Home Loan Interest Rates: ಮನೆ ಕಟ್ಟಲು ಸಾಲ ಬೇಕೇ? ವಿವಿಧ ಬ್ಯಾಂಕ್​ಗಳ ಬಡ್ಡಿದರ ಚೆಕ್ ಮಾಡಿ

Check Latest Interest Rates: ವಿವಿಧ ಬ್ಯಾಂಕ್​ಗಳ ವೆಬ್‌ಸೈಟ್‌ಗಳಲ್ಲಿರುವ ಮಾಹಿತಿ ಆಧರಿಸಿ ಯಾವ ಬ್ಯಾಂಕಲ್ಲಿ ಗೃಹಸಾಲಕ್ಕೆ ಎಷ್ಟು ಬಡ್ಡಿದರವಿದೆ ಎಂಬ ಮಾಹಿತಿ ಇಲ್ಲಿದೆ.

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

  • Share this:
    ಹೊಸ ಮನೆ ಖರೀದಿಸಲು, ಫ್ಲಾಟ್ ಖರೀದಿಸಲು, ಈಗಿರುವ ಮನೆ ದುರಸ್ತಿ ಮಾಡಲು ಅಥವಾ ಗೃಹ ಸಾಲದ ಬಾಕಿಯನ್ನು ವರ್ಗಾಯಿಸಲು ಬಯಸುವವರಿಗೆ  ಉತ್ತಮ ಅವಕಾಶ ಸೃಷ್ಟಿಯಾಗಿದೆ! ನೀವಂದುಕೊಂಡ ಹಾಗೆಯೇ ಗೃಹ ಸಾಲದ ಬಡ್ಡಿ ದರಗಳು (Home Loan Interest Rates) ಸಾರ್ವಕಾಲಿಕ ಕನಿಷ್ಠ ಮಟ್ಟಕ್ಕೆ ಕುಸಿದಿವೆ. ಬ್ಯಾಂಕ್‌ಗಳು ಮತ್ತು ಹಣಕಾಸು ಕಂಪನಿಗಳು ಕಡಿಮೆ ಬಡ್ಡಿದರದಲ್ಲಿ ಗೃಹ ಸಾಲ ನೀಡುತ್ತವೆ. ಬಡ್ಡಿದರಗಳು ಶೇಕಡಾ 7 ಕ್ಕಿಂತ ಕಡಿಮೆಯಾಗುವ ನಿರೀಕ್ಷೆಯಿದೆ. ಇತ್ತೀಚೆಗೆ ಆರ್‌ಬಿಐಡಿ ರೆಪೊ ದರವನ್ನು 40 ಬೇಸಿಸ್ ಪಾಯಿಂಟ್‌ಗಳಷ್ಟು ಹೆಚ್ಚಿಸಿದ್ದರೂ, ಶೇಕಡಾ 7 ಕ್ಕಿಂತ ಕಡಿಮೆ ಗೃಹ ಸಾಲವನ್ನು ನೀಡುವ ಬ್ಯಾಂಕ್‌ಗಳು (Low Interest Rate Banks) ಇನ್ನೂ ಇವೆ. 

    ಗೃಹ ಸಾಲ ಪಡೆಯುವವರಿಗೆ ಈಗ ಬ್ಯಾಂಕ್‌ಗಳು ಕಡಿಮೆ ಬಡ್ಡಿದರದಲ್ಲಿ ಸಾಲ ನೀಡುತ್ತಿವೆ. ಜತೆಗೆ ಸಂಸ್ಕರಣಾ ಶುಲ್ಕದಲ್ಲೂ ಕಡಿತ ಮಾಡುವುದಾಗಿ ಘೋಷಿಸುತ್ತಿದ್ದಾರೆ. ಆದರೆ ಕೆಲವು ಬ್ಯಾಂಕ್‌ಗಳು ಸಂಸ್ಕರಣಾ ಶುಲ್ಕವನ್ನು ಸಹ ಮನ್ನಾ ಮಾಡುತ್ತವೆ. ಬ್ಯಾಂಕ್ ಬಜಾರ್ ಪ್ರಕಾರ ಪ್ರಸ್ತುತ 7% ಕ್ಕಿಂತ ಕಡಿಮೆ ಗೃಹ ಸಾಲವನ್ನು ನೀಡುತ್ತಿರುವ ಬ್ಯಾಂಕುಗಳು ಮತ್ತು ವಸತಿ ಹಣಕಾಸು ಕಂಪನಿಗಳ ವಿವರಗಳನ್ನು ನೀವು ಇಲ್ಲಿ ತಿಳಿದುಕೊಳ್ಳಬಹುದು.

    ವಿವಿಧ ಬ್ಯಾಂಕ್​ಗಳ ವೆಬ್‌ಸೈಟ್‌ಗಳಲ್ಲಿರುವ ಮಾಹಿತಿ ಇಲ್ಲಿಯೇ ಇದೆ!
    ಗೃಹ ಸಾಲದ ಬಡ್ಡಿ ದರಗಳು ಕಡಿಮೆ ಇರುವ ಬ್ಯಾಂಕ್‌ಗಳು ಮತ್ತು ಹಣಕಾಸು ಕಂಪನಿಗಳ ವಿವರಗಳು ಇವು. ಮೇ 13, 2022  ಕ್ಕೆ ಅನ್ವಯವಾಗುವಂತೆ BankBankBazaar.com ವಿವಿಧ ಬ್ಯಾಂಕ್​ಗಳ ವೆಬ್‌ಸೈಟ್‌ಗಳಲ್ಲಿರುವ ಮಾಹಿತಿ ಆಧರಿಸಿ ಯಾವ ಬ್ಯಾಂಕಲ್ಲಿ ಗೃಹಸಾಲಕ್ಕೆ ಎಷ್ಟು ಬಡ್ಡಿದರವಿದೆ ಎಂಬ ವರದಿ ತಯಾರಿಸಿದೆ.  ನಿಮಗಾಗಿ ಎಂದೇ ಯಾವ ಬ್ಯಾಂಕ್​ ಎಷ್ಟು ಬಡ್ಡಿದರಕ್ಕೆ ಗೃಹಸಾಲ ನೀಡುತ್ತಿದೆ ಎಂದು ಮಾಹಿತಿ ಇಲ್ಲಿದೆ.















































































    ಬ್ಯಾಂಕ್ ಅಥವಾ ಹಣಕಾಸು ಕಂಪನಿಗೃಹ ಸಾಲದ ಬಡ್ಡಿ ದರ (ಶೇಕಡಾವಾರು)
     UCO ಬ್ಯಾಂಕ್6.50 ಶೇಕಡಾ
    ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ6.65 ಶೇಕಡಾ
    ಬಜಾಜ್ ಫಿನ್‌ಸರ್ವ್6.70 ಶೇಕಡಾ
    ಎಚ್‌ಡಿಎಫ್‌ಸಿ ಬ್ಯಾಂಕ್6.75 ಶೇಕಡಾ
    ಐಡಿಬಿಐ ಬ್ಯಾಂಕ್6.75 ಶೇಕಡಾ
     PNB ವಸತಿ6.75 ಶೇಕಡಾ
    ಬ್ಯಾಂಕ್ ಆಫ್ ಮಹಾರಾಷ್ಟ್ರ6.80 ಶೇಕಡಾ
     ಸೆಂಟ್ರಲ್ ಬ್ಯಾಂಕ್ 6.85 ಶೇಕಡಾ
    ಬ್ಯಾಂಕ್ ಆಫ್ ಬರೋಡಾ 6.90 ಶೇಕಡಾ
    ಬ್ಯಾಂಕ್ ಆಫ್ ಇಂಡಿಯಾ 6.90 ಶೇಕಡಾ
    ಇಂಡಿಯನ್ ಬ್ಯಾಂಕ್  6.90 ಶೇಕಡಾ
     ಪಂಜಾಬ್ ಮತ್ತು ಸಿಂಧ್ ಬ್ಯಾಂಕ್ 6.90 ಶೇಕಡಾ
    ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ  6.90 ಶೇಕಡಾ
    ಎಲ್ಐಸಿ ಹೌಸಿಂಗ್ ಫೈನಾನ್ಸ್ ಲಿಮಿಟೆಡ್  6.90 ಶೇಕಡಾ
    ಪಂಜಾಬ್ ನ್ಯಾಷನಲ್ ಬ್ಯಾಂಕ್ 6.95 ಶೇಕಡಾ
    ಆಕ್ಸಿಸ್ ಬ್ಯಾಂಕ್ 7 ಶೇಕಡಾ
     HDFC ಲಿಮಿಟೆಡ್7 ಶೇಕಡಾ
    ಕೋಟಕ್ ಮಹೀಂದ್ರಾ ಬ್ಯಾಂಕ್7 ಶೇಕಡಾ

    ಬಹುತೇಕ ಬ್ಯಾಂಕ್​ಗಳ ಗೃಹಸಾಲದ ಬಡ್ಡಿದರಗಳು ಕಡಿಮೆ ಆಗುತ್ತಿವೆ ಎಂಬುದನ್ನು ಗಮನಿಸಿ. ಆದರೆ ನೆನಪಿಡಿ, ಬಡ್ಡಿದರಗಳು ಗ್ರಾಹಕರ ಅವಧಿ ಮತ್ತು ಕ್ರೆಡಿಟ್ ಸ್ಕೋರ್ ಅನ್ನು ಅವಲಂಬಿಸಿ ಬದಲಾಗುತ್ತವೆ.

    ಇದನ್ನೂ ಓದಿ: QR Code Scam Alert: ಹಣ ಸ್ವೀಕರಿಸೋಕೂ ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡಬೇಕೆ?

    ನೀವು ಗೃಹಸಾಲ ತೆಗೆದುಕೊಂಡು ನಿಗದಿತ ಬಡ್ಡಿದರಗಳನ್ನು ಆಯ್ಕೆಮಾಡಿದರೆ ನಿರ್ದಿಷ್ಟ ಅವಧಿಯ ನಂತರ ಬದಲಾಗುತ್ತದೆ. ಈ ಬಡ್ಡಿದರಗಳು ನಿಗದಿತ ಅವಧಿಗೆ ಮಾತ್ರ ಅನ್ವಯಿಸುತ್ತವೆ.

    ಇದನ್ನೂ ಓದಿ: State Bank Of India: ಎಸ್​ಬಿಐ ಸಾಲದ ಮೇಲಿನ ಇಎಂಐ ಹೆಚ್ಚಾಗಲಿದೆಯೇ?

    ಹಾಗಾಗಿ ಗೃಹ ಸಾಲಕ್ಕೆ ಅರ್ಜಿ ಸಲ್ಲಿಸಲು ಬಯಸುವವರು ಎಲ್ಲಾ ನಿಯಮಗಳು ಮತ್ತು ಷರತ್ತುಗಳನ್ನು ತಿಳಿದುಕೊಳ್ಳಬೇಕು. ಸಂಪೂರ್ಣ ವಿವರಗಳಿಗಾಗಿ ಸಂಬಂಧಿತ ಬ್ಯಾಂಕ್ ಶಾಖೆಯನ್ನು ಸಂಪರ್ಕಿಸಬಹುದು.
    Published by:guruganesh bhat
    First published: