• Home
 • »
 • News
 • »
 • business
 • »
 • Business Leaders: ಈ ವರ್ಷದ ಟಾಪ್ 10 ಪ್ರಭಾವಿ ಬ್ಯುಸಿನೆಸ್‌ ಲೀಡರ್ಸ್‌ ಇವರೇ ನೋಡಿ

Business Leaders: ಈ ವರ್ಷದ ಟಾಪ್ 10 ಪ್ರಭಾವಿ ಬ್ಯುಸಿನೆಸ್‌ ಲೀಡರ್ಸ್‌ ಇವರೇ ನೋಡಿ

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

ಇತ್ತೀಚೆಗೆ ಕೆಲಸಗಳನ್ನು ಹುಡುಕುವವರಿಗಿಂತ ಹೆಚ್ಚು ಉದ್ಯೋಗಗಳನ್ನು ಸೃಷ್ಟಿ ಮಾಡುವವರೇ ಹೆಚ್ಚಾಗಿದ್ದಾರೆ. ಆದ್ದರಿಂದ ಈ ವರ್ಷ ಬ್ಯುಸಿನೆಸ್​ ಅನ್ನು ಆರಂಭಿಸಿ ಅತೀ ಹೆಚ್ಚು ಜನಪ್ರಿಯತೆಯನ್ನು ಪಡೆದ ಪ್ರಭಾವಿ ಬ್ಯುಸಿನೆಸ್​ ಲೀಡರ್ಸ್​ಗಳ ಪಟ್ಟಿ ಇಲ್ಲಿದೆ.

 • Share this:

  ಅಪಾರ ಬುದ್ದಿವಂತಿಕೆ, ಕಠಿಣ ಪರಿಶ್ರಮಗಳೇ ಯಶಸ್ಸಿನ ದಾರಿಗಳು. ಈ ದಾರಿಯಲ್ಲೇ ಸಾಗಿ ಅವಕಾಶಗಳನ್ನು ಬಳಸಿಕೊಂಡು ಯಶಸ್ಸಿನ ಮೆಟ್ಟಿಲೇರಿದ ವರ್ಷದ ಟಾಪ್‌ 10 ಪ್ರಭಾವಿ ಬ್ಯುಸಿನೆಸ್‌ ಲೀಡರ್‌ಗಳು (Business Leaders) ಯಾರು ಅನ್ನೋದನ್ನು ನೋಡೋಣ. ಮೊದಲೆಲ್ಲಾ ಹೆಚ್ಚಾಗಿ ಕೆಲಸ ಹುಡುಕಿಕೊಂಡು ಹೋಗುತ್ತಿದ್ದರು ಆದರೆ ಕೊರೋನಾ (Corona) ಎಂಬ ಸಾಂಕ್ರಾಮಿಕ ರೋಗ ಬಂದ ನಂತರ ಪ್ರತಿಯೊಬ್ಬರು ಉದ್ಯೋಗಗಳನ್ನು ಸೃಷ್ಟಿಸುವವರೇ ಆಗಿದ್ದಾರೆ. ಈಗ ಹೆಚ್ಚಾಗಿ ಬೇರೆ ಕಡೆ ಹೋಗಿ ಕೆಲಸ ಮಾಡುವವರಿಗಿಂತ ತನ್ನದೇ ಆದ ಬ್ಯುಸಿನೆಸ್ (Business)​ ಅನ್ನು ಸ್ಥಾಪಿಸಿ ಸಂಪಾದನೆ ಮಾಡುತ್ತಿದ್ದಾರೆ. ಹಲವಾರು ಬ್ಯುಸಿನೆಸ್​ ಮ್ಯಾನ್​ಗಳು (Business Man) ನಮ್ಮ ದೇಶದಲ್ಲಿದ್ದಾರೆ ಅದ್ರಲ್ಲಿ ಹೆಚ್ಚು ಜನಪ್ರಿಯತೆ ಪಡೆದ ವ್ಯಕ್ತಿಗಳ ಪಟ್ಟಿ ಇಲ್ಲಿದೆ.


  ಇತ್ತೀಚೆಗೆ ಕೆಲಸಗಳನ್ನು ಹುಡುಕುವವರಿಗಿಂತ ಹೆಚ್ಚು ಉದ್ಯೋಗಗಳನ್ನು ಸೃಷ್ಟಿ ಮಾಡುವವರೇ ಹೆಚ್ಚಾಗಿದ್ದಾರೆ. ಆದ್ದರಿಂದ ಈ ವರ್ಷ ಬ್ಯುಸಿನೆಸ್​ ಅನ್ನು ಆರಂಭಿಸಿ ಅತೀ ಹೆಚ್ಚು ಜನಪ್ರಿಯತೆಯನ್ನು ಪಡೆದ ಪ್ರಭಾವಿ ಬ್ಯುಸಿನೆಸ್​ ಲೀಡರ್ಸ್​ಗಳ ಪಟ್ಟಿ ಇಲ್ಲಿದೆ.


  1.ಚಿಂತನ್ ವಸಾನಿ : ಭಾರತದ ಪ್ರೀಮಿಯರ್ ಟ್ಯಾಕ್ಸ್ ಕನ್ಸಲ್ಟೆನ್ಸಿ ಸಂಸ್ಥೆ ಬಿ ಡಿ ವಸಾನಿ ಗ್ರೂಪ್‌ನ ನಿರ್ದೇಶಕರಾದ ಚಿಂತನ್ ವಸಾನಿ ಅವರು ಟಾಪ್‌ ಬ್ಯುಸಿನೆಸ್‌ ಲೀಡರ್‌ ಆಗಿದ್ದಾರೆ. ರಿಯಲ್ ಎಸ್ಟೇಟ್ ಮತ್ತು ಫೈನಾನ್ಸ್‌ನಲ್ಲಿ ಅಪಾರ ಆಸ್ತಿ ಹೊಂದಿದ್ದಾರೆ.


  ಇದನ್ನೂ ಓದಿ: ಹೊಸ ವರ್ಷಕ್ಕೆ ಮಧ್ಯಮ ವರ್ಗಕ್ಕೆ ಮೋದಿ ಬಂಪರ್​ ಗಿಫ್ಟ್​? ಕೇಂದ್ರದ ಮಹತ್ವದ ನಿರ್ಧಾರ?


  ಅಲ್ಲದೇ ರಿಯಲ್ ಎಸ್ಟೇಟ್ ಮಾರ್ಕೆಟ್ ರಿಸರ್ಚ್, ಸ್ಟ್ರಾಟೆಜಿಕ್ ಪ್ಲಾನಿಂಗ್ ಮತ್ತು ಕ್ಲೋಸರ್ ಮ್ಯಾನೇಜ್‌ಮೆಂಟ್ ಕಂಪನಿಯಾದ ವೈಸೆಬಿಜ್‌ ನ ಸಂಸ್ಥಾಪಕರೂ ಆಗಿದ್ದಾರೆ. ಇದರ ಪ್ರಧಾನ ಕಚೇರಿ ಮುಂಬೈನಲ್ಲಿದೆ. 2020 ರ ಮಧ್ಯದಲ್ಲಿ, ವೈಸೆಬಿಜ್ ರಿಯಾಲ್ಟಿಯು ಭಾರತದ ಮೊದಲ ರಿಯಲ್ ಎಸ್ಟೇಟ್ ಇ-ಟಾಕ್ ಶೋ "ವೈಸ್ ಎಕ್ಸ್-ಚೇಂಜ್" ಅನ್ನು ಪ್ರಾರಂಭಿಸಿತು. 2022 ರಲ್ಲಿ, ಚಿಂತನ್ ಅವರು ಬೃಹನ್ಮುಂಬೈ ಡೆವಲಪರ್ಸ್ ಅಸೋಸಿಯೇಶನ್ YUVA ಯ ಉಪಾಧ್ಯಕ್ಷ ಮತ್ತು ಜೂನ್ 2021 ರಲ್ಲಿ ಶ್ರೀ ಲೋಹನಾ ಮಹಾಪರಿಷತ್‌ನ ಯುವ ಅಧ್ಯಕ್ಷರಾಗಿ ನೇಮಕಗೊಂಡಿದ್ದಾರೆ.


  ಸಾಂಕೇತಿಕ ಚಿತ್ರ


  2. ಸುಧೀರ್ ಕೀರ್ತಿ : ಗೋಲ್ಡನ್‌ಕೀ ವೆಂಚರ್ಸ್ ಪ್ರೈವೇಟ್ ಲಿಮಿಟೆಡ್ ನ ಸಿಇಒ ಮತ್ತು ವ್ಯವಸ್ಥಾಪಕ ನಿರ್ದೇಶಕರಾದ ಸುಧೀರ್‌ ಕೀರ್ತಿ ಅವರು ಮತ್ತೊಬ್ಬ ಪ್ರಭಾವಿ ಬ್ಯುಸಿನೆಸ್‌ ಲೀಡರ್‌. ಇವರು ತಮ್ಮ ಗೋಲ್ಡನ್‌ ಕೀ ಕಂಪನಿಯನ್ನು ಹುಟ್ಟುಹಾಕಿದ್ದು 2019 ರಲ್ಲಿ. ಇದು ಹೈದರಾಬಾದ್‌ನಲ್ಲಿ ಪ್ರಧಾನ ಕಛೇರಿಯನ್ನು ಹೊಂದಿದೆ.


  ಸುಧೀರ್ ಕೀರ್ತಿ ಒಬ್ಬ ಉದಯೋನ್ಮುಕ ರಿಯಲ್ ಎಸ್ಟೇಟ್ ಪರಿಣಿತರಾಗಿದ್ದಾರೆ. ಅಲ್ಲದೇ ಒಂದೊಳ್ಳೆಯ ಮನೆಯನ್ನು ಕೊಂಡುಕೊಳ್ಳುವ ಭಾರತೀಯರ ಕನಸನ್ನು ನನಸು ಮಾಡುವಲ್ಲಿ ಇವರ ಕಂಪನಿ ಕೆಲಸ ಮಾಡುತ್ತಿದೆ. ತಮ್ಮ ಸುಧಾರಿತ ಆಲೋಚನೆ ಹಾಗೂ ಪರಿಕಲ್ಪನೆಯಿಂದಾಗಿ ಗ್ರಾಹಕರ ಸಂತೃಪ್ತಿಗೆ ಇದು ಪಾತ್ರವಾಗಿದೆ. ಗುಣಮಟ್ಟದಲ್ಲಿ ಎಂದಿಗೂ ರಾಜಿ ಮಾಡಿಕೊಳ್ಳದೇ ತಮ್ಮ ಗ್ರಾಹಕರಿಗೆ ಉತ್ತಮವಾದದ್ದನ್ನೇ ನೀಡುವ ಇವರ ಕಂಪನಿ ಬಹಳಷ್ಟು ಗ್ರಾಹಕರ ಹೃದಯ ಗೆದ್ದಿದೆ.


  1. ಪ್ರತೀಕ್‌ ಕೃ ಭೌಮಿಕ್‌ : ಅತ್ಯಂತಪ್ರಭಾವಶಾಲಿಭಾರತೀಯಉದ್ಯಮಿಗಳಲ್ಲಿರಿವ್ಯೂ ಅಡ್ಡಾದ ಸಹ ಸಂಸ್ಥಾಪಕ ಹಾಗೂ ಸಿಒಒ ಪ್ರತೀಕ್‌ ಭೌಮಿಕ್‌ ಕೂಡ ಒಬ್ಬರು. 2015 ರಲ್ಲಿ ಸ್ಥಾಪಿಸಲಾಗಿರುವ ರಿವ್ಯೂ ಅಡ್ಡಾ 3,200 ಪಾಲುದಾರ ಮೈಕ್ರೋ-ಕೋಚಿಂಗ್‌ ಇನ್‌ಸ್ಟಿಟ್ಯೂಟ್‌ಗಳು ಮತ್ತು ಟ್ಯೂಟರ್‌ಗಳನ್ನು ಹೊಂದಿವೆ.


  ಸಾಂಕೇತಿಕ ಚಿತ್ರ


  ತಂತ್ರಜ್ಞಾನದಲ್ಲಿ ಪರಿಣತಿ ಪಡೆದ ನಂತರ, ಇವರು ಅದೇ ಕ್ಷೇತ್ರದಲ್ಲಿ ತಮ್ಮ ಸ್ವಂತ ವ್ಯವಹಾರವನ್ನು ಆರಂಭಿಸಿದರು. ಬುದ್ಧಿವಂತಿಕೆ, ಕೆಲಸ, ಪರಿಶ್ರಮ, ಸಕಾರಾತ್ಮಕ ಚಿಂತನೆಗಳನ್ನೊಳಗೊಂಡು ರಿವ್ಯೂ ಅಡ್ಡಾವನ್ನು ಅಭಿವೃದ್ಧಿ ಪಡಿಸಿದರು.


  4. ಡಾ. ಒ. ಅರಿವಳಗನ್: ಇಂಟರ್ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಪ್ರಾಜೆಕ್ಟ್ ಮ್ಯಾನೇಜ್ಮೆಂಟ್ (IIPM) ನ ಸ್ಥಾಪಕ ಹಾಗೂ ಸಿಇಒ ಆಗಿರುವ ಡಾ ಒ ಅರಿವಳಗನ್‌ ಮತ್ತೊಬ್ಬ ಯಶಸ್ವಿ ಉದ್ಯಮಿ. ಈ ಕ್ಷೇತ್ರದಲ್ಲಿ 36 ವರ್ಷಕ್ಕೂ ಹೆಚ್ಚು ಅನುಭವ ಹೊಂದಿರುವ ಇವರು ಮದ್ರಾಸ್ ವಿಶ್ವವಿದ್ಯಾನಿಲಯದಿಂದ ಸಿವಿಲ್/ಸ್ಟ್ರಕ್ಚರಲ್ ಇಂಜಿನಿಯರಿಂಗ್‌ನಲ್ಲಿ ಗೌರವ ಪದವಿ ಹೊಂದಿದ್ದಾರೆ. ಅಲ್ಲದೆ, ಐಐಎಂ ಬೆಂಗಳೂರಿನಿಂದ ಬಿಸಿನೆಸ್ ಅನಾಲಿಟಿಕ್ಸ್ ಮತ್ತು ಎಂಟರ್‌ಪ್ರೈಸ್ ರಿಸ್ಕ್ ಮ್ಯಾನೇಜ್‌ಮೆಂಟ್‌ ಕೋರ್ಸ್‌ ಪೂರ್ಣಗೊಳಿಸಿದ್ದಾರೆ.


  ಅಂತಾರಾಷ್ಟ್ರೀಯ ಭಾಷಣಕಾರ, ಲೇಖಕರಾದ ಇವರಿಗೆ ಸಾಕಷ್ಟು ಪ್ರಶಸ್ತಿ ಪುರಸ್ಕಾರಗಳು ಒಲಿದು ಬಂದಿವೆ. ಯುನೈಟೆಡ್ ಸ್ಟೇಟ್ಸ್‌ನ ಇಂಟರ್‌ನ್ಯಾಶನಲ್ ತಮಿಳು ಯೂನಿವರ್ಸಿಟಿಯಿಂದ ಯುವಕರ ಸಬಲೀಕರಣಕ್ಕಾಗಿ ಗೌರವ ಡಾಕ್ಟರೇಟ್ ಸೇರಿದಂತೆ ಹಲವಾರು ಪ್ರಶಸ್ತಿಗಳು ಮತ್ತು ಪುರಸ್ಕಾರಗಳು ಸಂದಿವೆ. ಅವರು ಹಾಲಿವುಡ್ ಫಿಲ್ಮ್ ಇನ್‌ಸ್ಟಿಟ್ಯೂಟ್, NY, USA ನಿಂದ ಪ್ರಮಾಣೀಕೃತ ಚಲನಚಿತ್ರ ನಿರ್ಮಾಪಕರೂ ಆಗಿದ್ದಾರೆ.


  5. ಅಂಕಿತಾ ಚಟರ್ಜಿ: ಸೆಲೆಬ್ರಿಟಿ ಜ್ಯೋತಿಷಿ, ಸಂಖ್ಯಾಶಾಸ್ತ್ರಜ್ಞ ಮತ್ತು ಲೈಫ್ ಕೋಚ್ ಆಗಿರುವ ಅಂಕಿತಾ ಚಟರ್ಜಿ ಬಗ್ಗೆ ನೀವು ಕೇಳಿಯೇ ಇರ್ತೀರಾ. ಜ್ಯೋತಿಷ್ಯ ಮತ್ತು ಸಂಖ್ಯಾಶಾಸ್ತ್ರವನ್ನು ಹೊಸ ರೀತಿಯಲ್ಲಿ ಪರಿಚಯಿಸುವ ಮೂಲಕ ಹೆಚ್ಚು ಜನರನ್ನು ತಲುಪಿದ್ದಾರೆ ಅಂಜುತಾ ಚಟರ್ಜಿ.


  ಅತ್ಯುತ್ತಮ ಜ್ಯೋತಿಷಿ, ಸಂಖ್ಯಾಶಾಸ್ತ್ರಜ್ಞ ಮತ್ತು 2021 ರ ವರ್ಷದ ಲೈಫ್ ಕೋಚ್‌ಗಾಗಿ ಮೇಕ್ ಇನ್ ಇಂಡಿಯಾ ಉದಯೋನ್ಮುಖ ನಾಯಕ ಪ್ರಶಸ್ತಿ ಸೇರಿದಂತೆ ಹಲವಾರು ಪ್ರಶಸ್ತಿ ಪುರಸ್ಕಾರಗಳನ್ನು ಅವರು ಪಡೆದಿದ್ದಾರೆ. ಅಲ್ಲದೇ ಅವರು ಬಾಲಿವುಡ್ ಸೆಲೆಬ್ರಿಟಿಗಳೊಂದಿಗೆ ಹಲವಾರು ಪ್ರದರ್ಶನಗಳಲ್ಲಿ ಕಾಣಿಸಿಕೊಂಡಿದ್ದಾರೆ. TEDx, ಭಾರತದ ಅಧಿಕೃತ ಪ್ರಭಾವಿ ಮತ್ತು ಭಾರತೀಯ ಮಹಿಳಾ ಇತಿಹಾಸ ಮ್ಯೂಸಿಯಂ ಫೌಂಡೇಶನ್‌ನ ಸದಸ್ಯರೂ ಆಗಿದ್ದಾರೆ.


  6. ಭೂಪೇಂದ್ರ ಸಿಂಗ್ ರಾಥೋರ್: ಪ್ರೇರಕ ಭಾಷಣಕಾರ, ಲೇಖಕ, ಹಾಗೂ ಲೀಡರ್‌ ಶಿಪ್‌ ಕನ್ಸಲ್ಟೆಂಟ್‌ ಆಗಿರುವ ಭೂಪೇಂದ್ರ ಸಿಂಗ್‌ ರಾಥೋರ್‌ ಪ್ರತಿಷ್ಠಿತ ಉದ್ಯಮಿ. ಕೋಚ್ ಬಿಎಸ್ಆರ್ ವಾಣಿಜ್ಯೋದ್ಯಮಿ, ಹೆಚ್ಚು ಬೇಡಿಕೆಯಲ್ಲಿರುವ ಲೇಖಕ, ಲೈಫ್‌ ಆಂಡ್‌ ಬ್ಯುಸಿನೆಸ್‌ ಸ್ಟ್ರಾಟಜಿಕ್‌ ಆಗಿರುವ ಭೂಪೇಂದ್ರ ಅವರು ಲೈವ್ ಸೆಮಿನಾರ್‌ಗಳು, ಶೈಕ್ಷಣಿಕ ಯೂಟ್ಯೂಬ್‌ನ ಮೂಲಕ ಜಗತ್ತಿಗೇ ಪರಿಚಿತರಾಗಿದ್ದಾರೆ.


  ಭೂಪೇಂದ್ರ ರಾಥೋರ್‌ ಅವರದ್ದು ತರಬೇತಿ ಕ್ಷೇತ್ರದಲ್ಲಿ ದೊಡ್ಡ ಹೆಸರು. ಅವರು ನ್ಯೂಯಾರ್ಕ್‌ನಲ್ಲಿರುವ ವಿಶ್ವಸಂಸ್ಥೆಯ ಪ್ರಧಾನ ಕಛೇರಿಯಲ್ಲಿ ಮಾತನಾಡುವ ಗೌರವದೊಂದಿಗೆ ಎರಡು ಗಿನ್ನೆಸ್ ವಿಶ್ವ ದಾಖಲೆಗಳನ್ನು ಹೊಂದಿದ್ದಾರೆ. ಭೂಪೇಂದ್ರ ಅವರು "ದಿ ಮ್ಯಾಜಿಕ್ ಆಫ್ ಥಿಂಕಿಂಗ್ ರಿಚ್" ಮತ್ತು "ದಿ ಥಿಂಕ್ ರಿಚ್ ಶೋ" ಎಂಬ ಶೀರ್ಷಿಕೆಯ ಕಾರ್ಯಕ್ರಮಗಳ ನಿರೂಪಕರಾಗಿದ್ದಾರೆ.


  7. ಪ್ರಿಯಾಂಕಾ ಅಗರ್ವಾಲ್: ಪೇಸ್‌ ಎವ್ರಿಡೋರ್‌ ಕಂಪನಿಯ ಸಿಇಒ ಆಗಿರುವ ಪ್ರಿಯಾಂಕಾ ಅಗರ್ವಾಲ್‌ ತಮ್ಮ 16 ನೇ ವಯಸ್ಸಿನಲ್ಲಿಯೇ ಸ್ವಂತ ಉದ್ಯಮ ಸ್ಥಾಪಿಸಿದವರು. ಅವರು ಲೈಫ್ ಬ್ಲಾಗರ್ ಮತ್ತು ಡಿಜಿಟಲ್ ವಿಷಯ ರಚನೆಕಾರರೂ ಹೌದು. ಮಾನಸಿಕ ಆರೋಗ್ಯದ ಪ್ರಾಮುಖ್ಯತೆಯನ್ನು ಅರ್ಥಮಾಡಿಕೊಳ್ಳುವುದು ಮತ್ತು ಜೀವನದ ಬಗ್ಗೆ ಸಕಾರಾತ್ಮಕ ದೃಷ್ಟಿಕೋನವನ್ನು ಹೊಂದಿರುವ ಅವರು IAMSHE ಅನ್ನು ಪರಿಚಯಿಸಿದರು. ಇದು ಪ್ರೇಕ್ಷಕರಿಗೆ ಶಕ್ತಿ ತುಂಬುವ ಮತ್ತು ಸಹಾಯ ಮಾಡುವ ವೇದಿಕೆಯಾಗಿದೆ.


  ರಿಯಲ್ ಎಸ್ಟೇಟ್‌ನಲ್ಲಿ 12 ವರ್ಷಗಳು ಸೇರಿದಂತೆ ಭಾರತೀಯ ಮಾರುಕಟ್ಟೆಗಳಲ್ಲಿ 15 ವರ್ಷಗಳ ಅನುಭವ ಹೊಂದಿರುವ ಪ್ರಿಯಾಂಕಾ, ರಿಯಲ್ ಎಸ್ಟೇಟ್ ಡೆವಲಪರ್‌ಗಳಿಗೆ ತಮ್ಮ ಆಸ್ತಿಗಳನ್ನು ಮಾರಾಟ ಮಾಡಲು ಸಹಾಯ ಮಾಡುವ "ಪೇಸ್ ಎವರಿ ಡೋರ್" ಅನ್ನು ಸಹ ಸ್ಥಾಪಿಸಿದರು.


  8. ಕೀರ್ತಿ ಶೇಖರ್ ಪಾಠಕ್ : ಅಶೋಕ ಕನ್ಸ್ಟ್ರಕ್ಷನ್ ಕಂಪನಿಯ ಸಿಇಒ ಆಗಿರುವ ಕೀರ್ತಿ ಶೇಖರ್ ಪಾಠಕ್ ಅವರು ನಮ್ಮ ದೇಶದ ಅತ್ಯಂತ ನಿಪುಣ ಉದ್ಯಮಿಗಳಲ್ಲಿ ಒಬ್ಬರು. ಅವರು ನಿರ್ಮಾಣ, ತಂತ್ರಜ್ಞಾನ ಮತ್ತು ಹಾಸ್ಪಿಟಾಲಿಟಿ ಉದ್ಯಮಗಳಲ್ಲಿ ಏಳು ವರ್ಷಗಳ ಅನುಭವ ಹೊಂದಿದ್ದಾರೆ.


  ಕೀರ್ತಿ ಅವರು ಸ್ಟ್ರಾಟ್‌ಫೋರ್ಡ್ ವಿಶ್ವವಿದ್ಯಾಲಯದಿಂದ ಎಂಬಿಎ ಸ್ನಾತಕೋತ್ತರ ಪದವಿ ಮತ್ತು ಮಾರ್ಕೆಟಿಂಗ್‌ನಲ್ಲಿ ಪದವಿ ಪಡೆದಿದ್ದಾರೆ. KPMG, UNICEF, ISRO, The World Bank Group, ಮತ್ತು The CPD UK ನಿಂದ ಕೀರ್ತಿ ಅನೇಕ ಮನ್ನಣೆಗಳನ್ನು ಪಡೆದಿದ್ದಾರೆ. ತಮ್ಮ ಗ್ರಾಹಕರಿಗೆ ಉತ್ತಮ ಉತ್ಪನ್ನ ಅಥವಾ ಸೇವೆಯನ್ನು ಒದಗಿಸುವ ಗುರಿ ಹೊಂದಿದ್ದಾರೆ.


  9. ಸುದರ್ಶನ್ ಸಬತ್: ಸುದರ್ಶನ್ ಗ್ರೂಪ್ ಆಫ್ ಕಂಪನಿಯ ಸ್ಥಾಪಕರಾಗಿರುವ ಸುದರ್ಶನ್‌ ಅವರು ಮಾಸ್ಟರ್‌ಮೈಂಡ್ ತರಬೇತುದಾರರಾಗಿದ್ದಾರೆ. ಅಲ್ಲದೇ ಮುಂದಿನ ಐದು ವರ್ಷಗಳಲ್ಲಿ 1000 ಕ್ಕೂ ಹೆಚ್ಚು ತರಬೇತುದಾರರನ್ನು ರಚಿಸುವ ಗುರಿ ಹೊಂದಿದ್ದಾರೆ. ಡಿಜಿಟಲ್ ಪ್ಲಾಟ್‌ಫಾರ್ಮ್‌ಗಳಲ್ಲಿ ಲಕ್ಷಾಂತರ ಅನುಯಾಯಿಗಳನ್ನು ಹೊಂದಿದ್ದಾರೆ.


  ಅವರು 5 ವಿವಿಧ ಭಾಷೆಗಳಲ್ಲಿ 13ಕ್ಕೂ ಹೆಚ್ಚು ಪುಸ್ತಕಗಳನ್ನು ಬರೆದಿದ್ದಾರೆ. "ಮೈಂಡ್ ವಿನ್ನರ್ ವರ್ಲ್ಡ್ ವಿನ್ನರ್," "ರಿಚ್ ಮೈಂಡ್ ಬ್ಲೂಪ್ರಿಂಟ್," ಮತ್ತು "ಡೇರ್ ಯುವರ್ ಮೈಂಡ್ ಟು ಥಿಂಕ್ ಬಿಯಾಂಡ್" ಬಹಳಷ್ಟು ಪ್ರಸಿದ್ಧಿ ಪಡೆದಿವೆ.


  10. ಠಾಕೂರ್ ಅನುಪ್ ಸಿಂಗ್: ಮಾರ್ಗ್ ERP ಲಿಮಿಟೆಡ್ ನ ಎಂಡಿ ಆಗಿರುವ ಅನುಪ್‌ ಸಿಂಗ್‌ 30 ವರ್ಷಗಳ ಹಿಂದೆಯೇ ಡಿಜಿಟಲೀಕರಣದ ಪ್ರಯಾಣವನ್ನು ಪ್ರಾರಂಭಿಸಿದರು. Marg ERP Ltd ಕಂಪನಿ ಡಿಜಿಟಲ್ ಪಾವತಿ ಮತ್ತು ಡಿಜಿಟಲ್ ವಿತರಣೆಯೊಂದಿಗೆ ಭಾರತದ ನಂ. 1 ಇನ್ವೆಂಟರಿ ಮತ್ತು ಅಕೌಂಟಿಂಗ್ ಸಾಫ್ಟ್‌ವೇರ್ ಆಗಿದೆ. ಈ ಸಂಸ್ಥೆಯು ಈಗ 27ಕ್ಕೂ ಹೆಚ್ಚು ವ್ಯಾಪಾರ ವಿಭಾಗಗಳಲ್ಲಿ 28ಕ್ಕೂ ಹೆಚ್ಚು ದೇಶಗಳಲ್ಲಿ 1 ಮಿಲಿಯನ್ಗೂ ಹೆಚ್ಚು ವ್ಯವಹಾರಗಳಿಗೆ ಸೇವೆ ಸಲ್ಲಿಸುತ್ತಿದೆ.


  ಇನ್ನು ಠಾಕೂರ್ ಅನುಪ್ ಸಿಂಗ್ ಅವರು DQ ನ ಡಿಜಿಟಲ್ ಲೀಡರ್‌ಶಿಪ್ ಕಾನ್ಕ್ಲೇವ್‌ನಲ್ಲಿ ಉದ್ಯೋಗ ರತನ್ ಪ್ರಶಸ್ತಿ, 'ಫಾಸ್ಟ್‌ ಗ್ರೋವಿಂಗ್‌ ಇನ್ವೆಂಟರಿ ಮತ್ತು ಅಕೌಂಟಿಂಗ್ ಸಾಫ್ಟ್‌ವೇರ್ ಪ್ರಶಸ್ತಿ' ಮತ್ತು 'ಪಾತ್ ಬ್ರೇಕಿಂಗ್ ಡಿಜಿಟಲ್ ಲೀಡರ್‌ಶಿಪ್ ಇನ್ ಇಂಡಿಯನ್ ಸಾಫ್ಟ್‌ವೇರ್ ಇಂಡಸ್ಟ್ರಿ' ಸೇರಿದಂತೆ ಹಲವು ಗೌರವಗಳನ್ನು ಪಡೆದಿದ್ದಾರೆ.

  Published by:Prajwal B
  First published: