Aditya Birla Group: ಕಾರ್ಮೈಕಲ್ ರಸ್ತೆಯ ಬಂಗಲೆ 220 ಕೋಟಿಗೆ ಮಾರಾಟ; ಆದಿತ್ಯ ಬಿರ್ಲಾ ಗ್ರೂಪ್‌ ವತಿಯಿಂದ ಖರೀದಿ

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

ಆದಿತ್ಯ ಬಿರ್ಲಾ ಗ್ರೂಪ್ ಜೊತೆ ಸಹಭಾಗಿತ್ವ ಹೊಂದಿರುವ BGH ಪ್ರಾಪರ್ಟೀಸ್, ದಕ್ಷಿಣ ಮುಂಬೈನ ಉನ್ನತ ಮಟ್ಟದ ಕಾರ್ಮೈಕಲ್ ರಸ್ತೆಯಲ್ಲಿ ಸುಮಾರು ಅರ್ಧ ಎಕರೆ ಪ್ರದೇಶದಲ್ಲಿರುವ ಸನ್ನಿ ವಿಲ್ಲೆ ಎಂಬ ಬಂಗಲೆಯನ್ನು 220 ಕೋಟಿ ರೂ.ಗೆ ಸ್ವಾಧೀನಪಡಿಸಿಕೊಂಡಿದೆ.

  • Share this:

ಭಾರತದ ಟಾಪ್‌ ಎಂಎನ್‌ಸಿ ಕಂಪನಿಗಳಲ್ಲಿ (MNC Company) ಒಂದು ಆದಿತ್ಯ ಬಿರ್ಲಾ ಗ್ರೂಪ್ (Aditya Birla Group). ಈ ಕಂಪನಿ ಹಲವು ವ್ಯವಹಾರ, ಉದ್ಯಮ ಕಾರಣಗಳಿಂದಾಗಿ ಸುದ್ದಿಯಲ್ಲಿರುತ್ತದೆ. ಪ್ರಸ್ತುತ ಆದಿತ್ಯ ಬಿರ್ಲಾ ಗ್ರೂಪ್ 220 ಕೋಟಿ ಮೌಲ್ಯದ ಒಂದು ಬಂಗಲೆಯನ್ನು ಸ್ವಾಧೀನ ಪಡಿಸಿಕೊಳ್ಳುವ ಮೂಲಕ ಸುದ್ದಿಯಲ್ಲಿದೆ. ಇನ್ನು ಈ ಬಗ್ಗೆ ಸುದ್ದಿಗಳು ಹಲವು ದಿನಗಳಿಂದ ಹರಿದಾಡುತ್ತಿದ್ದು, ಇದೀಗ ಸ್ವಾಧೀನದ ಬಗ್ಗೆ ಕೆಲವೊಂದು ವಿಚಾರಗಳು ಬಹಿರಂಗವಾಗಿದೆ.


220 ಕೋಟಿ ರೂಪಾಯಿಗೆ ಸನ್ನಿ ವಿಲ್ಲೆ ಬಂಗಲೆ ಸ್ವಾಧೀನ


ವರದಿಗಳು ಆದಿತ್ಯ ಬಿರ್ಲಾ ಗ್ರೂಪ್ ಜೊತೆ ಸಹಭಾಗಿತ್ವ ಹೊಂದಿರುವ BGH ಪ್ರಾಪರ್ಟೀಸ್, ದಕ್ಷಿಣ ಮುಂಬೈನ ಉನ್ನತ ಮಟ್ಟದ ಕಾರ್ಮೈಕಲ್ ರಸ್ತೆಯಲ್ಲಿ ಸುಮಾರು ಅರ್ಧ ಎಕರೆ ಪ್ರದೇಶದಲ್ಲಿರುವ ಸನ್ನಿ ವಿಲ್ಲೆ ಎಂಬ ಬಂಗಲೆಯನ್ನು 220 ಕೋಟಿ ರೂ.ಗೆ ಸ್ವಾಧೀನಪಡಿಸಿಕೊಂಡಿದೆ ಎಂದು ಹೇಳಿವೆ.


ಬಿಜಿಹೆಚ್ ಪ್ರಾಪರ್ಟೀಸ್ ಸ್ವಾಧೀನಪಡಿಸಿಕೊಂಡಿರುವ ಈ ಹೊಸ ಆಸ್ತಿ 2015 ರಲ್ಲಿ, ಆದಿತ್ಯ ಬಿರ್ಲಾ ಗ್ರೂಪ್‌ನ ಅಧ್ಯಕ್ಷರಾದ ಕುಮಾರ್ ಮಂಗಲಂ ಬಿರ್ಲಾ ಖರೀದಿಸಿದ ʻಜಟಿಯಾ ಹೌಸ್‌ʼಗೆ ಹತ್ತಿರದಲ್ಲಿದೆ. ಮಂಗಲಂ ಬಿರ್ಲಾ ನಗರದ ಟೋನಿ ಮಲಬಾರ್ ಹಿಲ್ ಪ್ರದೇಶದಲ್ಲಿ ಈ ಎರಡು ಅಂತಸ್ತಿನ ಮನೆಯನ್ನು ಖರೀದಿಸಲು 425 ಕೋಟಿ ರೂ. ವ್ಯಯಿಸಿದ್ದರು.


ಇದನ್ನೂ ಓದಿ: ಸ್ಟಾಕ್ ಟ್ರೇಡಿಂಗ್ ನಲ್ಲಿ 30 ಲಕ್ಷ ರೂಪಾಯಿ ಕಳೆದುಕೊಂಡ ಬೆಂಗಳೂರಿನ ವ್ಯಕ್ತಿ!


ಸದ್ಯ ಸನ್ನಿ ವಿಲ್ಲೆ ಹೆಸರಿನ ಎರಡು ಅಂತಸ್ತಿನ ಬಂಗಲೆಯು ಸುಮಾರು 19,000 ಚದರ ಅಡಿ ವಿಸ್ತೀರ್ಣವನ್ನು ಹೊಂದಿದೆ. ಮನೆಯು ಗ್ಯಾರೇಜ್‌ ಹೊಂದಿರುವುದರ ಜೊತೆಗೆ ಸಾಕಷ್ಟು ವಿಶೇಷತೆಗಳನ್ನು ಒಳಗೊಂಡಿದೆ ಎನ್ನಲಾಗಿದೆ.


ಎರ್ನಿ ಖರ್ದ್‌ಶೆಡ್ಜಿ ದುಬಾಶ್ ಎಂಬ ಮಹಿಳೆಗೆ ಸೇರಿದ ಬಂಗಲೆ


ಭೂಮಿ ಜೊತೆಗೆ 2 ಅಂತಸ್ತಿನ ಬಂಗಲೆಯು ಎರ್ನಿ ಖರ್ದ್‌ಶೆಡ್ಜಿ ದುಬಾಶ್ ಎಂಬ ಮಹಿಳೆಯ ಎಸ್ಟೇಟ್‌ಗೆ ಸೇರಿತ್ತು. ಎರ್ನಿ ದುಬಾಶ್ 2013 ರಲ್ಲಿ ನಿಧನರಾಗಿದ್ದಾರೆ. ಸದ್ಯ ಇವರ ಪರವಾಗಿ ಆಕೆಯ ಇಚ್ಛೆಯ ನಿರ್ವಾಹಕರಾದ ಆದಿ ಎನ್ ಪಾಲಿಯಾ, ಡೇರಿಯಸ್ ಸೊರಬ್ ಕ್ಯಾಂಬಟ್ಟಾ, ಸೈರಸ್ ಸೋಲಿ ನಲ್ಲಸೇತ್, ಆದಿ ಹಿರ್ಜಿ ಜಹಾಂಗೀರ್ ಮತ್ತು ಚೇತನ್ ಮಹೇಂದ್ರ ಶಾ ಅವರು ಮಾರಾಟ ಪ್ರಕ್ರಿಯೆ ಮುಂದಾಳತ್ವ ವಹಿಸಿ ಇವರೇ ಪತ್ರಕ್ಕೆ ಸಹಿ ಹಾಕಿದ್ದಾರೆ.


ಸಾಂಕೇತಿಕ ಚಿತ್ರ


ಏಪ್ರಿಲ್ 10 ರಂದು ಒಪ್ಪಂದದ ನೋಂದಣಿಗಾಗಿ ಖರೀದಿದಾರರು 13.20 ಕೋಟಿ ರೂಪಾಯಿಗಳ ಮುದ್ರಾಂಕ ಶುಲ್ಕವನ್ನು ಪಾವತಿಸಿದ್ದಾರೆ ಎಂದು ದಾಖಲೆಗಳು ತೋರಿಸಿವೆ.


ಹಂಚಿಕೊಂಡ ನೋಂದಣಿ ದಾಖಲೆಗಳ ಪ್ರಕಾರ, ಎಸ್ಟೇಟ್‌ನ ಐವರು ವಿಲ್ ಎಕ್ಸಿಕ್ಯೂಟರ್‌ಗಳು ಮತ್ತು BGH ಪ್ರಾಪರ್ಟೀಸ್ ಲಿಮಿಟೆಡ್‌ನ ಇಬ್ಬರು ನಿರ್ದೇಶಕರಲ್ಲಿ ಒಬ್ಬರಾದ ಸುಶೀಲ್ ಅಗರ್ವಾಲ್ ನಡುವಿನ ವರ್ಗಾವಣೆ ಪತ್ರವನ್ನು ಏಪ್ರಿಲ್ 10 ರಂದು ನೋಂದಾಯಿಸಲಾಗಿದೆ.


ಬಿಲಿಯನೇರ್‌ಗಳ ಕಣ್ಣುಕುಕ್ಕುತ್ತಿರುವ ಪ್ರಾಪರ್ಟಿ


ಕಳೆದ ಕೆಲವು ವರ್ಷಗಳಿಂದ, ದಕ್ಷಿಣ ಮುಂಬೈನ ಟೋನಿಯೆಸ್ಟ್ ಪ್ರದೇಶಗಳಾದ ಕಾರ್ಮೈಕಲ್ ರಸ್ತೆ, ಅಲ್ಟಾಮೌಂಟ್ ರಸ್ತೆ, ನೇಪಿಯನ್ ಸೀ ರೋಡ್ ಮತ್ತು ಮಲಬಾರ್ ಹಿಲ್‌ನಲ್ಲಿರುವ ಹಲವಾರು ಬಂಗಲೆಗಳು ಕೈಗಾರಿಕೋದ್ಯಮಿಗಳು ಮತ್ತು ಭಾರತದ ಶ್ರೀಮಂತ ಬಿಲಿಯನೇರ್‌ಗಳ ಕಣ್ಣುಕುಕ್ಕುತ್ತಿವೆ ಎನ್ನಬಹುದು. 2015 ರ ಜಟಿಯಾ ಹೌಸ್ ಒಪ್ಪಂದದ ನಂತರ, ಪೂನಾವಾಲಾ ಗ್ರೂಪ್‌ನ ಅಧ್ಯಕ್ಷರಾದ ಸೈರಸ್ ಪೂನಾವಾಲಾ ಅವರು ಬ್ರೀಚ್ ಕ್ಯಾಂಡಿಯಲ್ಲಿರುವ US ಕಾನ್ಸುಲೇಟ್‌ನ ಲಿಂಕನ್ ಹೌಸ್‌ ಅನ್ನು 750 ಕೋಟಿ ಕೊಟ್ಟು ಖರೀದಿಸಿದ್ದರು.
2014 ರಲ್ಲಿ, ಗೋದ್ರೇಜ್ ಗ್ರೂಪ್, ಭಾರತದ ಪರಮಾಣು ಕಾರ್ಯಕ್ರಮದ ಪಿತಾಮಹ ಹೋಮಿ ಭಾಭಾ ಅವರ ಮಲಬಾರ್ ಹಿಲ್ ಹೌಸ್ ಮೆಹ್ರಾಂಗಿರ್ ಅನ್ನು ರೂ 372 ಕೋಟಿಗೆ ಸ್ವಾಧೀನಪಡಿಸಿಕೊಂಡಿತು. ಏಪ್ರಿಲ್ 2021 ರಲ್ಲಿ, ಬಿಲಿಯನೇರ್ ಹೂಡಿಕೆದಾರ ಮತ್ತು ಡಿ-ಮಾರ್ಟ್‌ನ ಸಂಸ್ಥಾಪಕ ರಾಧಾಕಿಶನ್ ದಮಾನಿ ಅವರು ಮಲಬಾರ್ ಹಿಲ್‌ನಲ್ಲಿ ರೂ 1,001 ಕೋಟಿಗೆ ಬಂಗಲೆಯನ್ನು ಖರೀದಿಸಿದರು.


https://economictimes.indiatimes.com/industry/services/property-/-cstruction/aditya-birla-group-company-buys-bungalow-on-south-mumbais-carmichael-road-for-rs-220-crore/articleshow/99693594.cms?from=mdr


Soumya HV

top videos
    First published: