• Home
  • »
  • News
  • »
  • business
  • »
  • PPF Account: ಮಕ್ಕಳ PPF ಖಾತೆಗೆ ತಂದೆ-ತಾಯಿ ಹಣ ಡೆಪಾಸಿಟ್​ ಮಾಡ್ಬಹುದಾ? ಏನ್​ ಹೇಳುತ್ತೆ ರೂಲ್ಸ್​ ನೀವೇ ನೋಡಿ

PPF Account: ಮಕ್ಕಳ PPF ಖಾತೆಗೆ ತಂದೆ-ತಾಯಿ ಹಣ ಡೆಪಾಸಿಟ್​ ಮಾಡ್ಬಹುದಾ? ಏನ್​ ಹೇಳುತ್ತೆ ರೂಲ್ಸ್​ ನೀವೇ ನೋಡಿ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

2019 ರ ಅಡಿಯಲ್ಲಿ ಅಪ್ರಾಪ್ತ ಮಗುವಿನ PPF ಖಾತೆಗೆ ಯಾವುದೇ ಪೋಷಕರು ಅಥವಾ ಪೋಷಕರಿಬ್ಬರೂ ಕೊಡುಗೆ  ನೀಡುವುದಕ್ಕೆ ಯಾವುದೇ ನಿರ್ಬಂಧವಿಲ್ಲ.

  • Share this:

ತಂದೆ (Father) ಹಾಗೂ ತಾಯಿ (Mother) ಇಬ್ಬರೂ ತಮ್ಮ ಅಪ್ರಾಪ್ತ ಮಗಳ PPF (ಪಬ್ಲಿಕ್ ಪ್ರಾವಿಡೆಂಟ್ ಫಂಡ್) ಖಾತೆಗೆ ಕೊಡುಗೆ ನೀಡಬಹುದೇ? ಹೌದು ಎಂದಾದರೆ ಈ ಕುರಿತು ತಿಳಿದುಕೊಳ್ಳಬೇಕಾದ ಮಾಹಿತಿಗಳೇನು? ವಿವರಗಳೇನು? ಎಂಬುದನ್ನು ಈ ಲೇಖನದಲ್ಲಿ ತಿಳಿದುಕೊಳ್ಳೋಣ. ಪಬ್ಲಿಕ್ ಪ್ರಾವಿಡೆಂಟ್ ಫಂಡ್ ಸ್ಕೀಮ್ )(Public Provident Fund Scheme), 2019 ರ ಪ್ರಕಾರ ಯಾವುದೇ ಪೋಷಕರು (Parents) ಅಥವಾ ಕಾನೂನು ಪಾಲಕರು ಅಪ್ರಾಪ್ತ ಮಗುವಿನ ಹೆಸರಿನಲ್ಲಿ ಪಬ್ಲಿಕ್ ಪ್ರಾವಿಡೆಂಟ್ ಫಂಡ್ ಖಾತೆಯನ್ನು ತೆರೆಯಬಹುದು.ಒಂದಕ್ಕಿಂತ ಹೆಚ್ಚು ಖಾತೆಗಳನ್ನು ತೆರೆಯಬಾರದು.


ಒಬ್ಬ ವ್ಯಕ್ತಿಯ ಹೆಸರಿನಲ್ಲಿ ಪಬ್ಲಿಕ್ ಪ್ರಾವಿಡೆಂಡ್ ಫಂಡ್ ಒಂದಕ್ಕಿಂತ ಹೆಚ್ಚು ಖಾತೆಗಳನ್ನು ತೆರೆಯಲಾಗುವುದಿಲ್ಲ ಎಂಬುದನ್ನು ಇಲ್ಲಿ ಗಮನಿಸಬೇಕು. ಪಬ್ಲಿಕ್ ಪ್ರಾವಿಡೆಂಡ್ ಫಂಡ್ ಯೋಜನೆ, 2019 ರ ಅಡಿಯಲ್ಲಿ ಅಪ್ರಾಪ್ತ ಮಗುವಿನ PPF ಖಾತೆಗೆ ಯಾವುದೇ ಪೋಷಕರು ಅಥವಾ ಪೋಷಕರಿಬ್ಬರೂ ಕೊಡುಗೆ  ನೀಡುವುದಕ್ಕೆ ಯಾವುದೇ ನಿರ್ಬಂಧವಿಲ್ಲ.


ಒಂದು ಲಕ್ಷದ ಐವತ್ತು ಸಾವಿರಕ್ಕಿಂತ ಹೆಚ್ಚಿನದನ್ನು ನೀಡಬಾರದು!


ಯೋಜನೆಯು ತಿಳಿಸುವಂತೆ ಒಬ್ಬ ವ್ಯಕ್ತಿಯು ತನ್ನ ಖಾತೆಗೆ ಮತ್ತು ಅಪ್ರಾಪ್ತ ವಯಸ್ಕರ ಖಾತೆಗೆ ಒಂದು ಲಕ್ಷದ ಐವತ್ತು ಸಾವಿರಕ್ಕಿಂತ ಹೆಚ್ಚಿನದನ್ನು ನೀಡಬಾರದು. ಆದ್ದರಿಂದ ನಿಮ್ಮ ಸ್ವಂತ ಖಾತೆಗೆ ಹಣೆ ಜಮೆ ಮಾಡುವಾಗ, ನೀವು ನಿಮ್ಮ ಮಗಳ ಪಿಪಿಎಫ್ ಖಾತೆಗೆ ಸಹ ಕೊಡುಗೆ ನೀಡಬಹುದು.ಅಪ್ರಾಪ್ತ ವಯಸ್ಕರ ಪರವಾಗಿ ನಿವಾಸಿ ಭಾರತೀಯ ವ್ಯಕ್ತಿಗಳು ಮತ್ತು ವ್ಯಕ್ತಿಗಳು ಸಾರ್ವಜನಿಕ ಭವಿಷ್ಯ ನಿಧಿ (PPF) ಖಾತೆಯನ್ನು ತೆರೆಯಬಹುದು.


ಅಪ್ರಾಪ್ತರ ಪರವಾಗಿ ತೆರೆಯಲಾದ ಖಾತೆಯನ್ನು ಹೊರತುಪಡಿಸಿ, ಒಬ್ಬ ವ್ಯಕ್ತಿಯಿಂದ ಕೇವಲ ಒಂದು ಸಾರ್ವಜನಿಕ ಭವಿಷ್ಯ ನಿಧಿ (PPF) ಖಾತೆಯನ್ನು ಮಾತ್ರ ನಿರ್ವಹಿಸಬಹುದು.


ನಿಗದಿಪಡಿಸಿದ ಮೊತ್ತವನ್ನು ಮೀರುವಂತಿಲ್ಲ


ಪ್ರತಿಯೊಬ್ಬರ ಠೇವಣಿಗಳ ಒಟ್ಟು ಮೊತ್ತವು ನಿಮ್ಮ ಸ್ವಂತ ಖಾತೆಗೆ ಮಾಡಿದ ಕೊಡುಗೆಗೆ ನಿಗದಿಪಡಿಸಿದ ಮೊತ್ತ ಒಂದು ಲಕ್ಷದ ಐವತ್ತು ಸಾವಿರದ ಮಿತಿಯನ್ನು ಮೀರಬಾರದು. ನಿಮ್ಮ ಅಪ್ರಾಪ್ತ ಮಗಳ PPF ಖಾತೆಗೆ ಜಮೆ ಮಾಡುವ ಮೌಲ್ಯಗಳ ಮಿತಿ ಕೂಡ ಇದೇ ಆಗಿದೆ ಎಂಬುದನ್ನು ಇಲ್ಲಿ ಗಮನಿಸಬೇಕು. ರೂ 1.50 ಲಕ್ಷಗಳನ್ನು ಮೀರಿ ಒಂದು ಪಿಪಿಎಫ್ ಖಾತೆಯಲ್ಲಿ ಹಣವನ್ನು ಠೇವಣಿ ಮಾಡಲು ಸಾಧ್ಯವಿಲ್ಲ.


ಇದನ್ನೂ ಓದಿ: ನಿಮ್ಮ ಸ್ಮಾರ್ಟ್‌ಫೋನ್ 5ಜಿ ಸಪೋರ್ಟ್ ಮಾಡುತ್ತಾ ಇಲ್ವಾ ಅಂತ ಹೀಗ್​ ಚೆಕ್​ ಮಾಡಿ!


ನಿಮ್ಮ ಮಗಳ PPF ಖಾತೆಗೆ ನೀವು ಮತ್ತು ನಿಮ್ಮ ಪತ್ನಿ ಇಬ್ಬರೂ ಸೇರಿ ಮಾಡಿದ ಕೊಡುಗೆಯು ಒಂದು ವರ್ಷದಲ್ಲಿ 1.50 ಲಕ್ಷ ರೂಪಾಯಿಗಳ ಮಿತಿಯನ್ನು ಮೀರುವಂತಿಲ್ಲ. ಸೆಕ್ಷನ್ 80 ಸಿ ಅಡಿಯಲ್ಲಿ ನೀವು ಪ್ರಯೋಜನವನ್ನು ಪಡೆಯಲು ಬಯಸಿದರೂ ಅಥವಾ ಇಲ್ಲದಿದ್ದರೂ ರೂ 1.50 ಲಕ್ಷದ ಮಿತಿಯು ಅನ್ವಯಿಸುತ್ತದೆ.


ಕೊಡುಗೆ ನೀಡಿದ ಹಣವನ್ನು ಉಡುಗೊರೆ ರೂಪದಲ್ಲಿ ಪ್ರದರ್ಶಿಸಬೇಕು


ಖಾತೆ ಪುಸ್ತಕಗಳಲ್ಲಿನ ಕೊಡುಗೆ ಹಾಗೂ ಬಡ್ಡಿಯ ನಮೂದುಗಳಿಗೆ ಸಂಬಂಧಿಸಿದಂತೆ ಮಗಳ ಖಾತೆಗೆ ಮಾಡಿದ ಕೊಡುಗೆಯನ್ನು ಉಡುಗೊರೆ ರೂಪದಲ್ಲಿ ನೀವು ಪ್ರದರ್ಶಸಬೇಕಾಗುತ್ತದೆ. ನಿಮ್ಮ ಮಗಳ ಪಿಪಿಎಫ್ ಖಾತೆಗೆ ಜಮಾ ಮಾಡಲಾದ ಬಡ್ಡಿಗೆ ಸಂಬಂಧಿಸಿದಂತೆ ನಮೂದುಗಳನ್ನು ಅವರ ಪುಸ್ತಕಗಳಲ್ಲಿ ಮಾಡಲಾಗುತ್ತದೆ ಮತ್ತು ಅದು ಕೊಡುಗೆ ನೀಡುವ ಪೋಷಕರ ಪುಸ್ತಕಗಳಲ್ಲಿ ಪ್ರತಿಫಲಿಸುವುದಿಲ್ಲ.


ಇದನ್ನೂ ಓದಿ: ಬರೀ ಸಿನಿಮಾದಿಂದಲ್ಲ, ಇಲ್ಲಿಂದಲೂ ಸಿಕ್ಕಾಪಟ್ಟೆ ದುಡ್ಡು ಮಾಡ್ತಿರೋ ಸ್ಟಾರ್​ ನಟರಿವರು!


ಸಹಯೋಗ ನಿಬಂಧನೆಗಳ ಕಾರಣದಿಂದಾಗಿ ಅಪ್ರಾಪ್ತ ವಯಸ್ಕರ ಆದಾಯವನ್ನು ಹೆಚ್ಚಿನ ಆದಾಯದೊಂದಿಗೆ ಪೋಷಕರ ಆದಾಯಕ್ಕೆ ಸೇರಿಸುವ ಅಗತ್ಯವಿದೆ. ಆದ್ದರಿಂದ ನೀವು ಅಥವಾ ನಿಮ್ಮ ಹೆಂಡತಿಯು ನಿಮ್ಮ ಮಗಳಿಗೆ ಬರುವ ಎಲ್ಲಾ ಆದಾಯವನ್ನು (ವರ್ಷದ PPF ಬಡ್ಡಿಯನ್ನು ಒಳಗೊಂಡಂತೆ) ಒಂದು ವರ್ಷದಲ್ಲಿ ಒಂದು ಸಾವಿರದ ಐದು ನೂರು ರೂಪಾಯಿಗಳಂತೆ ನಿಮ್ಮ ಆದಾಯದಲ್ಲಿ ಸೇರಿಸಬೇಕಾಗುತ್ತದೆ. PPF ಖಾತೆಯ ಮೇಲಿನ ಬಡ್ಡಿಯು ವಿನಾಯಿತಿ ಪಡೆದಿರುವುದರಿಂದ ITR ನ ಸಮಯದಲ್ಲಿ ಅದನ್ನು ಬಹಿರಂಗಪಡಿಸಬಹುದಾಗಿದೆ.

Published by:ವಾಸುದೇವ್ ಎಂ
First published: