• Home
  • »
  • News
  • »
  • business
  • »
  • Demonetisation: ನೋಟು ಅಮಾನ್ಯೀಕರಣದ ಬಳಿಕ ಮತ್ತೆ ಜನರ ಕೈ ಸೇರಿದೆ ₹ 30.88 ಲಕ್ಷ ಕೋಟಿಗಿಂತಲೂ ಹೆಚ್ಚು ಮೊತ್ತ!

Demonetisation: ನೋಟು ಅಮಾನ್ಯೀಕರಣದ ಬಳಿಕ ಮತ್ತೆ ಜನರ ಕೈ ಸೇರಿದೆ ₹ 30.88 ಲಕ್ಷ ಕೋಟಿಗಿಂತಲೂ ಹೆಚ್ಚು ಮೊತ್ತ!

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಭಾರತೀಯ ರಿಸರ್ವ್ ಬ್ಯಾಂಕ್ ನೀಡಿರುವ ರಿಪೋರ್ಟ್‌ನಲ್ಲಿ, 21 ಅಕ್ಟೋಬರ್ 2022 ರ ವೇಳೆಗೆ ಜನರ ಬಳಿ ₹ 30.88 ಲಕ್ಷ ಕೋಟಿ ರೂಪಾಯಿ ಇರೋದು ಅಂಕಿ-ಅಂಶಗಳಿಂದ ತಿಳಿದುಬಂದಿದೆ. ಇದು ಕಳೆದ ಎಲ್ಲಾ ಅಂಕಿಅಂಶಗಳಿಗಿಂತ ಹೆಚ್ಚಿದ್ದು, ಗರಿಷ್ಠ ಮಟ್ಟಕ್ಕೆ ಜಿಗಿದಿದೆ.

  • Trending Desk
  • Last Updated :
  • New Delhi, India
  • Share this:

    ಹೊಸದಿಲ್ಲಿ: ನೋಟು ಅಮಾನ್ಯೀಕರಣ (Demonetisation) ಘೋಷಣೆಯಾಗಿ 6 ವರ್ಷ ಕಳೆದಿವೆ. ಈ ಸಂದರ್ಭದಲ್ಲಿ ಜನರ ಬಳಿ ಇರುವ ನಗದು (Cash) ಪ್ರಮಾಣ ಹೆಚ್ಚುತ್ತಲೇ ಇದೆ ಎಂದು ವರದಿಗಳು ಹೇಳುತ್ತಿವೆ. ಭಾರತೀಯ ರಿಸರ್ವ್ ಬ್ಯಾಂಕ್ (Reserve Bank Of India) ನೀಡಿರುವ ರಿಪೋರ್ಟ್‌ನಲ್ಲಿ, 21 ಅಕ್ಟೋಬರ್ 2022 ರ ವೇಳೆಗೆ ಜನರ ಬಳಿ ₹ 30.88 ಲಕ್ಷ ಕೋಟಿ ರೂಪಾಯಿ ಇರೋದು ಅಂಕಿ-ಅಂಶಗಳಿಂದ ತಿಳಿದುಬಂದಿದೆ. ಇದು ಕಳೆದ ಎಲ್ಲಾ ಅಂಕಿಅಂಶಗಳಿಗಿಂತ ಹೆಚ್ಚಿದ್ದು, ಗರಿಷ್ಠ ಮಟ್ಟಕ್ಕೆ ಜಿಗಿದಿದೆ. ರಿಸರ್ವ್ ಬ್ಯಾಂಕ್ ಬಿಡುಗಡೆ ಮಾಡುವ ಈ ವರದಿ ಜನರ ಬಳಿ ಇರುವ ನಗದು ಹಣದ ಪ್ರಮಾಣ ಎಷ್ಟು? ಹಾಗೂ ದೇಶದಲ್ಲಿ ಚಲಾವಣೆಯಲ್ಲಿರುವ ಕರೆನ್ಸಿ ಎಷ್ಟು ಅನ್ನೋದನ್ನು ತಿಳಿಸುತ್ತದೆ.


    ನವೆಂಬರ್ 8, 2016ರಲ್ಲಿ ಬ್ಯಾನ್‌ ಆಗಿದ್ದ ನೋಟು


    ನವೆಂಬರ್ 8, 2016, ರಾತ್ರಿ 8:15ರ ಸುಮಾರಿಗೆ ಪ್ರಧಾನಿ ಮೋದಿ, ದೇಶದಲ್ಲಿ ಚಲಾವಣೆಯಲ್ಲಿದ್ದ 500 ಹಾಗೂ 1000 ರೂಪಾಯಿ ಮುಖಬೆಲೆಯ ನೋಟುಗಳನ್ನು ಅಮಾನ್ಯಗೊಳಿಸಿದ್ದರು. ಪ್ರಧಾನಿ ಮೋದಿಯವರ ನಿರ್ಧಾರ ಇಡೀ ದೇಶಕ್ಕೆ ದೊಡ್ಡ ಶಾಕ್‌ ನೀಡಿತ್ತು. ಆರ್ಥಿಕತೆಯಲ್ಲಿ ಭ್ರಷ್ಟಾಚಾರ ಮತ್ತು ಕಪ್ಪುಹಣವನ್ನು ಕಡಿಮೆ ಮಾಡುವ ಗುರಿಯೊಂದಿಗೆ ನೋಟುಗಳನ್ನು ನಿಷೇಧ ಮಾಡಲಾಗಿತ್ತು. ನೋಟ್‌ ಬ್ಯಾನ್‌ನಿಂದಾಗಿ ಹಲವಾರು ತೊಂದರೆಗಳನ್ನು ಸಹ ಜನಸಾಮಾನ್ಯರು ಅನುಭವಿಸುವಂತಾಯಿತು. ನೋಟುಗಳನ್ನು ಅಮಾನ್ಯಗೊಳಿಸಿದ ದಿನದಿಂದ ಕೇಂದ್ರ ಸರ್ಕಾರ ಡಿಜಿಟಲ್ ಕರೆನ್ಸಿಗೆ ಒತ್ತು ನೀಡುತ್ತಾ ಬಂದಿದೆ.


    ಇದನ್ನೂ ಓದಿ: LIC ಪಾಲಿಸಿದಾರರೇ ಎಚ್ಚರ.. ಇವುಗಳನ್ನು ಮಾಡದಿದ್ದರೆ ಎಲ್ಲಾ ಹಣವನ್ನು ಕಳೆದುಕೊಳ್ಳಬಹುದು ಜೋಕೆ!


    ಭಾರತೀಯರ ಬಳಿ ಇದೆ ಶೇ.71ಕ್ಕಿಂತ ಹೆಚ್ಚು ನಗದು ಹಣ


    ಸದ್ಯದ ವರದಿಗಳು ಹೇಳಿರುವ ಪ್ರಕಾರ ₹ 30.88 ಲಕ್ಷ ಕೋಟಿಯಲ್ಲಿ, ಸಾರ್ವಜನಿಕರ ಬಳಿ ಇರುವ ಕರೆನ್ಸಿ ನವೆಂಬರ್ 4, 2016 ಕ್ಕೆ ಕೊನೆಗೊಂಡ ಹದಿನೈದು ದಿನಗಳ ಮಟ್ಟಕ್ಕಿಂತ 71.84 ರಷ್ಟು ಹೆಚ್ಚಾಗಿದೆ.


    ಕಳೆದ ವಾರ ಆರ್‌ಬಿಐ ಬಿಡುಗಡೆ ಮಾಡಿದ ಹಣದ ಪೂರೈಕೆಯ ಹದಿನೈದು ದಿನಗಳ ಅಂಕಿಅಂಶಗಳ ಪ್ರಕಾರ, ಅಕ್ಟೋಬರ್ 21 ರ ಹೊತ್ತಿಗೆ ಸಾರ್ವಜನಿಕರ ಬಳಿ ಇರುವ ಕರೆನ್ಸಿ ₹ 30.88 ಲಕ್ಷ ಕೋಟಿಗೆ ಏರಿಕೆಯಾಗಿದೆ. ಅದೇ ನೋಟು ಅಮಾನ್ಯ ಮಾಡುವುದಕ್ಕೂ ಮುನ್ನ ಅಂದರೆ ನವೆಂಬರ್ 4, 2016ಕ್ಕೆ ಹೋಲಿಕೆ ಮಾಡಿದರೆ 17.97 ಲಕ್ಷ ಕೋಟಿ ರೂಪಾಯಿ ಜನರ ಬಳಿ ಇತ್ತು. ಈ ಎರಡೂ ದಿನಾಂಕದ ಹಣದ ರಾಶಿಯನ್ನು ಹೋಲಿಕೆ ಮಾಡಿದರೆ, ಪ್ರಸ್ತುತ ಜನರ ಬಳಿ ನಗದು ಹಣ ಗಮನಾರ್ಹವಾಗಿ ಹೆಚ್ಚಳವಾಗಿದೆ.


    ಜನಪ್ರಿಯತೆ ಹೊಂದಿದ ಡಿಜಿಟಲ್‌ ಪಾವತಿ


    ಆರ್ಥಿಕತೆಯಲ್ಲಿ ನಗದು ಬಳಕೆ ಸ್ಥಿರವಾಗಿ ಹೆಚ್ಚುತ್ತಿದೆ, ಪಾವತಿಗಳ ಹೊಸ ಮತ್ತು ದೂರದ ಅನುಕೂಲಕರ ಡಿಜಿಟಲ್ ಪರ್ಯಾಯಗಳು ಜನಪ್ರಿಯವಾಗಿವೆ. ಸಂಪರ್ಕರಹಿತ ವಹಿವಾಟುಗಳಿಗೆ ಒತ್ತು ನೀಡಿದ ಕೋವಿಡ್‌ ಸಾಂಕ್ರಾಮಿಕವು ಡಿಜಿಟಲ್ ಮೋಡ್‌ಗಳಿಗೆ ಮತ್ತಷ್ಟು ಉತ್ತೇಜನ ನೀಡಿತು. ಹೌದು, ಭಾರತದಲ್ಲಿ ಆನ್ ಲೈನ್ ನಗದು ಪಾವತಿ ಪ್ರಕ್ರಿಯೆ ಅತ್ಯಂತ ವೇಗವಾಗಿ ಬೆಳೆಯುತ್ತಿದೆ. ಡಿಜಿಟಲ್ ಪೇಮೆಂಟ್‌ಗೆ ಪ್ರತಿಯೊಬ್ಬರೂ ಒಗ್ಗಿಕೊಳ್ಳುತ್ತಿದ್ದು, ಇದರ ಬಳಕೆ ಕೂಡ ಹೆಚ್ಚುತ್ತಿದೆ.


    ಇದನ್ನೂ ಓದಿ: ಆಧಾರ್ ಕಾರ್ಡ್‌ನಲ್ಲಿ ಹಳೇ ಫೋಟೋ ಇದ್ಯಾ? ಹೀಗೆ ನಿಮ್ಮ ಹೊಸ ಫೋಟೋ ಅಪ್​ಡೇಟ್​ ಮಾಡಿ!


    "ಇತ್ತೀಚಿನ ವರ್ಷಗಳಲ್ಲಿ ಡಿಜಿಟಲ್ ಪಾವತಿಗಳು ದೇಶಾದ್ಯಂತ ಮೌಲ್ಯ ಮತ್ತು ಪರಿಮಾಣದ ಪರಿಭಾಷೆಯಲ್ಲಿ ಕ್ರಮೇಣವಾಗಿ ಬೆಳೆಯುತ್ತಿದ್ದರೂ, ಅದೇ ಸಮಯದಲ್ಲಿ, ಒಟ್ಟಾರೆ ಆರ್ಥಿಕ ಬೆಳವಣಿಗೆಗೆ ಅನುಗುಣವಾಗಿ ಚಲಾವಣೆಯಲ್ಲಿರುವ ಕರೆನ್ಸಿ ಜಿಡಿಪಿ ಅನುಪಾತಕ್ಕೆ ಹೆಚ್ಚಾಗಿದೆ ಎಂದು ಡೇಟಾ ಸೂಚಿಸುತ್ತದೆ" ಎಂದು ಆರ್‌ಬಿಐ ಹೇಳಿದೆ. ನಿರ್ದಿಷ್ಟ ಅವಧಿಯಲ್ಲಿ ಜಿಡಿಪಿ ಅನುಪಾತಕ್ಕೆ ಡಿಜಿಟಲ್ ಪಾವತಿಗಳ ಹೆಚ್ಚಳವು ದೇಶದ ಕರೆನ್ಸಿ ಮತ್ತು ಜಿಡಿಪಿ ಅನುಪಾತದಲ್ಲಿ ಸ್ವಯಂಚಾಲಿತವಾಗಿ ಕುಸಿತವನ್ನು ಸೂಚಿಸುವಂತೆ ತೋರುತ್ತಿಲ್ಲ" ಎಂದು ಹೇಳಿದೆ.


    ದೀಪಾವಳಿ ಹಬ್ಬದ ಸಂದರ್ಭದಲ್ಲಿ ಇಳಿಕೆ ಕಂಡಿದ್ದ ನಗದು
    ಆದಾಗ್ಯೂ, ಎಸ್‌ಬಿಐ ಅರ್ಥಶಾಸ್ತ್ರಜ್ಞರು ಹೇಳಿರುವ ಪ್ರಕಾರ, ದೀಪಾವಳಿ ಹಬ್ಬದ ವೇಳೆಯಲ್ಲಿ ಚಲಾವಣೆಯಲ್ಲಿರುವ ಕರೆನ್ಸಿ ರೂ. 7,600 ಕೋಟಿಗಳಷ್ಟು ಕಡಿಮೆಯಾಗಿದೆ ಎಂದು ಸೂಚಿಸಿದೆ. 2009 ಅನ್ನು ಹೊರತುಪಡಿಸಿದರೆ, ಸುಮಾರು ಎರಡು ದಶಕಗಳಲ್ಲಿ ಇದು ಮೊದಲ ಕುಸಿತವಾಗಿದೆ. ಜಾಗತಿಕ ಆರ್ಥಿಕ ಬಿಕ್ಕಟ್ಟಿನ ಕಾರಣದಿಂದಾಗಿ ಇಳಿಕೆಯಾಗಿದೆ ಎಂದು ಆರ್ಥಿಕ ತಜ್ಞರು ತಿಳಿಸಿದ್ದಾರೆ.

    Published by:Precilla Olivia Dias
    First published: