Mutual Fund: ಅಪ್ರಾಪ್ತ ವಯಸ್ಕರ ಹೆಸರಿನಲ್ಲಿ ಮ್ಯೂಚುವಲ್ ಫಂಡ್ ಹೂಡಿಕೆ ಮಾಡ್ಬೇಕು ಅಂದ್ರೆ ಹೀಗ್​ ಮಾಡಿ..

ಪ್ರಾಪ್ತ ವಯಸ್ಕರ ಮ್ಯೂಚುವಲ್ ಫಂಡ್(Mutual Funds) ಹೂಡಿಕೆಯನ್ನು ಜಂಟಿ ಹೆಸರುಗಳಲ್ಲಿ ನಿರ್ವಹಿಸುವುದು ಸಾಧ್ಯವಿಲ್ಲ. ಅದನ್ನು ಮಗುವಿನ ಹೆಸರಿನಲ್ಲಿ ಪ್ರತ್ಯೇಕವಾಗಿ ಇಡಬೇಕಾಗುತ್ತದೆ, ಆದರೆ ಆ ಖಾತೆಯನ್ನು ನಿರ್ವಹಿಸಬೇಕಿರುವುದು ಆ ಮಗುವಿನ ಹೆತ್ತವರು ಅಥವಾ ಗಾರ್ಡಿಯನ್‌ಗಳು. 

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಭವಿಷ್ಯ(Future)ದ ದೃಷ್ಟಿಯಿಂದ ನೋಡಿದರೆ, ಉಳಿತಾಯ(Savings) ಪ್ರತಿಯೊಬ್ಬರಿಗೂ ಅಗತ್ಯ, ಚಿಕ್ಕ ಮಕ್ಕಳಿಗೂ ಕೂಡ. ಅವರ ಭವಿಷ್ಯವನ್ನು ಭದ್ರಪಡಿಸಲು ಅದು ಸಹಾಯ ಮಾಡುತ್ತದೆ. ಆದರೆ ಮಕ್ಕಳು ನೇರವಾಗಿ ಆರ್ಥಿಕ ಹೂಡಿಕೆ(Financial Investment)ಗಳನ್ನು ಮಾಡುವ ಅವಕಾಶ ಇಲ್ಲದಿರುವುದರಿಂದ, ಅವರ ಪರವಾಗಿ ಹೆತ್ತವರು(Parents) ಅಥವಾ ಕಾನೂನಾತ್ಮಕ ಪೋಷಕರು ಹೂಡಿಕೆ ಮಾಡಬಹುದು. ಆದರೆ, ಅಪ್ರಾಪ್ತ ವಯಸ್ಕರ ಮ್ಯೂಚುವಲ್ ಫಂಡ್(Mutual Funds) ಹೂಡಿಕೆಯನ್ನು ಜಂಟಿ ಹೆಸರುಗಳಲ್ಲಿ ನಿರ್ವಹಿಸುವುದು ಸಾಧ್ಯವಿಲ್ಲ. ಅದನ್ನು ಮಗುವಿನ ಹೆಸರಿನಲ್ಲಿ ಪ್ರತ್ಯೇಕವಾಗಿ ಇಡಬೇಕಾಗುತ್ತದೆ, ಆದರೆ ಆ ಖಾತೆಯನ್ನು ನಿರ್ವಹಿಸಬೇಕಿರುವುದು ಆ ಮಗುವಿನ ಹೆತ್ತವರು ಅಥವಾ ಗಾರ್ಡಿಯನ್‌ಗಳು. 

ಮಕ್ಕಳ ಹೆಸರನಿಲ್ಲಿ ಮ್ಯೂಚುವಲ್​ ಫಂಡ್ ಹೇಗೆ?

ಮಗುವಿನ ಹೆಸರಲ್ಲಿ ಮ್ಯೂಚುವಲ್ ಫಂಡ್ ಖಾತೆಯನ್ನು ತೆರೆಯಬೇಕಾದರೆ ಹೆತ್ತವರು ಅಥವಾ ಗಾರ್ಡಿಯನ್‌ಗಳು, ಮಗುವಿನ ವಯಸ್ಸು ಮತ್ತು ಜನ್ಮ ದಿನಾಂಕವನ್ನು ದೃಡೀಕರಿಸಲು ಜನನ ಪ್ರಮಾಣ ಪತ್ರ ಅಥವಾ ಸ್ಥಳೀಯ ಸರಕಾರ ನೀಡಿದ ಒಂದು ಪಾಸ್‍ಪೋರ್ಟನ್ನು ಸಲ್ಲಿಸಬೇಕು. ಅಷ್ಟಾದರೆ ಸಾಲದು, ಮ್ಯೂಚವಲ್ ಫಂಡ್ ಖಾತೆಯನ್ನು ತೆರೆಯಲಿಕ್ಕಿರುವ ಮಗುವಿಗೂ ಮತ್ತು ಅವರ ಪೋಷಕರಿಗೂ ಇರುವ ಸಂಬಂಧವನ್ನು ಸಾಬೀತು ಪಡಿಸುವ ಅಗತ್ಯ ಕೂಡ ಇರುತ್ತದೆ.

ಮಗುವಿನ ಜನನ ಪ್ರಮಾಣ ಪತ್ರ ಅಗತ್ಯ!

ಹೆತ್ತವರ ವಿಷಯದಲ್ಲಿ ಹೇಳುವುದಾದರೆ, ಖಾತೆ ತೆರೆಯಲು ಸಲ್ಲಿಸಲಾಗುವ ಜನನ ಪ್ರಮಾಣ ಪತ್ರ ಅಥವಾ ಪಾಸ್‍ಪೋರ್ಟ್‌ನಲ್ಲಿ ಅವರ ಹೆಸರು ಇದ್ದರೆ ಸಾಕಾಗುತ್ತದೆ. ಆದರೆ, ಪೋಷಕರು ಮಗುವಿನ ಜೊತೆಗಿನ ಸಂಬಂಧವನ್ನು ಸಾಬೀತು ಪಡಿಸುವುದು ಅಗತ್ಯವಿರುತ್ತದೆ. ಈ ಸಂದರ್ಭದಲ್ಲಿ ಮಗುವಿನ ಜನನ ಪ್ರಮಾಣ ಪತ್ರ ಅಥವಾ ಪಾಸ್‍ಪೋರ್ಟ್‍ನ ಪ್ರತಿ, ಮಗುವಿನ ವಯಸ್ಸು ಮತ್ತು ಪೋಷಕರೊಂದಿಗಿನ ಸಂಬಂಧದ ಪುರಾವೆಯಾಗಿ ಕೆಲಸ ಮಾಡಬಲ್ಲದು.

ಇದನ್ನೂ ಓದಿ: ನಿಮಗೆ ನೀವೇ Boss ಆಗಿ ಹಣ ಗಳಿಸಿ! ಈ ವೆಬ್​ಸೈಟ್​ಗಳಲ್ಲಿದೆ ಅದ್ಭುತ ಅವಕಾಶ

ಮಗು ಪ್ರಾಪ್ತ ವಯಸ್ಸಿಗೆ ಬಂದ ನಂತರ ಏನು ಮಾಡಬೇಕು?

ಅಪ್ರಾಪ್ತ ವಯಸ್ಕನಿಗೆ/ಳಿಗೆ 18 ವರ್ಷ ತುಂಬಿದ ಬಳಿಕ, ಆತ/ಆಕೆ ತಮ್ಮ ಮ್ಯೂಚುವಲ್ ಫಂಡ್ ಖಾತೆಯಲ್ಲಿ ಸ್ಥಿತಿಯನ್ನು ಅಪ್ರಾಪ್ತ ವಯಸ್ಸಿನಿಂದ ಪ್ರಾಪ್ತ ವಯಸ್ಸಿಗೆ ಬದಲಾಯಿಸಲು ಒಂದು ಅರ್ಜಿಯನ್ನು (ಎಂಎಎಂ ಫಾರ್ಮ್) ಭರ್ತಿ ಮಾಡಿ, ಅದನ್ನು ಅಗತ್ಯ ದಾಖಲೆಗಳ ಜೊತೆ ಸಲ್ಲಿಸಬೇಕು. ಮಗುವಿಗೆ 18 ವರ್ಷ ತುಂಬಿದಾಗ ಸೆಟ್ ಮ್ಯಾನೆಜ್‍ಮೆಂಟ್ ಕಂಪೆನಿ (ಎಎಂಸಿ) ಎಲ್ಲಾ ಮ್ಯೂಚುವಲ್ ಫಂಡ್ ಹೂಡಿಕೆಗಳಿಗೆ (ಎಸ್‍ಐಪಿಸ್) ವಿರಾಮ ಒಡ್ಡುತ್ತದೆ ಮತ್ತು ಪೋಷಕರ ಹಾಗೂ ಅಪ್ರಾಪ್ತನ ನೋಂದಾಯಿತ ವಿಳಾಸಗಳಿಗೆ ಒಂದು ಪತ್ರವನ್ನು ಕಳುಹಿಸುತ್ತದೆ. ಅಪ್ರಾಪ್ತ ಸ್ಥಿತಿಯಿಂದ ವಯಸ್ಕ ಸ್ಥಿತಿಗೆ ಬದಲಾವಣೆ ಮಾಡಿದ ಬಳಿಕ, ಅವರು ಫೋಲಿಯೋದಲ್ಲಿ ಮರು ಹೂಡಿಕೆ ಮಾಡಬಹುದು.

ಮಗು ಪ್ರಾಪ್ತ ವಯಸ್ಸಿಗೆ ಬಂದಾಗ ಅಗತ್ಯ ಇರುವ ದಾಖಲೆಗಳು

- ಸರಿಯಾಗಿ ಭರ್ತಿ ಮಾಡಿದ ಎಂಎಎಂ ಫಾರ್ಮ್
- ಅರ್ಜಿದಾರರ ಪ್ಯಾನ್ ಕಾರ್ಡ್‍ನ ಪ್ರತಿ
- ಕೆವೈಸಿ ಅಂಗೀಕಾರದ ರಸೀದಿ ಅಥವಾ ಸರಿಯಾಗಿ ಭರ್ತಿ ಮಾಡಿದ ಕೆವೈಸಿ ಫಾರ್ಮ್
- ಅರ್ಜಿದಾರರ ಇತ್ತೀಚಿನ ಬ್ಯಾಂಕ್ ಸ್ಟೇಟ್‍ಮೆಂಟ್/ಪಾಸ್‍ಬುಕ್ ಅಥವಾ ಅರ್ಜಿದಾರರ ಹೆಸರನ್ನು ಮೊದಲೇ ಮುದ್ರಿಸಲಾಗಿರುವ ರದ್ದು ಮಾಡಿದ ಚೆಕ್ ಹಾಳೆ.
- ನಾಮಿನೇಶನ್ ಫಾರ್ಮ್
- ನಿರ್ದಿಷ್ಟ ಸ್ವರೂಪದಲ್ಲಿ ಹೊಸ ಎಸ್‍ಐಪಿ, ಎಸ್‍ಟಿಪಿ ಅಥವಾ ಎಸ್‍ಡಬ್ಲ್ಯೂಪಿ ನ ಅಗತ್ಯವಿರುತ್ತದೆ.

ಇದನ್ನೂ ಓದಿ: ಎಣ್ಣೆ ರೇಟ್ ಹೆಚ್ಚಾಯ್ತು ಅಂತ ತಲೆಬಿಸಿ ಬೇಡ; ಅಡುಗೆಯಲ್ಲಿ ಬಳಕೆ ಕಡಿಮೆ ಮಾಡೋದು ಹೇಗೆ ತಿಳಿಯಿರಿ

ಅಪ್ರಾಪ್ತ ವಯಸ್ಕರ ಮ್ಯೂಚುವಲ್ ಫಂಡ್ ಫೋಲಿಯೋ ಮೇಲೆ ತೆರಿಗೆ

ಪ್ರಸ್ತುತ ಇರುವ ಆದಾಯ ತೆರಿಗೆ ಕಾಯ್ದೆಯ ನಿಬಂಧನೆಗಳ ಪ್ರಕಾರ, ಅಪ್ರಾಪ್ತ ವಯಸ್ಕರ ಆದಾಯವನ್ನು ಹೆತ್ತವರು ಅಥವಾ ಪೋಷಕರ ಆದಾಯದೊಂದಿಗೆ ಸಂಯೋಜಿಸಲಾಗುತ್ತದೆ. ಹೆತ್ತವರು ಅಥವಾ ಪೋಷಕರ ಸ್ವಾಧೀನದಲ್ಲಿ ಅವರಿಗೆ ತೆರಿಗೆ ವಿಧಿಸಲಾಗುತ್ತದೆ. ಆದರೆ, ಲಾಭಾಂಶಗಳು ಮತ್ತು ದೀರ್ಘಾವಧಿಯ ಬಂಡವಾಳ ಲಾಭಗಳನ್ನು ಒಂದು ವರ್ಷಕ್ಕಿಂತ ಹೆಚ್ಚು ಕಾಲ ಇಟ್ಟರೆ ಅದಕ್ಕೆ ತೆರಿಗೆ ಇರುವುದಿಲ್ಲ. ಒಂದು ವೇಳೆ, ವರ್ಷದ ಅಂತ್ಯದ ವೇಳೆಗೆ ಅಪ್ರಾಪ್ತ ವಯಸ್ಕರ ನಿಧಿಯನ್ನು ಮಾರಾಟ ಮಾಡಿದರೆ, ಅದನ್ನು ಅಲ್ಪಾವಧಿಯ ಬಂಡವಾಳ ಲಾಭವೆಂದು ಪರಿಗಣಿಸಿ, ಅದರ ಮೇಲೆ ತೆರಿಗೆ ವಿಧಿಸಲಾಗುತ್ತದೆ.
Published by:Vasudeva M
First published: