China Economy Collapsed: ಚೀನಾದಲ್ಲಿ ಕುಸಿಯುತ್ತಿದೆ ಆರ್ಥಿಕ ಚಟುವಟಿಕೆ! ಏನು ಕಾರಣ?
XI Jinping Covid Zero Policy: ಕ್ಸಿ ಜಿನ್‌ಪಿಂಗ್ ಅವರು ಹೆಚ್ಚುತ್ತಿರುವ COVID-19 ಸೋಂಕನ್ನು ಕಡಿಮೆ ಮಾಡುವ ಪ್ರಯತ್ನದಲ್ಲಿ ತಮ್ಮ 'ಶೂನ್ಯ-ಕೋವಿಡ್ ನೀತಿಯನ್ನು' ದ್ವಿಗುಣಗೊಳಿಸಿದ್ದಾರೆ. ಇದು ಚೀನಾದ ಈಗಾಗಲೇ ದುರ್ಬಲಗೊಂಡ ಆರ್ಥಿಕತೆಗೆ ಮತ್ತೊಂದು ಹೊಡೆತವನ್ನು ನೀಡುತ್ತಿದೆ.
ಬೀಜಿಂಗ್: ಜಾಗತಿಕ ಮಟ್ಟದಲ್ಲಿ ದೈತ್ಯಶಕ್ತಿಗಳೆಂದೇ ಬಿಂಬಿಸಿಕೊಳ್ಳುತ್ತಿದ್ದ ದೇಶಗಳು ದಿನೇ ದಿನೇ ಕುಸಿಯುತ್ತಿವೆ. ಎಷ್ಟೇ ಪ್ರಯತ್ನಪಟ್ಟರೂ ಉಕ್ರೇನ್ (Russia Ukraine War) ಮೇಲೆ ಸಂಪೂರ್ಣ ಹತೋಟಿ ಪಡೆಯಲು ರಷ್ಯಾ ಬಳಿ ಸಾಧ್ಯವಾಗಿಲ್ಲ. ರಷ್ಯಾ ಕಾಗದದ ಮೇಲೆ ಮಾತ್ರ ಬಲಿಷ್ಠ ದೇಶ ಎಂದೇ ವಿಶ್ಲೇಷಣೆ ಕೇಳಿಬರುತ್ತಿದೆ. ಅದೇ ರೀತಿ ಇದೀಗ ಚೀನಾದಲ್ಲೂ ಆರ್ಥಿಕ ಚಟುವಟಿಕೆಗಳು ಕುಸಿತ (China’s Economic Activity Collapses) ಕಾಣುತ್ತಿವೆ ಎಂದು ವರದಿಯಾಗಿದೆ. ಕೊವಿಡ್ ಸಾಂಕ್ರಾಮಿಕ ರೋಗವು ಪ್ರಾರಂಭವಾದಾಗಿನಿಂದ ಚೀನಾ ಕೈಗೊಂಡ ಶೂನ್ಯ ಕೊವಿಡ್ ನೀತಿ (Covid Zero Policy) ಕೈಗಾರಿಕಾ ಉತ್ಪಾದನೆ ಮತ್ತು ಗ್ರಾಹಕ ವೆಚ್ಚವು ಚೀನಾದಲ್ಲಿ ಅತ್ಯಂತ ಕೆಟ್ಟ ಮಟ್ಟಕ್ಕೆ ಕುಸಿಯುತ್ತಿದೆ.
ಚೀನಾದಲ್ಲಿ ಹಿಂದಿನ ಏಪ್ರಿಲ್‌ನಲ್ಲಿ ಕೈಗಾರಿಕಾ ಉತ್ಪಾದನೆಯು ಅನಿರೀಕ್ಷಿತವಾಗಿ 2.9% ರಷ್ಟು ಕುಸಿದಿತ್ತು. ಜೊತೆಗೆ ಚಿಲ್ಲರೆ ಮಾರಾಟವು ಅವಧಿಯಲ್ಲಿ ಶೇಕಡಾ 11.1 ರಷ್ಟು ಸಂಕುಚಿತಗೊಂಡಿತ್ತು. ಇದು ಯೋಜಿತ 6.6% ಕುಸಿತಕ್ಕಿಂತ ದುರ್ಬಲವಾಗಿದೆ. ನಿರುದ್ಯೋಗ ದರವು 6.1% ಕ್ಕೆ ಏರಿಕೆ ಕಂಡಿದೆ. ಅಷ್ಟೇ ಅಲ್ಲದೇ ಯುವಸ ಸಮುದಾಯದಲ್ಲಿ ನಿರುದ್ಯೋಗ ದರವು ದಾಖಲೆಯ ಮಟ್ಟವನ್ನು ಮುಟ್ಟಿದೆ.
ಕಾರ್ಖಾನೆಗಳನ್ನು ಮುಚ್ಚುವುದು, ನಿರ್ಬಂಧ ವಿಧಿಸುವುದೇ ಕಾರಣ ಚೀನಾದ ಆರ್ಥಿಕತೆಯು ಕೊವಿಡ್ ವೈರಸ್ ಅನ್ನು ನಿಯಂತ್ರಿಸಲು ಕೈಗೊಂಡ ಹಲವು ಕ್ರಮಗಳೇ ಆರ್ಥಿಕ ಚಟುವಟಿಕೆಗಳ ಕುಸಿತಕ್ಕೆ ಕಾರಣವಾಗಿದೆ ಎಂದು ವರದಿಯಾಗಿದೆ. ಚೀನಾ ಸರ್ಕಾರದ ಕಟ್ಟುನಿಟ್ಟಿನ ಪ್ರಯತ್ನಗಳಿಂದ ಅಗಾಧವಾದ ಹೊಡೆತ ಆರ್ಥಿಕ ಕ್ಷೇತ್ರದ ಮೇಲೆ ಬಿದ್ದಿದೆ ಎನ್ನಲಾಗಿದೆ.
ಶಾಂಘೈನಂತಹ ಪ್ರಮುಖ ನಗರಗಳು ಹಲವಾರು ವಾರಗಳವರೆಗೆ ಲಾಕ್‌ಡೌನ್ ಆಗಿದ್ದವು. ಇತರ ಹಲವು ಸ್ಥಳಗಳಲ್ಲಿ ನಿರ್ಬಂಧಗಳನ್ನು ವಿಧಿಸಿದ್ದು, ಕಾರ್ಖಾನೆಗಳನ್ನು ಮುಚ್ಚುವುದು ಮತ್ತು ವಸ್ತುಗಳ ಪೂರೈಕೆ ಸರಪಳಿಗಳನ್ನು ನಿರ್ಬಂಧಿಸುವುದು ಆರ್ಥಿಕ ಚಟುವಟಿಕೆಗಳ ಮೇಲೆ ದುಷ್ಪರಿಣಾಮ ಬೀರಿದೆ.
ಚೀನಾದ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಅವರು ಹೆಚ್ಚುತ್ತಿರುವ COVID-19 ಸೋಂಕನ್ನು ಕಡಿಮೆ ಮಾಡುವ ಪ್ರಯತ್ನದಲ್ಲಿ ತಮ್ಮ 'ಶೂನ್ಯ-ಕೋವಿಡ್ ನೀತಿಯನ್ನು' ದ್ವಿಗುಣಗೊಳಿಸಿದ್ದಾರೆ. ಇದು ಚೀನಾದ ಈಗಾಗಲೇ ದುರ್ಬಲಗೊಂಡ ಆರ್ಥಿಕತೆಗೆ ಮತ್ತೊಂದು ಹೊಡೆತವನ್ನು ನೀಡುತ್ತಿದೆ.
ಏನಿದು ಕೊವಿಡ್ ಶೂನ್ಯ ಕಾರ್ಯತಂತ್ರ? ಓಮಿಕ್ರಾನ್ ರೂಪಾಂತರವು ವಿವಿಧ ನಗರಗಳಲ್ಲಿ ವೇಗವಾಗಿ ಹರಡದಂತೆ ತಡೆಯಲು ಪದೇ ಪದೇ ಲಾಕ್ ಮಾಡುವ ಮತ್ತು ಪುನಃ ತೆರೆಯುವುದು ಹೆಚ್ಚಿನ ಅಪಾಯವನ್ನುಂಟುಮಾಡುತ್ತದೆ. ಆದರೆ ಚೀನಾ ಸರ್ಕಾರವು ತನ್ನ ಕೋವಿಡ್ ಶೂನ್ಯ ಕಾರ್ಯತಂತ್ರವನ್ನು ದ್ವಿಗುಣಗೊಳಿಸಿದೆ. ಚಿನಾದ ಓರ್ವ ನಾಗರಿಕರಲ್ಲೂ ಕೊವಿಡ್ ಇರದಂತೆ ಮಾಡುವುದೇ ಈ ಕೊವಿಡ್ ಶೂನ್ಯ ಕಾರ್ಯತಂತ್ರವಾಗಿದೆ.
ಕಠಿಣಾತಿ ಕಠಿಣ ನಿಯಮಗಳೇ ಹೊಡೆತ ನೀಡಿವೆ ಕೊವಿಡ್ ನಿಯಂತ್ರಿಸಲು ಕೈಗೊಂಡಿರುವ ಈ ಕಠಿಣಾತಿ ಕಠಿಣ ನಿಯಮಗಳು ಉದ್ಯಮ ವಲಯದಿಂದ ತೀವ್ರ ಟೀಕೆಗಳನ್ಜು ಎದುರಿಸುತ್ತಿದೆ. ಸಾರ್ವಜನಿಕರಲ್ಲಿ ಹತಾಶೆಯನ್ನು ಬಿತ್ತುತ್ತಿದೆ. ಬೀಜಿಂಗ್‌ನ ಮಹತ್ವಾಕಾಂಕ್ಷೆಯ ಈ ವರ್ಷದ ಆರ್ಥಿಕ ಬೆಳವಣಿಗೆಯ ಗುರಿಯಾದ ಸುಮಾರು ಶೇಕಡಾ 5.5% ರಷ್ಟುಬೆಳವಣಿಗೆಯನ್ನು ತಲುಪಲು ಸಾಧ್ಯವಾಗದ ಪರಿಸ್ಥಿತಿ ತಂದೊಡ್ಡಿದೆ ಎನ್ನಲಾಗಿದೆ.
ಚೀನಾದ ಪ್ರಮುಖ ಹಣಕಾಸು ಪತ್ರಿಕೆಗಳು ಸೋಮವಾರ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಅವರ ಆರು ತಿಂಗಳ ಹಳೆಯ ಭಾಷಣವನ್ನು ಪ್ರಕಟಿಸಿವೆ. ಉದ್ಯೋಗಗಳನ್ನು ಸಂರಕ್ಷಿಸುವ ಮತ್ತು ಬೆಳವಣಿಗೆಯನ್ನು ಹೆಚ್ಚಿಸುವ ಅಗತ್ಯತೆ, ಆರ್ಥಿಕತೆಯನ್ನು ಹೆಚ್ಚಿಸುವುದು ಅಗತ್ಯವಾಗಿದೆ ಎಂದು ಚೀನಾದ ಪತ್ರಿಕೆಗಳು ವರದಿ ಮಾಡಿವೆ.
Published by:guruganesh bhat
First published:
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ