Flipkart: ಆನ್‌ಲೈನ್‌ನಲ್ಲಿ ಆ್ಯಸಿಡ್​ ಮಾರಾಟ, ಫ್ಲಿಪ್‌ಕಾರ್ಟ್-ಮೀಶೋಗೆ ಕೇಂದ್ರ ಖಡಕ್​ ವಾರ್ನಿಂಗ್​!

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಈ ಪ್ರಕರಣದ ತನಿಖೆ ನಡೆಸಿದಾಗ ಕುತೂಹಲಕಾರಿ ಸಂಗತಿಗಳು ಬೆಳಕಿಗೆ ಬಂದಿವೆ. ಈ ದಾಳಿಯ ದುಷ್ಕರ್ಮಿಗಳು Flipkart ನಲ್ಲಿಆಸಿಡ್ ಖರೀದಿಸಿರುವುದು ಬೆಳಕಿಗೆ ಬಂದಿದೆ.

  • Share this:

ಬೆಂಗಳೂರಿನ (Bengaluru) ಲ್ಲಿ ಕಳೆದ 5 ತಿಂಗಳ ಹಿಂದೆ ಯುವತಿ ಮೇಲೆ ಆ್ಯಸಿಡ್​ ದಾಳಿ (Acid Attack) ನಡೆದಿತ್ತು. ಭೀಕರ ದಾಳಿ ಇಡೀ ಬೆಂಗಳೂರು ಬೆಚ್ಚಿ ಬಿದ್ದಿತ್ತು. ನಂತರ ಆರೋಪಿಯನ್ನು ಅರೆಸ್ಟ್​ ಮಾಡಿ ಪೊಲೀಸರು (Police) ಜೈಲಿಗೆ ಕಳುಹಿಸಿದರು. ಜೈಲಿನಲ್ಲಿ ಆತ ತಾನೂ ಮಾಡಿದ ಕರ್ಮದ ಫಲವಾಗಿ ಗ್ಯಾಂಗ್ರೀನ್​ನಿಂದ ಬಳಲುತ್ತಿದ್ದಾನೆ. ಈ ಘಟನೆ ಬಳಿಕವೂ ದೇಶದಲ್ಲಿ ಒಂದಲ್ಲ ಒಂದು ಕಡೆ ಈ ಆ್ಯಸಿಡ್​ ದಾಳಿಗಳು ನಡೆಯುತ್ತಲೆ ಇವೆ. ಮೊನ್ನೆಯಷ್ಟು ದೆಹಲಿ (Delhi) ಯಲ್ಲಿ 17 ವರ್ಷದ ಯುವತಿ ಮೇಲೆ ಆ್ಯಸಿಡ್ ದಾಳಿ ನಡೆಸಿದ ಘಟನೆ ಸಂಚಲನ ಮೂಡಿಸಿದ್ದು ಗೊತ್ತೇ ಇದೆ. ಈ ಪ್ರಕರಣದ ತನಿಖೆ ನಡೆಸಿದಾಗ ಕುತೂಹಲಕಾರಿ ಸಂಗತಿಗಳು ಬೆಳಕಿಗೆ ಬಂದಿವೆ. ಈ ದಾಳಿಯ ದುಷ್ಕರ್ಮಿಗಳು Flipkart ನಲ್ಲಿಆಸಿಡ್ ಖರೀದಿಸಿರುವುದು ಬೆಳಕಿಗೆ ಬಂದಿದೆ.


ಫ್ಲಿಪ್​ಕಾರ್ಟ್​​ನಲ್ಲಿ ಆ್ಯಸಿಡ್​ ಖರೀದಿಸಿದ್ದ ಕಿರಾತಕರು!


ಇದರೊಂದಿಗೆ ಕೇಂದ್ರ ಸರ್ಕಾರ ಎಚ್ಚರಿಕೆ ನೀಡಿದೆ. ಕೇಂದ್ರ ಗ್ರಾಹಕ ವ್ಯವಹಾರಗಳು, ಆಹಾರ ಮತ್ತು ಸಾರ್ವಜನಿಕ ವಿತರಣಾ ಸಚಿವಾಲಯದ ಗ್ರಾಹಕ ವ್ಯವಹಾರಗಳ ವಿಭಾಗದ ಅಡಿಯಲ್ಲಿ ಕೇಂದ್ರೀಯ ಗ್ರಾಹಕ ರಕ್ಷಣಾ ಪ್ರಾಧಿಕಾರವು (CCPA) ಗ್ರಾಹಕರ ಹಕ್ಕುಗಳ ಉಲ್ಲಂಘನೆಯ ವಿರುದ್ಧ ಕಠಿಣ ಕ್ರಮ ಕೈಗೊಂಡಿದೆ. ಸಮಾಜದಲ್ಲಿ ಹೆಚ್ಚುತ್ತಿರುವ ಅಪರಾಧಗಳ ಹಿನ್ನೆಲೆಯಲ್ಲಿ, ಗ್ರಾಹಕರ ಹಿತಾಸಕ್ತಿಗಳನ್ನು ರಕ್ಷಿಸಲು CCPA ಮುಂದಾಗಿದೆ.


ಫ್ಲಿಪ್​ಕಾರ್ಟ್, ಮಿಶೋಗೆ ನೋಟಿಸ್​!


ಸಿಸಿಪಿಎ ಎರಡು ಇ-ಕಾಮರ್ಸ್ ಸಂಸ್ಥೆಗಳಿಗೆ ನೋಟಿಸ್ ಕಳುಹಿಸಿದೆ. ಫ್ಲಿಪ್​ಕಾರ್ಟ್​ ಇಂಟರ್ನೆಟ್ ಪ್ರೈವೇಟ್ ಲಿಮಿಟೆಡ್, ಫ್ಯಾಶ್‌ನಿಯರ್ ಟೆಕ್ನಾಲಜೀಸ್ ಪ್ರೈವೇಟ್ ಲಿಮಿಟೆಡ್ (meesho.com) ಪ್ಲಾಟ್‌ಫಾರ್ಮ್‌ಗಳಲ್ಲಿ ಆಸಿಡ್ ಮಾರಾಟಕ್ಕೆ ಸಂಬಂಧಿಸಿದಂತೆ ಈ ಸೂಚನೆಗಳನ್ನು ಕಳುಹಿಸಿದೆ. 7 ದಿನಗಳೊಳಗೆ ವಿವರವಾಗಿ ಪ್ರತಿಕ್ರಿಯಿಸುವಂತೆ ಈ ಸಂಸ್ಥೆಗಳಿಗೆ ಸೂಚಿಸಲಾಗಿದೆ. ಅಗತ್ಯ ದಾಖಲೆಗಳೊಂದಿಗೆ ತಮ್ಮ ಪ್ರತಿಕ್ರಿಯೆ ನೀಡುವಂತೆ ಸೂಚಿಸಲಾಗಿದೆ.


ಇದನ್ನೂ ಓದಿ: ಈ ರೀತಿ ಗ್ಯಾಸ್​ ಸಿಲಿಂಡರ್ ಬುಕ್​ ಮಾಡಿ, 1000 ರೂಪಾಯಿ ಕ್ಯಾಶ್​ಬ್ಯಾಕ್ ಪಡೆಯಿರಿ!


ಭಾರತದಲ್ಲಿ ಗ್ರಾಹಕರ ಹಿತಾಸಕ್ತಿಗಳನ್ನು ಮೇಲ್ವಿಚಾರಣೆ ಮಾಡುವ CCPA, ಈ ಇ-ಕಾಮರ್ಸ್ ಪ್ಲಾಟ್‌ಫಾರ್ಮ್‌ಗಳಲ್ಲಿ ಹೆಚ್ಚು ಅಪಾಯಕಾರಿ ಆಮ್ಲಗಳ ಮಾರಾಟವನ್ನು ಗುರುತಿಸಿದೆ. ಈ ವೇದಿಕೆಗಳಲ್ಲಿ ಆಮ್ಲಗಳು ಸುಲಭವಾಗಿ ಮತ್ತು ಅನಿಯಂತ್ರಿತವಾಗಿ ಲಭ್ಯವಿವೆ. ಅಪಾಯಕಾರಿ ಆಮ್ಲಗಳ ಸುಲಭ ಲಭ್ಯತೆಯು ಜನರಿಗೆ ಅಪಾಯಕಾರಿ ಮತ್ತು ಅಸುರಕ್ಷಿತವಾಗಿದೆ ಎಂದು ನಂಬಲಾಗಿದೆ.


7 ದಿನದಲ್ಲಿ ಉತ್ತರಿಸುವಂತೆ ಎಚ್ಚರಿಕೆ!


ಜನರ ಮೇಲೆ ಆಸಿಡ್ ದಾಳಿಯನ್ನು ತಡೆಗಟ್ಟುವ ಕ್ರಮಗಳು, ಬದುಕುಳಿದವರ ಚಿಕಿತ್ಸೆ ಮತ್ತು ಪುನರ್ವಸತಿ ಕುರಿತು ಸುಪ್ರೀಂ ಕೋರ್ಟ್ 2014 ರ ಆದೇಶವನ್ನು ನೆನಪಿಸಿಕೊಂಡಿದೆ. ಎಲ್ಲಾ ರಾಜ್ಯಗಳು ಮತ್ತು ಕೇಂದ್ರ ಸರ್ಕಾರದ ಘಟಕಗಳಿಂದ ಆ್ಯಸಿಡ್  ಮಾರಾಟವನ್ನು ನಿಯಂತ್ರಿಸಲು ಕೇಂದ್ರದಿಂದ ಈಗಾಗಲೇ ಮಾರ್ಗಸೂಚಿಗಳನ್ನು ನೀಡಲಾಗಿದೆ. ಈ ಇ-ಕಾಮರ್ಸ್ ಪ್ಲಾಟ್‌ಫಾರ್ಮ್‌ಗಳು ತಮ್ಮ ಉತ್ಪನ್ನಗಳನ್ನು ದೇಶಾದ್ಯಂತ ತಲುಪಿಸುವುದರಿಂದ, ಅವುಗಳನ್ನು ಪರಿಶೀಲಿಸಲು ತೆಗೆದುಕೊಳ್ಳುತ್ತಿರುವ ಕ್ರಮಗಳ ಬಗ್ಗೆ ವಿವರಗಳನ್ನು ಕೇಳಿದೆ.


ಇದನ್ನೂ ಓದಿ: ಶೀಘ್ರದಲ್ಲೇ ಜನಸಾಮಾನ್ಯರಿಗೆ ಬಿಗ್​ ಶಾಕ್, ಅಡುಗೆ ಎಣ್ಣೆ ಅಷ್ಟೇ ಅಲ್ಲ ಅದೂ ದುಬಾರಿನೇ!


ಮೀಶೋ ಪ್ಲಾಟ್‌ಫಾರ್ಮ್‌ನಲ್ಲಿ ಅಪಾಯಕಾರಿ ಆಮ್ಲಗಳು ಸಹ ಲಭ್ಯವಿವೆ ಎಂದು CCPA ತನಿಖೆಯಿಂದ ತಿಳಿದುಬಂದಿದೆ. ಸುಪ್ರೀಂ ಕೋರ್ಟ್ ಆದೇಶಗಳು ಮತ್ತು ಗೃಹ ಸಚಿವಾಲಯ ನೀಡಿದ ಸಲಹೆಯನ್ನು ಉಲ್ಲಂಘಿಸಿ ಅಂತಹ ಆಮ್ಲಗಳನ್ನು ಮಾರಾಟ ಮಾಡಲಾಗುತ್ತಿದೆ ಎಂದು ಅದು ಕಂಡುಹಿಡಿದಿದೆ. ಈ ಇ-ಕಾಮರ್ಸ್ ಕಂಪನಿಗಳು CCPA ಸೂಚನೆಗಳಿಗೆ ಪ್ರತಿಕ್ರಿಯಿಸದಿದ್ದರೆ ಅಥವಾ ನಿರ್ದೇಶನಗಳನ್ನು ಅನುಸರಿಸದಿದ್ದರೆ, ಗ್ರಾಹಕ ಸಂರಕ್ಷಣಾ ಕಾಯ್ದೆ, 2019 ರ ನಿಬಂಧನೆಗಳ ಅಡಿಯಲ್ಲಿ ಕಟ್ಟುನಿಟ್ಟಾಗಿ ವ್ಯವಹರಿಸಲಾಗುವುದು ಎಂದು CCPA ಹೇಳಿದೆ.

Published by:ವಾಸುದೇವ್ ಎಂ
First published: