• Home
  • »
  • News
  • »
  • business
  • »
  • Childrens Day: ಮಕ್ಕಳು ಚಿಕ್ಕವಯಸ್ಸಿನಲ್ಲಿದ್ದಾಗಲೇ ದುಡ್ಡಿನ ಬಗ್ಗೆ ಹೀಗೆ ಹೇಳಿಕೊಡಿ, ದೊಡ್ಡವರಾದ ಮೇಲೆ ಸಮಸ್ಯೆಯಾಗಲ್ಲ!

Childrens Day: ಮಕ್ಕಳು ಚಿಕ್ಕವಯಸ್ಸಿನಲ್ಲಿದ್ದಾಗಲೇ ದುಡ್ಡಿನ ಬಗ್ಗೆ ಹೀಗೆ ಹೇಳಿಕೊಡಿ, ದೊಡ್ಡವರಾದ ಮೇಲೆ ಸಮಸ್ಯೆಯಾಗಲ್ಲ!

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಇಂದು ಮಕ್ಕಳ ದಿನಾಚರಣೆ. ಮಕ್ಕಳನ್ನು ಸಂಭ್ರಮಿಸಲು, ಅವರಿಗೆ ಉತ್ತಮ ದಾರಿದೀಪವಾಗಲು ಬಯಸುವ ಪೋಷಕರು ಇಂದಿನಿಂದ ಈ ಹಣಕಾಸು ಜ್ಞಾನವನ್ನು ಮಕ್ಕಳಲ್ಲಿ ಬೆಳೆಸಿ.

  • Share this:

ಮಕ್ಕಳಿ (Childrens) ಗೆ ಹೊಸದನ್ನು ಕಲಿಸಲು ವಯಸ್ಸು ಮುಖ್ಯವಾಗುವುದಿಲ್ಲ. ಒಳ್ಳೆಯದನ್ನು ಮತ್ತು ಹೊಸದನ್ನು ಯಾವ ವಯಸ್ಸಿನಲ್ಲಾದರೂ ಕಲಿಸಬಹುದು. ಅಂತೆಯೇ ಹಣಕಾಸು (Money) ವಿಚಾರ ಕೂಡ ಒಂದು. ಜೀವನ (Life) ದಲ್ಲಿ ಕಲಿಯಲು ಮತ್ತು ಅಳವಡಿಸಿಕೊಳ್ಳಲು ಹಲವಾರು ಮೌಲ್ಯಗಳಿವೆ. ಅವುಗಳಲ್ಲಿ ಒಂದು ಈ ಹಣಕಾಸಿನ ನಿರ್ವಹಣೆ ಅಥವಾ ಹಣಕಾಸು ಉಳಿತಾಯ (Savings) . ಖಂಡಿತ ಹಣ ಕೂಡ ಜೀವನದ ಒಂದು ಪ್ರಮುಖ ಅಂಶ. ಹೀಗಾಗಿ ಜೀವನದಲ್ಲಿ ಹಣಕಾಸು ನಿರ್ವಹಣೆ (Financial Management) ಬಹುಮುಖ್ಯ. ನಮ್ಮ ಇಂದಿನ ಹವ್ಯಾಸಗಳೇ ಮುಂದಿನ ಆರ್ಥಿಕ ಭದ್ರತೆಗೆ ಸುರಕ್ಷಿತ ಬುನಾದಿಯಾಗುತ್ತವೆ ಎನ್ನಬಹುದು. ಹೀಗಾಗಿ ಈ ಜ್ಞಾನವನ್ನು ಮಕ್ಕಳಲ್ಲೂ ಸಹ ಬೆಳೆಸಬೇಕು. ಸರಿಯಾದ ಹಣಕಾಸು ನಿರ್ಧಾರ, ನಿರ್ವಹಣೆಗಳು ಅವರ ಉಜ್ವಲ ಭವಿಷ್ಯಕ್ಕೆ ಸಹಕಾರಿ.


ಹಣದ ಬಗ್ಗೆ ಮಕ್ಕಳಲ್ಲಿ ಅರಿವು ಮೂಡಿಸಿ


ಇಂದು ಮಕ್ಕಳ ದಿನಾಚರಣೆ. ಮಕ್ಕಳನ್ನು ಸಂಭ್ರಮಿಸಲು, ಅವರಿಗೆ ಉತ್ತಮ ದಾರಿದೀಪವಾಗಲು ಬಯಸುವ ಪೋಷಕರು ಇಂದಿನಿಂದ ಈ ಹಣಕಾಸು ಜ್ಞಾನವನ್ನು ಮಕ್ಕಳಲ್ಲಿ ಬೆಳೆಸಿ. ಅನೇಕ ಹಣಕಾಸು ಯೋಜಕರು ಪೋಷಕರು ತಮ್ಮ ಮಕ್ಕಳಿಗೆ ಚಿಕ್ಕ ವಯಸ್ಸಿನಿಂದಲೇ ಇದರ ಬಗ್ಗೆ ಕಲಿಸಬೇಕು ಎಂದು ಸಲಹೆ ನೀಡುತ್ತಾರೆ.
ಮಕ್ಕಳಿಗೆ ಹಣಕಾಸಿನ ಜ್ಞಾನವನ್ನು ಬೆಳಸಲು ಪೋಷಕರಾಗಿ ನೀವು ಮಾಡಬಹುದಾದ ಕೆಲವು ವಿಷಯಗಳು ಹೀಗಿವೆ, ಒಮ್ಮೆ ಓದಿ.


ಹಣಕಾಸಿನ ಬಗ್ಗೆ ಪೋಷಕರು ಹೇಳಿಕೊಡಬಹುದಾದ ಮಾರ್ಗಗಳು


* ಹಣದ ಬಗ್ಗೆ ಮಾತನಾಡಿ


ಮಕ್ಕಳಿಗೆ ಖಂಡಿತ ಈ ಉಳಿತಾಯದ ಬಗ್ಗೆ ಕಲ್ಪನೆ ಇದೆ. ಇವತ್ತು ಸ್ವಲ್ಪ ತಿಂದು ಮರುದಿನ ಮತ್ತೆ ತಿನ್ನಲು ಮಕ್ಕಳು ಚಾಕೊಲೇಟ್ ಎತ್ತಿಟ್ಟುಕೊಳ್ಳುವುದನ್ನು ನಾವು ನೋಡಿದ್ದೇವೆ. ಅಂತೆಯೇ ಈ ಹಣಕಾಸು ಉಳಿತಾಯವನ್ನು ಸಹ ಅವರು ಬೇಗನೆ ಅರ್ಥೈಸಿಕೊಳ್ಳುತ್ತಾರೆ.


ಹೌದು, ನಿಮ್ಮ ಮಕ್ಕಳೊಂದಿಗೆ ನೀವು ಹಣದ ಬಗ್ಗೆ ಎಷ್ಟು ಬೇಗನೆ ಮಾತನಾಡಲು ಪ್ರಾರಂಭಿಸುತ್ತೀರೋ, ಅವರು ಅದರ ಮೌಲ್ಯವನ್ನು ಅರ್ಥಮಾಡಿಕೊಳ್ಳಲು ಇಷ್ಟಪಡುತ್ತಾರೆ ಮತ್ತು ಭವಿಷ್ಯಕ್ಕಾಗಿ ಉಳಿಸುವ ಅಭ್ಯಾಸವನ್ನು ಬೆಳೆಸಿಕೊಳ್ಳುತ್ತಾರೆ. ಹೀಗಾಗಿ ಮಕ್ಕಳ ಜೊತೆ ಮನೆಯ ತಿಂಗಳ ಬಜೆಟ್ ಬಗ್ಗೆ ಮಾತನಾಡಿ, ಖರ್ಚು ವೆಚ್ಚಗಳ ಬಗ್ಗೆ ಹೇಳಿ, ಹಣ ಉಳಿತಾಯದ ಭದ್ರತೆ ಬಗ್ಗೆ ಮಾತನಾಡಿ. ಬ್ಯಾಂಕ್ ಖಾತೆಯ ಬಗ್ಗೆ ವಿವರಿಸಿ. ಇದು ಅವರ ಆಸಕ್ತಿ ಮತ್ತು ಜ್ಞಾನ ವೃದ್ಧಿಗೆ ಸಹಕರಿಸುತ್ತದೆ.


* ಬ್ಯಾಂಕ್‌, ಎಟಿಎಂಗೆ ಕರೆದೊಯ್ಯಿರಿ


ಮಕ್ಕಳಿಗೆ ಈ ಬಗ್ಗೆ ಮಾಹಿತಿ ನೀಡಿ. `ರಜೆಯ ಸಮಯದಲ್ಲಿ ಸಣ್ಣ ಮೊತ್ತದ ಹಣದೊಂದಿಗೆ ಅವರಿಗೆ ಆರ್ಥಿಕ ಸ್ವಾತಂತ್ರ್ಯ ನೀಡಿ. ಇದು ಅವರ ವೆಚ್ಚಗಳನ್ನು ಬಜೆಟ್ ಮಾಡುವ ಶಿಸ್ತನ್ನು ಅವರಲ್ಲಿ ತುಂಬುತ್ತದೆ' ಎಂದು ಸೃಜನ್ ಫೈನಾನ್ಷಿಯಲ್ ಸರ್ವಿಸಸ್‌ನ ಸಂಸ್ಥಾಪಕ ಪಾಲುದಾರ ದೀಪಾಲಿ ಸೇನ್ ಹೇಳುತ್ತಾರೆ. ಕೆಲವೊಮ್ಮೆ ಅವರನ್ನು ಬ್ಯಾಂಕ್ ಅಥವಾ ಎಟಿಎಂಗೆ ಕರೆದೊಯ್ಯಿರಿ. ಕೆಲಸಗಳನ್ನು ಹೇಗೆ ಮಾಡಲಾಗುತ್ತದೆ ಎಂಬುದನ್ನು ನೋಡಲು ಅವರಿಗೆ ತೋರಿಸಿ ಎಂದು ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ.


ಇದನ್ನೂ ಓದಿ: ನಿಮ್ಮನ್ನು ಕೋಟ್ಯಧಿಪತಿ ಮಾಡೋ ಯೋಜನೆಗಳಿವು! ಕಡಿಮೆ ಹೂಡಿಕೆ, ಹೆಚ್ಚಿನ ಲಾಭ


* ಉದಾಹರಣೆಯಿಂದ ಮುನ್ನಡೆಯಿರಿ


ನೀವು ಹಣವನ್ನು ಹೇಗೆ ಖರ್ಚು ಮಾಡುತ್ತೀರಿ ಅಥವಾ ಹೇಗೆ ಉಳಿಸುತ್ತೀರಿ ಎಂಬುದು ನಿಮ್ಮ ಮಕ್ಕಳ ಮೇಲೆ ಶಾಶ್ವತವಾದ ಪ್ರಭಾವ ಬೀರುತ್ತದೆ. ನೀವು ಮಾಡುವ ಪ್ರತಿ ಕೆಲಸವು ನಿಮ್ಮ ಮಕ್ಕಳ ಮೇಲೆ ಪ್ರಭಾವ ಬೀರುತ್ತದೆ. ಉದಾಹರಣೆಗೆ ನೀವು ಮಕ್ಕಳಿಗೆ ಹೆಚ್ಚು ದೂರದರ್ಶನವನ್ನು ನೋಡದಂತೆ ಹೇಳಿದರೆ, ನೀವೂ ಸಹ ಟಿವಿ ಸಮಯವನ್ನು ಮಿತಿಗೊಳಿಸಬೇಕು. ಅಂತೆಯೇ ಮಕ್ಕಳಿಗೆ ಹಣಕಾಸಿನ ಬಗ್ಗೆ ಮಾಹಿತಿ ನೀಡುವಾಗ ನೀವು ಸಹ ಹಾಗೆ ಇರಬೇಕು. ಸಹಜವಾಗಿ ಮಕ್ಕಳಿಗೆ ಸಂಬಂಧಿಕರು ಹಣ ನೀಡುತ್ತಾರೆ. ಹೀಗೆ ನೀಡಿದ ಹಣವನ್ನು ಏಕೆ ಉಳಿಸಬೇಕು ಎಂದು ನಿಮ್ಮ ಮಕ್ಕಳಿಗೆ ಕಲಿಸಬೇಕು. ಈ ಮೂಲಕ ಮಕ್ಕಳಿಗೆ ಹಣದ ಉಳಿತಾಯದ ಜ್ಞಾನವನ್ನು ಬೆಳೆಸಬೇಕು.


ಗಳಿಕೆ-ಉಳಿಕೆ-ಹೂಡಿಕೆ ಎನ್ನುವ ಮಹಾಮಂತ್ರ ಮಾತ್ರ ಅವರನ್ನ ಇತರಿರಿಗಿಂತ ಭಿನ್ನವಾಗಿಸುತ್ತದೆ. ಗಳಿಸುವುದು ಅಂದರೆ ಹಣವನ್ನ ಸಂಪಾದಿಸುವುದು ಅದನ್ನ ಉಳಿಸುವುದು ಮತ್ತು ಇನ್ನೂ ಹೆಚ್ಚಿನ ಹಣವನ್ನ ಒಳ್ಳೆಯ ಆಸ್ತಿಯ ಮೇಲೆ ಹೂಡಿಕೆ ಮಾಡುವುದು. ಇಂತಹ ಮೂಲಭೂತ ಅಂಶಗಳ ಬಗ್ಗೆ ತಿಳಿಸಿ .


* ಮಕ್ಕಳ ಹಣಕಾಸು ನಿರ್ವಹಣೆ ಬಗ್ಗೆ ನಿಗಾ ವಹಿಸಿ


ನಿಮ್ಮ ಮಗುವಿಗೆ 18 ವರ್ಷ ತುಂಬಿದ ನಂತರ, ಆಕೆಗೆ ಆಡ್-ಆನ್ ಕ್ರೆಡಿಟ್ ಕಾರ್ಡ್ ನೀಡಿ. ಕ್ರೆಡಿಟ್ ಕಾರ್ಡ್ ಬಿಲ್‌ಗಳು ನಿಮಗೆ ಬರುವಂತೆ ನೋಡಿಕೊಳ್ಳಿ. ಇದರಿಂದ ನೀವು ಅವರ ಖರ್ಚುಗಳನ್ನು ಮೇಲ್ವಿಚಾರಣೆ ಮಾಡಬಹುದು. ಕಾರ್ಡ್‌ಗಳ ಮೇಲೆ ಕಡಿಮೆ ಕ್ರೆಡಿಟ್ ಮಿತಿಯನ್ನು ಇರಿಸಿ ಇದರಿಂದ ಅವರು ಅತಿಯಾಗಿ ವೆಚ್ಚ ಮಾಡುವುದು ತಪ್ಪುತ್ತದೆ. ನಿಮ್ಮ ಮಕ್ಕಳು ದುಂದುವೆಚ್ಚ ಮಾಡುತ್ತಿದ್ದರೆ ಅವರಿಗೆ ಸಲಹೆ ನೀಡಿ.


* ಅಗತ್ಯತೆಗಳು ಮತ್ತು ಬಯಕೆಗಳ ನಡುವೆ ವ್ಯತ್ಯಾಸ ತಿಳಿಸಿ


ನಮ್ಮ ಬಯಕೆಗಳನ್ನು ಪೂರೈಸಲು ನಮ್ಮ ಬಳಿ ಎಷ್ಟು ಹಣವಿದ್ರೂ ಸಾಲದು. ಹೀಗಾಗಿ ಮಕ್ಕಳಿಗೆ ಅವರ ಅಗತ್ಯ ಮತ್ತು ಬಯಕೆಗಳ ನಡುವೆ ವ್ಯತ್ಯಾಸವನ್ನು ಕಲಿಸಿಕೊಡಿ. ಒಂದು ವಸ್ತುವನ್ನು ಖರೀದಿಸುವಾಗ ಅದರ ಅಗತ್ಯತೆಗಳನ್ನು ಅರ್ಥಮಾಡಿಕೊಳ್ಳಲು ಹೇಳಿಕೊಡಿ.


* ನಾಯಕತ್ವ ನೀಡಿ


ಪಾಕೆಟ್ ಮನಿ ಮೇಲೆ ಕಟ್ಟುನಿಟ್ಟಾದ ಮಿತಿಯನ್ನು ಜಾರಿಗೊಳಿಸಿ ಮತ್ತು ಅವರು ಹೇಗೆ ಮತ್ತು ಎಲ್ಲಿ ಖರ್ಚು ಮಾಡಬೇಕೆಂದು ನಿರ್ಧರಿಸಲು ಅವರಿಗೆ ಬಿಡಿ.
ಹೊರಗಡೆ ಎಲ್ಲಾದರೂ ಹೋದಾಗ ಅವರಿಗೆ ಬಜೆಟ್ ನೀಡಿ ಮತ್ತು ಅವರು ಅದನ್ನು ಹೇಗೆ ಖರ್ಚು ಮಾಡಬೇಕೆಂದು ನಿರ್ಧರಿಸಲು ಅವಕಾಶ ಮಾಡಿಕೊಡಿ. ಇದು ಅವರಿಗೆ ಹಣಕಾಸಿನ ಖರ್ಚಿನ ನಿರ್ವಹಣೆಯನ್ನು ಕಲಿಸುತ್ತದೆ.


* ಪಿಗ್ಗಿ ಬ್ಯಾಂಕ್ ಖರೀದಿಸಿ


ಪಿಗ್ಗಿ ಬ್ಯಾಂಕ್ ಕಲ್ಪನೆ ಈಗ ಮಕ್ಕಳಲ್ಲಿ ಸಾಕಷ್ಟಿದೆ. ನಿಮ್ಮ ಮಕ್ಕಳಿಗೆ ಇದರ ಬಗ್ಗೆ ಗೊತ್ತಿಲ್ಲದಿದ್ದರೆ ಈಗಲೇ ಕಲಿಸಿ ಕೊಡಿ. ಇದನ್ನು ಚಿಕ್ಕ ವಯಸ್ಸಿನಲ್ಲಿಯೇ ಮಾಡಬಹುದು. ಪಿಗ್ಗಿ ಬ್ಯಾಂಕ್‌ಗೆ ಪ್ರತಿದಿನ ಅಥವಾ ವಾರಕ್ಕೊಮ್ಮೆ ನಾಣ್ಯವನ್ನು ಹಾಕುವಂತೆ ನಿಮ್ಮ ಮಗುವಿಗೆ ಹೇಳಿಕೊಡಿ. ಇದರಲ್ಲಿ ಸಂಗ್ರಹಿಸಿದ ಹಣವನ್ನು ಹೇಗೆ ಬಳಸಬೇಕು ಎಂದು ಹೇಳಿ, ಅರ್ಥೈಸಿ. ಪಿಗ್ಗಿ ಬ್ಯಾಂಕ್‌ ಕಲ್ಪನೆ ಮಕ್ಕಳಿಗೆ ಬ್ಯಾಂಕ್‌ ಮತ್ತು ಉಳಿತಾಯದ ಪರಿಕಲ್ಪನೆಯನ್ನು ನೀಡುತ್ತದೆ.


ಇದನ್ನೂ ಓದಿ: ಪ್ರತಿ ತಿಂಗಳು 10 ಸಾವಿರ, 10 ವರ್ಷ ಕಟ್ಟಿ! 30 ಲಕ್ಷಕ್ಕೂ ಹೆಚ್ಚಿನ ರಿರ್ಟನ್ಸ್​ ಪಡೆಯಿರಿ!


* ಭವಿಷ್ಯ ನಿಧಿ ಬಗ್ಗೆ ತಿಳಿಸಿಕೊಡಿ


ಮಕ್ಕಳ ಭವಿಷ್ಯ ನಿಧಿ ಮಕ್ಕಳ ಭವಿಷ್ಯಕ್ಕಾಗಿ ಪಾಲಕರು ಮುಂಜಾಗ್ರತಾ ಕ್ರಮ ವಹಿಸುವುದು ತುಂಬಾ ಮುಖ್ಯ. ಮಕ್ಕಳ ಶಿಕ್ಷಣಕ್ಕಾಗಿ ಹೆಚ್ಚು ಹಣ ತಗಲುವುದರಿಂದ ಪ್ರತ್ಯೇಕವಾಗಿ ಹಣ ತೆಗೆದಿಡುವುದು ಮುಂಜಾಗ್ರತೆ ದೃಷ್ಟಿಯಿಂದ ಒಳ್ಳೆಯದು. ಇದರಿಂದಾಗಿ ನಂತರದ ಹಂತಗಳಲ್ಲಿ ಭರಿಸಬೇಕಾಗಿ ಬರುವ ಭಾರಿ ಮೊತ್ತಗಳಿಂದ ತಪ್ಪಿಸಿಕೊಳ್ಳಬಹುದು. ಹೀಗಾಗಿ ಪೋಷಕರು ಮ್ಯೂಚುಯಲ್ ಫಂಡ್ SIP ಗಳನ್ನು (ವ್ಯವಸ್ಥಿತ ಹೂಡಿಕೆ ಯೋಜನೆಗಳು) ಅವರ ಹೆಸರಿನಲ್ಲಿ (ಪೋಷಕರು ಪೋಷಕರಂತೆ) ಪ್ರಾರಂಭಿಸುವುದು ಮತ್ತು ಸ್ಕೀಮ್ ಹೇಳಿಕೆಗಳನ್ನು ಅವರೊಂದಿಗೆ ಹಂಚಿಕೊಳ್ಳುವ ಮೂಲಕ ಅವರಿಗೆ ಅರ್ಥಮಾಡಿಸುವುದು ಒಳ್ಳೆಯದು.

Published by:ವಾಸುದೇವ್ ಎಂ
First published: