• Home
 • »
 • News
 • »
 • business
 • »
 • NFTಗಳು ಬಾಲಿವುಡ್ ಮತ್ತು ಕ್ರಿಕೆಟ್ ಅನ್ನು ಚಂಡಮಾರುತದಂತೆ ಆವರಿಸಿವೆ. ಅವುಗಳ ಬಗ್ಗೆ ನೀವು ತಿಳಿದಿರಬೇಕಾದ ಸಂಗತಿ ಇಲ್ಲಿದೆ

NFTಗಳು ಬಾಲಿವುಡ್ ಮತ್ತು ಕ್ರಿಕೆಟ್ ಅನ್ನು ಚಂಡಮಾರುತದಂತೆ ಆವರಿಸಿವೆ. ಅವುಗಳ ಬಗ್ಗೆ ನೀವು ತಿಳಿದಿರಬೇಕಾದ ಸಂಗತಿ ಇಲ್ಲಿದೆ

ಪ್ರಾತಿನಿಧಿಕ ಚಿತ್ರ

ಪ್ರಾತಿನಿಧಿಕ ಚಿತ್ರ

NFTಗಳು ಯಾವುದೇ ಡಿಜಿಟಲ್ ಸ್ವತ್ತು ಆಗಿರಬಹುದು, ಕಲಾಕೃತಿಯಿಂದ ಹಿಡಿದು ಮೋಷನ್ ಪೋಸ್ಟರ್‌ಗಳ ಪೇಂಟಿಂಗ್‌ಗಳು, ಸಂಗೀತ ಕೃತಿಗಳು, ಗೇಮ್ ಪ್ಲೇ, ವೀಡಿಯೊ ಪೋಸ್ಟ್‌ಗಳು, ಮೆಮೆಗಳು ಅಥವಾ ಅಷ್ಟೇ ಯಾಕೆ ಸಾಮಾಜಿಕ ಮಾಧ್ಯಮದ ಪೋಸ್ಟ್‌ಗಳವರೆಗೆ ಯಾವುದಾದರೂ ಆಗಬಹುದು! Twitterನ ಜಾಕ್ ಡಾರ್ಸೆ, ತಮ್ಮ ಮೊದಲ ಟ್ವೀಟ್ ಅನ್ನು ಈ ವರ್ಷದ ಮಾರ್ಚ್‌ನಲ್ಲಿ ಒಂದು NFT ಆಗಿ $2.9 ಮಿಲಿಯನ್‌ಗೂ ಹೆಚ್ಚಿನ ಮೊತ್ತಕ್ಕೆ ಮಾರಾಟ ಮಾಡಿದರು.

ಮುಂದೆ ಓದಿ ...
 • Share this:

  ಸೆಲೆಬ್ರಿಟಿಗಳು ಮತ್ತು ಕ್ರಿಕೆಟರ್‌ಗಳು ಸಮಾನವಾದ ಪ್ಯಾಷನ್‌ನಿಂದಾಗಿ ಇತ್ತೀಚಿನ ದಿನಗಳಲ್ಲಿ ಸುದ್ದಿಯಲ್ಲಿದ್ದಾರೆ. ಸ್ವಲ್ಪ ಇರಿ, ಅದು ನೀವು ಅಂದುಕೊಂಡಿರುವ IPL ಅಲ್ಲ, ಅದು NFTಗಳು ಎಂದು ಕರೆಯುವುದರ ಬಗ್ಗೆ. ಚಿತ್ರರಂಗದ ಅಮಿತಾಬ್ ಬಚ್ಚನ್ ಮತ್ತು ಸಲ್ಮಾನ್ ಖಾನ್‌ರಿಂದ ಹಿಡಿದು ಕ್ರಿಕೆಟರ್‌ಗಳಾದ ಜಹೀರ್ ಖಾನ್ ಮತ್ತು ದಿನೇಶ್ ಕಾರ್ತಿಕ್ ಅವರವರೆಗೆ, ಇತ್ತೀಚಿನ ದಿನಗಳಲ್ಲಿ ಎಲ್ಲರನ್ನೂ ಸಮ್ಮೋಹಿನಿಯಂತೆ ಆವರಿಸಿಕೊಂಡಿರುವುದು ಬಹುಶಃ NFTಗಳು.


  ಹಾಗಾದರೆ ಖಚಿತವಾಗಿ NFTಗಳು ಎಂದರೆ ಏನು? ಮತ್ತು ನೀವು ಅವುಗಳಲ್ಲಿ ಹೂಡಿಕೆ ಮಾಡಬೇಕೆ? ಖಂಡಿತವಾಗಿಯೂ 2021ರ ಜನಪ್ರಿಯವಾದ ಆಕರ್ಷಕ ಪದವಾಗಿರುವ, NFTಗಳ ಮೋಹಕ ಪ್ರಪಂಚದ ಆಳಕ್ಕಿಳಿದು ಅವುಗಳ ಬಗ್ಗೆ ತಿಳಿದುಕೊಳ್ಳೋಣ ಬನ್ನಿ.


  NFTಗಳು ಎಂದರೇನು?


  ನಾನ್-ಫಂಜಿಬಲ್ ಟೋಕನ್ ಎಂಬುದನ್ನು ಚಿಕ್ಕದಾಗಿ NFTಗಳು ಎನ್ನುವರು; ಇವುಗಳು ವರ್ಚುವಲ್ ಸ್ವತ್ತುಗಳಾಗಿದ್ದು, ಯಾವುದೇ ಭೌತಿಕ ಅಥವಾ ವಸ್ತುರೂಪವನ್ನು ಹೊಂದಿರುವುದಿಲ್ಲ ಆದರೆ, ಸ್ವತ್ತಿನ ಒಂದು ಭಾಗವಾಗಿ ಅದನ್ನು ಮಾರಾಟ ಮಾಡಬಹುದು, ಹಾಗಾಗಿ ಮಾಲೀಕರು ಮಾತ್ರ ಸ್ವತ್ತಿನ ನೈಜ ಪ್ರತಿಯನ್ನು ಹೊಂದಿರುತ್ತಾರೆ. ಇದನ್ನು ಇನ್ನಷ್ಟು ವಿವರವಾಗಿ ತಿಳಿದುಕೊಳ್ಳೋಣ.


  ಫಂಜಿಬಲ್ ಎಂದರೆ ವಿನಿಮಯ ಮಾಡಿಕೊಳ್ಳಲು ಸಾಧ್ಯವಾಗುವಂತಹುದು – ಅಂದರೆ ಐವತ್ತು ರೂಪಾಯಿಯ ಒಂದು ನೋಟನ್ನು ಇನ್ನೊಂದು ಐವತ್ತು ರೂಪಾಯಿಯ ನೋಟಿನೊಂದಿಗೆ ವಿನಿಮಯ ಮಾಡಿಕೊಳ್ಳಬಹುದು, ಇಲ್ಲಿ ವಿನಿಮಯ ಮಾಡಿಕೊಳ್ಳಲಾಗುವ ಆ ನಿರ್ದಿಷ್ಟ ನೋಟಿನ ಮಾಲೀಕತ್ವದ ಹಕ್ಕು ಯಾರದ್ದು ಎಂಬ ಪ್ರಶ್ನೆ ಉದ್ಭವಿಸುವುದಿಲ್ಲ. ವಾಸ್ತವವಾಗಿ, ವಿನಿಮಯ ಸಾಧ್ಯತೆಯು, ಕೇಂದ್ರೀಯ ಬ್ಯಾಂಕ್‌ಗಳು ಒದಗಿಸುವ ಮಾನ್ಯ ಕರೆನ್ಸಿಗಳನ್ನು ವ್ಯಾಪಾರಕ್ಕಾಗಿ ವಿನಿಮಯದ ಒಂದು ಮಾಧ್ಯಮವನ್ನಾಗಿ ಮಾಡಿಕೊಳ್ಳಲು ಅನುಮತಿಸುತ್ತದೆ.


  ಇನ್ನೊಂದೆಡೆ, ಈಗ ಮಾತನಾಡುತ್ತಿರುವ ನಾನ್-ಫಂಜಿಬಲ್ ಟೋಕನ್‌ಗಳು ಅಥವಾ ಸ್ವತ್ತು, ವಿನಿಮಯ ಮಾಡಿಕೊಳ್ಳಲು ಸಾಧ್ಯವಾಗದಂತಹುದು. ಹಾಗಾಗಿ, ಯಾವುದೇ ಕಲಾಕೃತಿ ಅಥವಾ ಸ್ವತ್ತಿನ ಒಂದು ಭಾಗವನ್ನು NFTಯಾಗಿ ಖರೀದಿಸಿದರೆ, ಅದು ಅನನ್ಯವಾಗಿರುತ್ತದೆ ಮತ್ತು ಅದರ ನೈಜ ಪ್ರತಿಯು ಯಾವಾಗಲೂ ಮಾಲೀಕರೊಂದಿಗೆ ಇರುತ್ತದೆ. ಆದ್ದರಿಂದ, ವಿನಿಮಯ ಮಾಡಿಕೊಳ್ಳಲು ಸಾಧ್ಯವಾಗದಿರುವ, ಡಿಜಿಟಲ್ ಸ್ವತ್ತುಗಳ ರೂಪದಲ್ಲಿ ಸಂಗ್ರಹಿಸಬಹುದಾದ ಐಟಂಗಳು ಎಂದು NFTಗಳನ್ನು ನೋಡಬಹುದು.  


  NFT ಮಾಲೀಕತ್ವವು ಹೇಗೆ ಕಾರ್ಯನಿರ್ವಹಿಸುತ್ತದೆ?


  NFTಗಳ ವಿಷಯಕ್ಕೆ ಬಂದರೆ Ethereum ಇತರರಿಗಿಂತ ಮುಂದಿದೆ. ನೀವು INR ಬಳಸಿಕೊಂಡು ಕ್ರಿಪ್ಟೊ ಎಕ್ಸ್‌ಚೇಂಜ್ ಆಗಿರುವ ZebPay ಯಲ್ಲಿ Ether ಅನ್ನು ಖರೀದಿಸಬಹುದು. Ether ಎಂಬುದು Ethereum Network ನೆಟ್‌ವರ್ಕ್‌ನಲ್ಲಿರುವ ಕ್ರಿಪ್ಟೊಕರೆನ್ಸಿಯಾಗಿದ್ದು, ಆ ನೆಟ್‌ವರ್ಕ್ ಬ್ಲಾಕ್‌ಚೈನ್ ಆಗಿದೆ. ನೆನಪಿಡಿ, ಕ್ರಿಪ್ಟೊಕರೆನ್ಸಿಯ ಮೌಲ್ಯವೂ ಸಹ ಫಂಜಿಬಲ್, ಹಾಗಾಗಿ ನೀವು ಹೊಂದಿರುವ ಒಂದು Ether ನಿಮ್ಮ ಸ್ನೇಹಿತ ಹೊಂದಿರುವ ಒಂದು Ether ಎರಡೂ ಒಂದೇ ಆಗುತ್ತವೆ. 


  ಈ ಬಗ್ಗೆ ಹೇಳುವುದಾದರೆ, Ethereum ಬ್ಲಾಕ್‌ಚೈನ್ ಬಳಸಿಕೊಂಡು ನೀವು ಒಮ್ಮೆ NFTಯನ್ನು ರಚಿಸಿದರೆ, ಅದೊಂದು ಅವಶ್ಯಕವಾಗಿ ವಿಶಿಷ್ಟವಾಗಿರುವ ಟೋಕನ್‌ ಆಗಿರುತ್ತದೆ, ನೀವು ಅದರ ಮಾಲೀಕತ್ವವನ್ನು ಹೊಂದುತ್ತೀರಿ ಹಾಗೂ ಅತಿ ಹೆಚ್ಚು ಬಿಡ್ ಮಾಡುವವರಿಗೆ ಅದನ್ನು ಹರಾಜು ಹಾಕಬಹುದು. NFTಯನ್ನು ಖರೀದಿಸುವುದು ಎಂದರೆ ಕ್ರಿಪ್ಟೊಕರೆನ್ಸಿಯಲ್ಲಿನ ಹರಾಜಿನ ದರಕ್ಕೆ ಪಾವತಿಸುವುದು ಮತ್ತು ನಂತರ ನಿಮ್ಮ ಹೆಸರು ಸೇರಿಸಲಾದ ನಿಮ್ಮದೇ ಆದ ಸ್ವಂತ ವಿಶಿಷ್ಟ ಕಲಾಕೃತಿಯನ್ನು ಸಂಗ್ರಹಿಸಿ, ನಿಮ್ಮ ಮಾಲೀಕತ್ವವನ್ನು ತೋರಿಸಲು ಅದನ್ನು ಬ್ಲಾಕ್‌ಚೈನ್‌ಗೆ ಸೇರಿಸಿದಷ್ಟು ಸುಲಭವಾಗಿದೆ. NFTಯನ್ನು ಖರೀದಿಸಿರುವ ಒಬ್ಬ ವ್ಯಕ್ತಿಯು ಅದನ್ನು ಬೇರೊಬ್ಬ ಆಸಕ್ತ ವ್ಯಕ್ತಿಗೆ ಮಾರಾಟ ಮಾಡಬಹುದು, ಆದರೂ ತನ್ನ ಡಿಜಿಟಲ್ ಇತಿಹಾಸವನ್ನು ನಿರ್ವಹಿಸಲು, NFT ರಚಿಸಿದವರ ಹೆಸರು ಮತ್ತು ನಂತರದ ಮಾಲೀಕರ ಹೆಸರನ್ನು ಬ್ಲಾಕ್‌ಚೈನ್ ಪ್ಲಾಟ್‌ಫಾರ್ಮ್ ಯಾವಾಗಲೂ ಬಹಿರಂಗಪಡಿಸುತ್ತದೆ. 


  NFTಗಳು ಯಾವುದೇ ಡಿಜಿಟಲ್ ಸ್ವತ್ತು ಆಗಿರಬಹುದು, ಕಲಾಕೃತಿಯಿಂದ ಹಿಡಿದು ಮೋಷನ್ ಪೋಸ್ಟರ್‌ಗಳ ಪೇಂಟಿಂಗ್‌ಗಳು, ಸಂಗೀತ ಕೃತಿಗಳು, ಗೇಮ್ ಪ್ಲೇ, ವೀಡಿಯೊ ಪೋಸ್ಟ್‌ಗಳು, ಮೆಮೆಗಳು ಅಥವಾ ಅಷ್ಟೇ ಯಾಕೆ ಸಾಮಾಜಿಕ ಮಾಧ್ಯಮದ ಪೋಸ್ಟ್‌ಗಳವರೆಗೆ ಯಾವುದಾದರೂ ಆಗಬಹುದು! Twitterನ ಜಾಕ್ ಡಾರ್ಸೆ, ತಮ್ಮ ಮೊದಲ ಟ್ವೀಟ್ ಅನ್ನು ಈ ವರ್ಷದ ಮಾರ್ಚ್‌ನಲ್ಲಿ ಒಂದು NFT ಆಗಿ $2.9 ಮಿಲಿಯನ್‌ಗೂ ಹೆಚ್ಚಿನ ಮೊತ್ತಕ್ಕೆ ಮಾರಾಟ ಮಾಡಿದರು.


  NFTಗಳ ದರ ಎಷ್ಟು ಆಗುತ್ತದೆ?


  ಡಿಜಿಟಲ್ ಕಲಾವಿದ ಬೀಪಲ್ ಅವರು ‘Everydays’ ಎಂದು ಕರೆಯಲಾಗುವ ತಮ್ಮ NFTಯನ್ನು ಭಾರೀ ಮೊತ್ತವಾದ $69 ಮಿಲಿಯನ್‌ಗೆ ಮಾರಾಟ ಮಾಡಿದ ನಂತರ NFTಗಳು ವಿಶ್ವದಾದ್ಯಂತ ಎಲ್ಲರ ಗಮನ ಸೆಳೆಯಲು ಆರಂಭಿಸಿದವು. ಅಂದಿನಿಂದ, ಮಿಲಿಯನ್‌ಗಟ್ಟಲೆ ಡಾಲರ್‌ಗಳಾಗಿ ಹರಿದು ಹೋಗುವ ಎಲ್ಲಾ ವಿಧದ NFTಗಳನ್ನು ಖರೀದಿಸಲು ಮತ್ತು ಮಾರಾಟ ಮಾಡಲು ಶುರು ಮಾಡಿದರು. ಮೆಮೆಗಳಾದ ‘Disaster Girl’ ಎಂಬುದು $473,000 ಮೊತ್ತಕ್ಕೆ ಹಾಗೂ ‘Nyan Cat’ ಎಂಬುದು $590,000 ಮೊತ್ತಕ್ಕೆ ಮಾರಾಟವಾದವು. ಇತರ ಜನಪ್ರಿಯ NFTಗಳಲ್ಲಿ ಮುಖ್ಯವಾಗಿ Rick ಮತ್ತು Morty, Cryptopunks, ಮತ್ತು World Wide Webನ ನೈಜ ಮೂಲ ಕೋಡ್‌ಗಳು ಸೇರಿವೆ.


  ಭಾರತದ ಸಂಪರ್ಕ-


  NFTಗಳು ಭಾರತದಲ್ಲಿಯೂ ಸಹ ಒಂದು ಬಜ್‌ವರ್ಡ್ ಆಗಿ ಜನಪ್ರಿಯವಾಗುತ್ತಿದೆ. ನಟ ಅಮಿತಾಬ್ ಬಚ್ಚನ್ ತಮ್ಮದೇ ಆದ NFTಗಳನ್ನು ಲಾಂಚ್ ಮಾಡಿದ್ದು, ಅವು ಅವರ ಜೀವನ ಮತ್ತು ಇದೇ ನಟ BeyondLife ಎಂಬ ವೇದಿಕೆಯಲ್ಲಿ ನಿರೂಪಿಸಿರುವ, ಅವರ ತಂದೆ ಹರಿವಂಶ್‌ರಾಯ್ ಬಚ್ಚನ್ ಅವರ ಅದ್ಭುತ ಕವಿತಾ ಸಂಕಲನ, ‘ಮಧುಶಾಲಾ’ದ ಥೀಮ್ ಅನ್ನು ಹೊಂದಿವೆ. ತಮ್ಮದೇ ಆದ ವಿಶಿಷ್ಟ, ಹ್ಯಾಂಡ್-ಅನಿಮೇಟೆಡ್ ಕಲಾಕೃತಿಗಳ ಮೂಲಕ ತಮ್ಮ NFT ಸಂಗ್ರಹವನ್ನು ಲಾಂಚ್ ಮಾಡಿರುವ ಸನ್ನಿ ಲಿಯೋನ್, ಸ್ವಂತ NFT ಲಾಂಚ್ ಮಾಡಿದ ಮೊದಲ ಬಾಲಿವುಡ್ ನಟಿ ಎನಿಸಿದ್ದಾರೆ. BollyCoin ಎಂಬ ಪ್ಲಾಟ್‌ಫಾರ್ಮ್‌ನಲ್ಲಿ ನಟ ಸಲ್ಮಾನ್ ಖಾನ್ ಅವರೂ ಸಹ NFTಗಳ ಪ್ರಪಂಚಕ್ಕೆ ತಮ್ಮ ಪ್ರವೇಶವನ್ನು ಘೋಷಿಸಿದ್ದಾರೆ.


  ಈ ವಿಚಾರದಲ್ಲಿ ಕ್ರಿಕೆಟರ್‌ಗಳೇನೂ ಹಿಂದೆ ಬಿದ್ದಿಲ್ಲ. ನಿದಹಾಸ್ T20 ಸರಣಿಯ ಬಾಂಗ್ಲಾದೇಶ ವಿರುದ್ಧದ ಪಂದ್ಯದ ಕೊನೆಯ-ಎಸೆತದಲ್ಲಿ ತಾವು ಬಾರಿಸಿದ ಸಿಕ್ಸ್ ಅನ್ನು ದಿನೇಶ್ ಕಾರ್ತಿಕ್ ಅವರು NFT ಆಗಿ ರೂಪಿಸಿದ್ದಾರೆ. ರಿಷಬ್ ಪಂತ್ ಅವರ ಕ್ರಿಕೆಟ್‌ನ ಅವಿಸ್ಮರಣೀಯ ಕ್ಷಣಗಳಿಗೆ ಪರವಾನಗಿ ನೀಡಲು, ಅವರ ಐಕಾನಿಕ್ ಕ್ರಿಕೆಟ್ ಕ್ಷಣಗಳ ಎಕ್ಸ್‌ಕ್ಲೂಸಿವ್ ಡಿಜಿಟಲ್ ಸಂಗ್ರಹಣೆಗಳನ್ನು ರಚಿಸಲು ಸಮರ್ಪಿತವಾಗಿರುವ Rario ಪ್ಲಾಟ್‌ಫಾರ್ಮ್‌ಗೆ ಪಂತ್ ಅವರು ಸೇರಿಕೊಂಡಿದ್ದಾರೆ.  


  ನಟ ವಿಶಾಲ್ ಮಲ್ಹೋತ್ರಾ ಹಾಗೂ ರ್ಯಾಪರ್ ರಫ್ತಾರ್ ಅವರೂ ಸಹ NFTಗಳ ಬಗ್ಗೆ ಒಲವು ತೋರಿಸಿದ್ದಾರೆ. ಅದೇ ರೀತಿ, ಸಿಂಗಪುರ ಮೂಲದ ಬ್ಲಾಕ್‌ಚೈನ್ ಪ್ಲಾಟ್‌ಫಾರ್ಮ್ ಆಗಿರುವ Cricket Foundation, ಕ್ರಿಕೆಟರ್‌ಗಳಾದ ವಿ.ವಿ.ಎಸ್. ಲಕ್ಷ್ಮಣ್, ಪಾರ್ಥೀವ್ ಪಟೇಲ್, ಆರ್.ಪಿ. ಸಿಂಗ್, ಪೀಯೂಷ್ ಚಾವ್ಲಾ, ದೀಪ್ ದಾಸ್‌ಗುಪ್ತಾ, ಪ್ರಗ್ಯಾನ್ ಓಝಾ ಸೇರಿದಂತೆ ಇತರ ಕ್ರಿಕೆಟರ್‌ಗಳ ಸಾಧನೆಯ ಕ್ಷಣಗಳ NFTಗಳನ್ನು ಬಿಡುಗಡೆ ಮಾಡುವುದಾಗಿ ಘೋಷಿಸಿದೆ.


  NFTಗಳ ಸುತ್ತ ಇಷ್ಟೆಲ್ಲಾ ಆಗುತ್ತಿರುವಾಗ, ಈ ಡಿಜಿಟಲ್ ಸ್ವತ್ತುಗಳ ಸುತ್ತ ಇರುವ ಮೇನಿಯಾ ಈಗಷ್ಟೇ ಆರಂಭವಾಗಿದೆ ಎಂದು ಭಾವಿಸಬಹುದು. NFTಗಳು ಎಂದರೆ ಏನು ಎಂಬುದು ನಿಮಗೀಗ ಗೊತ್ತಾಗಿದೆ, ಈ ವ್ಯಕ್ತಿಗಳಿಂದ ಶೀಘ್ರದಲ್ಲೇ ಬರಬಹುದಾದ ಇನ್ನಷ್ಟು ಘೋಷಣೆಗಳಿಗಾಗಿ ನಿರೀಕ್ಷಿಸಿ ಮತ್ತು ನಿಮ್ಮ ಸಂಗ್ರಹದಲ್ಲಿ ನಿಮ್ಮ ನೆಚ್ಚಿನ ಕ್ರಿಕೆಟರ್ ಅಥವಾ ಬಾಲಿವುಡ್ ವ್ಯಕ್ತಿತ್ವವನ್ನು ಅನಾವರಣಗೊಳಿಸುವ NFTಯನ್ನು ಹೊಂದುವ ಮೊದಲಿಗರಲ್ಲಿ ನೀವೂ ಒಬ್ಬರಾಗಬಹುದು.  


  ನಿಮ್ಮ ಸ್ವಂತ ಕ್ರಿಪ್ಟೊಕರೆನ್ಸಿ ಪ್ರಯಾಣವನ್ನು ಪ್ರಾರಂಭಿಸಲು ಮರೆಯದಿರಿ ಮತ್ತು ನಿಮ್ಮ ನೆಚ್ಚಿನ ಸೆಲೆಬ್ರಿಟಿಗಳ ಬಗ್ಗೆಯೂ ಗಮನಿಸುತ್ತಿರಿ. ನಿಮ್ಮ ಕ್ರಿಪ್ಟೊ ಹೂಡಿಕೆಗಳನ್ನು ಇಂದೇ ಪ್ರಾರಂಭಿಸಿ. 

  Published by:Soumya KN
  First published: