• ಹೋಂ
  • »
  • ನ್ಯೂಸ್
  • »
  • ಬ್ಯುಸಿನೆಸ್
  • »
  • Electric Vehicles: ಎಲೆಕ್ಟ್ರಿಕ್​ ವಾಹನಗಳ ಸಬ್ಸಿಡಿ ಬಗ್ಗೆ ಬಿಗ್​ ಅಪ್​ಡೇಟ್​! ಸೆಪ್ಟೆಂಬರ್​ 1 ರಿಂದ ಹೊಸ ನಿಯಮ ಜಾರಿ

Electric Vehicles: ಎಲೆಕ್ಟ್ರಿಕ್​ ವಾಹನಗಳ ಸಬ್ಸಿಡಿ ಬಗ್ಗೆ ಬಿಗ್​ ಅಪ್​ಡೇಟ್​! ಸೆಪ್ಟೆಂಬರ್​ 1 ರಿಂದ ಹೊಸ ನಿಯಮ ಜಾರಿ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಗುಣಮಟ್ಟವಿಲ್ಲದ ಬಿಡಿ ಭಾಗಗಳನ್ನು ಅಳವಡಿಸಿ ಕಂಪನಿಗಳು ವಾಹನಗಳನ್ನು ತಯಾರಿಸುತ್ತಿವೆ ಎಂದು ಸರ್ಕಾರ ಈ ಬಗ್ಗೆ ಹೆಚ್ಚಿನ ಗಮನ ಹರಿಸಿತ್ತು. ಕೆಲವೆಡೆ  ವಿದ್ಯುತ್​ ಚಾಲಿತ ವಾಹನಗಳಿಗೆ ಬೆಂಕಿ ಹಚ್ಚಿಕೊಂಡಿದ್ದ ಘಟನೆಗಳು ಆಗಾಗ ನಡೆಯುತ್ತಿವೆ.

  • Share this:

ಮೊದಲೆಲ್ಲಾ ದ್ವಿಚಕ್ರ ವಾಹನ (Two Wheler) ಕೊಂಡುಕೊಳ್ಳುವುದು ಅಂದರೆ ವಿಮಾನ ಕೊಂಡುಕೊಳ್ಳುವಂತೆ ಫೀಲ್​ ಇತ್ತು. ಹಣ (Money) ಹೆಚ್ಚು ಅಂತೇನಲ್ಲ. ಅದೊಂದು ರೀತಿಯ ಪ್ರತಿಷ್ಠೆ ಎಂದರೆ ತಪ್ಪಾಗಲ್ಲ. ಈಗೆಲ್ಲಾ ಎಲ್ಲೇ ನೋಡಿದರೂ ಗಾಡಿಗಳದ್ದೇ ಅಬ್ಬರ. ಪ್ರತಿ ಮನೆ (House) ಗೂ ಕಡಿಮೆ ಅಂದರೆ ಎರಡು ದ್ವಿಚಕ್ರ  ವಾಹಗಳಿರುತ್ತೆ. ಈಗೆಲ್ಲಾ ಗಾಡಿ ಖರೀದಿಸುವುದು 5 ನಿಮಿಷದ ಕೆಲಸ. ಯಾರೂ ಬೇಕಾದರೂ ದ್ವಿಚಕ್ರ ವಾಹನ ಖರೀದಿ ಮಾಡಬಹುದು. ಅದ್ರಲ್ಲೂ ಈಗ ಎಲೆಕ್ಟ್ರಿಕ್​ ವಾಹನಗಳ (Electric Vehicles) ಅಬ್ಬರ ಎಂದರೇ ತಪ್ಪಾಗಲ್ಲ. ಹೆಚ್ಚು ಜನರು ಎಲೆಕ್ಟ್ರಿಕ್​ ವಾಹನಗಳ ಮೊರೆ ಹೋಗುತ್ತಿದ್ದಾರೆ. ಎಲೆಕ್ಟ್ರಿಕ್ ವಾಹನ ಸಬ್ಸಿಡಿ (Electric Vehicle Subsidy) ಮತ್ತು ಪಿಎಲ್‌ಐ (PLI) ಯೋಜನೆಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ಕೆಲವು ನಿಯಮಗಳನ್ನು ಬಿಗಿಗೊಳಿಸಿದೆ. 


ಸಬ್ಸಿಡಿ ನಿಯಮಗಳಲ್ಲಿ ಬದಲಾವಣೆ!


ಇಲ್ಲಿಯವರೆಗೆ, ಕಂಪನಿಗಳು ARI ಅಥವಾ ITR ನಲ್ಲಿ ಇ-ವಾಹನಗಳನ್ನು ಪರೀಕ್ಷಿಸುತ್ತಿವೆ. ಕಂಪನಿಗಳು ಇ-ವಾಹನಗಳಿಗೆ ಭಾಗಗಳನ್ನು ಸೋರ್ಸಿಂಗ್ ಮತ್ತು ಪರೀಕ್ಷೆ ಮಾಡುವ ಮೂಲಕ ಸಬ್ಸಿಡಿ ನೀಡುತ್ತಿವೆ. ಇತ್ತೀಚಿಗೆ ಎಲೆಕ್ಟ್ರಿಕ್ ವಾಹನಗಳು ಬೆಂಕಿಗೆ ಆಹುತಿಯಾದ ಘಟನೆಗಳು ನಡೆದಿವೆ. ಇದನ್ನು ಗಮನದಲ್ಲಿಟ್ಟುಕೊಂಡು ಸರ್ಕಾರವು ಗ್ರಾಹಕರ ಸುರಕ್ಷತೆ ಮತ್ತು ಇ-ವಾಹನಗಳ ನ್ಯೂನತೆಗಳ ಬಗ್ಗೆ ಗಮನ ಹರಿಸಿದೆ.


ಗುಣಮಟ್ಟದ ಬಿಡಿ ಭಾಗಗಳ ಬಗ್ಗೆ ಹೆಚ್ಚಿನ ಗಮನ!


ಗುಣಮಟ್ಟವಿಲ್ಲದ ಬಿಡಿ ಭಾಗಗಳನ್ನು ಅಳವಡಿಸಿ ಕಂಪನಿಗಳು ವಾಹನಗಳನ್ನು ತಯಾರಿಸುತ್ತಿವೆ ಎಂದು ಸರ್ಕಾರ ಈ ಬಗ್ಗೆ ಹೆಚ್ಚಿನ ಗಮನ ಹರಿಸಿತ್ತು. ಕೆಲವೆಡೆ  ವಿದ್ಯುತ್​ ಚಾಲಿತ ವಾಹನಗಳಿಗೆ ಬೆಂಕಿ ಹಚ್ಚಿಕೊಂಡಿದ್ದ ಘಟನೆಗಳು ಆಗಾಗ ನಡೆಯುತ್ತಿವೆ. ಜೊತೆಗೆ ಹಲವು ಮಂದಿ ಎಲೆಕ್ಟಿಕ್​ ವಾಹನಗಳಿಗೆ ತಮ್ಮ ಕೈಯಾರೆ ಬೆಂಕಿ ಇಟ್ಟಿದ್ದರು. ಅದೇ ಸಮಯದಲ್ಲಿ, ಪರೀಕ್ಷೆಗೆ ಕಳುಹಿಸಲಾದ ವಾಹನಗಳಲ್ಲಿ ಉತ್ತಮ ಗುಣಮಟ್ಟದ ಬಿಡಿಭಾಗಗಳನ್ನು ಅಳವಡಿಸುವ ಮೂಲಕ ಕಂಪನಿಗಳು ಪ್ರಮಾಣೀಕರಣವನ್ನು ಪಡೆಯುತ್ತವೆ ಎಂದು ನಂಬಲಾಗಿತ್ತು. ಅದೇ ವೇಳೆ ಗ್ರಾಹಕರಿಗೆ ನೀಡುವ ಇ-ವಾಹನಗಳಲ್ಲಿ ಕಡಿಮೆ ಗುಣಮಟ್ಟದ ಬಿಡಿ ಭಾಗಗಳನ್ನು ಬಳಸಲಾಗುತ್ತಿದೆ. ಈ ಎಲ್ಲ ಅಂಶಗಳನ್ನು ಪರಿಗಣಿಸಿ ಸರ್ಕಾರ ಸಬ್ಸಿಡಿ ಮತ್ತು ಪಿಎಲ್‌ಐ ಯೋಜನೆ ನಿಯಮಗಳನ್ನು ಬಿಗಿಗೊಳಿಸಿದೆ.


ಇದನ್ನೂ ಓದಿ: ಹಳ್ಳಿಯಲ್ಲಿದ್ದುಕೊಂಡೇ ಈ ವ್ಯವಹಾರ ಆರಂಭಿಸಿ, ಕೈ ತುಂಬ ಹಣ ಗಳಿಸಿ


ಹೊಸ ನಿಯಮಗಳಿಂದ ಏನು ಪ್ರಯೋಜನ?


ಸರ್ಕಾರದ ಹೊಸ ನಿಯಮಗಳ ಪ್ರಕಾರ, ಪ್ರತಿ ಇ-ವಾಹನದಲ್ಲಿ ಬಳಸುವ ಬಿಡಿಭಾಗಗಳ ಮೂಲದ ಸಂಪೂರ್ಣ ಮಾಹಿತಿಯನ್ನು ಕಂಪನಿಗಳು ಒದಗಿಸಬೇಕಾಗುತ್ತದೆ. CNBC TV18 ವರದಿಯ ಪ್ರಕಾರ, ಎಂಟರ್‌ಪ್ರೈಸ್ ರಿಸೋರ್ಸ್ ಪ್ಲಾನಿಂಗ್ ಅನ್ನು ಈಗ FAME-2 ಗೆ ಲಿಂಕ್ ಮಾಡಬೇಕಾಗುತ್ತದೆ. ಇದು ಇ-ವಾಹನಗಳನ್ನು ಸುರಕ್ಷಿತವಾಗಿಸುವುದಲ್ಲದೆ ಸ್ಥಳೀಯ ಬಿಡಿಭಾಗಗಳ ತಯಾರಕರನ್ನು ಉತ್ತೇಜಿಸಲು ಸಹಾಯ ಮಾಡುತ್ತದೆ. ಇದರಿಂದ ವಾಹನಗಳಲ್ಲಿ ಉತ್ತಮ ಗುಣಮಟ್ಟದ ಬಿಡಿಭಾಗಗಳ ಬಳಕೆ ಮತ್ತು ಕಾರುಗಳಿಗೆ ಬೆಂಕಿ ಹಚ್ಚುವ ಘಟನೆಗಳು ಕಡಿಮೆಯಾಗುತ್ತವೆ ಎಂದು ಸರ್ಕಾರ ನಂಬಿದೆ.


ಇದನ್ನೂ ಓದಿ: ನಿಮ್​ ಹತ್ರ ಎಸ್​ಬಿಐ ಡೆಬಿಟ್ ಕಾರ್ಡ್ ಇದ್ಯಾ? ಹಾಗಿದ್ರೆ, ಸುಲಭವಾಗಿ ಪಿನ್​ ಇಲ್ಲದೆ ಪೇಮೆಂಟ್ ಮಾಡ್ಬಹುದು


ಎಲೆಕ್ಟ್ರಿಕ್ ವಾಹನ ತಯಾರಕರು ಇ-ವಾಹನಗಳಲ್ಲಿ ಬಳಸುವ ಭಾಗಗಳ ಮೂಲ ಕಂಪನಿಗೆ ಸಂಬಂಧಿಸಿದ ಎಲ್ಲಾ ಮಾಹಿತಿಯನ್ನು ಚಾರ್ಟರ್ಡ್ ಅಕೌಂಟೆಂಟ್‌ನಿಂದ ಪ್ರಮಾಣೀಕರಿಸಬೇಕು. ಇದು ಕಂಪನಿಗಳು ಕಡಿಮೆ ಗುಣಮಟ್ಟದ ಬಿಡಿಭಾಗಗಳನ್ನು ಬಳಸುವುದನ್ನು ವಿರೋಧಿಸುತ್ತದೆ ಮತ್ತು ಇ-ವಾಹನಗಳಲ್ಲಿ ಉತ್ತಮ ಭಾಗಗಳನ್ನು ಬಳಸುತ್ತದೆ. CNBC TV18 ವರದಿಯ ಪ್ರಕಾರ, ಇ-ವಾಹನಗಳಿಗೆ ಕಟ್ಟುನಿಟ್ಟಾದ ಹೊಸ ನಿಯಮಗಳನ್ನು ಸೆಪ್ಟೆಂಬರ್ 1, 2022 ರಿಂದ ಜಾರಿಗೆ ತರಲಾಗುವುದು.


top videos
    First published: