Mann Ki Baat: ಮನ್ ಕೀ ಬಾತ್‌ ಪ್ರೇರಣೆ; ಯಶಸ್ವಿ ಉದ್ಯಮಿಯಾಗುವತ್ತ ಹಳ್ಳಿಗಾಡಿನ ಮಹಿಳೆ

ಮಹಿಳಾ ಸಬಲೀಕರಣ ನನ್ನ ಕನಸು. ಎಂ.ಟೆಕ್ ಮಾಡಿದ್ದೀಯ ಯಾಕೆ  ಕೆಲಸಕ್ಕೆ ಸೇರಲಿಲ್ಲಿ  ಎಂದು ಸಂಬಂಧಿಕರು ಕೇಳುತ್ತಿದ್ದರು.  ಇಷ್ಟೊಂದು ಓದಿ ನಾನ್ಯಾಕೆ ಬೇರೆಯವರ ಕೈ ಕೆಳಗೆ ಕೆಲಸ ಮಾಡಬೇಕು ಎಂದು ಯೋಚಿಸಿ ನಾನು ಯಾವ ಕೆಲಸಕ್ಕೂ ಸೇರದೆ  ಈ ಉದ್ಯಮ ಆರಂಭಿಸಿದ್ದೇನೆ" ಎನ್ನುತ್ತಾರೆ ವರ್ಷಾ

ಉದ್ಯಮಿ ಪುಷ್ಪಾ

ಉದ್ಯಮಿ ಪುಷ್ಪಾ

  • Share this:
ಚಾಮರಾಜನಗರ: ಮನ್ ಕಿ ಬಾತ್ (ಮನದ‌ ಮಾತು) (Mann Ki Baat). ಇದು ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರು ಪ್ರತಿ ತಿಂಗಳು ಆಕಾಶವಾಣಿಯಲ್ಲಿ (Radio) ನಡೆಸಿಕೊಡುವ ಕಾರ್ಯಕ್ರಮ. ಸರ್ಕಾರದ ಆಶಯಗಳನ್ನು (Government Goals) ತಿಳಿಸುತ್ತಲೇ ದೇಶದ ವಿವಿಧೆಡೆ ಎಲೆ ಮರೆಕಾಯಿಯಂತೆ ದೇಶದ ಅಭಿವೃದ್ಧಿಗೆ ಕೈ ಜೋಡಿಸುತ್ತಿರುವವರ ಹಾಗೂ ವಿವಿಧ ಕ್ಷೇತ್ರಗಳಲ್ಲಿ  ಬೆಳಕಿಗೆ ಬಾರದಂತೆ ಗಣನೀಯ ಸಾಧನೆ ಮಾಡುತ್ತಿರುವವರ ವಿವರಗಳನ್ನು (Achievers) ತಿಳಿಸುವ ಕಾರ್ಯವನ್ನು ಪ್ರಧಾನಿಗಳು ಮಾಡುತ್ತಿದ್ದು ಇದು ಹಲವರಿಗೆ ಪ್ರೇರಣೆಯಾಗಿದೆ. ಇದೇ ರೀತಿ ಪ್ರಧಾನಿ ಮೋದಿ ಅವರ ಮನ್ ಕೀ ಬಾತ್ ನಿಂದ ಪ್ರೇರಣೆಗೊಂಡ ಚಾಮರಾಜನಗರದ (Chamarajanagara) ಮಹಿಳೆಯೊಬ್ಬರು (Woman) ಕಸದಿಂದ ರಸ ತೆಗೆಯುವಲ್ಲಿ ಯಶಸ್ವಿಯಾಗಿದ್ದಾರೆ. ಅನುಪಯುಕ್ತ ಬಾಳೆದಿಂಡಿನಿಂದ  ಉತ್ಪನ್ನಗಳ ತಯಾರಿಕೆ ಮಾಡುತ್ತಾ ಯಶಸ್ವಿ ಮಹಿಳಾ ಉದ್ಯಮಿಯಾಗಿ ಹೊರಹೊಮ್ಮುತ್ತಿದ್ದಾರೆ. 

ರೈತರು ಬಾಳೆಗೊನೆ ಕೊಯ್ದ ನಂತರ ಬೀಸಾಡುವ ಬಾಳೆ ದಿಂಡನಿಂದ ಮ್ಯಾಟ್, ಫ್ಲೋರ್ ಮ್ಯಾಟ್, ಚಾಪೆ, ಬ್ಯಾಗ್, ಪರ್ಸ್ ಗಳನ್ನು ತಯಾರಿಸುತ್ತಾ, ಸಬಲೀಕರಣದತ್ತ ಹೆಜ್ಜೆ ಹಾಕಿದ್ದಾರೆ

ಗುಂಡ್ಲುಪೇಟೆ ತಾಲೋಕು ಆಲಹಳ್ಳಿಯ ವರ್ಷಾ  ಎಂ.ಟೆಕ್  ಪದವೀಧರೆಯಾದರು ಯಾವುದೇ ಉದ್ಯೋಗಕ್ಕೆ ಸೇರಿರಲಿಲ್ಲ. ಜೀವನದಲ್ಲಿ ಏನಾದರೂ ಸಾಧನೆ ಮಾಡಬೇಕು ಎಂಬ ಹಂಬಲ ಹೊಂದಿದ್ದ ಅವರಿಗೆ ಬೇರೆಯವರ ಕೈ ಕೆಳಗೆ ಕೆಲಸ ಮಾಡಲು ಇಷ್ಟ ಇರಲಿಲ್ಲ.

ಗಮನ ಸೆಳೆದ ಮನ್ ಕಿ ಬಾತ್ ಕೇಳಿದ ಮಾತು

ಸ್ವ ಉದ್ಯಮ  ಪ್ರಾರಂಭಿಸಬೇಕು, ತಮ್ಮ ಕೆಲಾದಷ್ಟು ಮಹಿಳೆಯರಿಗೆ ಉದ್ಯೋಗ ನೀಡಬೇಕು ಆ ಮೂಲಕ ಸ್ತ್ರೀ ಸಬಲೀಕರಣಕ್ಕೆ ಕೈ ಜೋಡಿಸಬೇಕು ಎಂದು ಕನಸು ಹೊತ್ತಿದ್ದ  ವರ್ಷಾ ಅವರು ಯು ಟ್ಯೂಬ್ ನಲ್ಲಿ ಸರ್ಚ್ ಮಾಡುತ್ತಿದ್ದಾಗ, ಪ್ರಧಾನಿ ನರೇಂದ್ರ ಮೋದಿ ತಮ್ಮ ಮನ್‌ ಕಿ ಬಾತ್ ನಲ್ಲಿ‌ ಪ್ರಸ್ತಾಪಿಸಿದ್ದ ವಿಚಾರವೊಂದು  ಗಮನ ಸೆಳೆದಿದೆ.

ಇದನ್ನೂ ಓದಿ:  Business Idea: ಝೀರೋ ಇನ್ವೆಸ್ಟ್​ಮೆಂಟ್​, ತಿಂಗಳಿಗೆ 50 ಸಾವಿರ ಇನ್‌ಕಮ್! ಅದು ಹೇಗೆ ಅಂತೀರಾ? ಹೀಗ್​ ಮಾಡಿ

ಅನುಪಯುಕ್ತ ಬಾಳೆ ದಿಂಡಿನಿಂದ ಹಲವು ರೀತಿಯ ಉಪಯುಕ್ತ ವಸ್ತುಗಳನ್ನು ತಯಾರಿಸಬಹುದು ಉದಾಹರಣೆ ಸಹಿತ ಹೇಳಿದ್ದ  ಮೋದಿ ಅವರ ಮಾತಿನಿಂದ ಪ್ರೇರಣೆಗೊಂಡ ವರ್ಷಾ  ತಾವೇಕೆ ಪ್ರಯತ್ನಿಸಿಸಬಾರದು ಎಂದುಕೊಂಡು ಮತ್ತೆ ಯೂಟ್ಯೂಬ್ ನಲ್ಲಿ ಸರ್ಚ್ ಮಾಡಿದಾಗ  ತಮಿಳುನಾಡಿನ ಕೊಯಮತ್ತೂರಿನಲ್ಲಿ ಬಾಳೆ ದಿಂಡಿನಿಂದ ಉತ್ಪನ್ನಗಳ ತಯಾರಿಕೆ ಮಾಡುತ್ತಿರುವ ದೃಶ್ಯಾವಳಿ ನೋಡಿದ್ದಾರೆ.

ಬಾಳೆ ದಿಂಡು ಉತ್ಪನ್ನ ತಯಾರಿಕಾ ಕೇಂದ್ರ

ಬಳಿಕ ಕೊಯಮತ್ತೂರಿನಿಂದ  3 ಲಕ್ಷ ರೂಪಾಯಿಗಳಿಗೆ ಯಂತ್ರೋಪಕರಣಗಳನ್ನ ಖರೀದಿಸಿ ಚಾಮರಾಜನಗರ ತಾಲೂಕಿನ ಉಮ್ಮತ್ತೂರು ಗ್ರಾಮದಲ್ಲಿರುವ  ತಮ್ಮ ಜಮೀನಿನಲ್ಲಿ ಬಾಳೆ ದಿಂಡು ಉತ್ಪನ್ನಗಳ ತಯಾರಿಕಾ ಉದ್ಯಮ ಆರಂಭಿಸಿದ್ದಾರೆ.

ಈ ಘಟಕದಲ್ಲಿ ಐವರು ಮಹಿಳೆಯರಿಗೆ ಉದ್ಯೋಗ ನೀಡಿರುವ ವರ್ಷಾ ನಗರ ಪ್ರದೇಶಗಳಲ್ಲಿರುವ ಆರ್ಗ್ಯಾನಿಕ್ ಶಾಪ್, ಗೂಗಲ್, ಫ್ಲಿಪ್‌ಕಾರ್ಟ್, ಅಮೇಜಾನ್ ಮೂಲಕ ಮಾರುಕಟ್ಟೆ ಸೃಷ್ಟಿಸಿಕೊಳ್ಳಲು ಮುಂದಾಗಿದ್ದಾರೆ. ಇವರು ತಯಾರಿಸುತ್ತಿರುವ ಬಾಳೆದಿಂಡಿನ ಚಾಪೆಗಳನ್ನು ಕೊಯಮತ್ತೂರಿನ ಕಂಪನಿಯೊಂದು ಖರೀದಿಸುತ್ತಿದ್ದು,  ಬಾಳೆದಿಂಡಿನಿಂದ ತಯಾರಿಸಲಾದ ವಸ್ತುಗಳು ಪರಿಸರಸ್ನೇಹಿ ಆಗಿರುವುದರಿಂದ ಬೇಡಿಕೆ ಹೆಚ್ಚಾಗಬಹುದು ಎಂಬ ಆಶಯವನ್ನೂ ಅವರು ಹೊಂದಿದ್ದಾರೆ.

ಬೇರೆಯವರ ಕೈ ಕೆಳಗೆ ಮಾಡೋದು ಇಷ್ಟವಿರಲಿಲ್ಲ

"ಮಹಿಳಾ ಸಬಲೀಕರಣ ನನ್ನ ಕನಸು. ಎಂ.ಟೆಕ್ ಮಾಡಿದ್ದೀಯ ಯಾಕೆ  ಕೆಲಸಕ್ಕೆ ಸೇರಲಿಲ್ಲಿ  ಎಂದು ಸಂಬಂಧಿಕರು ಕೇಳುತ್ತಿದ್ದರು.  ಇಷ್ಟೊಂದು ಓದಿ ನಾನ್ಯಾಕೆ ಬೇರೆಯವರ ಕೈ ಕೆಳಗೆ ಕೆಲಸ ಮಾಡಬೇಕು ಎಂದು ಯೋಚಿಸಿ ನಾನು ಯಾವ ಕೆಲಸಕ್ಕೂ ಸೇರದೆ  ಈ ಉದ್ಯಮ ಆರಂಭಿಸಿದ್ದೇನೆ" ಎನ್ನುತ್ತಾರೆ ವರ್ಷಾ. "ಈ ಉದ್ಯಮ ಆರಂಭಿಸಲು ಬ್ಯಾಂಕ್ ‌ನಿಂದ ಸಾಲ ದೊರೆಯಲಿಲ್ಲ. ಹಾಗಾಗಿ ನಾವು ಕೂಡಿಟ್ಟಿದ್ದ ಹಣದಲ್ಲೇ ಯಂತ್ರೋಪಕರಣ ಖರೀದಿಸಿದ್ದೇವೆ"  ಎಂದು ಅವರ ತಿಳಿಸಿದರು

ಇದನ್ನೂ ಓದಿ:  Business Idea: ಮೆಣಸಿನಕಾಯಿ ಉತ್ತಮ ಇಳುವರಿ ಪಡೆಯೋಕೆ ಹೀಗ್​ ಮಾಡಿ! ಆಮೇಲೆ ಮ್ಯಾಜಿಕ್​ ನೋಡಿ

ಬಾಳೆ ದಿಂಡಿನಲ್ಲಿರುವ ರಸದಲ್ಲಿ ಪೊಟ್ಯಾಷಿಯಂ ಅಂಶ ಇರುವುದರಿಂದ ರಾಸಾಯನಿಕ ಗೊಬ್ಬರದ ಬದಲು  ಬಾಳೆ ದಿಂಡಿನ ರಸ ಹಾಗೂ ದಿಂಡಿನಿಂದ ನಾರು ತೆಗೆದ ನಂತರ ಉಳಿಯುವ ವೇಸ್ಟ್‌ ‌ನಿಂದ  ಸಾವಯವ ಗೊಬ್ಬರ ತಯಾರಿಸಿ ಅದನ್ನೆ ತಮ್ಮ ಜಮೀನಿಗೆ ಬಳಸುತ್ತಿದ್ದಾರೆ

ಖಾಸಗಿ ಕಂಪನಿ ಉದ್ಯೋಗಿಯಾಗಿರುವ ಪತಿ

ಮೈಸೂರಿನಲ್ಲಿ ಖಾಸಗಿ ಕಂಪನಿಯೊಂದರಲ್ಲಿ ಉದ್ಯೋಗಿ ಆಗಿರುವ  ಪತಿ ಶ್ರೀಕಂಠಸ್ವಾಮಿ  ಅವರು ರಜಾ ದಿನಗಳಲ್ಲಿ  ಬಾಳೆ ದಿಂಡಿನ ಉತ್ಪನ್ನಗಳನ್ನು ತಯಾರಿಸುವ ಕೆಲಸದಲ್ಲಿ ನಿರತರಾಗಿ ತಮ್ಮ ಪತ್ನಿಯ ಕಾರ್ಯಕ್ಕೆ ಸಾಥ್ ನೀಡುತ್ತಿದ್ದಾರೆ.

ಸುತ್ತಮುತ್ತಲಿನ ಜಮೀನಿಗಳಲ್ಲಿ ಬಾಳೆ ಬೆಳೆಯುವ ರೈತರನ್ನು ಸಂಪರ್ಕಿಸಿ ಬಾಳೆ ದಿಂಡು ಬಿಸಾಡದೆ ತಮಗೇ ನೀಡುವಂತೆ ಕೇಳುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಒಂದು ಬಾಳೆ ದಿಂಡಿಗೆ 8 ರಿಂದ 10 ರೂಪಾಯಿಗೆ ಖರೀದಿಸಲು ಆಲೋಚಿಸಿದ್ದಾರೆ, ಇದರಿಂದ ಸುತ್ತಮುತ್ತಲಿನ  ರೈತರಿಗೂ ಲಾಭವಾಗಲಿದೆ
Published by:Mahmadrafik K
First published: