ಒಂದು ಕಡೆ ಆ್ಯಪಲ್ (Apple) ಅಂತಹ ದೊಡ್ಡ ಕಂಪನಿಗಳಲ್ಲಿ (Company) ಉದ್ಯೋಗಿಗಳು (Employee) ಮರಳಿ ಕಂಪನಿಗೆ ಬಂದು ಕೆಲಸ ಮಾಡಿ ಎಂಬ ನಿರ್ಧಾರವನ್ನು ಒಪ್ಪದೇ ರಾಜೀನಾಮೆ ನೀಡುವ ಹಂತಕ್ಕೆ ಹೋದರೆ, ಇನ್ನೂ ಝೆರೋಧಾ (Zerodha)ಅಂತಹ ಕಂಪನಿಗಳು ತಮ್ಮ 90 ಪ್ರತಿಶತದಷ್ಟು ಉದ್ಯೋಗಿಗಳು ಶಾಶ್ವತವಾಗಿ ಮನೆಯಿಂದಲೇ ಕೆಲಸ ಮಾಡುತ್ತಾರೆ ಎಂದು ಹೇಳುವ ಮೂಲಕ ತಮ್ಮ ಉದ್ಯೋಗಿಗಳನ್ನು ಕಂಪನಿಯಲ್ಲಿಯೇ ಉಳಿಸಿಕೊಳ್ಳುವ ಪ್ರಯತ್ನ ಮಾಡಿದ್ದಾರೆ ಎಂದು ಹೇಳಬಹುದು. ಈಗ ಮೈಕ್ರೋಸಾಫ್ಟ್ (Microsoft) ಕಂಪನಿ ಸಹ ತನ್ನ ಉದ್ಯೋಗಿಗಳಿಗೆ ಒಂದು ಸಿಹಿ ಸುದ್ದಿ ನೀಡಿದ್ದಾರೆ, ಅದು ಏನೆಂದರೆ ಉದ್ಯೋಗಿಗಳಿಗೆ ಶೀಘ್ರದಲ್ಲಿಯೇ ವೇತನ ಹೆಚ್ಚಾಗಲಿದೆ ಎಂದು ಹೇಳಲಾಗುತ್ತಿದೆ. ಈ ಸುದ್ದಿಯನ್ನು ಸ್ವತಃ ಕಂಪನಿಯ ಸಿಇಒ ಸತ್ಯ ನಾಡೆಲ್ಲಾ ಅವರೇ ಖಚಿತ ಪಡಿಸಿದ್ದಾರೆ.
ಜಾಗತಿಕ ಮೆರಿಟ್ ಬಜೆಟ್ ಅನ್ನು ದುಪ್ಪಟ್ಟುಗೊಳಿಸಿದ ಮೈಕ್ರೋಸಾಫ್ಟ್
ಮೈಕ್ರೋಸಾಫ್ಟ್ "ಜಾಗತಿಕ ಮೆರಿಟ್ ಬಜೆಟ್ ಅನ್ನು ಸುಮಾರು ದುಪ್ಪಟ್ಟುಗೊಳಿಸಿದೆ" ಮತ್ತು ಅದು ತಮ್ಮ ವೃತ್ತಿಜೀವನದ ಮಧ್ಯದಲ್ಲಿರುವ ಜನರಿಗೆ ಹೆಚ್ಚಿನ ಹಣವನ್ನು ಹಂಚಿಕೆ ಮಾಡುತ್ತಿದೆ ಎಂದು ಅವರು ಇ-ಮೇಲ್ ಮೂಲಕ ಉದ್ಯೋಗಿಗಳಿಗೆ ತಿಳಿಸಿದರು. ವಿಶ್ವದಾದ್ಯಂತದ ದೊಡ್ಡ ಟೆಕ್ ಕಂಪನಿಗಳು ಉನ್ನತ ಪ್ರತಿಭೆಗಳನ್ನು ಉಳಿಸಿಕೊಳ್ಳಲು ತಮ್ಮ ಉದ್ಯೋಗಿಗಳ ವೇತನವನ್ನು ಹೆಚ್ಚಿಸುತ್ತಿವೆ.
ಉದ್ಯೋಗಿಗಳಿಗೆ ಇ-ಮೇಲ್ ಕಳುಹಿಸಿದ ನಾಡೆಲ್ಲಾ
"ನಮ್ಮ ಗ್ರಾಹಕರು ಮತ್ತು ಪಾಲುದಾರರನ್ನು ಸಶಕ್ತಗೊಳಿಸಲು ನೀವು ಮಾಡುವ ಅದ್ಭುತ ಕೆಲಸದಿಂದಾಗಿ, ನಮ್ಮ ಪ್ರತಿಭೆಗೆ ಹೆಚ್ಚಿನ ಬೇಡಿಕೆ ಇದೆ ಎಂದು ನಾವು ಮತ್ತೆ ಮತ್ತೆ ಅರ್ಥ ಮಾಡಿಕೊಂಡಿದ್ದೇವೆ. ತಂಡದಲ್ಲಿ, ನಿಮ್ಮ ಪ್ರಭಾವವನ್ನು ಗುರುತಿಸಲಾಗಿದೆ ಮತ್ತು ಅದನ್ನು ಪ್ರಶಂಸಿಸಲಾಗಿದೆ. ಅದಕ್ಕಾಗಿ ನಾನು ನಿಮಗೆ ಧನ್ಯವಾದಗಳನ್ನು ಹೇಳಲು ಬಯಸುತ್ತೇನೆ. ಅದಕ್ಕಾಗಿಯೇ ನಾವು ನಿಮ್ಮಲ್ಲಿ ಪ್ರತಿಯೊಬ್ಬರಲ್ಲೂ ದೀರ್ಘಕಾಲೀನ ಹೂಡಿಕೆಗಳನ್ನು ಮಾಡುತ್ತಿದ್ದೇವೆ" ಎಂದು ನಾಡೆಲ್ಲಾ ಅವರು ತಮ್ಮ ಉದ್ಯೋಗಿಗಳಿಗೆ ಕಳುಹಿಸಿದ ಇ-ಮೇಲ್ ನಲ್ಲಿ ಬರೆದಿದ್ದಾರೆ ಎಂದು ಹೇಳಲಾಗುತ್ತಿದೆ.
ಇದನ್ನೂ ಓದಿ: Sankarsh Chand: 100 ಕೋಟಿಯ ಒಡೆಯ ಈ 23ರ ಯುವಕ! ಕಾಲೇಜು ಓದಿದ್ದು ಎರಡೇ ವರ್ಷ!
ಮೈಕ್ರೋಸಾಫ್ಟ್ ಕಂಪನಿ ಮಾತ್ರವೇ ಉದ್ಯೋಗಿಗಳಿಗೆ ಭಾರಿ ವೇತನ ಹೆಚ್ಚಳವನ್ನು ಘೋಷಿಸಿಲ್ಲ. ಫೆಬ್ರವರಿಯಲ್ಲಿ ಅಮೆಜಾನ್ ಕಾರ್ಪೊರೇಟ್ ಮತ್ತು ಟೆಕ್ ಉದ್ಯೋಗಿಗಳಿಗೆ ಗರಿಷ್ಠ ಮೂಲ ವೇತನವನ್ನು1,60,000 ಡಾಲರ್ ನಿಂದ 3,50,000 ಡಾಲರ್ ಗೆ ದ್ವಿಗುಣಗೊಳಿಸಿತು. ಉನ್ನತ ಪ್ರತಿಭೆಗಳನ್ನು ನೇಮಿಸಿಕೊಳ್ಳಲು ಮತ್ತು ಅಸ್ತಿತ್ವದಲ್ಲಿರುವ ಉದ್ಯೋಗಿಗಳನ್ನು ಉಳಿಸಿಕೊಳ್ಳಲು ಪರಿಹಾರವು ಹೆಚ್ಚಿನದಾಗಿತ್ತು. ಕಂಪನಿಯು "ನಮ್ಮ ಪರಿಹಾರ ಕಾರ್ಯಕ್ರಮಗಳಲ್ಲಿ ಗಮನಾರ್ಹ ಹೆಚ್ಚುವರಿ ಹೂಡಿಕೆ" ಮಾಡುತ್ತಿದೆ ಎಂದು ನಾಡೆಲ್ಲಾ ಅವರು ತಮ್ಮ ಉದ್ಯೋಗಿಗಳಿಗೆ ಮಾಹಿತಿ ನೀಡಿದರು, ಈ ಹೆಚ್ಚುವರಿ ಹೂಡಿಕೆ ಸಾಮಾನ್ಯ ಬಜೆಟ್ ಅನ್ನು ಮೀರಿದೆ.
"ನಿರ್ದಿಷ್ಟವಾಗಿ, ನಾವು ಜಾಗತಿಕ ಮೆರಿಟ್ ಬಜೆಟ್ ಅನ್ನು ದ್ವಿಗುಣಗೊಳಿಸುತ್ತಿದ್ದೇವೆ. ಮೆರಿಟ್ ಬಜೆಟ್ ಗಳು ಸ್ಥಳೀಯ ಮಾರುಕಟ್ಟೆ ದತ್ತಾಂಶದ ಆಧಾರದ ಮೇಲೆ ದೇಶದಿಂದ ದೇಶಕ್ಕೆ ಬದಲಾಗುತ್ತವೆ ಮತ್ತು ಅತ್ಯಂತ ಅರ್ಥಪೂರ್ಣ ಹೆಚ್ಚಳಗಳು ಮಾರುಕಟ್ಟೆಯ ಬೇಡಿಕೆಗಳು ಮತ್ತು ಆರಂಭಿಕದಿಂದ ಮಧ್ಯ ವೃತ್ತಿಜೀವನದ ಮಟ್ಟಗಳ ಮೇಲೆ ಕೇಂದ್ರೀಕರಿಸಲ್ಪಡುತ್ತವೆ. ನಾವು ಎಲ್ಲಾ ಹಂತಗಳಿಗೆ ವಾರ್ಷಿಕ ಸ್ಟಾಕ್ ಶ್ರೇಣಿಗಳನ್ನು ಕನಿಷ್ಠ 25 ಪ್ರತಿಶತದಷ್ಟು ಹೆಚ್ಚಿಸುತ್ತಿದ್ದೇವೆ" ಎಂದು ಅವರು ಹೇಳಿದರು.
ಆದ್ದರಿಂದ ಈ ವೇತನ ಹೆಚ್ಚಳವು ಇತ್ತೀಚೆಗೆ ಸಂಸ್ಥೆಗೆ ಸೇರಿದ ಉದ್ಯೋಗಿಗಳು ಮತ್ತು ಅವರ ವೃತ್ತಿಜೀವನದ ಮಧ್ಯದಲ್ಲಿರುವ ಉದ್ಯೋಗಿಗಳ ಮೇಲೆ ಹೆಚ್ಚಾಗಿ ಪರಿಣಾಮ ಬೀರುತ್ತದೆ.
ಉದ್ಯೋಗಿಗಳ ವೇತನವನ್ನು ಹೆಚ್ಚಳ
ಕಳೆದ ಜನವರಿಯಲ್ಲಿ ಗೂಗಲ್ ತನ್ನ ನಾಲ್ವರು ಉನ್ನತ ಅಧಿಕಾರಿಗಳ ವೇತನವನ್ನು ಹೆಚ್ಚಿಸಿತ್ತು. ಅವರ ಮೂಲ ವೇತನವನ್ನು 6,50,000 ಡಾಲರ್ ನಿಂದ 1 ಮಿಲಿಯನ್ ಡಾಲರ್ ಗೆ ಹೆಚ್ಚಿಸಲಾಯಿತು.
ಇದನ್ನೂ ಓದಿ: Business Startup: ಸರಳವಾಗಿ ಶುರು ಮಾಡಿದ ವ್ಯವಹಾರ ಇಂದು ಕೋಟಿ ಆದಾಯ ನೀಡುತ್ತಿದೆಯಂತೆ! ತಾಯಿಯೇ ಈಕೆಗೆ ಸ್ಪೂರ್ತಿ
ಮುಖ್ಯ ಹಣಕಾಸು ಅಧಿಕಾರಿ ರುತ್ ಪೋರಟ್ ಸೇರಿದಂತೆ ಹಿರಿಯ ಉಪಾಧ್ಯಕ್ಷ ಪ್ರಭಾಕರ್ ರಾಘವನ್, ಹಿರಿಯ ಉಪಾಧ್ಯಕ್ಷ ಮತ್ತು ಮುಖ್ಯ ವ್ಯವಹಾರ ಅಧಿಕಾರಿ ಫಿಲಿಪ್ ಷಿಂಡ್ಲರ್ ಮತ್ತು ಜಾಗತಿಕ ವ್ಯವಹಾರಗಳ ಅಧ್ಯಕ್ಷ ಮತ್ತು ಮುಖ್ಯ ಕಾನೂನು ಅಧಿಕಾರಿಯಾದ ಕೆಂಟ್ ವಾಕರ್ ಇವರೆಲ್ಲರೂ ವೇತನ ಹೆಚ್ಚಳವನ್ನು ಪಡೆದಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ