Amazon: ಇನ್ಮುಂದೆ ಇದನ್ನೆಲ್ಲಾ ಅಮೇಜಾನ್​ನಲ್ಲಿ ಮಾರಂಗಿಲ್ಲ, ಕೇಂದ್ರ ಸರ್ಕಾರದಿಂದಲೇ ಖಡಕ್​ ವಾರ್ನಿಂಗ್​!

Amazon ನಲ್ಲಿ ಮಾರಾಟವಾಗುವ ಈ ಚಿಕ್ಕ ಲೋಹದ ಕ್ಲಿಪ್‌ಗಳನ್ನು ಬಳಸಿಕೊಂಡು ಅಲಾರಂನ ತೆಗೆಯಬಹುದು. ಈ ವಸ್ತುವನ್ನು ಕೇವಲ 249 ರೂಪಾಯಿಗೆ ಮಾರಾಟ ಮಾಡಲಾಗುತ್ತದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಟಾಟಾ ಗ್ರೂಪ್ ಸಿಇಒ ಸೈರಸ್​ ಮಿಸ್ತ್ರಿ (TATA Group CEO Cyrus Mistry) ಇತ್ತೀಚೆಗೆ ಕಾರು ಅಪಘಾತ (Car Accident) ದಲ್ಲಿ ನಿಧನರಾದರು. ಭಾರತ (India) ಸರ್ಕಾರ ಈ ಬಗ್ಗೆ ಪರಿಶೀಲನೆ ನಡೆಸಿದ್ದು, ಮುಂದೆ ಇಂತಹ ಅವಘಡಗಳು ನಡೆಯದಂತೆ ಕ್ರಮಕೈಗೊಳ್ಳಲು ಮುಂದಾಗಿದೆ. ಅದರ ಆಧಾರದ ಮೇಲೆ, ವಾಹನಗಳ ಸುರಕ್ಷತಾ ವೈಶಿಷ್ಟ್ಯಗಳನ್ನು ನಿಷ್ಕ್ರಿಯಗೊಳಿಸಬಹುದಾದ ಸಣ್ಣ ಲೋಹದ ಕ್ಲಿಪ್‌ಗಳು ಮತ್ತು ಇತರ ವಸ್ತುಗಳನ್ನು ಮಾರಾಟ ಮಾಡದಂತೆ ಅಮೆಜಾನ್​ಗೆ ಭಾರತ ಸರ್ಕಾರ ಸೂಚನೆ ನೀಡಿದೆ.  ಕಾರಿನಲ್ಲಿರುವ ವ್ಯಕ್ತಿ ಸೀಟ್ ಬೆಲ್ಟ್ (Seat Belt) ಧರಿಸದೇ ಇದ್ದಲ್ಲಿ ಅವರನ್ನು ಎಚ್ಚರಿಸಲು ಅಲಾರಾಂ (Alarm) ಹೊಂದಿಸಲಾಗಿದೆ. Amazon ನಲ್ಲಿ ಮಾರಾಟವಾಗುವ ಈ ಚಿಕ್ಕ ಲೋಹದ ಕ್ಲಿಪ್‌ಗಳನ್ನು ಬಳಸಿಕೊಂಡು ನಾವೇ ಆ ಅಲಾರಂಗಳನ್ನು ತೆಗೆದುಹಾಕಬಹುದು.  ಈ ರೀತಿಯ ಮತ್ತಷ್ಟು ವಸ್ತುಗಳನ್ನು ಮಾರಬೇಡಿ ಎಂದು ಅಮೇಜಾನ್​ಗೆ  ಸೂಚನೆ ನೀಡಿದೆ.

ಆ್ಯಡ್​ ಕೂಡ ಕೊಡ್ತಿದ್ದ ಅಮೇಜಾನ್​!

Amazon ನಲ್ಲಿ ಮಾರಾಟವಾಗುವ ಈ ಚಿಕ್ಕ ಲೋಹದ ಕ್ಲಿಪ್‌ಗಳನ್ನು ಬಳಸಿಕೊಂಡು ಅಲಾರಂನ ತೆಗೆಯಬಹುದು. ಈ ವಸ್ತುವನ್ನು ಕೇವಲ 249 ರೂಪಾಯಿಗೆ ಮಾರಾಟ ಮಾಡಲಾಗುತ್ತದೆ. ಅದರಲ್ಲಿ ಅಮೆಜಾನ್ "ನಿಮ್ಮ ಕಾರ್ ಅಲಾರಂ ಅನ್ನು ನೀವೇ ನಿಷ್ಕ್ರಿಯಗೊಳಿಸಲು ಈ ಕ್ಲಿಪ್‌ಗಳನ್ನು ಬಳಸಿ" ಎಂಬ ಜಾಹೀರಾತನ್ನು ಕೂಡ ಮಾಡಿದೆ. ಇದರಿಂದ ಸಾಕಷ್ಟು ಮಂದಿ ಆ್ಯಡ್​ಗೆ ಆಕರ್ಷಿತರಾಗಿ ಈ ಪ್ರಾಡೆಕ್ಟ್​ ಖರೀದಿ ಮಾಡುತ್ತಿದ್ದರು.

 ಈ ಡಿವೈಸ್​ ಬಳಸಿದ್ರೆ ಅಲಾರಂ ಆಫ್​ ಆಗುತ್ತೆ! 

ಅಗ್ಗ ಮತ್ತು ಸರಳವಾಗಿರುವುದರಿಂದ, ಇದು ಸುಲಭವಾಗಿ ಅನೇಕ ಜನರನ್ನು ತಲುಪುತ್ತದೆ. ಈ ವಿಷಯ ತಿಳಿದ ನಮ್ಮೂರಿನ ಜನ ಹೆಚ್ಚಿನ ಸಂಖ್ಯೆಯಲ್ಲಿ ಈ ಕ್ಲಿಪ್ ಗಳನ್ನು ಖರೀದಿಸಿ ಅಲಾರಾಂ ನಿಷ್ಕ್ರಿಯಗೊಳಿಸಿದ್ದಾರೆ. ಇದು ಹೆಚ್ಚಿನ ಸಂಖ್ಯೆಯ ಅಪಘಾತಗಳಿಗೆ ಕಾರಣವಾಯಿತು. ಹಾಗೂ ಸಾಕಷ್ಟು ಮಂದಿ ಪ್ರಾಣ ಕೂಡ ಕಳೆದುಕೊಂಡಿದ್ದಾರೆ. ಈ ಕಾರಣದಿಂದಾಗಿ, ಈ ಉತ್ಪನ್ನಗಳ ಮಾರಾಟವನ್ನು ನಿಷೇಧಿಸಲು ಭಾರತ ಸರ್ಕಾರ ಆದೇಶಿಸಿದೆ.

ಇದನ್ನೂ ಓದಿ: ಸೈರಸ್​ ಮಿಸ್ತ್ರಿ ಕಾರು ಅಪಘಾತಕ್ಕೆ ಇದೇ ಕಾರಣವಂತೆ! ಫಾರೆನಿಕ್ಸ್ ತಂಡದಿಂದ ಸ್ಫೋಟಕ ಮಾಹಿತಿ

ಎಲ್ಲರೂ ಸೀಟ್​ ಬೆಲ್ಟ್​ ಹಾಕಲೇಬೇಕು!


ಕೇಂದ್ರ ರಸ್ತೆ ಮತ್ತು ಸಾರಿಗೆ ಸಚಿವ ನಿತಿನ್ ಗಡ್ಕರಿ ಇತ್ತೀಚೆಗೆ ಈ ಕುರಿತು ಹೇಳಿಕೆ ಬಿಡುಗಡೆ ಮಾಡಿದ್ದಾರೆ. ಈ ಹಿಂದೆ ಚಾಲಕ ಮತ್ತು ಮುಂದಿನ ಸೀಟಿನಲ್ಲಿ ಕುಳಿತವರು ಮಾತ್ರ ಸೀಟ್ ಬೆಲ್ಟ್ ಧರಿಸಬೇಕಿತ್ತು. ಆದರೆ ಇದೀಗ ಈ ಅವಘಡದ ನಂತರ ಸರ್ಕಾರ ಎಚ್ಚೆತ್ತುಕೊಂಡಿದ್ದು, ಪ್ರಕಟವಾಗಲಿರುವ ನೂತನ ಸಂಚಾರ ನಿಯಮಾವಳಿಯಲ್ಲಿ ಕಾರಿನ ಹಿಂದೆ ಕುಳಿತುಕೊಳ್ಳುವವರೂ ಕಡ್ಡಾಯವಾಗಿ ಸೀಟ್ ಬೆಲ್ಟ್ ಧರಿಸಬೇಕು, ಇಲ್ಲದಿದ್ದರೆ ದಂಡ ಕಟ್ಟಬೇಕಾಗುತ್ತದೆ. ಹಿಂಬದಿ ಸೀಟಿನಲ್ಲಿ ಸೀಟ್ ಬೆಲ್ಟ್ ಹಾಕದಿದ್ದರೂ ಅಲಾರಾಂ ಮೊಳಗುವ ರೀತಿಯಲ್ಲಿ ಕಾರುಗಳನ್ನು ತಯಾರಿಸುವಂತೆ ಭಾರತ ಸರ್ಕಾರವೂ ಆದೇಶ ಹೊರಡಿಸಲಿದೆ.

ಇದನ್ನೂ ಓದಿ: ಸಿಂಪಲ್ಲಾಗಿ ನಿಮ್ಮ ಪ್ಯಾನ್​ ಕಾರ್ಡ್​ನ ಮೊಬೈಲ್​ನಲ್ಲೇ ಹೀಗೆ ಡೌನ್​ಲೋಡ್ ಮಾಡಿ!

ಅಪಘಾತ ನಡೆದಿದ್ದು ಹೇಗೆ?

ಅಹಮದಾಬಾದ್‌ನಿಂದ ಮುಂಬೈಗೆ ಮಿಸ್ತ್ರಿ ಹಾಗೂ ಇತರರು ಮರ್ಸಿಡೀಸ್‌ ಕಾರಿನಲ್ಲಿ ಪ್ರಯಾಣಿಸುತ್ತಿದ್ದರು. ಕಾರನ್ನು ಡಾ. ಅನಾಹಿತಾ ಪಂಡೋಳೆ ಚಲಾಯಿಸುತ್ತಿದ್ದರು. ಮುಂಬೈನಿಂದ 120 ಕಿ.ಮೀ. ದೂರದ ಪಾಲ್ಘರ್‌ ಜಿಲ್ಲೆಯಲ್ಲಿ ಮಧ್ಯಾಹ್ನ 2.15 ಕ್ಕೆ ಸೂರ್ಯ ನದಿಯ ಮೇಲಿನ ಸೇತುವೆ ಮೇಲೆ ಕಾರು ಸಾಗುತ್ತಿತ್ತು. ಎಡಗಡೆಯಿಂದ ಓವರ್‌ಟೇಕ್‌ ಮಾಡಲು ಹೋದಾಗ ಕಾರಿನ ಚಾಲಕಿ ನಿಯಂತ್ರಣ ಕಳೆದುಕೊಂಡಿದ್ದಾರೆ. ಆಗ ಕಾರು ನಿಯಂತ್ರಣ ತಪ್ಪಿ ಡಿವೈಡರ್‌ಗೆ ಡಿಕ್ಕಿ ಹೊಡೆದು ನಂತರ ರಸ್ತೆ ಪಕ್ಕದ ಗೋಡೆಗೆ ಗುದ್ದಿದೆ. ಇದರಿಂದಲೇ ಅಪಘಾತ ಸಂಭವಿಸಿದೆ ಎಂಬಂತೆ ಮೇಲ್ನೋಟಕ್ಕೆ ಕಂಡುಬರುತ್ತದೆ ಎಂದು ಪೊಲೀಸರು ಹೇಳಿದ್ದಾರೆ.

ಅಪಘಾತದ ಅಸಲಿ ಕಾರಣ ಇದಂತೆ
ಅಪಘಾತವಾದ ಬಳಿಕ ತನಿಖೆಗಾಗಿಗೆ 7 ಸದಸ್ಯರ ತಂಡವನ್ನು ನೇಮಿಸಲಾಗಿತ್ತು. ಈ ಅಪಘಾತಕ್ಕೆ ಸೇತುವೆಯ ದೋಷಯುಕ್ತ ವಿನ್ಯಾಸವೇ ಕಾರಣ ಎಂದು ವರದಿ ಹೇಳಿದೆ. ಸೇತುವೆಯ ರೇಲಿಂಗ್ ರಸ್ತೆಯ ಕಡೆಗೆ ಬಾಗಿದ ಕಾರಣ ಅಪಘಾತ ಸಂಭವಿಸಿದೆ ಎಂದು ವರದಿ ಹೇಳಿದೆ. ಸೈರಸ್ ಮಿಸ್ತ್ರಿ ಅವರು ಸೀಟ್ ಬೆಲ್ಟ್ ಧರಿಸದ ಕಾರಣ ಅಪಘಾತದಲ್ಲಿ ಪ್ರಾಣ ಕಳೆದುಕೊಂಡಿದ್ದಾರೆ ಎಂದು ಅವರು ಹೇಳಿದ್ದಾರೆ. ಮಿಸ್ತ್ರಿ ಕಾರಿನಲ್ಲಿ ಕುಳಿತು ಸೀಟ್ ಬೆಲ್ಟ್ ಹಾಕಿಕೊಂಡಿದ್ದ ವೇಳೆ ಏರ್ ಬ್ಯಾಗ್ ತೆರೆದು ಪ್ರಾಣ ಉಳಿಸುತ್ತಿತ್ತು. ಇದನ್ನು ವರದಿಯಲ್ಲೂ ಹೇಳಲಾಗಿದೆ.

Published by:ವಾಸುದೇವ್ ಎಂ
First published: