ಕಂಪನಿಯ ಕಷ್ಟಕಾಲದಲ್ಲಿ ದುಡಿದ ಉದ್ಯೋಗಿಗಳಿಗೆ BMW ಕಾರ್ ಗಿಫ್ಟ್!

ಇಲ್ಲೊಂದು ಸುದ್ದಿ ಇದೆ ನೋಡಿ, ಅದನ್ನು ನೋಡಿದರೆ ನೀವು ಭಲೇ..ಭಲೇ ಇಂತಹ ಕಂಪನಿಯಲ್ಲಿ ಕೆಲಸ ಮಾಡಬೇಕು ಅಂತ ನೀವು ಅಂದುಕೊಳ್ಳುವುದಂತೂ ಗ್ಯಾರಂಟಿ.

ಬಿಎಂಡಬ್ಲ್ಯೂ ಕಾರು (ಸಾಂಕೇತಿಕ ಚಿತ್ರ)

ಬಿಎಂಡಬ್ಲ್ಯೂ ಕಾರು (ಸಾಂಕೇತಿಕ ಚಿತ್ರ)

  • Share this:
ನಿಯತ್ತಾಗಿ ಕಂಪನಿಯ ಏಳ್ಗೆಗಾಗಿ ಕೆಲಸ ಮಾಡಿಯೂ  Covid 19 ಸಾಂಕ್ರಾಮಿಕ ರೋಗದ ಹಾವಳಿಯಿಂದಾಗಿ ಕೆಲಸವನ್ನು ಕಳೆದುಕೊಂಡು ಪಟ್ಟಣ ಬಿಟ್ಟು ಹಳ್ಳಿಗೆ ಬಂದು ಸೇರಿ ಮುಂದೆ ಹೊಟ್ಟೆ ಪಾಡಿಗಾಗಿ ಏನು ಮಾಡುವುದು ಅಂತ ಚಿಂತೆಯಲ್ಲಿರುವ ಜನರು ನಮ್ಮ ನಿಮ್ಮ ನಡುವೆ ತುಂಬಾನೇ ಇದ್ದಾರೆ. ಚೆನ್ನೈ ಮೂಲದ ಸಾಫ್ಟ್‌ವೇರ್ ಕಂಪನಿಯಾದ ಕಿಸ್ಫ್ಲೋ ಇಂಕ್ (Kissflow Inc ) ತನ್ನ ಐದು ಉದ್ಯೋಗಿಗಳಿಗೆ ಹೊಸ ಬಿಎಂಡಬ್ಲ್ಯೂ ಕಾರುಗಳನ್ನು (BMW Car) ನೀಡಿದೆ. "ಅವರ ನಿಷ್ಠೆ ಮತ್ತು ಬದ್ಧತೆಯನ್ನು ಗೌರವಿಸಲು" ಕಂಪನಿಯು ತನ್ನ ಐದು ಹಿರಿಯ ನಿರ್ವಹಣಾ ಕಾರ್ಮಿಕರಿಗೆ ತಲಾ 1 ಕೋಟಿ ರೂಪಾಯಿಗಿಂತ ಹೆಚ್ಚು ಮೌಲ್ಯದ ಬಿಎಂಡಬ್ಲ್ಯೂ ಕಾರುಗಳನ್ನು ನೀಡಿದೆ ಎಂದು ಸುದ್ದಿ ಸಂಸ್ಥೆಯೊಂದು ವರದಿ ಮಾಡಿದೆ.

Covid-19 ಸಾಂಕ್ರಾಮಿಕ ರೋಗದ ಹಾವಳಿಯಿಂದಾಗಿ ಅನೇಕ ಸಣ್ಣ ಪುಟ್ಟ ಕಂಪನಿಗಳಿಗೆ ಮಾಡಲು ಕೆಲಸವಿಲ್ಲದೆ, ತನ್ನ ಉದ್ಯೋಗಿಗಳಿಗೆ ವೇತನವನ್ನು ಸಹ ನೀಡಲು ಆಗದೆ ಬೀಗ ಹಾಕಲಾಗಿತ್ತು. ಎಷ್ಟೋ ಜನರಿಗೆ ಈ ಕಷ್ಟದ ಸಂದರ್ಭದಲ್ಲಿ ಅರ್ಧ ಸಂಬಳಕ್ಕೆ (Salary) ದುಡಿಯೋ ಪರಿಸ್ಥಿತಿ ಬಂದರೆ, ಇನ್ನೂ ಕೆಲವರಿಗಂತೂ ಕೆಲಸವೇ ಕೈ ಬಿಟ್ಟು ಹೋಯಿತು ಎಂದು ಹೇಳಬಹುದು.

ಕೆಲಸ ಉಳಿದರೆ ಸಾಕು
ಇಂತಹ ಕಷ್ಟದ ಸಮಯದಲ್ಲೂ ಸಹ ನಡೆದಿರುವ ಕೆಲವೇ ಕೆಲವು ಕಂಪನಿಗಳಲ್ಲಿ ಮಾಹಿತಿ ತಂತ್ರಜ್ಞಾನದ ಮತ್ತು ಇನ್ನಿತರೆ ಕಂಪನಿಗಳು ಎಂದು ಹೇಳಬಹುದು. ಈ ಐಟಿ ಕಂಪನಿಗಳು ಕೆಲಸ ಮಾಡಲು ಯಾವಾಗಲೂ ಯಾರಿಗಾದರೂ ಲಾಭದಾಯಕ ವಲಯವಾಗಿದೆ ಎಂದು ಹೇಳಬಹುದು.

ಈ ಸಾಫ್ಟ್‌ವೇರ್ ಕಂಪನಿಗಳು ಉದ್ಯೋಗಿಗಳಿಗೆ ನೀಡುವ ಭಾರಿ ವೇತನ ಹೆಚ್ಚಳದ ಬಗ್ಗೆ ಆಗಾಗ್ಗೆ ಸುದ್ದಿ ವರದಿಗಳಿಂದ ನಾವು ಕೇಳಿರುತ್ತೇವೆ. ಆದರೆ ಈ ಕಳೆದ ಎರಡು ವರ್ಷಗಳಲ್ಲಿ ಕೆಲಸ ಉಳಿದರೆ ಸಾಕು ಅಂತ ಬಹುತೇಕರು ಆ ದೇವರಲ್ಲಿ ಬೇಡಿಕೊಂಡಿರುವುದಂತೂ ನಿಜ. ಈಗ ನಿಧಾನವಾಗಿ ಎಲ್ಲಾ ಕಂಪನಿಗಳು ಬಾಗಿಲನ್ನು ತೆರೆಯುತ್ತಿದ್ದು, ಕೆಲಸದಲ್ಲಿ ಬಡ್ತಿ ಮತ್ತು ಸಂಬಳದಲ್ಲಿ ಹೆಚ್ಚಳವನ್ನು ನೋಡಲು ಉದ್ಯೋಗಿಗಳು ಕಾಯುತ್ತಿದ್ದಾರೆ.

ಈ ಸುದ್ದಿ ಕೇಳಿದರೆ ಭಲೇ ಎನ್ನುವಿರಿ
ಆದರೆ ಇಲ್ಲೊಂದು ಸುದ್ದಿ ಇದೆ ನೋಡಿ, ಅದನ್ನು ನೋಡಿದರೆ ನೀವು ಭಲೇ..ಭಲೇ ಇಂತಹ ಕಂಪನಿಯಲ್ಲಿ ಕೆಲಸ ಮಾಡಬೇಕು ಅಂತ ನೀವು ಅಂದುಕೊಳ್ಳುವುದಂತೂ ಗ್ಯಾರಂಟಿ.

ಇದನ್ನೂ ಓದಿ: Multibagger Stock: 1 ಲಕ್ಷಕ್ಕೆ 25 ಲಕ್ಷ ಲಾಭ; ರಿಸ್ಕ್ ತಕೊಂಡವ್ರಿಗೆ ಸಿಕ್ತು ಲಾಭ!

ಸಾಫ್ಟ್‌ವೇರ್ ಡೆವಲಪರ್‌ಗಳು, ಉತ್ಪನ್ನ ವ್ಯವಸ್ಥಾಪಕರು ಮತ್ತು ಅಂತಹ ಇತರ ಕೆಲಸಗಳು ಉದ್ಯಮದಲ್ಲಿ ಹೆಚ್ಚು ಬೇಡಿಕೆಯಿದ್ದು, ವಿಶೇಷವಾಗಿ ಕೋವಿಡ್ -19 ಸಾಂಕ್ರಾಮಿಕ ರೋಗದ ನಂತರ ಜಾಗತಿಕ ಆರ್ಥಿಕತೆಯನ್ನು ಆವರಿಸಿದ ಡಿಜಿಟಲ್ ರೂಪಾಂತರ ಅಲೆಯ ಹಿನ್ನೆಲೆಯಲ್ಲಿ 100 ಪ್ರತಿಶತದಷ್ಟೂ ವೇತನ ಹೆಚ್ಚಳವನ್ನು ನೀಡಲಾಗುತ್ತದೆ ಎಂದು ತಿಳಿದುಬಂದಿದೆ.

ರಹಸ್ಯವಾಗಿಡಲಾಗಿತ್ತು
ಸಮಾರಂಭಕ್ಕೆ ಕೆಲವು ಗಂಟೆಗಳ ಮೊದಲು 5 ಅದೃಷ್ಟಶಾಲಿ ಉದ್ಯೋಗಿಗಳಿಗೆ ಅವರು ಶೀಘ್ರದಲ್ಲಿಯೇ ದುಬಾರಿ ಬಿಎಂಡಬ್ಲ್ಯೂ ಕಾರುಗಳ ಹೆಮ್ಮೆಯ ಮಾಲೀಕರಾಗಲಿದ್ದಾರೆ ಎಂದು ತಿಳಿಸುವವರೆಗೂ ಹಸ್ತಾಂತರ ಸಮಾರಂಭವನ್ನು ರಹಸ್ಯವಾಗಿಡಲಾಗಿತ್ತು.

ಕಿಸ್ಫ್ಲೋ ಇಂಕ್ ಕಂಪನಿಯ ಸಿಇಒ ಸುರೇಶ್ ಸಂಬಂದಮ್ ಅವರು ಸುದ್ದಿ ಸಂಸ್ಥೆಗೆ ಈ ಬಗ್ಗೆ ಮಾಹಿತಿ ನೀಡಿದ್ದು, ಐದು ಉದ್ಯೋಗಿಗಳು ಕಂಪನಿಯ ಪ್ರಾರಂಭದಿಂದಲೂ ಕಂಪನಿಯೊಂದಿಗಿದ್ದಾರೆ ಮತ್ತು ಸಾಂಕ್ರಾಮಿಕ ರೋಗದ ಸಮಯದಲ್ಲಿ ಕಂಪನಿಯ ಏಳ್ಗೆಗಾಗಿ ಶ್ರಮ ಪಟ್ಟು ದುಡಿದಿದ್ದಾರೆ ಎಂದು ಹೇಳಿದರು. ಕೆಲವು ಉದ್ಯೋಗಿಗಳು ವಿನಮ್ರ ಹಿನ್ನೆಲೆಯಿಂದ ಬಂದವರು ಮತ್ತು ಕಂಪನಿಗೆ ಸೇರುವ ಮೊದಲು ಗಮನಾರ್ಹ ಸವಾಲುಗಳನ್ನು ಎದುರಿಸಿದ್ದರು ಎಂದು ಅವರು ಹೇಳಿದರು.

ಇದನ್ನೂ ಓದಿ: PM Modi: ಪ್ರಧಾನಿ ಮೋದಿಗೇ ನಿಮ್ಮ ಸಮಸ್ಯೆ ಹೇಳ್ಕೊಳ್ಳೋಕೆ ಹೀಗ್ ಮಾಡಿ

ಸಾಂಕ್ರಾಮಿಕ ರೋಗದ ಕಠಿಣ ವ್ಯಾಪಾರ ವಾತಾವರಣವನ್ನು ನ್ಯಾವಿಗೇಟ್ ಮಾಡಲು ಪ್ರಯತ್ನಿಸುತ್ತಿದ್ದಂತೆ ಕಂಪನಿಯು ಅನೇಕ ಅಡೆತಡೆಗಳನ್ನು ಎದುರಿಸಿತು ಮತ್ತು ಕೆಲವು ಹೂಡಿಕೆದಾರರು ಆ ಸಮಯದಲ್ಲಿ ಕಂಪನಿಯ ಸುಗಮ ಕಾರ್ಯನಿರ್ವಹಣೆಯ ಬಗ್ಗೆ ಅನುಮಾನಗಳನ್ನು ಎತ್ತಿದರು. "ಇಂದು ನಾವು ಹೂಡಿಕೆದಾರರಿಗೆ ಮರುಪಾವತಿ ಮಾಡಿರುವುದಕ್ಕೆ ನಮಗೆ ತುಂಬಾ ಸಂತೋಷವಾಗಿದೆ ಮತ್ತು ಈಗ ಇದು ಸಂಪೂರ್ಣವಾಗಿ ಖಾಸಗಿ ಒಡೆತನದ ಕಂಪನಿಯಾಗಿದೆ" ಎಂದು ಅವರು ಸುದ್ದಿ ಸಂಸ್ಥೆಗೆ ತಿಳಿಸಿದರು.
Published by:guruganesh bhat
First published: