Scholarship: ಒಂಟಿ ಹೆಣ್ಣು ಮಗುವಿನ ಪೋಷಕರೇ ಇತ್ತ ಗಮನಿಸಿ, ನಿಮ್ಮ ಮಗಳ ಎಜುಕೇಷನ್​ಗೆ ಇಷ್ಟು ಹಣ ಕೊಡುತ್ತೆ ಸರ್ಕಾರ!

ಪೋಷಕರು (Parents) ಒಂದೇ ಹೆಣ್ಣು ಮಗುವನ್ನು ಹೊಂದಿದ್ದರೆ ಅಂಥ ಹೆಣ್ಣು ಮಕ್ಕಳಿಗೆ CBSE  ಸ್ಕಾಲರ್‌ಶಿಪ್‌ ನೀಡುತ್ತಿದೆ. ಆರ್ಥಿಕವಾಗಿ ಹಿಂದುಳಿದ (Economically backward), ಹಾಗೂ ಸರಿಯಾದ ಶಿಕ್ಷಣ ಪಡೆಯಲಾಗದ ಕುಟುಂಬಗಳಲ್ಲಿ ಹೆಣ್ಣು ಮಕ್ಕಳು ಶಿಕ್ಷಣ ವಂಚಿತಾರಾಗುತ್ತಾರೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ನಮ್ಮ ಹಿಂದಿನ ಜನರೇಷನ್ (Generation) ​ನಲ್ಲಿ ಹೆಣ್ಣು ಮಕ್ಕಳು (Female) ಹುಟ್ಟಿದ್ದರೆ ಅಸಡ್ಡೆ ಪಡುವವರ ಸಂಖ್ಯೆ ಹೆಚ್ಚಿತ್ತು. ಆದರೆ, ಈಗ ಕಾಲ ಬದಲಾಗಿದೆ. ಹೆಣ್ಣು ಮಕ್ಕಳು ಎಲ್ಲಾ ಕ್ಷೇತ್ರದಲ್ಲಿ ಹೆಸರು ಮಾಡುತ್ತಿದ್ದಾರೆ. ಗಂಡಸರೊಬ್ಬರೇ ಮಾಡಕೋಗಾದು ಎನ್ನುವ ಎಲ್ಲಾ ಕ್ಷೇತ್ರದಲ್ಲೂ ಮಹಿಳೆಯರು ಕಾಲಿಟ್ಟು ದಿಗ್ವಿಜಯ ಸಾಧಿಸುತ್ತಿದ್ದಾರೆ. ಹೀಗಾಗಿ ಹೆಣ್ಣುಮಕ್ಕಳಿಗೆ ಸಹಾಯ (Help) ವಾಗುವಂತೆ ಹಲವಾರು ಯೋಜನೆಗಳು ನಮ್ಮ ದೇಶದಲ್ಲಿದೆ. ಹೆಣ್ಣು ಮಕ್ಕಳು ಹುಟ್ಟಿದಾಗಿನಿಂದ ಹಿಡಿದು ಅವರು ಕೆಲಸ  (Work)ಕ್ಕೆ ಹೋಗುವವರೆಗೂ ಹಲವಾರು ಸ್ಕಿಮ್​ಗಳು ನಮ್ಮ ದೇಶದದಲ್ಲಿದೆ. ಆದರೆ, ನಾವಿಲ್ಲಿ ಇಂದು ಹೊಸದೊಂದು ಸ್ಕಾಲರ್​ಶಿಪ್ (​Scholarship) ಬಗ್ಗೆ ನಿಮಗೆ ಹೇಳುತ್ತಿದ್ದೇವೆ.  ಪೋಷಕರು (Parents) ಒಂದೇ ಹೆಣ್ಣು ಮಗುವನ್ನು ಹೊಂದಿದ್ದರೆ ಅಂಥ ಹೆಣ್ಣು ಮಕ್ಕಳಿಗೆ CBSE  ಸ್ಕಾಲರ್‌ಶಿಪ್‌ ನೀಡುತ್ತಿದೆ. ಆರ್ಥಿಕವಾಗಿ ಹಿಂದುಳಿದ (Economically backward), ಹಾಗೂ ಸರಿಯಾದ ಶಿಕ್ಷಣ ಪಡೆಯಲಾಗದ ಕುಟುಂಬಗಳಲ್ಲಿ ಹೆಣ್ಣು ಮಕ್ಕಳು ಶಿಕ್ಷಣ ವಂಚಿತಾರಾಗುತ್ತಾರೆ.

ಸಣ್ಣ ಪುಟ್ಟ ವಯಸ್ಸಿನಲ್ಲೇ ಹೆಣ್ಣು ಮಕ್ಕಳು ಕೆಲಸಕ್ಕೆ ಹೋಗುವ ಪರಿಸ್ಥಿತಿ ನಿರ್ಮಾಣವಾಗಿದೆ. ಮನೆಯ ಜವಾಬ್ದಾರಿ ಹೊತ್ತು ಅದಷ್ಟೋ ಹೆಣ್ಣು ಮಕ್ಕಳು ಆಡುವ ವಯಸ್ಸಿನಲ್ಲಿ ದುಡಿಯುತ್ತಿದ್ದಾರೆ. ಹೀಗೇ ಇಂತಹ ವರ್ಗದ ಹೆಣ್ಣು ಮಕ್ಕಳ ಶಿಕ್ಷಣವನ್ನು  ಪ್ರೋತ್ಸಾಹಿಸಲು ಸರ್ಕಾರ ಈ ಸ್ಕಾಲರ್​ಶಿಪ್​ ನೀಡುತ್ತಿದೆ. ಹಾಗಿದ್ದರೆ ಯಾವುದು ಈ ಸ್ಕಾಲರ್​ ಶಿಪ್​ ಎಂಬುಂದರ ಬಗ್ಗೆ ಕಂಪ್ಲೀಟ್​ ವರದಿ ಇಲ್ಲಿದೆ ನೋಡಿ.

ಅಧಿಕೃತ ವೆಬ್‌ಸೈಟ್www.cbse.nic.in

ಯೋಜನೆಯ ಹೆಸರು:  CBSE ಒಂಟಿ ಹೆಣ್ಣು ಮಕ್ಕಳ ವಿದ್ಯಾರ್ಥಿವೇತನ ಯೋಜನೆ

ವರ್ಗ: ಸ್ಕಾಲರ್‌ಶಿಪ್‌

ಸ್ಕಾಲರ್​ಶಿಪ್​ ನೀಡುತ್ತಿರುವವರು: CBSE (ಸೆಂಟ್ರಲ್ ಬೋರ್ಡ್ ಆಫ್ ಸೆಕೆಂಡರಿ ಎಜುಕೇಶನ್)

ಸ್ಕಾಲರ್​ಶಿಪ್​ ಜಾರಿ ಮಾಡುವವರು: ಕೇಂದ್ರ ಸರ್ಕಾರ

ಅಭ್ಯರ್ಥಿ ಆಯ್ಕೆ ಪ್ರಕ್ರಿಯೆ: ಮೆರಿಟ್ ಆಧಾರ

ಫಲಾನುಭವಿಗಳು: ಕುಟುಂಬದಲ್ಲಿ ಒಂದೇ ಹೆಣ್ಣು ಮಗುವಿರುವ ವಿದ್ಯಾರ್ಥಿನಿಯರು

ಈ ಸ್ಕಾಲರ್​ಶಿಪ್​ ಹಂಚಿಕೆಯಾಗೋದು ಹೀಗೆ

ನಿರ್ದಿಷ್ಟ ವರ್ಷದ ವಿದ್ಯಾರ್ಥಿವೇತನಗಳ ಸಂಖ್ಯೆಯು ವೇರಿಯಬಲ್ ಆಗಿರುತ್ತದೆ .60% ಅಥವಾ ಅದಕ್ಕಿಂತ ಹೆಚ್ಚು ಅಂಕಗಳನ್ನು ಗಳಿಸಿದ ಎಲ್ಲಾ "ಒಂಟಿ ಬಾಲಕಿಯ ವಿದ್ಯಾರ್ಥಿಗಳಿಗೆ" ನೀಡಲಾಗುತ್ತದೆ.

ಇದನ್ನೂ ಓದಿ: ಅನ್ನದಾತರೇ ಚಿಂತೆ ಬಿಡಿ, ನಿಮ್ಮ ಹಿಂದೆ ನಿಂತಿದ್ದಾರೆ ಧೋನಿ! ಇದಕ್ಕೆ ನೋಡಿ ಕ್ರಿಕೆಟ್ ಆಚೆಗೂ ಇಷ್ಟವಾಗೋದು ಮಾಹಿ

ಈ ಸ್ಕಾಲರ್​ಶಿಪ್​ ಪಡೆಯಲು ಬೇಕಿರುವ ಅರ್ಹತೆಗಳೇನು?

CBSE 10 ನೇ ತರಗತಿ ಪರೀಕ್ಷೆಯಲ್ಲಿ 60% ಅಥವಾ ಅದಕ್ಕಿಂತ ಹೆಚ್ಚಿನ ಅಂಕಗಳನ್ನು ಪಡೆದಿರುಬೇಕು. CBSE ಯೊಂದಿಗೆ ಸಂಯೋಜಿತವಾಗಿರುವ ಶಾಲೆಯಲ್ಲಿ 11 ಮತ್ತು 12 ನೇ ತರಗತಿಗಳನ್ನು ಓದುತ್ತಿರುವ ಎಲ್ಲಾ ಒಂಟಿ ಹೆಣ್ಣು ವಿದ್ಯಾರ್ಥಿಗಳು, ಅವರ ಬೋಧನಾ ಶುಲ್ಕ ರೂ. ಶೈಕ್ಷಣಿಕ ವರ್ಷದಲ್ಲಿ ತಿಂಗಳಿಗೆ 1,500, ಉದ್ದೇಶಕ್ಕಾಗಿ ಪರಿಗಣಿಸಲಾಗುವುದು.

ಅರ್ಹತಾ ಮಾನದಂಡಗಳು

- ಈ ಯೋಜನೆಯು ಹೆಣ್ಣುಮಕ್ಕಳಲ್ಲಿ ಶಿಕ್ಷಣವನ್ನು ಉತ್ತೇಜಿಸುವಲ್ಲಿ ಪೋಷಕರ ಪ್ರಯತ್ನಗಳನ್ನು ಗುರುತಿಸಲು ಮತ್ತು ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಪ್ರೋತ್ಸಾಹವನ್ನು ನೀಡುವ ಗುರಿಯನ್ನು ಹೊಂದಿದೆ

- ಮೆರಿಟ್ ಪಟ್ಟಿಯ ಆಧಾರದ ಮೇಲೆ ವಿದ್ಯಾರ್ಥಿವೇತನವನ್ನು ನೀಡಲಾಗುತ್ತದೆ,

- CBSE X ತರಗತಿಯ ಪರೀಕ್ಷೆಯ ಫಲಿತಾಂಶದಿಂದ. ಅರ್ಹತಾ ಮಾನದಂಡಗಳು ಈ ಕೆಳಗಿನಂತಿರಬೇಕು

- CBSE X ತರಗತಿಯಲ್ಲಿ 60% ಅಥವಾ ಅದಕ್ಕಿಂತ ಹೆಚ್ಚಿನ ಅಂಕಗಳನ್ನು ಪಡೆದಿರುವ ಎಲ್ಲಾ ಒಂಟಿ ಹೆಣ್ಣು ವಿದ್ಯಾರ್ಥಿಗಳಿಗೆ ಸಿಗಲಿದೆ ಸ್ಕಾಲರ್​ಶಿಪ್​

- ಬೋಧನಾ ಶುಲ್ಕ ತಿಂಗಳಿಗೆ 1500 ರೂ.

ಇದನ್ನೂ ಓದಿ: ರೈಲ್ವೇ ಪ್ರಯಾಣಿಕರಿಗೆ ಗುಡ್​​ ನ್ಯೂಸ್​! ಈ ನಿಯಮಕ್ಕಾಗಿಯೇ ಕಾಯ್ತಿದ್ದರಂತೆ ಜನ

- ಈ ವಿದ್ಯಾರ್ಥಿವೇತನವು 2 ವರ್ಷಗಳ ಅವಧಿಗೆ ನೀಡಲಾಗುತ್ತದೆ.1 ವರ್ಷದ ನಂತರ ಪ್ರಥಮ ಪಿಯುಸಿ ತಮುಗಿದ ನಂತರ 12ನೇ ತರಗತಿಗೆ ಸ್ಕಾಲರ್‌ಶಿಪ್‌ ನವೀಕರಣಕ್ಕೆ ಅರ್ಜಿ ಸಲ್ಲಿಸಬೇಕು.

- ಎರಡು ವರ್ಷಗಳಿಗೆ (11 ಮತ್ತು 12ನೇ ತರಗತಿ) ಒಟ್ಟು 12 ಸಾವಿರ ರೂಪಾಯಿ ವಿದ್ಯಾರ್ಥಿವೇತನ ನೀಡಲಾಗುತ್ತದೆ.
Published by:Vasudeva M
First published: