Business Idea: 25 ಸಾವಿರ ರೂ. ಹೂಡಿಕೆ ಮಾಡಿ, ತಿಂಗಳಿಗೆ 50 ಸಾವಿರ ರೂ.ಗಳಿಸುವ ವ್ಯವಹಾರದ ಮಾಹಿತಿ

Car Washing Business: ತಮ್ಮದೇ ಆದ ಬ್ಯುಸಿನೆಸ್ ರೂಪಿಸಿಕೊಳ್ಳಬೇಕೆಂದು ಹೆಚ್ಚಿನವರು ಕಾಣುವ ಕನಸಾಗಿರುತ್ತದೆ. ಯಾವುದೇ ಬ್ಯುಸಿನೆಸ್‌(Business)ನ ಮೂಲ ಸರಿಯಾದ ಪ್ಲಾನಿಂಗ್‌ನಲ್ಲಿರುತ್ತದೆ ಎಂಬುದು ಗಮನಿಬೇಕಾದ ಅಂಶವಾಗಿದೆ. ನೀವು ಪ್ರತಿ ತಿಂಗಳು 50 ಸಾವಿರದವರೆಗೆ ಗಳಿಸಲು ಬಯಸಿದರೆ, ಇಂದು ನಾವು ನಿಮಗೆ ಉತ್ತಮ ವ್ಯವಹಾರ (Good Business) ಕಲ್ಪನೆಯ ಬಗ್ಗೆ ಹೇಳುತ್ತಿದ್ದೇವೆ

ಹಣ

ಹಣ

  • Share this:
Business Idea: ತಮ್ಮದೇ ಆದ ಬ್ಯುಸಿನೆಸ್ ರೂಪಿಸಿಕೊಳ್ಳಬೇಕೆಂದು ಹೆಚ್ಚಿನವರು ಕಾಣುವ ಕನಸಾಗಿರುತ್ತದೆ. ಯಾವುದೇ ಬ್ಯುಸಿನೆಸ್‌(Business)ನ ಮೂಲ ಸರಿಯಾದ ಪ್ಲಾನಿಂಗ್‌ನಲ್ಲಿರುತ್ತದೆ ಎಂಬುದು ಗಮನಿಬೇಕಾದ ಅಂಶವಾಗಿದೆ. ನೀವು ಪ್ರತಿ ತಿಂಗಳು 50 ಸಾವಿರದವರೆಗೆ ಗಳಿಸಲು ಬಯಸಿದರೆ, ಇಂದು ನಾವು ನಿಮಗೆ ಉತ್ತಮ ವ್ಯವಹಾರ (Good Business) ಕಲ್ಪನೆಯ ಬಗ್ಗೆ ಹೇಳುತ್ತಿದ್ದೇವೆ. ನೀವು ಇದನ್ನು ಸುಲಭವಾಗಿ ಪ್ರಾರಂಭಿಸಬಹುದು ಮತ್ತು ಪ್ರತಿ ತಿಂಗಳು ಸಾಕಷ್ಟು ಹಣವನ್ನು ಗಳಿಸಬಹುದು. ನೀವು ಕೇವಲ 25 ಸಾವಿರ ರೂಪಾಯಿಗಳನ್ನು ಹೂಡಿಕೆ (Investment) ಮಾಡುವ ಮೂಲಕ ಈ ವ್ಯವಹಾರವನ್ನು ಪ್ರಾರಂಭಿಸಬಹುದು ಮತ್ತು ಪ್ರತಿಯಾಗಿ ನೀವು ಪ್ರತಿ ತಿಂಗಳು ಸುಮಾರು 50 ಸಾವಿರ ರೂಪಾಯಿಗಳನ್ನು ಗಳಿಸಬಹುದು ಕಾರ್ ತೊಳೆಯುವ ವ್ಯವಹಾರದ (Car Cleaning Business) ಬಗ್ಗೆ ಹೇಳುತ್ತಿದ್ದೇವೆ. ಈ ವ್ಯವಹಾರ ಹೇಗೆ ಆರಂಭಿಸಬೇಕು ಎಂಬುದರ ಬಗ್ಗೆ ಸಂಪೂರ್ಣ ವಿವರ ಇಲ್ಲಿದೆ.

ಕಾರು ತೊಳೆಯುವ ವೃತ್ತಿಪರ ಅಥವಾ ವಾಣಿಜ್ಯ ಯಂತ್ರಗಳು ಸಹ ಒಂದು ಲಕ್ಷ ರೂಪಾಯಿಗಳವರೆಗೆ ಬರುತ್ತವೆ. ಆದರೆ ನಿಮ್ಮ ಸ್ಥಳಕ್ಕೆ ಎಷ್ಟು ಕಾರ್ ಗಳು ಬರುತ್ತವೆ ಎಂದು ಅಂದಾಜಿನ ಮೇಲೆ ಯಂತ್ರಗಳನ್ನು ಖರೀದಿಸಬೇಕು. ವ್ಯವಹಾರದ ಆರಂಭದಲ್ಲಿಯೇ ದೊಡ್ಡ ಮಟ್ಟದ ಯಂತ್ರಗಳನ್ನು ಖರೀದಿಸೋದು ಉತ್ತಮವಲ್ಲ. ವ್ಯವಹಾರ ಆರಂಭಿಸುವ ವೇಳೆ ಹೂಡಿಕೆ ಮೇಲೆ  ಹೆಚ್ಚು ಗಮನ ಹೊಂದಿರಬೇಕು.

ಇದನ್ನೂ ಓದಿ:  ATM ಕಾರ್ಡ್ ಬ್ಲಾಕ್ ಆಗಿದೆಯಾ? Activate ಮಾಡಿಕೊಳ್ಳೋದು ಹೇಗೆ?

25 ಸಾವಿರ ರೂಪಾಯಿ ಬಂಡವಾಳ

ಮಾರುಕಟ್ಟೆಯಲ್ಲಿ ವಾಣಿಜ್ಯ ಯಂತ್ರಗಳು 12,000 ರೂ.ನಿಂದ ಪ್ರಾರಂಭವಾಗುತ್ತವೆ. ಇವುಗಳಲ್ಲಿ ಎರಡು ಹಾರ್ಸ್ ಪವರ್ ಮೋಟರ್ ಸಿಕ್ಕರೆ ಪೈಪ್ ನಿಂದ ಹಿಡಿದು ನಳಿಕೆಯವರೆಗೆ ಸುಮಾರು 14 ಸಾವಿರ ರೂ. ವರೆಗೆ ಸಿಗುತ್ತದೆ.

ಇದಲ್ಲದೆ, ನೀವು 30 ಲೀಟರ್ ವ್ಯಾಕ್ಯೂಮ್ ಕ್ಲೀನರ್ ಅನ್ನು ತೆಗೆದುಕೊಳ್ಳಬೇಕಾಗುತ್ತದೆ ಅದು ಸುಮಾರು 9 ರಿಂದ ಹತ್ತು ಸಾವಿರ ರೂಪಾಯಿಗಳಿಗೆ ಲಭ್ಯವಿರುತ್ತದೆ. ಐದು ಲೀಟರ್‌ಗೆ ಶಾಂಪೂ, ಗ್ಲೌಸ್, ಟೈರ್ ಪಾಲಿಶ್ ಮತ್ತು ಡ್ಯಾಶ್‌ಬೋರ್ಡ್ ಪಾಲಿಶ್ ತೆಗೆದುಕೊಳ್ಳಬಹುದಾದ ತೊಳೆಯುವ ವಸ್ತುಗಳು ಎಲ್ಲ ಸೇರಿ 1,700 ರೂ. ಆಗುತ್ತದೆ.

ಈ ವಿಷಯಗಳು ನೆನಪಿನಲ್ಲಿರಲಿ

ಕಾರ್ ವಾಷಿಂಗ್ ಸೆಂಟರ್ ತೆರೆಯಲು, ಮೊದಲು ನೀವು ಉತ್ತಮ ಸ್ಥಳವನ್ನು ನೋಡಬೇಕು, ಅಲ್ಲಿ ಕಾರಿಗೆ ಸಂಬಂಧಿಸಿದ ವಸ್ತುಗಳ ಮಾರುಕಟ್ಟೆ ಇರಬೇಕು. ಕಾರ್ ಗಳ ಸಂಚಾರ ಹೆಚ್ಚು ಇರೋ ಸ್ಥಳಗಳನ್ನು ಆಯ್ಕೆ ಮಾಡಿಕೊಳ್ಳಬೇಕು. ಪಾರ್ಕಿಂಗ್ ಸ್ಥಳ ಅಥವಾ ವಾಹನಗಳು ಸುಲಭವಾಗಿ ಬರಬಹುದಾದಂತಹ ಸ್ಥಳದಲ್ಲಿ ಅಂಗಡಿಯನ್ನು ತೆಗೆದುಕೊಳ್ಳಿ.

ಮೆಕ್ಯಾನಿಕ್ ಅಂಗಡಿಯೊಂದಿಗೆ ಕಾರ್ ತೊಳೆಯುವ ಕೆಲಸ

ಅಂಗಡಿಯು ನಿಮ್ಮದಾಗಿದ್ದರೆ, ಇನ್ನೂ ಉತ್ತಮವಾದದ್ದು, ಅದರ ಅರ್ಧದಷ್ಟು ಬಾಡಿಗೆಯನ್ನು ಪಾವತಿಸುವ ಮೂಲಕ ನೀವು ಮೆಕ್ಯಾನಿಕ್ ಅಂಗಡಿಯೊಂದಿಗೆ ನಿಮ್ಮ ಕಾರ್ ತೊಳೆಯುವ ಕೆಲಸವನ್ನು ಪ್ರಾರಂಭಿಸಬಹುದು. ಇದು ಹಣವನ್ನು ಸಹ ಉಳಿಸುತ್ತದೆ ಮತ್ತು ಆ ಪ್ರದೇಶದಲ್ಲಿ ಪ್ರತಿಕ್ರಿಯೆ ಹೇಗಿದೆ ಎಂಬುದನ್ನು ಸಹ ನೀವು ನೋಡಲು ಸಾಧ್ಯವಾಗುತ್ತದೆ.

ಇದನ್ನೂ ಓದಿ:  PF DOB Change: ಪಿಎಫ್ ನಲ್ಲಿ ನಿಮ್ಮ ಜನ್ಮ ದಿನಾಂಕ ತಪ್ಪಾಗಿದೆಯೇ? ಮನೆಯಲ್ಲಿಯೇ ಕುಳಿತು ಹೀಗೆ ಬದಲಿಸಿ

ಗಳಿಸುವುದು ಹೇಗೆ ಗೊತ್ತಾ?

ಕಾರು ತೊಳೆಯುವ ಶುಲ್ಕಗಳು ನಗರಗಳನ್ನು ಅವಲಂಬಿಸಿರುತ್ತದೆ. ಸಣ್ಣ ನಗರಗಳಲ್ಲಿ ಆಲ್ಟೊ, ವ್ಯಾಗನ್ಆರ್, ಕ್ವಿಡ್ ಕಾರುಗಳು 150 ರೂ.ಗೆ ವಾಶ್ ಆಗಿದ್ದರೆ, ದೊಡ್ಡ ನಗರಗಳಲ್ಲಿ ಈ ರೀತಿಯ ಕಾರುಗಳಿಗೆ 250 ರೂ.ವರೆಗೆ ಶುಲ್ಕ ವಿಧಿಸಿದರೆ, ಸ್ವಿಫ್ಟ್ ಡಿಜೈರ್, ಹ್ಯುಂಡೈ ವೆರ್ನಾ ಮುಂತಾದ ದೊಡ್ಡ ಕಾರುಗಳು 350. ಮತ್ತು SUV ಗಳಿಗೆ 450 ರೂ.ವರೆಗೆ ಶುಲ್ಕ ವಿಧಿಸಲಾಗುತ್ತದೆ.

ಯಾವುದೇ ವ್ಯವಹಾರ ಪ್ರಾರಂಭಿಸಲು ಅತ್ಯಂತ ದೃಢ ನಿಶ್ಚಯ ಮತ್ತು ಆತ್ಮವಿಶ್ವಾಸದ ಅಗತ್ಯವಿದೆ. ಆದರೆ ನೀವು ಉದ್ಯಮಶೀಲತೆಯ ರಂಗಕ್ಕೆ ಕಾಲಿಡುವ ಮೊದಲು ನಿಮ್ಮ ವ್ಯವಹಾರದ ಕಲ್ಪನೆಯ ಬಗ್ಗೆ ನೀವು ಸ್ಪಷ್ಟವಾಗಿರಬೇಕು.
Published by:Mahmadrafik K
First published: