Canara Bank ಒದಗಿಸಿದ AT1 ಬಾಂಡ್‌ಗಳಿಗೆ ಹೂಡಿಕೆದಾರರು ಹರ್ಷ

Canara Bank Latest News: ಬಾಂಡ್‌ಗಳಂತಹ ಹೈಬ್ರಿಡ್‌ (ಮಿಶ್ರ) ಬಂಡವಾಳ ಪರಿಕರಗಳನ್ನು ಬಿಕ್ಕಟ್ಟಿನ ಸಂದರ್ಭಗಳಲ್ಲಿ ಈಕ್ವಿಟಿಗೆ ಪರಿವರ್ತಿಸಲು ವಿನ್ಯಾಸಗೊಳಿಸಲಾಗಿದೆ

Canara Bank Latest News: ಬಾಂಡ್‌ಗಳಂತಹ ಹೈಬ್ರಿಡ್‌ (ಮಿಶ್ರ) ಬಂಡವಾಳ ಪರಿಕರಗಳನ್ನು ಬಿಕ್ಕಟ್ಟಿನ ಸಂದರ್ಭಗಳಲ್ಲಿ ಈಕ್ವಿಟಿಗೆ ಪರಿವರ್ತಿಸಲು ವಿನ್ಯಾಸಗೊಳಿಸಲಾಗಿದೆ

Canara Bank Latest News: ಬಾಂಡ್‌ಗಳಂತಹ ಹೈಬ್ರಿಡ್‌ (ಮಿಶ್ರ) ಬಂಡವಾಳ ಪರಿಕರಗಳನ್ನು ಬಿಕ್ಕಟ್ಟಿನ ಸಂದರ್ಭಗಳಲ್ಲಿ ಈಕ್ವಿಟಿಗೆ ಪರಿವರ್ತಿಸಲು ವಿನ್ಯಾಸಗೊಳಿಸಲಾಗಿದೆ

  • Share this:
ಕೆನರಾ ಬ್ಯಾಂಕ್ (Canara Bank) Basel III-compliant Additional Tier 1 (AT1) ಬೇಸೆಲ್ III- (ನಿಯಮ ಪಾಲನೆಯ ಹೆಚ್ಚುವರಿ ಶ್ರೇಣಿಯ ಬಾಂಡ್‌ಗಳಲ್ಲಿ (bond) ವಾರ್ಷಿಕ 8.40% ಕೂಪನ್ ದರದಲ್ಲಿ (Coupon Rare)  1,500 ಕೋಟಿ ರೂ. ಏರಿಕೆ ಮಾಡಿದೆ. ಹೊಸ SEBI ನಿಯಮಾವಳಿಗಳ ನಂತರ ಬ್ಯಾಂಕ್‌ನಿಂದ ಇದು ಮೊದಲ AT1 ಬಾಂಡ್ ವಿತರಣೆಯಾಗಿದೆ. 500 ಕೋಟಿ ಮೂಲ ವಿತರಣೆಗೆ ಪ್ರತಿಯಾಗಿ 3,400 ಕೋಟಿಗಿಂತಲೂ ಅಧಿಕ ಬಿಡ್‌ಗಳೊಂದಿಗೆ ಈ ವಿತರಣೆಯು (issue) ಹೂಡಿಕೆದಾರರಿಂದ (investor) ಅಗಾಧವಾದ ಪ್ರತಿಕ್ರಿಯೆ ಪಡೆದುಕೊಂಡಿದೆ. ಪ್ರತಿಕ್ರಿಯೆಯನ್ನು ಆಧರಿಸಿಕೊಂಡು ವಾರ್ಷಿಕ 8.40% ಕೂಪನ್ ದರದಲ್ಲಿ 1,500 ಕೋಟಿ ಸ್ವೀಕರಿಸಲು ನಿರ್ಧರಿಸಿದೆ ಎಂದು ಬ್ಯಾಂಕ್ ಹೇಳಿಕೆಯಲ್ಲಿ ಪ್ರಕಟಪಡಿಸಿದೆ.

ಸಾಲದ ಮೇಲಿನ ಕನಿಷ್ಠ ಮೊತ್ತ ಸಂಗ್ರಹಣೆ:

ಸೆಕ್ಯುರಿಟೀಸ್ ಏಂಡ್ ಎಕ್ಸ್‌ಚೇಂಜ್ ಬೋರ್ಡ್ ಆಫ್ ಇಂಡಿಯಾ (Securities and Exchange Board of India) (SEBI) 2020ರಲ್ಲಿ ದಿನದ ವಹಿವಾಟುದಾರರಿಗೆ ಹೊಸ ನಿಯಮಗಳನ್ನು ಪರಿಚಯಿಸಿದ್ದು, ದಿನದ ಅಂತ್ಯದಲ್ಲಿ ಸಾಲ ಪಡೆದ ಮೊತ್ತವನ್ನು ಆಧರಿಸಿದ ವ್ಯಾಪಾರದ ಮೇಲೆ ಕನಿಷ್ಠ ಮೊತ್ತಗಳನ್ನು ಸಂಗ್ರಹಿಸುವುದನ್ನು ಕಡ್ಡಾಯಗೊಳಿಸಿದೆ.

AT1 ಅನುಷ್ಟಾನವು ಚಿರಸ್ಥಾಯಿಯಾಗಿದ್ದು ಆದಾಗ್ಯೂ ಐದು ವರ್ಷಗಳ ನಂತರ ಅಥವಾ ಯಾವುದೇ ವಾರ್ಷಿಕೋತ್ಸವದ ನಂತರ ಅದನ್ನು ವಿತರಕರು ಮರಳಿ ಪಡೆದುಕೊಳ್ಳಬಹುದಾಗಿದೆ ಎಂದು ಕೆನರಾ ಬ್ಯಾಂಕ್ ಪ್ರಕಟಣೆಯು ತಿಳಿಸಿದೆ. ಬ್ಯಾಂಕಿನ AT1 ಬಾಂಡ್‌ಗಳನ್ನು CRISILನಿಂದ AA+ ಮತ್ತು ಇಂಡಿಯಾ ರೇಟಿಂಗ್ಸ್  ಮತ್ತು ರಿಸರ್ಚ್‌ನಿಂದ AA ರೇಟ್ ಮಾಡಲಾಗಿದೆ.

ಈಕ್ವಿಟಿಗೆ ಪರಿವರ್ತಿಸಲು ವಿನ್ಯಾಸ:

ಹೆಚ್ಚುವರಿ ಶ್ರೇಣಿ 1 ಬಂಡವಾಳ (Additional tier 1 capital) ಬ್ಯಾಂಕ್‌ಗಳಲ್ಲಿ ಕಂಡುಬರುವ ಸಂಭವನೀಯ ಮಾರ್ಪಡಿಸಬಹುದಾದ ಬಾಂಡ್‌ಗಳಂತಹ ಹೈಬ್ರಿಡ್‌ (ಮಿಶ್ರ) ಬಂಡವಾಳ ಪರಿಕರಗಳನ್ನು ಬಿಕ್ಕಟ್ಟಿನ ಸಂದರ್ಭಗಳಲ್ಲಿ ಈಕ್ವಿಟಿಗೆ ಪರಿವರ್ತಿಸಲು ವಿನ್ಯಾಸಗೊಳಿಸಲಾಗಿದೆ

ಇದನ್ನು ಓದಿ: ಸಾವರಿನ್ ಚಿನ್ನದ ಬಾಂಡ್‌ಗಳಲ್ಲಿ ಹೂಡಿಕೆ ಮಾಡುವುದು ಸರಿಯಾದ ನಿರ್ಧಾರವೇ..? ಇಲ್ಲಿದೆ ವಿವರ

ಇನ್‌ಫ್ರಾ ಬಾಂಡ್‌ಗಳಲ್ಲಿ ಹೂಡಿಕೆ ಮಾಡಲು ಅವಕಾಶ:

ಬಾಂಡ್ ಎಂಬುದು ಸಾಲ ಉಪಕರಣವಾಗಿದ್ದು ಹೂಡಿಕೆದಾರರು ಒಂದು ಘಟಕ ಅಂದರೆ ಕಾರ್ಪೋರೇಟ್ ಅಥವಾ ಸರಕಾರಕ್ಕೆ ಸಾಲವಾಗಿ ನೀಡುತ್ತಾರೆ. ಇದು ಬದಲಾವಣೆಗೊಳ್ಳಬಹುದಾದ ಅಥವಾ ಸ್ಥಿರ ಬಡ್ಡಿದರದಲ್ಲಿ ನಿರ್ದಿಷ್ಟ ಅವಧಿಗೆ ಹಣವನ್ನು ಪಡೆಯುತ್ತದೆ. ಮೂಲ ಸೌಕರ್ಯ ಅಭಿವೃದ್ಧಿಯನ್ನು ಉತ್ತೇಜಿಸುವ ಪ್ರಯತ್ನದಲ್ಲಿ ರಿಸರ್ವ್ ಬ್ಯಾಂಕ್ ದೀರ್ಘ ಅವಧಿಯ ಇತರ ಸಾಲದಾತರ ಇನ್‌ಫ್ರಾ ಬಾಂಡ್‌ಗಳಲ್ಲಿ ಹೂಡಿಕೆ ಮಾಡಲು ಅವಕಾಶ ನೀಡಿದೆ. ಇತರ ಬ್ಯಾಂಕ್‌ಗಳು ಪ್ರಕಟಿಸುವ ದೀರ್ಘ ಅವಧಿಯ ಬಾಂಡ್‌ಗಳ ಮೇಲೆ ಬ್ಯಾಂಕ್‌ಗಳು ಹೂಡಿಕೆ ನಡೆಸಬಹುದು ಎಂಬುದಾಗಿ ರಿಸರ್ವ್ ಬ್ಯಾಂಕ್ ಘೋಷಿಸಿದೆ.

ಇದನ್ನು ಓದಿ: ವೈಯಕ್ತಿಕ ಸಾಲ, ಪಿಪಿಎಫ್ ಖಾತೆಯ ಮೇಲೆ ಪಡೆಯುವ ಸಾಲ:ಎರಡರಲ್ಲಿ ಯಾವುದು ಸೂಕ್ತ!

ಬಡ್ಡಿ ಪಾವತಿ ಲಾಭ:

ಬಾಂಡ್‌ಗಳನ್ನು ಒದಗಿಸುವುದು ಹಣ ಸಂಗ್ರಹಿಸಲು ಬ್ಯಾಂಕ್‌ಗಳು ಅನುಸರಿಸುವ ಒಂದು ವಿಧಾನವಾಗಿದೆ. ಹೂಡಿಕೆದಾರ ಹಾಗೂ ಸಂಸ್ಥೆಯ ನಡುವೆ ಸಾಲದಂತೆ ಬಾಂಡ್ ಕಾರ್ಯನಿರ್ವಹಿಸುತ್ತದೆ. ಸಂಸ್ಥೆಗೆ ನಿರ್ದಿಷ್ಟ ಅವಧಿಯಲ್ಲಿ ನಿರ್ದಿಷ್ಟ ಮೊತ್ತನೀಡಲು ಹೂಡಿಕೆದಾರರು ಸಮ್ಮತಿಸುತ್ತಾರೆ. ಇದಕ್ಕೆ ಬದಲಾಗಿ ಹೂಡಿಕೆದಾರರು ನಿಯತಕಾಲಿಕ ಬಡ್ಡಿ ಪಾವತಿಗಳನ್ನು ಪಡೆದುಕೊಳ್ಳುತ್ತಾರೆ. ಬಾಂಡ್ ಮುಕ್ತಾಯ ದಿನಾಂಕವನ್ನು ತಲುಪಿದಾಗ ಕಂಪನಿಯು (ಸಂಸ್ಥೆಯು) ಹೂಡಿಕೆದಾರರಿಗೆ ಮರುಪಾವತಿ ಮಾಡುತ್ತದೆ.

ಮೂಲಸೌಕರ್ಯ ಉಪ-ವಲಯಗಳು ಮತ್ತು ಕೈಗೆಟುಕುವ ವಸತಿಗಳಲ್ಲಿ ದೀರ್ಘಾವಧಿಯ ಯೋಜನೆಗಳಿಗೆ ಸಾಲ ನೀಡಲು ಸಂಪನ್ಮೂಲಗಳನ್ನು ಸಂಗ್ರಹಿಸಲು ಬ್ಯಾಂಕುಗಳು ಕನಿಷ್ಠ ಏಳು ವರ್ಷಗಳ ಅವಧಿಯೊಂದಿಗೆ ದೀರ್ಘಾವಧಿಯ ಬಾಂಡ್‌ಗಳನ್ನು ನೀಡಬಹುದು.
Published by:Sharath Sharma Kalagaru
First published: