Animal Farming: ಸುಲಭವಾಗಿ ಹಣ ಮಾಡೋದು ಹೀಗೆ! ಸರ್ಕಾರದ ಸಹಾಯದಿಂದ ಪ್ರಾಣಿ ಸಾಕಾಣಿಕೆ ಶುರು ಮಾಡಿ, ಹೆಚ್ಚಿನ ಲಾಭ ಗಳಿಸಿ

ಪ್ರಾಣಿಗಳ ಸಾಕಾಣಿಕೆ ಮೂಲಕ ಹಣ (Money) ಮಾಡುತ್ತಿದ್ದಾರೆ. ಪ್ರಾಣಿಗಳಿಗೆ ನಾವು ಊಟ ಕೊಟ್ಟರೆ, ಅವು ನಮಗೆ ಹಣವನ್ನು ಮರಳಿ ಕೊಡುತ್ತಿದೆ. ಹೌದು, ಪ್ರಾಣಿಗಳ ಸಾಕಾಣಿಕೆ (Animals Farming) ಯಿಂದ ನೀವೂ ಹೆಚ್ಚಿನ ಲಾಭವನ್ನು ಗಳಿಸಬಹುದು.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಪ್ರಾಣಿಗಳೇ (Animals) ಗುಣದಲಿ ಮೇಲೂ, ಮಾನವ (Human) ಅದಕ್ಕಿಂತ ಕೀಳು ಎಂದು ವರನಟ ಡಾ.ರಾಜ್​ಕುಮಾರ್ (Dr Rajkumar)​ ಅವರು ಸಂಪತ್ತಿಗೆ ಸವಾಲು ಸಿನಿಮಾದಲ್ಲಿ ಎಮ್ಮೆ ಮೇಲೆ ಕೂತು ಹೇಳಿದ್ದಾರೆ. ಅವರ ಮಾತು ನಿಜ. ಯಾಕೆಂದರೆ ಮನುಷ್ಯರು ನಾನು, ನಂದು ಎಂಬ ಸ್ವಾರ್ಥದಿಂದ ಜೀವನ ನಡೆಸುತ್ತಾನೆ. ಆದರೆ, ಪ್ರಾಣಿಗಳು ಒಂದೊತ್ತಿನ ಊಟ (Food) ಕೊಟ್ಟರೆ ಸಾಕು ನಮ್ಮ ಬದುಕನ್ನೇ ಬದಲಾಯಿಸಿ ಬಿಡುತ್ತೆ. ಅದು ಹೇಗಪ್ಪಾ ಸಾಧ್ಯ ಅಂತೀರಾ? ಅದಕ್ಕೆ ಉತ್ತರ ಇಲ್ಲಿದೆ ನೋಡಿ. ನಮ್ಮ ದೇಶದಲ್ಲಿ ಪ್ರಾಣಿಗಳನ್ನು ನಂಬಿಕೊಂಡು ಅದೆಷ್ಟೋ ಮಂದಿ ಹೊಟ್ಟೆ ತುಂಬಿಸಿಕೊಳ್ಳುತ್ತಿದ್ದಾರೆ. ಅದು ಪ್ರಾಣಿಗಳ ಸಾಕಾಣಿಕೆ ಮೂಲಕ ಹಣ (Money) ಮಾಡುತ್ತಿದ್ದಾರೆ. ಪ್ರಾಣಿಗಳಿಗೆ ನಾವು ಊಟ ಕೊಟ್ಟರೆ, ಅವು ನಮಗೆ ಹಣವನ್ನು ಮರಳಿ ಕೊಡುತ್ತಿದೆ. ಹೌದು, ಪ್ರಾಣಿಗಳ ಸಾಕಾಣಿಕೆ (Animals Farming) ಯಿಂದ ನೀವೂ ಹೆಚ್ಚಿನ ಲಾಭವನ್ನು ಗಳಿಸಬಹುದು.

ಒಂದು ವೇಳೆ ನೀವೇನಾದರೂ ಪ್ರಾಣಿಗಳ ಸಾಕಾಣಿಕೆ ಮಾಡಬೇಕು ಅಂದುಕೊಂಡಿದ್ದರೇ ನಿಮಗೆ ಸರ್ಕಾರವೂ ಕೂಡ ಸಹಾಯ ಮಾಡುತ್ತೆ. ಇಂತಿಂತ ಪ್ರಾಣಿಗಳಿಗೆ ಇಂತಿಷ್ಟು ಹಣ ಅಂತ ಸರ್ಕಾರ ನೀಡುತ್ತೆ. ಇಲ್ಲಿಯೂ ಕೂಡ ನಾವು ಅದನ್ನೇ ಹೇಳುತ್ತಿದ್ದೇವೆ. ಯಾವ ಪ್ರಾಣಿಗೆ ಸರ್ಕಾರ ಎಷ್ಟು ಹಣ ಕೊಡುತ್ತೆ ಎಂಬುಂದರ ಕಂಪ್ಲೀಟ್​ ಮಾಹಿತಿ ಇಲ್ಲಿದೆ ನೋಡಿ

ಯಾವ ಪ್ರಾಣಿಗೆ ಎಷ್ಟು ಹಣ ಕೊಡುತ್ತೆ?

ಪಶುಸಂಗೋಪನೆಯಲ್ಲಿ ಸರ್ಕಾರದಿಂದ  ರೈತರಿಗೆ ವಿವಿಧ ಪ್ರಾಣಿಗಳನ್ನು ಸಾಕಲು ಇಂತಿಷ್ಟು ಎಂದು ಸಾಲದ ಮೊತ್ತವನ್ನು ನಿಗದಿಪಡಿಸಲಾಗಿದೆ. ಹಸು ಸಾಕುವ ರೈತರಿಗೆ 40,783 ರೂ., ಎಮ್ಮೆ ಸಾಕುವ ರೈತರಿಗೆ 60,249 ರೂ.ನೀಡುವ ನಿಯಮವಿದೆ. ಅದೇ ರೀತಿ ಮೇಕೆ/ಕುರಿಗಳಿಗೆ 4,063 ರೂ., ಕೋಳಿಗೆ 720 ರೂಪಾಯಿ ನೀಡಲಾಗುತ್ತೆ. ಈ ಯೋಜನೆ ಯಾವುದು? ಇದರ ಹಣ ಪಡೆದುಕೊಳ್ಳುವುದು ಹೇಗೆ? ವಿವರವಾಗಿ ತಿಳಿದುಕೊಳ್ಳೋಣ.

ಇದನ್ನೂ ಓದಿ: ಪೂಜೆಗೆ ಹೂ ಬೇಕೇ? ಬೆಂಗಳೂರಿನ ಈ ಸ್ಟಾರ್ಟ್​ಅಪ್ ವಾರ್ಷಿಕ 8 ಕೋಟಿ ಗಳಿಸುತ್ತೆ!

ಯೋಜನೆಯ ಹೆಸರೇನು?

ನಮ್ಮ ದೇಶ ರೈತ ಪ್ರಧಾನ ದೇಶ, ರೈತರಿಗೆ, ಪಶು ಕಿಸಾನ್ ಕ್ರೆಡಿಟ್ ಕಾರ್ಡ್ ಯೋಜನೆಯಲ್ಲಿ, ಹಸು, ಎಮ್ಮೆ, ಆಡು / ಕುರಿ, ಕೋಳಿಗಳನ್ನು ಸಾಕಲು ಸರ್ಕಾರದಿಂದ ಸಹಾಯವನ್ನು ನೀಡಲಾಗುತ್ತದೆ. Pashu kisan credit card scheme ಯೋಜನೆಯಲ್ಲಿ ರೈತರಿಗೆ ಒಳ್ಳೆಯ ಮೊತ್ತದ ಹಣವನ್ನು ನೀಡಲಾಗುತ್ತಿದೆ.

ಪಸು ಕಿಸಾನ್​ ಕ್ರೆಡಿಟ್​ ಕಾರ್ಡ್​ ಯೋಜನೆಯ ಪ್ರಯೋಜನಗಳೇನು?

ಕ್ರೆಡಿಟ್ ಕಾರ್ಡ್ ಪಡೆದ ರೈತರು ಈ ಕ್ರೆಡಿಟ್ ಕಾರ್ಡ್ ಅನ್ನು ಬ್ಯಾಂಕಿನಲ್ಲಿ(BANK) ಡೆಬಿಟ್ ಕಾರ್ಡ್ ಆಗಿ ಬಳಸಬಹುದು. ಈ ಯೋಜನೆಯಡಿ ಕ್ರೆಡಿಟ್ ಕಾರ್ಡ್ ಹೊಂದಿರುವವರು ಭದ್ರತೆ ಇಲ್ಲದೆ 1.60 ಲಕ್ಷ ರೂ.ವರೆಗೆ ಸಾಲವನ್ನು ಪಡೆಯಬಹುದು.ಪಶು ಸಾಕಣೆದಾರರಿಗೆ ಎಲ್ಲಾ ಬ್ಯಾಂಕ್ಗಳಿಂದ ಶೇ. 7ರಷ್ಟು ವಾರ್ಷಿಕ ಬಡ್ಡಿಯಲ್ಲಿ ಸಾಲ ನೀಡಲಾಗುತ್ತದೆ. ನಿಗದಿತ ಸಮಯಕ್ಕೆ ಬಡ್ಡಿ ಪಾವತಿಸಿದರೆ ಶೇ.3ರಷ್ಟು ರಿಯಾಯಿತಿ ಇದೆ.

ಇದನ್ನೂ ಓದಿ: ಇಎಂಐ ಕಟ್ಟೋಕಾಗದೇ ಟೆನ್ಶನ್​ ಹೆಚ್ಚಾಗಿದ್ಯಾ? ಹೀಗ್​ ಮಾಡಿ ಸಲಿಸಾಗಿ ಸಾಲ ತೀರಿಸಿಕೊಳ್ಳಿ

ಈ ಯೋಜನೆಯ ಹಣ ಪಡೆಯುವುದು ಹೇಗೆ?

- ಆಸಕ್ತರು ಹತ್ತಿರದ ಬ್ಯಾಂಕ್​​ಗೆ ಭೇಟಿ ನೀಡುವ ಮೂಲಕ ಅರ್ಜಿ ಸಲ್ಲಿಸಬೇಕು

- ಅರ್ಜಿಗೆ ಅಗತ್ಯವಿರುವ ಎಲ್ಲಾ ದಾಖಲೆಗಳನ್ನು ತೆಗೆದುಕೊಂಡು ಅರ್ಜಿ ನಮೂನೆಯನ್ನು ಬ್ಯಾಂಕ್​​ನಲ್ಲಿ ಭರ್ತಿ ಮಾಡಬೇಕು

- ಎಲ್ಲಾ ಅಗತ್ಯ ದಾಖಲೆಗಳೊಂದಿಗೆ ಅರ್ಜಿ ನಮೂನೆಯನ್ನು ಬ್ಯಾಂಕ್ ಅಧಿಕಾರಿಗೆ ಸಲ್ಲಿಸಿ

- ಅರ್ಜಿಯ ಪರಿಶೀಲನೆಯ ನಂತರ ಒಂದು ತಿಂಗಳ ನಂತರ, ನಿಮಗೆ ಪ್ರಾಣಿ ಕ್ರೆಡಿಟ್ ಕಾರ್ಡ್ ನೀಡಲಾಗುತ್ತದೆ.

ಈ ಕಾರ್ಡ್​ ಬಂದ ಬಳಿಕ ನೀವು ನಿಮ್ಮ ಫಾರ್ಮಿಂಗ್​ ಈ ಹಣವನ್ನು ಬಳಸಬಹುದು. ಬಳಿಕ ನೀವು ಲಾಭ ಗಳಿಸದ ನಂತರ ಈ ಹಣವನ್ನು ಕಂತಿನ ರೂಪದಲ್ಲಿ ಅಥವಾ ಒಟ್ಟಿಗೆ ಮರುಪಾವತಿಸಬಹುದು.
Published by:Vasudeva M
First published: