್ (Elon Musk) ವರ್ಷಾರಂಭದಲ್ಲೇ ಬರೊಬ್ಬರಿ 16.5 ಲಕ್ಷ ಕೋಟಿ ರೂ ಮೌಲ್ಯದ ಆಸ್ತಿ ಕಳೆದುಕೊಂಡು ಹೊಸ ದಾಖಲೆ (New Record) ಬರೆದಿದ್ದರು. ಈಗ ಅದರ ಬೆನ್ನಲ್ಲೇ ಚೀನಾ (China) ದ ಬಿಲಿಯನೇರ್ ಒಬ್ಬರ ಸಂಪತ್ತಿನಲ್ಲಿ ತೀವ್ರ ಕುಸಿತ ವರದಿಯಾಗಿದೆ. ಚೀನಾದ ಪರಿಸ್ಥಿತಿ ಸದ್ಯ ಹದಗೆಟ್ಟಿದೆ. ಮರುಕಳಿಸಿದ ಕೊರೋನಾ (Corono) ಅಟ್ಟಹಾಸ, ಸಾಲು ಸಾಲು ಲಾಕ್ಡೌನ್(Lockdown) , ಸಾವಿರಾರು ಸಂಖ್ಯೆಯಲ್ಲಿ ಸಾವು-ನೋವು, ಅಂತಾರಾಷ್ಟ್ರೀಯ ವಿಮಾನ ಹಾರಾಟ ಸ್ಥಗಿತ ಹೀಗೆ ಹತ್ತಾರು ಪರಿಸ್ಥಿತಿಯನ್ನು ಚೀನಾ ಎದುರಿಸುತ್ತಿದ್ದು, ಆರ್ಥಿಕ ಸಂಕಷ್ಟಕ್ಕೆ ಒಳಗಾಗಿದೆ.
ಶೇ.93 ಸಂಪತ್ತು ಕಳೆದುಕೊಂಡ ಚೀನಾದ ಶ್ರೀಮಂತ ವ್ಯಕ್ತಿ
ಈ ಎಲ್ಲಾ ಪರಿಣಾಮದಿಂದಾಗಿ ಚೀನಾದ ಕೋಟ್ಯಾಧಿಪತಿ, ಶ್ರೀಮಂತ ವ್ಯಕ್ತಿ ಎನಿಸಿರುವ ಉದ್ಯಮಿ ಹುಯ್ ಕಾ ಯಾನ್ ತಮ್ಮ ಸಂಪತ್ತಿನ ಶೇ.93 ರಷ್ಟು ಮೊತ್ತವನ್ನು ಕಳೆದುಕೊಂಡಿದ್ದಾರೆ.
ಎವರ್ಗ್ರಾಂಡ್ ಗ್ರೂಪ್ನ ಅಧ್ಯಕ್ಷ ಹುಯ್ ಕಾ ಯಾನ್
ಚೀನಾ ಎವರ್ಗ್ರಾಂಡ್ ಗ್ರೂಪ್ನ ಅಧ್ಯಕ್ಷ ಹುಯ್ ಕಾ ಯಾನ್ ದೇಶದ ಅತ್ಯಂತ ಶ್ರೀಮಂತ ಮತ್ತು ಪ್ರಭಾವಿ ಉದ್ಯಮಿಗಳಲ್ಲಿ ಒಬ್ಬರು. $42 (ಶತಕೋಟಿ ಡಾಲರ್ )ಬಿಲಿಯನ್ ಮೌಲ್ಯ ಸಂಪತ್ತು ಹೊಂದಿದ್ದ ಇವರು ಏಷ್ಯಾದ ಎರಡನೇ ಶ್ರೀಮಂತ ವ್ಯಕ್ತಿ ಎನಿಸಿಕೊಂಡಿದ್ದರು. ಪ್ರಸ್ತುತ ಚೀನಾದ ಕೋಟ್ಯಾಧಿಪತಿ ಸಂಪತ್ತು $3 ಬಿಲಿಯನ್ಗೆ ಕುಸಿದಿದೆ ಎಂದು ಬ್ಲೂಮ್ಬರ್ಗ್ ಬಿಲಿಯನೇರ್ ಇಂಡೆಕ್ಸ್ ತೋರಿಸಿದೆ.
ಇದನ್ನೂ ಓದಿ: ಜಸ್ಟ್ 1705 ರೂಪಾಯಿಗೆ ಏರ್ ಇಂಡಿಯಾ ವಿಮಾನದಲ್ಲಿ ಪ್ರಯಾಣಿಸಿ, ಇಂದೇ ಟಿಕೆಟ್ ಬುಕ್ ಮಾಡಿ!
ಕಂಪನಿ ಉಳಿವಿಗಾಗಿ ಹುಯ್ ಕಾ ಯಾನ್ ಅವಿರತ ಹೋರಾಟ
ಎವರ್ಗ್ರಾಂಡ್ ಸಂಸ್ಥೆ 300 ಬಿಲಿಯನ್ ಡಾಲರ್ ಮೊತ್ತದ ಲಿಯಾಬಿಲಿಟಿ ಜೊತೆ ದೇಶದಲ್ಲಿ ಅತ್ಯಂತ ಹೆಚ್ಚು ಸಾಲ ಹೊಂದಿರುವ ಡೆವಲಪರ್ ಕಂಪನಿಯಾಗಿದೆ, ಆದಾಗ್ಯೂ ಕಂಪನಿ ಚೀನಾದಲ್ಲಿ ಅನೇಕ ಸಮಸ್ಯೆಗಳನ್ನು ಎದುರಿಸುತ್ತಿದೆ. ಈ ಎಲ್ಲಾ ಸಮಸ್ಯೆಗಳನ್ನು ದೂರ ಮಾಡಿ ಕಂಪನಿಯನ್ನು ಉಳಿಸಲು ಹುಯಿ ಕಾ ಯಾನ್ ತನ್ನ ಮನೆ, ಖಾಸಗಿ ಆಸ್ತಿ ಹಾಗೂ ಖಾಸಗಿ ಜೆಟ್ಗಳನ್ನು ಕೂಡ ಮಾರಾಟ ಮಾಡಿದ್ದಾರೆ.
200,000 ಉದ್ಯೋಗಿಗಳಿರುವ ಕಂಪನಿ
ಕಂಪನಿಯು ಸುಮಾರು 200,000 ಉದ್ಯೋಗಿಗಳನ್ನು ಹೊಂದಿದೆ, 2020 ರಲ್ಲಿ $110 ಶತಕೋಟಿಗಿಂತ ಹೆಚ್ಚಿನ ಮಾರಾಟವನ್ನು ಗಳಿಸಿದೆ ಮತ್ತು 280 ಕ್ಕೂ ಹೆಚ್ಚು ನಗರಗಳಲ್ಲಿ 1,300 ಕ್ಕೂ ಹೆಚ್ಚು ಅಭಿವೃದ್ಧಿಗಳನ್ನು ನಡೆಸಿದೆ. ಸುದ್ದಿ ಮಾಧ್ಯಮಗಳ ವರದಿಯ ಪ್ರಕಾರ, ಕಂಪನಿಯೂ ಕಳೆದ ವರ್ಷ ತನ್ನ ಪ್ರಾಥಮಿಕ ಸಾಲದ ಪುನರ್ರಚನೆ ಯೋಜನೆ ತಲುಪಲು ವಿಫಲವಾಗಿತ್ತು. ಸದ್ಯ ಕಂಪನಿಯ ಎಲ್ಲಾ ಬೆಳವಣಿಗೆಗಳು ಅದರ ಭವಿಷ್ಯದ ಬಗ್ಗೆ ಪ್ರಶ್ನೆಗಳನ್ನು ಹುಟ್ಟು ಹಾಕಿದೆ.
CPPCC ಇಂದ ಹುಯ್ ಕಾ ಯಾನ್ ಹೊರಗೆ
ಆಸ್ತಿ ಕಳೆದುಕೊಳ್ಳುವುದರ ಜೊತೆ ಹುಯ್ ಕಾ ಯಾನ್ ಚೀನೀ ಪೀಪಲ್ಸ್ ಪೊಲಿಟಿಕಲ್ ಕನ್ಸಲ್ಟೇಟಿವ್ ಕಾನ್ಫರೆನ್ಸ್ (CPPCC) ನಿಂದ ಸಹ ಹೊರಗೆ ಬಂದಿದ್ದಾರೆ.ಇವರು 2008 ರಿಂದ CPPCC ಯ ಭಾಗವಾಗಿದ್ದರು ಮತ್ತು 2013 ರಿಂದ ಅದರ ಗಣ್ಯ 300-ಸದಸ್ಯ ಸ್ಥಾಯಿ ಸಮಿತಿಯ ಭಾಗವಾಗಿದ್ದರು.
ಆದಾಗ್ಯೂ, ಅವರ ಆಸ್ತಿ ಸಾಮ್ರಾಜ್ಯವು ರಾಷ್ಟ್ರದ ಸಾಲದ ಬಿಕ್ಕಟ್ಟಿನಲ್ಲಿ ಸಿಲುಕಿಕೊಂಡಿದ್ದರಿಂದ ಕಳೆದ ವರ್ಷ ವಾರ್ಷಿಕ ಸಮಾವೇಶಕ್ಕೆ ಹಾಜರಾಗದಂತೆ ಅವರಿಗೆ ತಿಳಿಸಲಾಯಿತು ಎಂದು ಸಿಡ್ನಿ ವರದಿ ಮಾಡಿದೆ. ಅಷ್ಟೇ ಅಲ್ಲ, ಮುಂದಿನ ಐದು ವರ್ಷಗಳ ಕಾಲ CPPCC ರಚಿಸುವ ವ್ಯಕ್ತಿಗಳ ಇತ್ತೀಚಿನ ಪಟ್ಟಿಯಿಂದ ಅವರನ್ನು ಹೊರಗಿಡಲಾಗಿದೆ. CPPCC ಪಾತ್ರವು ದೇಶಕ್ಕೆ ಕೊಡುಗೆಗಳನ್ನು ನೀಡಲು ನಿಷ್ಠಾವಂತ ವ್ಯಾಪಾರಸ್ಥರಿಗೆ ಚೀನಾ ನೀಡುವ ಗೌರವಾನ್ವಿತ ಸ್ಥಾನಮಾನ ಮತ್ತು ಬಹುಮಾನವಾಗಿದೆ.
ಬ್ಲೂಮ್ಬರ್ಗ್ ಬಿಲಿಯನೇರ್ ಸೂಚ್ಯಂಕವು ಚೀನಾದ ಐದು ಶ್ರೀಮಂತ ಆಸ್ತಿ ಉದ್ಯಮಿಗಳು ಕಳೆದ ಎರಡು ವರ್ಷಗಳಲ್ಲಿ ಸುಮಾರು $65 ಶತಕೋಟಿಯನ್ನು ಕಳೆದುಕೊಂಡಿದ್ದಾರೆ ಎಂದು ತೋರಿಸಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ