8th Pay Commission: ಕೇಂದ್ರದಿಂದ ಮಹತ್ವದ ನಿರ್ಧಾರ, ಸರ್ಕಾರಿ ನೌಕರರಿಗೆ ಭಾರೀ ನಿರಾಸೆ!

ಕೇಂದ್ರ ಸರಕಾರವು 2022 ರಲ್ಲಿ 8 ನೇ ವೇತನ ಆಯೋಗದ ಯಾವುದೇ ಪ್ರಸ್ತಾವನೆಯನ್ನು ಪರಿಗಣಿಸುತ್ತಿಲ್ಲವೆಂದು ಸ್ಪಷ್ಟಪಡಿಸಿದೆ. 2022 ರಲ್ಲಿ 8 ನೇ ವೇತನ ಆಯೋಗದ ಸಮಿತಿಗೆ ಯಾವುದೇ ಮಹತ್ವವಿಲ್ಲ ಅಂತೆಯೇ ಶಿಫಾರಸ್ಸುಗಳನ್ನು 2026 ರಿಂದ ಮಾತ್ರವೇ ಜಾರಿಗೊಳಿಸಲಾಗುವುದು ಎಂದು ಸರಕಾರಿ ಮೂಲಗಳು ತಿಳಿಸಿರುವುದಾಗಿ ಸುದ್ದಿಮೂಲಗಳು ಮಾಹಿತಿ ನೀಡಿವೆ.

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

  • Share this:
ಕೇಂದ್ರ ಸರಕಾರವು (Central Government) 2022 ರಲ್ಲಿ 8 ನೇ ವೇತನ ಆಯೋಗದ (8th Pay Commission) ಯಾವುದೇ ಪ್ರಸ್ತಾವನೆಯನ್ನು ಪರಿಗಣಿಸುತ್ತಿಲ್ಲವೆಂದು ಸ್ಪಷ್ಟಪಡಿಸಿದೆ. 2022 ರಲ್ಲಿ 8 ನೇ ವೇತನ ಆಯೋಗದ ಸಮಿತಿಗೆ ಯಾವುದೇ ಮಹತ್ವವಿಲ್ಲ ಅಂತೆಯೇ ಶಿಫಾರಸ್ಸುಗಳನ್ನು 2026 ರಿಂದ ಮಾತ್ರವೇ ಜಾರಿಗೊಳಿಸಲಾಗುವುದು ಎಂದು ಸರಕಾರಿ ಮೂಲಗಳು (Government sources) ತಿಳಿಸಿರುವುದಾಗಿ ಸುದ್ದಿಮೂಲಗಳು ಮಾಹಿತಿ ನೀಡಿವೆ. ಶಿಫಾರಸ್ಸುಗಳನ್ನು ಬಿಡುಗಡೆ ಮಾಡುವುದಕ್ಕೆ ಮುನ್ನವೇ ಪಾವತಿ ಪ್ಯಾನಲ್‌ಗಳನ್ನು (Payment Panel) 2 ವರ್ಷಗಳವರೆಗೆ ಹೊಂದಿಸಲಾಗಿದ್ದು 2022 ರಲ್ಲಿ ಈ ಕುರಿತು ಪ್ರಶ್ನಿಸುವುದು ಸಕಾಲವಲ್ಲ, ಅದೇ ರೀತಿ ಸರಕಾರವು 8 ನೇ ವೇತನ ಸಮಿತಿಯನ್ನು ಯೋಗ್ಯ ಸಮಯದಲ್ಲಿ ನಿರ್ಧರಿಸುತ್ತದೆ ಎಂಬುದಾಗಿ ಮೂಲಗಳು ಮಾಹಿತಿಯನ್ನೊದಗಿಸಿವೆ.

ಸರ್ಕಾರ ಕೈಗೊಂಡಿರುವ ಕ್ರಮಗಳು

ಈ ಕುರಿತು ಕೇಂದ್ರ ಹಣಕಾಸು ಇಲಾಖೆ ರಾಜ್ಯ ಸಚಿವ ಪಂಕಜ್ ಚೌಧರಿ ಮಾಹಿತಿ ನೀಡಿದ್ದು, ಕೇಂದ್ರ ಸರಕಾರಿ ನೌಕರರಿಗೆ 8ನೇ ವೇತನ ಆಯೋಗವನ್ನು ಸ್ಥಾಪಿಸುವ ಕುರಿತು ಯಾವುದೇ ಪ್ರಸ್ತಾವನೆ ಸರಕಾರದ ಮುಂದಿಲ್ಲ ಅಂತೆಯೇ ಹೆಚ್ಚುತ್ತಿರುವ ಹಣದುಬ್ಬರವನ್ನು ಗಮನದಲ್ಲಿಟ್ಟುಕೊಂಡು ವೇತನವನ್ನು ಹೆಚ್ಚಿಸಲು ಕೇಂದ್ರವು ತೆಗೆದುಕೊಳ್ಳುತ್ತಿರುವ ಇತರ ಕ್ರಮಗಳ ಕುರಿತಾಗಿಯೂ ಸಚಿವರು ಮಾಹಿತಿ ಹಂಚಿಕೊಂಡಿದ್ದಾರೆ.

ಹತ್ತುವರ್ಷಗಳ ದೀರ್ಘ ಅವಧಿಯವರೆಗೆ ಕಾಯದೆಯೇ ನಿಯತಕಾಲಿಕವಾಗಿ ಲೆಕ್ಕಾಚಾರಗಳನ್ನು ಪರಿಶೀಲಿಸಿಕೊಳ್ಳಬಹುದು ಎಂಬುದಾಗಿ 7ನೇ ವೇತನ ಆಯೋಗದ ಅಧ್ಯಕ್ಷರು ಶಿಫಾರಸ್ಸು ಮಾಡಿರುವುದಾಗಿ ಪಂಕಜ್ ತಿಳಿಸಿದ್ದಾರೆ.

ತುಟ್ಟಿಭತ್ಯೆ ದರ ಪರಿಷ್ಕರಣೆ

ಹಣದುಬ್ಬರದ ಕಾರಣದಿಂದಾಗಿ ಕೇಂದ್ರ ಸರಕಾರಿ ನೌಕರರಿಗೆ ಅವರ ಸಂಬಳದಲ್ಲಿನ ನಿಜವಾದ ಮೌಲ್ಯ ಸರಿದೂಗಿಸಲು ತುಟ್ಟಿಭತ್ಯೆಗಳನ್ನು ಒದಗಿಸಲಾಗುತ್ತಿದೆ, ಅಂತೆಯೇ ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯದ ಅಡಿಯಲ್ಲಿ ಕಾರ್ಮಿಕ ಕಚೇರಿ ಬಿಡುಗಡೆ ಮಾಡಿರುವ ಆಲ್ ಇಂಡಿಯಾ ಗ್ರಾಹಕ ಬೆಲೆ ಸೂಚ್ಯಂಕಕ್ಕೆ ಅನುಗುಣವಾಗಿ ಹಣದುಬ್ಬರ ದರವನ್ನು ಆಧರಿಸಿ ಪ್ರತಿ ಆರು ತಿಂಗಳಿಗೊಮ್ಮೆ ಡಿಎ (DA) ದರವನ್ನು ನಿಯತಕಾಲಿಕವಾಗಿ ಪರಿಷ್ಕರಿಸಲಾಗುತ್ತದೆ ಎಂದು ಸಚಿವರು ತಿಳಿಸಿದ್ದಾರೆ.

ಇದನ್ನೂ ಓದಿ: EPF: ನೀವು ಪಿಎಫ್ ಸದಸ್ಯರಾ? ಹಾಗಿದ್ರೆ ಆನ್‌ಲೈನ್ ನಲ್ಲಿ ಯುಎಎನ್ ಪಡೆಯುವುದು ಹೇಗೆ ಅಂತ ನೋಡ್ಕೊಳ್ಳಿ

ಹೊಸ ವೇತನ ಆಯೋಗದ ರಚನೆಯ ಬದಲಿಗೆ ಹೊಸ ಸೂತ್ರ:

ಹತ್ತು ವರ್ಷಗಳ ಸುದೀರ್ಘ ಅವಧಿಯ ನಂತರ ಹೊಸ ವೇತನ ಆಯೋಗವನ್ನು ರಚಿಸುವುದಕ್ಕೆ ಬದಲಾಗಿ ಸರಕಾರವು ಪ್ರತಿ ವರ್ಷ ನೌಕರರು ಮತ್ತು ಪಿಂಚಣಿದಾರರ ವೇತನ, ಭತ್ಯೆಗಳು ಮತ್ತು ಪಿಂಚಣಿಗಳನ್ನು ಪರಿಶೀಲಿಸಬೇಕು ಎಂದು 7 ಸಿಪಿಸಿ (CPC) ಶಿಫಾರಸ್ಸು ಮಾಡಿರುವುದು ಸತ್ಯ ಸಂಗತಿಯಾಗಿದೆ ಎಂದು ತಿಳಿಸಿದ್ದಾರೆ. ಜನಸಾಮಾನ್ಯನ ಖರ್ಚುವೆಚ್ಚಗಳನ್ನು ರೂಪಿಸುವ ಸರಕುಗಳ ಬದಲಾವಣೆಗಳ ಬೆಲೆಗಳನ್ನು ಪರಿಗಣನೆಗೆ ತೆಗೆದುಕೊಳ್ಳುವ Aykroyd ಸೂತ್ರದ ಮೇಲೆ ಪರಿಶೀಲಿಸಿ ಪರಿಷ್ಕರಣೆಗಳನ್ನು ನಡೆಸಬಹುದಾಗಿದೆ ಎಂಬುದಾಗಿ ಸಚಿವರು ತಿಳಿಸಿದ್ದಾರೆ.

1947 ರಿಂದ ಏಳು ವೇತನ ಆಯೋಗಗಳನ್ನು ರಚಿಸಲಾಗಿದೆ. ಪ್ರತಿ 10 ವರ್ಷಗಳ ನಂತರ, ಸರಕಾರಿ ನೌಕರರ ವೇತನ ರಚನೆಯನ್ನು ಪರಿಷ್ಕರಿಸಲು ಕೇಂದ್ರವು ವೇತನ ಆಯೋಗವನ್ನು ರಚಿಸುತ್ತದೆ. ಫೆಬ್ರವರಿ, 2014 ರಲ್ಲಿ ಸರಕಾರವು 7 ನೇ ವೇತನ ಆಯೋಗವನ್ನು ಸ್ಥಾಪಿಸಿತ್ತು. ಸಮಿತಿಯ ಶಿಫಾರಸ್ಸುಗಳು ಜನವರಿ 1, 2016 ರಿಂದ ಜಾರಿಗೆ ಬಂದವು. ನಗರ ವಲಯ, ಅರೆ-ನಗರ ವಲಯ ಅಥವಾ ಗ್ರಾಮೀಣ ವಲಯವನ್ನು ಆಧರಿಸಿ ಡಿಎ ಉದ್ಯೋಗಿಯಿಂದ ಉದ್ಯೋಗಿಗೆ ಬದಲಾಗುತ್ತದೆ ಎಂಬುದನ್ನು ನೌಕರರು ಗಮನಿಸಬೇಕಾಗಿ ಸಚಿವರು ಸ್ಪಷ್ಟಪಡಿಸಿದ್ದಾರೆ.

ಇದನ್ನೂ ಓದಿ: Bengaluru News: ಬೆಂಗಳೂರಿನ ಜನರಿಗೆ ಶುಭಸುದ್ದಿ! ವಿಶೇಷ ರೈಲು ಆರಂಭ

ಕೇಂದ್ರ ಸರಕಾರವು 47.7 ಲಕ್ಷ ಕೇಂದ್ರ ಸರಕಾರಿ ಉದ್ಯೋಗಿಗಳಿಗೆ ಮಾರ್ಚ್ 31, 2022 ರಂದು 3% ರಿಂದ 34% ಗೆ ತುಟ್ಟಿಭತ್ಯೆಯನ್ನು ಹೆಚ್ಚಿಸಿತು ಮತ್ತು ಹಣದುಬ್ಬರದಿಂದ ಕೊಂಚ ಪರಿಹಾರವನ್ನು ಒದಗಿಸಲು 68.6 ಲಕ್ಷ ಪಿಂಚಣಿದಾರರಿಗೆ ತುಟ್ಟಿ ಪರಿಹಾರ ಭತ್ಯೆಯಲ್ಲಿ ಹೆಚ್ಚಳವನ್ನು ಘೋಷಿಸಿತು.
Published by:Ashwini Prabhu
First published: