• Home
  • »
  • News
  • »
  • business
  • »
  • ಚೇಂಜ್-ಮೇಕರ್ಗಳನ್ನು ಬೆಳಕಿಗೆ ತರಲು ಮತ್ತು ರೂ 17 ಲಕ್ಷ ಮೌಲ್ಯದ ಬಹುಮಾನಗಳನ್ನು ಗೆಲ್ಲುವ ಅವಕಾಶ ಪಡೆಯಲು Make A Dent ಸ್ಪರ್ಧೆಗೆ ಅರ್ಜಿ ಆಹ್ವಾನ!

ಚೇಂಜ್-ಮೇಕರ್ಗಳನ್ನು ಬೆಳಕಿಗೆ ತರಲು ಮತ್ತು ರೂ 17 ಲಕ್ಷ ಮೌಲ್ಯದ ಬಹುಮಾನಗಳನ್ನು ಗೆಲ್ಲುವ ಅವಕಾಶ ಪಡೆಯಲು Make A Dent ಸ್ಪರ್ಧೆಗೆ ಅರ್ಜಿ ಆಹ್ವಾನ!

ಸಮಾಜದ ಒಳಿತನ್ನು ಬಯಸಿ ಮಾಡುವ ಸಣ್ಣ ಕೆಲಸವೂ ಸಹ ಗಣನೀಯ ಸಾಧನೆಯೇ ಸರಿ. ಜನರ ಜೀವನವನ್ನು ಬದಲಾಯಿಸುವುದಷ್ಟೇ ಅಲ್ಲದೆ ಲಕ್ಷಾಂತರ ಜನರಲ್ಲಿ ಭಾವನೆಗಳನ್ನು ಉಂಟು ಮಾಡಿ, ಅವರನ್ನು ಪ್ರೇರೇಪಿಸುವ ಸಾಮರ್ಥ್ಯವನ್ನೂ ಅದು ಹೊಂದಿದೆ.

ಸಮಾಜದ ಒಳಿತನ್ನು ಬಯಸಿ ಮಾಡುವ ಸಣ್ಣ ಕೆಲಸವೂ ಸಹ ಗಣನೀಯ ಸಾಧನೆಯೇ ಸರಿ. ಜನರ ಜೀವನವನ್ನು ಬದಲಾಯಿಸುವುದಷ್ಟೇ ಅಲ್ಲದೆ ಲಕ್ಷಾಂತರ ಜನರಲ್ಲಿ ಭಾವನೆಗಳನ್ನು ಉಂಟು ಮಾಡಿ, ಅವರನ್ನು ಪ್ರೇರೇಪಿಸುವ ಸಾಮರ್ಥ್ಯವನ್ನೂ ಅದು ಹೊಂದಿದೆ.

ಸಮಾಜದ ಒಳಿತನ್ನು ಬಯಸಿ ಮಾಡುವ ಸಣ್ಣ ಕೆಲಸವೂ ಸಹ ಗಣನೀಯ ಸಾಧನೆಯೇ ಸರಿ. ಜನರ ಜೀವನವನ್ನು ಬದಲಾಯಿಸುವುದಷ್ಟೇ ಅಲ್ಲದೆ ಲಕ್ಷಾಂತರ ಜನರಲ್ಲಿ ಭಾವನೆಗಳನ್ನು ಉಂಟು ಮಾಡಿ, ಅವರನ್ನು ಪ್ರೇರೇಪಿಸುವ ಸಾಮರ್ಥ್ಯವನ್ನೂ ಅದು ಹೊಂದಿದೆ.

  • Share this:

    ಸಮಾಜದ ಒಳಿತನ್ನು ಬಯಸಿ ಮಾಡುವ ಸಣ್ಣ ಕೆಲಸವೂ ಸಹ ಗಣನೀಯ ಸಾಧನೆಯೇ ಸರಿ. ಜನರ ಜೀವನವನ್ನು ಬದಲಾಯಿಸುವುದಷ್ಟೇ ಅಲ್ಲದೆ ಲಕ್ಷಾಂತರ ಜನರಲ್ಲಿ ಭಾವನೆಗಳನ್ನು ಉಂಟು ಮಾಡಿ, ಅವರನ್ನು ಪ್ರೇರೇಪಿಸುವ ಸಾಮರ್ಥ್ಯವನ್ನೂ ಅದು ಹೊಂದಿದೆ. ಅದು ಚಲಿಸುವ ಶಕ್ತಿಯನ್ನು ಹೊಂದಿದೆ ಹಾಗೂ ಒಂದು ಚಳುವಳಿಯಾಗಿ ಬದಲಾಗುವ ಶಕ್ತಿಯನ್ನೂ ಹೊಂದಿದೆ. ಬೀದಿಯ ಪ್ರಾಣಿಗಳಿಗೆ ಆಹಾರ ನೀಡುವುದರಿಂದ ಹಿಡಿದು ಸೌಲಭ್ಯ ವಂಚಿತರಿಗೆ ಪಾಠ ಮಾಡುವವರೆಗೂ ಯಾವ ಪ್ರಯತ್ನಗಳೂ ಗಮನಕ್ಕೆ ಬರದೇ ಇರಲಾರವು. ಮತ್ತೆ ಈಗ, ಬದಲಾವಣೆ ಉಂಟು ಮಾಡುವ ಕೆಲಸಗಳಿಗೆ ಬಹುಮಾನ ಸಹ ದೊರೆಯಲಿದೆ!


    2021 ರಲ್ಲಿ ದೊರೆತ ಅಭೂತಪೂರ್ವ ಯಶಸ್ಸಿನ ನಂತರ, News18 ಸಹಯೋಗದೊಂದಿಗೆ ‘Make A Dent’ ಸ್ಪರ್ಧೆಯ ಮೂಲಕ Happydent ಮತ್ತೆ ಬಂದಿದೆ! ಈ ಅಭಿಯಾನವು ನಾಗರೀಕ ಪತ್ರಿಕೋದ್ಯಮ (ಸಿಟಿಜನ್ ಜರ್ನಲಿಸಂ) ಸ್ಪರ್ಧೆಯಾಗಿದ್ದು, ಸಕಾರಾತ್ಮಕತೆಯ ಸಂದೇಶವನ್ನು ಪ್ರಸಾರ ಮಾಡುವ ಗುರಿಯನ್ನು ಹೊಂದಿದೆ. ಡಿಸೆಂಬರ್ 29, 2022 ರಂದು ಆರಂಭವಾಗಿರುವ ಈ ಎರಡು-ತಿಂಗಳ ಅವಧಿಯ ಸ್ಪರ್ಧೆಯು ಸಮಾಜದಲ್ಲಿ ಬದಲಾವಣೆ ಉಂಟು ಮಾಡಿರುವ ವ್ಯಕ್ತಿಗಳ ಕಥನವನ್ನು ಹಂಚಿಕೊಳ್ಳಲು ದೇಶದೆಲ್ಲೆಡೆಯ ಜನರಿಂದ ಅರ್ಜಿಗಳನ್ನು ಆಹ್ವಾನಿಸಿದೆ. ಪ್ರವೇಶಗಳನ್ನು ಇಮೇಜ್ / ವೀಡಿಯೊ ಫಾರ್ಮ್ಯಾಟ್‌ನಲ್ಲಿ ಇಲ್ಲಿ ಮತ್ತು Instagram ನಲ್ಲಿ ಸಲ್ಲಿಸಬಹುದು. ತೀರ್ಪುಗಾರರ ಮಂಡಳಿಯು ಪ್ರತಿಯೊಂದು ಪ್ರವೇಶವನ್ನು ಪರಿಶೀಲಿಸುತ್ತದೆ ಮತ್ತು ಅತ್ಯುತ್ತಮ 10 ಸಲ್ಲಿಕೆಗಳು ₹17 ಲಕ್ಷದವರೆಗಿನ ಬಹುಮಾನಗಳನ್ನು ಗೆಲ್ಲಬಹುದು*.


    ಕಳೆದ ವರ್ಷ, ಕಸ ಹಾಕುವುದು, ಪೆಟ್ರೋಲ್ ಪಂಪ್‌ಗಳಲ್ಲಿ ಫೋನ್‌ಗಳು / ಸಿಗರೇಟ್‌ಗಳನ್ನು ಬಳಸುವುದು, ಮುಟ್ಟಿನ ಸಮಯದಲ್ಲಿ ನಿರ್ಬಂಧಗಳನ್ನು ಹೇರುವುದು ಸೇರಿದಂತೆ ಹಲವು ನಾಗರೀಕ ಸಮಸ್ಯೆಗಳ ಮೇಲೆ Happydent ಸ್ಮೈಲ್‌ನ ಬೆಳಕು ಚೆಲ್ಲಿದವರ ಕುರಿತಂತೆ 2600 ಕ್ಕೂ ಹೆಚ್ಚಿನ ವೀಡಿಯೊ ಆಡ್ ಪ್ರವೇಶಗಳನ್ನು Make a Dent ಸ್ವೀಕರಿಸಿತ್ತು. McCann Worldgroup Asia ದ ಚೇರ್‌ಮನ್, McCann Worldgroup India ದ CEO ಹಾಗೂ COO ಪ್ರಸೂನ್ ಜೋಶಿ ಮತ್ತು Perfetti Van Melle India ದ ಮ್ಯಾನೇಜಿಂಗ್ ಡೈರೆಕ್ಟರ್ ರಾಜೇಶ್ ರಾಮಕೃಷ್ಣನ್ ಅವರನ್ನು ಒಳಗೊಂಡಿದ್ದ ಪ್ರತಿಷ್ಠಿತ ತೀರ್ಪುಗಾರರ ಮಂಡಳಿಯು ಹಲವು ಸುತ್ತಿನ ಚರ್ಚೆಗಳ ನಂತರ ಸಲ್ಲಿಕೆಗಳ ಮೌಲ್ಯಮಾಪನ ಮಾಡಿತ್ತು. ಸ್ಪರ್ಧೆಯ ವಿಜೇತರು ತಲಾ 1 ರೂ ಲಕ್ಷ ನಗದು ಬಹುಮಾನವನ್ನು ಸ್ವೀಕರಿಸಿದ್ದರು.


    ಈ ವರ್ಷ ವಿಜೇತರು ಪಡೆಯಲಿರುವ ನಗದು ಬಹುಮಾನಗಳ ಮೊತ್ತವೇ ₹17 ಲಕ್ಷ ಇದೆ! ಹಾಗಾಗಿ, ಒಳ್ಳೆಯದನ್ನು ಬಯಸಿ ನಿಮಗೆ ತಿಳಿದಿರುವ ಯಾರಾದರೂ ಈ ಜಗತ್ತನ್ನು ಬದಲಾಯಿಸುತ್ತಿದ್ದರೆ, ಆ ಬಗೆಗಿನ ಕಥಾನಕದ ಮೇಲೆ ಬೆಳಕು ಚೆಲ್ಲಲು ಮತ್ತು ಅದನ್ನು ಜಗತ್ತಿಗೆ ಹಂಚಿಕೊಳ್ಳಲು ನಿಮಗೊಂದು ಅವಕಾಶ ಇಲ್ಲಿದೆ.


    ಸ್ಪರ್ಧೆಯಲ್ಲಿ ಭಾಗವಹಿಸಲು ಇರುವ ನಿಯಮಗಳು ಮತ್ತು ನಿಬಂಧನೆಗಳನ್ನು ಕೆಳಗೆ ನೀಡಲಾಗಿದೆ. ನಿಮ್ಮ ಪ್ರವೇಶಗಳನ್ನು ಸಲ್ಲಿಸುವ ಮೊದಲು ಏನು ಮಾಡಬೇಕು ಹಾಗೂ ಮಾಡಬಾರದು ಎಂಬುದನ್ನು ತಿಳಿಯಲು ನೀವು ಮೈಕ್ರೊಸೈಟ್‌ಗೆ ಸಹ ಭೇಟಿ ನೀಡಬಹುದು.


    ನಿಯಮಗಳು ಮತ್ತು ನಿಬಂಧನೆಗಳು:
    ನೀವು ವೀಡಿಯೊ ಅಥವಾ ಇಮೇಜ್ ಫಾರ್ಮ್ಯಾಟ್‌ನಲ್ಲಿ ನಿಮ್ಮ ಪ್ರವೇಶಗಳನ್ನು ಸಲ್ಲಿಸಬಹುದು.


    #MakeADent ಬಳಸಿಕೊಂಡು Instagram ನಲ್ಲಿ ನಿಮ್ಮ ಪ್ರವೇಶವನ್ನು ಒಂದು ಸ್ಟೋರಿ / ಫೋಸ್ಟ್ ಆಗಿ ಅಪ್‌ಲೋಡ್ ಮಾಡಿ ಹಾಗೂ @CNNNews18 ಮತ್ತು @happydentind ಅನ್ನು ಟ್ಯಾಗ್ ಮಾಡಿ. ನೀವು ಇಲ್ಲಿ ಇರುವ ನಮ್ಮ ಮೈಕ್ರೊಸೈಟ್‌ನಲ್ಲಿಯೂ ಸಹ ನೇರವಾಗಿ ನಿಮ್ಮ ಪ್ರವೇಶವನ್ನು ಅಪ್‌ಲೋಡ್ ಮಾಡಬಹುದು.


    ವೀಡಿಯೊಗಳನ್ನು ಸಲ್ಲಿಸುವರಿಗೆ ಇಲ್ಲಿ ಕೆಲವು ಸೂಚನೆಗಳಿವೆ:


    ಒಂದು ವೇಳೆ ನೀವು ಅಭಿಯಾನದ ಮೈಕ್ರೊಸೈಟ್‌ನಲ್ಲಿ ನಿಮ್ಮ ಪ್ರವೇಶಗಳನ್ನು ಅಪ್‌ಲೋಡ್ ಮಾಡುವುದಾದರೆ, ನಿಮ್ಮ ವೀಡಿಯೊದ ಪ್ರಾರಂಭದಲ್ಲಿ ಅಥವಾ ಕೊನೆಯಲ್ಲಿ ನೀವು ಒಂದು ಶಾರ್ಟ್ Happydent ಸ್ಲೇಟ್ ಅನ್ನು ಸೇರಿಸಬೇಕು. ಮೈಕ್ರೊಸೈಟ್‌ನಲ್ಲಿ ಡೌನ್‌ಲೋಡ್ ಮಾಡಿಕೊಳ್ಳಲು ಸ್ಲೇಟ್ ಟೆಂಪ್ಲೇಟ್ ಲಭ್ಯವಿದೆ ಮತ್ತು ಅದನ್ನು ನೀವು ಸುಲಭವಾಗಿ ನಿಮ್ಮ ವೀಡಿಯೊದಲ್ಲಿ ಸೇರಿಸಬಹುದು.


    Instagram ಮೂಲಕ ತಮ್ಮ ಪ್ರವೇಶಗಳನ್ನು ಸಲ್ಲಿಸುವ ಬಳಕೆದಾರರು ಅಭಿಯಾನದ Instagram filter ಅನ್ನು ಬಳಸಬೇಕು. ಮೊದಲ ಕೆಲವು ಸೆಕಂಡ್‌ಗಳವರೆಗೆ ಈ ಫಿಲ್ಟರ್ ಅನ್ನು ಬಳಸಬಹುದು, ಆನಂತರ ಬಳಕೆದಾರರು ತಮ್ಮ ನಾರ್ಮಲ್ (ಫಿಲ್ಟರ್ ಅಥವಾ ಅವರ ಆಯ್ಕೆ) ಮೋಡ್‌ಗೆ ಬದಲಾಯಿಸಬಹುದು. ಸ್ಪರ್ಧೆಯ ಹ್ಯಾಶ್‌ಟ್ಯಾಗ್ ಮತ್ತು @CNNNews18 ಹಾಗೂ @happydentind ಟ್ಯಾಗ್ ಉಲ್ಲೇಖಿಸುವುದನ್ನು ಮರೆಯಬೇಡಿ.


    ನಿಮ್ಮ ಪ್ರವೇಶಗಳನ್ನು ಸಲ್ಲಿಸುವ ಮೊದಲು, ನಗದು ಬಹುಮಾನವನ್ನು ಗೆಲ್ಲುವ ಅವಕಾಶಗಳನ್ನು ಹೆಚ್ಚಿಸಿಕೊಳ್ಳಲು ಎಲ್ಲಾ FAQ ಗಳು, ನಿಯಮಗಳು, ಏನು ಮಾಡಬೇಕು, ಮಾಡಬಾರದು ಎಂಬುದಕ್ಕೆ ಮೈಕ್ರೊಸೈಟ್‌ ಗೆ ಭೇಟಿ ಕೊಡಿ.


    ಕೆಲವು ಮುಂಚಿತ ಸೂಚನೆಗಳು:


    • ಇಮೇಜ್‌ಗಳನ್ನು ಸಲ್ಲಿಸುವ ಬಳಕೆದಾರರು ಯಾವುದೇ ಫಿಲ್ಟರ್‌ಗಳನ್ನು ಬಳಸುವ ಅಗತ್ಯವಿಲ್ಲ

    • Instagram ನಲ್ಲಿ ಸಲ್ಲಿಸುವ ಎಲ್ಲಾ ಪ್ರವೇಶಗಳು ಕಡ್ಡಾಯಗೊಳಿಸಿದ ಹ್ಯಾಶ್‌ಟ್ಯಾಗ್‌ಗಳನ್ನು ಸೇರಿಸಿರಬೇಕು ಮತ್ತು ಮೇಲೆ ತಿಳಿಸಿದ ಅಕೌಂಟ್‌ಗಳನ್ನು ಟ್ಯಾಗ್ ಮಾಡಿರಬೇಕು

    • ವೀಡಿಯೊ ಅವಧಿಯು 5-7 ನಿಮಿಷಗಳನ್ನು ಮೀರಬಾರದು.


    ಶಾರ್ಟ್‌ಲಿಸ್ಟ್ ಮಾಡಲಾಗುವ ಪ್ರವೇಶಗಳಿಂದ 10 ವಿಜೇತರನ್ನು ಆಯ್ಕೆ ಮಾಡಲಾಗುವುದು.


    *ಮೊದಲ ಮೂರು ವಿಜೇತರು ಕ್ರಮವಾಗಿ ರೂ. 5 ಲಕ್ಷ, ರೂ. 3 ಲಕ್ಷ ಮತ್ತು ರೂ. 2 ಲಕ್ಷ ನಗದು ಬಹುಮಾನ ಸ್ವೀಕರಿಸಲಿದ್ದಾರೆ.


    ಉಳಿದ 7 ವಿಜೇತರು ತಲಾ ರೂ. 1 ಲಕ್ಷ ನಗದು ಬಹುಮಾನ ಪಡೆಯುತ್ತಾರೆ.


    ಈ ಜಗತ್ತನ್ನು ಒಂದು ಉತ್ತಮ ಸ್ಥಳವಾಗಿಸಲು ಸಿದ್ಧವಿರುವಿರೇ?


    ಇನ್ನೇಕೆ ತಡ, ಪ್ರಾರಂಭಿಸೋಣ!


    Dikha battissi & bana daal video achhi si!

    First published: