Gold Price Today: ಏರುತ್ತಲೇ ಇದೆ ಹಳದಿ ಲೋಹದ ಬೆಲೆ - ನಿಮ್ಮ ನಗರದಲ್ಲಿ ಚಿನ್ನದ ಬೆಲೆ ಹೀಗಿದೆ

Gold And Silver Price Today: ಇನ್ನೊಂದೆಡೆ, ಪುಣೆ, ಸೂರತ್‌, ನಾಶಿಕ್‌, ಚಂಡೀಗಢ ಸೇರಿ ಹಲವು ನಗರಗಳಲ್ಲಿ 1 ಕೆಜಿ ಬೆಳ್ಳಿಯ ಮೌಲ್ಯ 70,000 ರೂ. ಇದೆ. ಈ ಮಧ್ಯೆ, ರಾಷ್ಟ್ರ ರಾಜಧಾನಿ ದೆಹಲಿ, ವಾಣಿಜ್ಯ ರಾಜಧಾನಿ ಮುಂಬೈ ಹಾಗೂ ಕೋಲ್ಕತ್ತದಲ್ಲಿ 1 ಕೆಜಿ ಬೆಳ್ಳಿಯ ದರ 70,000 ರೂ. ಇದ್ದರೆ, ಚೆನ್ನೈನಲ್ಲಿ  1 ಕೆಜಿ ಬೆಳ್ಳಿಯ ದರ 74,400 ರೂ. ಆಗಿದೆ. 

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

 • Share this:
  Gold Rate on April 15th, 2022: ಹಲವು ಕಾರಣಗಳಿಂದ ಬಂಗಾರದ (Gold Rate) ದರ ಸತತ 3 ದಿನಗಳಿಂದ ಏರಿಕೆಯಾಗುತ್ತಲೇ ಇದೆ. ಬಂಗಾರದ ದರ ಇಳಿಕೆಯಾಗಬಹುದು ಅಂತ ಆಭರಣ ಮಾಡಿಸೋಕೆ ತಯಾರಾದವರಿಗೆ ಶಾಕ್‌ ತರುವ ಸುದ್ದಿ ಇದು. ಬರೀ ಬಂಗಾರ ಮಾತ್ರವಲ್ಲ, ಬೆಳ್ಳಿ ದರವೂ ಗಗನಕ್ಕೇರುತ್ತಿದೆ. ಹೌದು, ದೇಶದಲ್ಲಿಂದು ಚಿನ್ನದ ಬೆಲೆಯಲ್ಲಿ (Gold Price) ಏರಿಕೆಯಾಗಿದೆ. ಬೆಂಗಳೂರಿನಲ್ಲಿ (Bengaluru) ಸಹ ಚಿನ್ನದ ಬೆಲೆಯಲ್ಲಿ ಹೆಚ್ಚಾಗಿದೆ. ಭಾರತದಲ್ಲಿ ನಿನ್ನೆ 10 ಗ್ರಾಂ 22 ಕ್ಯಾರೆಟ್ ಚಿನ್ನದ ಬೆಲೆ 49,350 ರೂ. ಇತ್ತು. ಇಂದು 200 ರೂ. ಏರಿಕೆಯಾಗಿ 49,550 ರೂ. ಆಗಿದೆ. ಅಂತೆಯೇ 10 ಗ್ರಾಂ 24 ಕ್ಯಾರೆಟ್ ಚಿನ್ನದ ಬೆಲೆ ನಿನ್ನೆ 53,840 ರೂ. ಇತ್ತು. ಇಂದು 220 ರೂ. ಹೆಚ್ಚಾಗಿ 54,060 ರೂ. ಆಗಿದೆ. ಇನ್ನು, ಬೆಂಗಳೂರು ಸೇರಿ ದೇಶದ ವಿವಿಧ ನಗರಗಳಲ್ಲಿ ಇಂದಿನ ಚಿನ್ನ, ಬೆಳ್ಳಿ ದರ ಎಷ್ಟಿದೆ ಎಂಬುದು ಇಲ್ಲಿದೆ

  ಬೆಂಗಳೂರಿನಲ್ಲಿ ಚಿನ್ನದ ಬೆಲೆ ಎಷ್ಟಿದೆ..?
  ನೀವು ಚಿನ್ನ ಖರೀದಿಸುವ ಆಲೋಚನೆಯಲ್ಲಿದ್ದೀರಾ, ಹಾಗಾದ್ರೆ ದೇಶದ ಪ್ರಮುಖ ನಗರಗಳಲ್ಲಿ ಇಂದು ಚಿನ್ನಕ್ಕೆ ಎಷ್ಟು ಬೆಲೆ ಇದೆ ಎಂಬ ಬಗ್ಗೆ ಇಲ್ಲಿದೆ ಮಾಹಿತಿ. ಕರ್ನಾಟಕದ ರಾಜಧಾನಿ ಬೆಂಗಳೂರಿನಲ್ಲಿ 10 ಗ್ರಾಂ 24 ಕ್ಯಾರೆಟ್‌ ಚಿನ್ನದ ಬೆಲೆ ನಿನ್ನೆ 53,840 ರೂ. ಇತ್ತು. ಇಂದು 220 ರೂ. ಹೆಚ್ಚಾಗಿ 54,060 ರೂ. ಆಗಿದೆ.  ಅದೇ ರೀತಿ 10 ಗ್ರಾಂ 22 ಕ್ಯಾರೆಟ್ ಚಿನ್ನದ ಬೆಲೆ 49,350 ರೂ. ಇತ್ತು. ಇಂದು 200 ರೂ. ಏರಿಕೆಯಾಗಿ 49,550 ರೂ. ಆಗಿದೆ. ರಾಜ್ಯದ ಇತರೆ ಪ್ರಮುಖ ನಗರಗಳಾದ ಮೈಸೂರು, ಮಂಗಳೂರಿನಲ್ಲೂ ಇದೇ ಬೆಲೆ ಇದೆ.

  ಇನ್ನು, ದೇಶದ ಇತರೆ ನಗರಗಳಾದ ವಿಶಾಖಪಟ್ಟಣಂ, ವಿಜಯವಾಡ, ಹೈದರಾಬಾದ್, ಭುವನೇಶ್ವರ, ಅಹಮದಾಬಾದ್, ಕೇರಳ, ಪುಣೆ, ಕೊಯಮತ್ತೂರು, ಮಧುರೈ, ಚಂಡೀಗಢ, ಸೂರತ್‌, ನಾಶಿಕ್‌ನಲ್ಲೂ ಇಂದಿನ 24 ಕ್ಯಾರೆಟ್‌ ಚಿನ್ನದ ಬೆಲೆ 54 ಸಾವಿರದಿಂದ 55 ಸಾವಿರದ ಆಸುಪಾಸಿನಲ್ಲೇ ಇದೆ.

  ಈ ಮಧ್ಯೆ, ದೇಶದ ಮೆಟ್ರೋಪಾಲಿಟನ್‌ ನಗರಗಳಾದ ಚೆನ್ನೈನಲ್ಲಿ 24 ಕ್ಯಾರೆಟ್‌ ಚಿನ್ನದ ಬೆಲೆ  54,600 ರೂ. ಇದ್ದರೆ, ರಾಷ್ಟ್ರ ರಾಜಧಾನಿ ದೆಹಲಿ, ಮುಂಬೈ ಹಾಗೂ ಕೋಲ್ಕತ್ತದಲ್ಲಿ 24 ಕ್ಯಾರೆಟ್‌ ಬಂಗಾರದ ಬೆಲೆ 54,060 ರೂ. ಆಗಿದೆ.
  ದೇಶದಲ್ಲಿ ಆಭರಣ ಪ್ರಿಯರ ಜನಸಂಖ್ಯೆಗೇನೂ ಕೊರತೆ ಇಲ್ಲ. ಮದುವೆ, ಮುಂತಾದ ಸಮಾರಂಭಗಳಿಗೆ ಚಿನ್ನ, ಬೆಳ್ಳಿ ಖರೀದಿ ಜೋರಾಗೇ ನಡೆಯುತ್ತಿರುತ್ತದೆ. ಹಲವರು ಆಪತ್ಕಾಲದಲ್ಲಿ ಚಿನ್ನ ಅಡ ಇಡಲು ಅಥವಾ ಮಾರಲು ಬೇಕಾಗುತ್ತದೆಂದು ಸಹ ಅದರ ಮೇಲೆ ಹೂಡಿಕೆ ಮಾಡುತ್ತಾರೆ. ಚಿನ್ನವನ್ನು ಬಾಂಡ್‌ ರೂಪದಲ್ಲೂ ಖರೀದಿಸಲಾಗುತ್ತದೆ.

  ಇದನ್ನೂ ಓದಿ: ಕೇವಲ ₹5 ಸಾವಿರದಲ್ಲಿ ಉದ್ಯಮ ಆರಂಭ: ಈಗ ದಿಶಿ ದೊಡ್ಡ ಉದ್ಯಮಿ, ಸ್ಫೂರ್ತಿದಾಯಕ ಸ್ಟೋರಿ ಇಲ್ಲಿದೆ

  ಬೆಳ್ಳಿ ದರ ಹೀಗಿದೆ
  ದೇಶದಲ್ಲಿಂದು ಚಿನ್ನದ ಬೆಲೆಯಲ್ಲಿ ಏರಿಕೆಯಾದಂತೆ ಬೆಳ್ಳಿ ದರ (Silver Rate) ದಲ್ಲೂ ಹೆಚ್ಚಳವಾಗಿದೆ. ನಿನ್ನೆ 1 ಕೆಜಿ ಬೆಳ್ಳಿಗೆ 69,300 ರೂ. ಇತ್ತು. ಇಂದು 700 ರೂ. ಹೆಚ್ಚಾಗಿ 70,000 ರೂ. ಆಗಿದೆ.

  ಬೆಂಗಳೂರು, ಮೈಸೂರು ಹಾಗೂ ಮಂಗಳೂರಿನಲ್ಲಿ 1 ಕೆಜಿ ಬೆಳ್ಳಿಯ ಬೆಲೆ 200 ರೂ. ಜಾಸ್ತಿ ಆಗಿದ್ದು 74,400 ರೂ. ಆಗಿದೆ. ಇದೇ ರೀತಿ ಹೈದರಾಬಾದ್, ಕೇರಳ, ವಿಜಯವಾಡ, ವಿಶಾಖಪಟ್ಟಣಂ, ಕೊಯಮತ್ತೂರು, ಮಧುರೈನಲ್ಲಿ ಸಹ 1 ಕೆಜಿ ಬೆಳ್ಳಿಯ ಬೆಲೆ 74,400 ರೂ. ಆಗಿದೆ.

  ಇನ್ನೊಂದೆಡೆ, ಪುಣೆ, ಸೂರತ್‌, ನಾಶಿಕ್‌, ಚಂಡೀಗಢ ಸೇರಿ ಹಲವು ನಗರಗಳಲ್ಲಿ 1 ಕೆಜಿ ಬೆಳ್ಳಿಯ ಮೌಲ್ಯ 70,000 ರೂ. ಇದೆ. ಈ ಮಧ್ಯೆ, ರಾಷ್ಟ್ರ ರಾಜಧಾನಿ ದೆಹಲಿ, ವಾಣಿಜ್ಯ ರಾಜಧಾನಿ ಮುಂಬೈ ಹಾಗೂ ಕೋಲ್ಕತ್ತದಲ್ಲಿ 1 ಕೆಜಿ ಬೆಳ್ಳಿಯ ದರ 70,000 ರೂ. ಇದ್ದರೆ, ಚೆನ್ನೈನಲ್ಲಿ  1 ಕೆಜಿ ಬೆಳ್ಳಿಯ ದರ 74,400 ರೂ. ಆಗಿದೆ.

  ಇದನ್ನೂ ಓದಿ: ಜೀವ ವಿಮೆ ಮಾಡಿಸುವ ಮುನ್ನ ಈ 5 ವಿಷಯಗಳನ್ನು ಗಮನಿಸಿ, ಮರೆಯಬೇಡಿ

  ಒಟ್ಟಾರೆ ದೇಶದ ಪ್ರಮುಖ ನಗರಗಳಲ್ಲಿ ಬಂಗಾರದ ಬೆಲೆಯಲ್ಲಿ ಏರಿಕೆ - ಇಳಿಕೆಯ ಹಾವು ಏಣಿ ಆಟ ಮುಂದುವರಿದಿದೆ. ಬೆಳ್ಳಿ ದರ ಕೂಡ ಏರಿಳಿತ ಕಾಣುತ್ತಿದೆ.
  ಅಂತಾರಾಷ್ಟ್ರೀಯ ಟ್ರೆಂಡ್, ಚಿನ್ನದ ಮೇಲಿನ ಆಮದು ಸುಂಕ ಮತ್ತು ಡಾಲರ್ ಎದುರು ರೂಪಾಯಿ ಮೌಲ್ಯ ಸೇರಿ ಹಲವು ಕಾರಣಗಳಿಂದ ಆಯಾ ದಿನದ ಬಂಗಾರ ಹಾಗೂ ಬೆಳ್ಳಿ ದರ ನಿರ್ಧಾರವಾಗುತ್ತದೆ. ಷೇರು ಮಾರುಕಟ್ಟೆಯ ಪ್ರಭಾವದಿಂದಲೂ ಚಿನ್ನದ ಬೆಲೆ ಏರಿಕೆ - ಇಳಿಕೆಯಾಗಬಹುದು.
  Published by:Sandhya M
  First published: