ಬೆಂಗಳೂರು: ಸಾಫ್ಟ್‌ಬ್ಯಾಂಕ್ ಮತ್ತು ಆಲ್ಫಾ ವೇವ್ ಗ್ಲೋಬಲ್ ಬೆಂಬಲಿತ ಬಳಸಿದ ಕಾರುಗಳನ್ನು ಮಾರಾಟ ಮಾಡುವ ಕಾರ್ಸ್ 24 ಎಂಬ ಸ್ಟಾರ್ಟ್ಅಪ್ (Cars24 Startup) ತನ್ನ 600 ಕ್ಕೂ ಹೆಚ್ಚು ಉದ್ಯೋಗಿಗಳನ್ನು (Cars24 fires 600 employees) ವಜಾಗೊಳಿಸಿದೆ. ತನ್ನ ಹಲವು ವಿಭಾಗಗಳು ಮತ್ತು ಹುದ್ದೆಗಳ ಶ್ರೇಣಿಗಳಲ್ಲಿ ಕೆಲಸ ಮಾಡುತ್ತಿದ್ದ ಒಟ್ಟು 600 ಉದ್ಯೋಗಿಗಳನ್ನು ಕಾರ್ಸ್ 24 ಮನೆಗೆ ಕಳಿಸಿದೆ. ಕಾರ್ಸ್ 24ನಲ್ಲಿ ಒಟ್ಟು 9,000 ಉದ್ಯೋಗಿಗಳು ಕೆಲಸ ಮಾಡುತ್ತಿದ್ದ ಸ್ಟಾರ್ಟ್ಅಪ್ನಲ್ಲಿ ಈ ಶೇಕಡಾ 6ಕ್ಕಿಂತ ಹೆಚ್ಚು ಉದ್ಯೋಗಿಗಳಿಗೆ ಶಾಕಿಂಗ್ ಸುದ್ದಿ ನೀಡಲಾಗಿದೆ. ಉದ್ಯೋಗದಿಂದ ತೆಗೆಯಲು ಕಳಪೆ ಕೆಲಸವೇ (Poor Performance) ಕಾರಣ ಎಂದು ಕಾರ್ಸ್24 ತಿಳಿಸಿದೆ.
ಈ ಬೆಳವಣಿಗೆಯಿಂದ ಕಾರ್ಸ್ 24 ಸಂಸ್ಥೆಯು ಅನ್ಅಕಾಡೆಮಿ, ವೇದಾಂತು ಮತ್ತು ಮೀಶೋಗಳಂತಹ ಉದ್ಯೋಗ ಕಡಿತ ಮಾಡಿದ ಸ್ಟಾರ್ಟ್‌ಅಪ್‌ಗಳ ಬೆಳೆಯುತ್ತಿರುವ ಪಟ್ಟಿಗೆ ಸೇರ್ಪಡೆಗೊಂಡಿದೆ.
ಪ್ರತಿವರ್ಷ ನಡೆಯುವ ಪ್ರಕ್ರಿಯೆಯೇ ಇದು!
ಹೀಗೆ 600 ಉದ್ಯೋಗಿಗಳಿಗೆ ಕತ್ತರಿ ಹಾಕಿರುವುದು ಪ್ರತಿ ವರ್ಷ ನಡೆಯುವ ಕಾರ್ಯಕ್ಷಮತೆ-ಸಂಯೋಜಿತ ಪ್ರಕ್ರಿಯೆಯಾಗಿದೆ. ಅದರ ಹೊರತಾಗಿ ಬೇರೆ ಯಾವುದೇ ಉದ್ಯೋಗಿಗಳನ್ನು ತೆಗೆಯಲಾಗಿಲ್ಲ ಎಂದು ಕಂಪನಿಯು ಐಎಎನ್‌ಎಸ್‌ನೊಂದಿಗೆ ಹಂಚಿಕೊಂಡ ಹೇಳಿಕೆಯಲ್ಲಿ ತಿಳಿಸಿದೆ.
ಸಾಫ್ಟ್‌ಬ್ಯಾಂಕ್ ಪ್ರಾಯೋಜಿತ ಸ್ಟಾರ್ಟ್‌ಅಪ್ ಇದು
ಕಳೆದ ವರ್ಷ ಸೆಪ್ಟೆಂಬರ್‌ನಿಂದ ಸಾಫ್ಟ್‌ಬ್ಯಾಂಕ್ ಪ್ರಾಯೋಜಿತ ಸ್ಟಾರ್ಟ್‌ಅಪ್ ಆದ ಕಾರ್ಸ್24 ಈವರೆಗೆ $850 ಮಿಲಿಯನ್ ಫಂಡ್ ಸಂಗ್ರಹಿಸಿದೆ. ಅಲ್ಲದೇ ಆಲ್ಫಾ ವೇವ್ ಗ್ಲೋಬಲ್ ಎಂಬ ಕಂಪನಿಯ ನೇತೃತ್ವದಲ್ಲಿ 40 ಮಿಲಿಯನ್ ಡಾಲರ್ ಅನ್ನು ಸಂಗ್ರಹಿಸಿತ್ತು.
ಇಷ್ಟು ನಿಧಿ ಸಂಗ್ರಹಿಸಿದ್ದರೂ ಉದ್ಯೋಗಿಗಳ ವಜಾ!
ಆದರೆ ಇಷ್ಟು ನಿಧಿ ಸಂಗ್ರಹಿಸಿಯೂ ಸುಮಾರು ಐದು ತಿಂಗಳ ನಂತರ 600 ಉದ್ಯೋಗಿಗಳನ್ನು ಕಾರ್ಸ್24 ವಜಾಗೊಳಿಸಲು ನಿರ್ಧರಿಸಿದೆ. ಈ ನಿಧಿ ಸಂಗ್ರಹಕ್ಕೂ ಮೊದಲು ಕಾರ್ಸ್24 DST ಗ್ಲೋಬಲ್, ಫಾಲ್ಕನ್ ಎಡ್ಜ್ ಮತ್ತು ಸಾಫ್ಟ್‌ಬ್ಯಾಂಕ್ ವಿಷನ್ ಫಂಡ್‌ನಿಂದ 1.8 ಬಿಲಿಯನ್ ಡಾಲರ್ ಮೌಲ್ಯಮಾಪನದ ಮೂಲಕ 450 ಮಿಲಯನ್ ಡಾಲರ್ ಸಂಗ್ರಹಿಸಿದೆ.
ಈ ವರ್ಷದ ಜನವರಿಯಲ್ಲಿ Inc42 ನೊಂದಿಗೆ ಮಾತನಾಡಿದ Cars24 ಸಂಸ್ಥಾಪಕ ಗಜೇಂದ್ರ ಜಂಗಿದ್, ಕಂಪನಿಯು ತನ್ನ ಅಂತರರಾಷ್ಟ್ರೀಯ ವಿಸ್ತರಣಾ ಯೋಜನೆಗಳ ಮೇಲೆ ಬ್ಯಾಂಕಿಂಗ್ ಮಾಡುವ ಮೂಲಕ FY23 ರ ವೇಳೆಗೆ 2 ಬಿಲಿಯನ್ ಡಾಲರ್ ಆದಾಯವನ್ನು ಸಾಧಿಸಲು ನೋಡುತ್ತಿದೆ ಎಂದು ಹೇಳಿದ್ದರು.
ಇದನ್ನೂ ಓದಿ: Railway Jobs: ಅಯ್ಯೋ! ಭಾರತೀಯ ರೈಲ್ವೆಯಲ್ಲಿ 72,000 ಉದ್ಯೋಗ ಕಡಿತ, ಏನು ಕಾರಣ?
ಕಂಪನಿಯು ತನ್ನ ವೈವಿಧ್ಯೀಕರಣವನ್ನು ಬೈಕ್‌ಗಳಾಗಿ 'ಕಾರುಗಳ' ಮಾರುಕಟ್ಟೆಯನ್ನು ಮೀರಿ ಅದರ ಬಳಸಿದ ಕಾರು ಹಣಕಾಸು ವೇದಿಕೆಯನ್ನು ಬೆಳೆಸುವ ಯೋಜನೆಗಳನ್ನು ಹೊಂದಿತ್ತು.
424 ಉದ್ಯೋಗಿಗಳು ವಜಾ! 2ನೇ ಸಲ ಶಾಕ್ ನೀಡಿದ ಯಶಸ್ವಿ ಸ್ಟಾರ್ಟ್ಅಪ್
ವಿವಿಧ ಕಂಪನಿಗಳಿಂದ ಉದ್ಯೋಗಿಗಳನ್ನು ತೆಗೆದುಹಾಕುವುದು ಇತ್ತೀಚಿಗೆ ಹೆಚ್ಚುತ್ತಿದೆ. ಒಮ್ಮೆಗೆ ಉದ್ಯೋಗಿಗಳನ್ನು ತೆಗೆದುಹಾಕಿ ಕಂಪನಿಗಳು ತಮ್ಮ ಕೆಲಸಗಾರರಿಗೆ ಶಾಕ್ ನೀಡುತ್ತಿದೆ. ಈ ಸಾಲಿಗೆ ಮತ್ತೊಂದು ಕಂಪನಿ ಸೇರ್ಪಡೆಗೊಂಡಿದೆ. ಜಾಗತಿಕ ಹಣಕಾಸು ಮಾರುಕಟ್ಟೆಗಳಲ್ಲಿನ ನಿಧಾನಗತಿಯು ಎಲ್ಲ ಕಂಪನಿಗಳಿಗೂ ಚಿಂತೆ ಉಂಟು ಮಾಡುತ್ತಿದೆ.
ವೇದಾಂತು ನಿರ್ಧಾರ ನಿಜಕ್ಕೂ ಆಘಾತ ತಂದಿತ್ತು!
ಮುಂಬರುವ ದಿನಗಳಲ್ಲಿ ಉಂಟಾಗಬಹುದಾದ ಹಣದ ಕೊರತೆಯನ್ನು (Scarce Capital) ಗಮನದಲ್ಲಿಟ್ಟುಕೊಂಡು, Edtech ಕಂಪನಿಯಾದ ವೇದಾಂತು (Vedantu) ಒಟ್ಟು 424 ಉದ್ಯೋಗಿಗಳನ್ನು ವಜಾಗೊಳಿಸಲು (Vedantu Lay Off) ನಿರ್ಧರಿಸಿದೆ. ಟೈಗರ್ ಗ್ಲೋಬಲ್ ಎಂಬ ಸಂಸ್ಥೆಯು ಹಣಕಾಸಿನ ನೆರವು ನೀಡಿರುವ ಶೈಕ್ಷಣಿಕ ವಲಯದ ಯುನಿಕಾರ್ನ್ ಕಂಪನಿಯಾದ (Unicorn Startup) ವೇದಾಂತು ತನ್ನಲ್ಲಿರುವ ಉದ್ಯೋಗಿಗಳ ಶೇಕಡಾ 7ರಷ್ಟು ಉದ್ಯೋಗಿಗಳಿಗೆ ಶಾಕ್ ನೀಡಿದೆ.
ಇದನ್ನೂ ಓದಿ: Vedantu Lay Off: 424 ಉದ್ಯೋಗಿಗಳು ವಜಾ! 2ನೇ ಸಲ ಶಾಕ್ ನೀಡಿದ ಯಶಸ್ವಿ ಸ್ಟಾರ್ಟ್ಅಪ್
ವಿವಿಧ ದೇಶಗಳ, ವಿವಿಧ ಕಂಪನಿಗಳ ಆರ್ಥಿಕ ಪರಿಸ್ಥಿತಿಯು ದಿನೇ ದಿನೆ ಕಠಿಣವಾಗುತ್ತಿದೆ. ಇದು ಸಹಜವಾಗಿ ಜನಸಾಮಾನ್ಯರ ಮೇಲೂ ಪರಿಣಾಮ ಬೀರುತ್ತಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ