ರಾಜ್ಯದಲ್ಲಿ ಮೂರು ತಿಂಗಳಿನಿಂದ ಕೊತ ಕೊತ ಕುದಿಯುತ್ತಿದ್ದ ರಾಜಕಾರಣ (Politics) ಈಗ ತಣ್ಣಗಾಗಿದೆ. ಯಾಕೆಂದ್ರೆ ಮತದಾನ (Voting) ಪ್ರಕ್ರಿಯೆ ಮುಗಿದ್ದಿದ್ದು, ಎಲ್ಲರೂ ರಿಸೆಲ್ಟ್ಗಾಗಿ (Result) ಎದುರು ನೋಡುತ್ತಿದ್ದಾರೆ. ಈ ನಡುವೆ ಮತದಾನ ಮಾಡಿ ಹೊರ ಬಂದ ಜನರಿಗೂ ಹಾಗೂ ಕೆಲವು ರಾಜಕರಾಣಿಗಳಿಗೂ ಈಗಲೂ ಈ ಇವಿಎಂ ಮಷಿನ್ (EVM Machine) ಹೇಗೆ ಕೆಲಸ ಮಾಡುತ್ತೆ ಅಂತ ಗೊತ್ತಿಲ್ಲ. ನಿಜಕ್ಕೂ ಇವಿಎಂ ಮಷಿನ್ನ ಹ್ಯಾಕ್ (EVM Machine Hack) ಮಾಡೋಕೆ ಆಗುತ್ತಾ? ಬ್ಯಾಲೆಟ್ ಪೇಪರ್ (Ballot Paper) ನಮ್ಮ ದೇಶದಲ್ಲಿ ಯಾಕಿಲ್ಲ? ಅಮೇರಿಕಾದಲ್ಲೂ ಇಲ್ಲದ ಇವಿಎಂ ಯಂತ್ರವನ್ನು ಎಲೆಕ್ಷನ್ ಟೈಂನಲ್ಲಿ ನಮ್ಮ ಭಾರತದಲ್ಲಿ ಬಳಸೋದು ಯಾಕೆ? ನಿಮ್ಮೆಲ್ಲಾ ಈ ಪ್ರಶ್ನೆಗಳಿಗೆ ಕಂಪ್ಲೀಟ್ ಉತ್ತರವನ್ನು ನಾವು ನಿಮಗೆ ಹೇಳುತ್ತೇವೆ.
ಇವಿಎಂ ಮಷಿನ್ ಎಂದರೇನು?
ಇವಿಎಂ ಮಷಿನ್ನಲ್ಲಿ ಎರಡು ರೀತಿಯ ಯೂನಿಟ್ಗಳಿರುತ್ತವೆ. ಒಂದು ಕಂಟ್ರೋಲಿಂಗ್ ಯೂನಿಟ್, ಮತ್ತೊಂದು ಬ್ಯಾಲೆಟಿಂಗ್ ಯೂನಿಟ್. ಕಂಟ್ರೋಲಿಂಗ್ ಯೂನಿಟ್ ಅಧಿಕಾರಿ ಬಳಿ ಇರುತ್ತೆ. ಬ್ಯಾಲೆಟಿಂಗ್ ಯೂನಿಟ್ನಲ್ಲಿ ಜನರು ಮತದಾನ ಮಾಡ್ತಾರೆ. ಹೀಗೆ ಮಾಡಿದಾಗ ಕಂಟ್ರೋಲಿಂಗ್ ಯೂನಿಟ್ನಲ್ಲಿ ನಿಮ್ಮ ಮತ ಲಾಕ್ ಆಗುತ್ತೆ. ಇದರ ಜೊತೆಗೆ ಬ್ಯಾಲೆಟಿಂಗ್ ಯೂನಿಟ್ ಪಕ್ಕದಲ್ಲಿ ವಿವಿ ಪ್ಯಾಟ್ ಇರುತ್ತೆ. ಇದರಲ್ಲಿ ನೀವು ವೋಟಿಂಗ್ ಮಾಡಿ ಅಭ್ಯರ್ಥಿ, ಪಕ್ಷ ಚಿನ್ನೆ ತೋರಿಸುತ್ತೆ.
ಈ ವಿವಿ ಪ್ಯಾಟ್ ಎಂದರೇನು?
ಈ ಹಿಂದೆ ಇವಿಎಂ ಹ್ಯಾಕ್ ಆಗುತ್ತೆ ಅನ್ನೋ ಆರೋಪಗಳು ಬಂದಮೇಲೆ ಈ ವಿವಿ ಪ್ಯಾಟ್ ಅನ್ನು ಹೆಚ್ಚು ಬಳಸೋಕೆ ಶುರುಮಾಡಲಾಯ್ತು. ಈ ವಿವಿ ಪ್ಯಾಟ್ ನೀವು ಯಾರಿಗೆ ಮತ ಹಾಕಿದ್ದೀರಿ ಅಂತ 7 ಸೆಕೆಂಡ್ಗಳ ಕಾಲ ತೋರಿಸುತ್ತೆ.
ಇವಿಎಂ ಮಷಿನ್ ತಯಾರಿಸೋಕೆ 2 ಕಂಪನಿಗೆ ಪರ್ಮಿಷನ್!
ಈ ಇವಿಎಂ ಮಷಿನ್ ಅನ್ನು ತಯಾರು ಮಾಡೋದಕ್ಕೆ ಕೇವಲ 2 ಕಂಪನಿಗಳಿಗೆ ಮಾತ್ರ ಪರ್ಮಿಷನ್ ಕೊಟ್ಟಿದೆ. ಬಿಇಎಲ್ ಮತ್ತು ಐಸಿಎಲ್ ಕಂಪನಿಗಳಿಗೆ ಮಾತ್ರ ಪರ್ಮಿಷನ್ ಇರೋದು. ಇನ್ನೂ ಯಾವುದೇ ರಾಜ್ಯದಲ್ಲಿ ಚುನಾವಣೆ ಡೇಟ್ ಅನೌನ್ಸ್ ಮಾಡಿದಾಗ ಇಲ್ಲಿಂದ ಮಾತ್ರ ಸಪ್ಲೈ ಆಗುತ್ತೆ.
ಇವಿಎಂ ಕಳಸೋ ಮುನ್ನ ಚೆಕ್ಕಿಂಗ್ ಇರುತ್ತೆ!
ಈ ಇವಿಎಂ ಮಷಿನ್ ಸಪ್ಲೈ ಮಾಡೋ ಮುನ್ನ ಇದನ್ನೂ ರ್ಯಾಂಡಮ್ ಆಗಿ ಚೆಕ್ ಮಾಡಲಾಗುತ್ತೆ. ಎಲ್ಲ ಪಕ್ಷದ ಪ್ರತಿನಿಧಿಗಳ ಮುಂದೆ ಕೆಲವೊಂದಿಷ್ಟು ಇವಿಎಂ ಮಷಿನ್ಗಳನ್ನು ಚೆಕ್ ಮಾಡಲಾಗುತ್ತೆ. ಇದಕ್ಕೆ ಒಪ್ಪಿಗೆ ಸಿಕ್ಕ ನಂತರ ಸ್ಟ್ರಾಂಗ್ ರೂಮ್ಗಳಿಗೆ ಈ ಇವಿಎಂ ಮಷಿನ್ಗಳನ್ನು ರವಾನೆ ಮಾಡಲಾಗುತ್ತೆ. ಅಲ್ಲೂ ಕೂಡ ಇದೇ ರೀತಿ ರ್ಯಾಂಡಮ್ ಆಗಿ ಒಂದಿಷ್ಟು ಮಷನಿಗಳನ್ನು ಚೆಕ್ ಮಾಡಲಾಗುತ್ತೆ. ಈ ಬೂತ್ಗೆ ಇದೇ ಇವಿಎಂ ಮಷಿನ್ ಹೋಗಬೇಕು ಅಂತ ಇರೋದಿಲ್ಲ.
ಇವಿಎಂ ಮಷಿನ್ಗಿರುತ್ತೆ ಸಾಕಷ್ಟು ಭದ್ರತೆ!
ಈ ರೀತಿ ಮತದಾನ ಮುಗಿದ ಬಳಿಕ ಮತ್ತೆಈ ಇವಿಎಂ ಮಷಿನ್ಗಳು ಸ್ಟ್ರಾಂಗ್ ರೂಮ್ ಸೇರುತ್ತವೆ. ಕೌಟಿಂಗ್ ಡೇ ದಿನವೂ ಪೋಲಿಂಗ್ ಏಜೆಂಟ್ ಸಮ್ಮುಖದಲ್ಲಿ ಕೌಂಟಿಗ್ ಮಾಡಲಾಗುತ್ತೆ. ಈ ನಡುವೆ ಇವಿಎಂ ಮಷಿನಗಳನ್ನು ಯಾರ ಕೈಗೆ ಸಿಗದಂತೆ ಸಾಕಷ್ಟು ಭದ್ರತೆ ಸಹ ಒದಗಿಸಲಾಗಿರುತ್ತೆ.
ಇದನ್ನೂ ಓದಿ: ಇವಿಎಂನ ಕೊನೆಯಲ್ಲಿ ಈ ನೋಟಾ ಇರೋದ್ಯಾಕೆ? ಈ ಬಟನ್ಗಿರೋ ಪವರ್ ಬಗ್ಗೆ ಗೊತ್ತಿದ್ಯಾ?
ಮೊದಲ ಬಾರಿಗೆ ಇವಿಎಂ ಮಷಿನ್ ಬಳಸಿದ್ದೆಲ್ಲಿ?
ಭಾರತದಲ್ಲಿ ಮೊದಲ ಬಾರಿ ಎಲೆಕ್ಟ್ರಾನಿಕ್ ವೋಟಿಂಗ್ ಮೆಷಿನ್ ಬಳಕೆಯಾಗಿದ್ದು 1981ರ ಕೇರಳ ಉಪಚುನಾವಣೆಯಲ್ಲಿ. ಅಲ್ಲಿಂದ ಇಲ್ಲಿಯವರೆಗೂ ಇವಿಎಂ ಯಂತ್ರಗಳು ಹೊಸ ಹೊಸ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳುತ್ತಿದ್ದು, ಪ್ರಸ್ತುತ ಮತಯಂತ್ರ ಬ್ಯಾಲೇಟ್ ಯೂನಿಟ್, ಕಂಟ್ರೋಲ್ ಯೂನಿಟ್ ಮತ್ತು ಗರಿಷ್ಟ 3,840 ವೋಟ್ ಸಂಗ್ರಹಿಸುವ ಸಾಮರ್ಥ್ಯವನ್ನು ಹೊಂದಿವೆ.
ಇವಿಎಂ ಯಂತ್ರವನ್ನು ಹ್ಯಾಕ್ ಮಾಡಬಹುದೆ?
ಇವಿಎಂಗಳ ತಾಂತ್ರಿಕತೆಯನ್ನು ಹೇಗೆ ಹ್ಯಾಕ್ ಮಾಡಬಹುದು ಎಂಬುದನ್ನು ತಿಳಿಯುವುದು ಮುಖ್ಯ. ಹ್ಯಾಕರ್‌ಗಳು ಇವಿಎಂ ಅನ್ನು ಹ್ಯಾಕ್ ಮಾಡುವುದಕ್ಕೆ ಯಂತ್ರವನ್ನು ಬಿಚ್ಚಬೇಕು ಅಥವಾ ಆ ಇವಿಎಂ ಯಂತ್ರ ಅಂತರ್ಜಾಲ ಸಂಪರ್ಕವನ್ನು ಹೊಂದಿರಬೇಕು. ಹಾಗಿದ್ದರೆ ಯಂತ್ರವನ್ನು ಹ್ಯಾಕ್ ಮಾಡಬಹುದು. ಇಲ್ಲದಿದ್ದರೆ ಅಸಾಧ್ಯ. ಇವಿಎಂ ಮಷಿನ್ನಲ್ಲಿ ನೀವು ಮಾಡಿ ವೋಟ್ 10 ವರ್ಷಗಳ ಕಾಲ ಸ್ಟೋರ್ ಆಗಿರುತ್ತೆ.
ಅಮೆರಿಕಾದಲ್ಲಿ ಇವಿಎಂ ಯಾಕೆ ಬಳಸಲ್ಲ?
ಭಾರತ ಸೇರಿದಂತೆ ಸಾಕಷ್ಟು ದೇಶಗಳಲ್ಲಿ ಈ ಇವಿಎಂ ಮಷಿನ್ಗಳನ್ನು ಬಳಸಲಾಗ್ತಿದೆ. ಅಮೇರಿಕಾದಲ್ಲಿ ಇಂದಿಗೂ ಬ್ಯಾಲೆಟ್ ಪೇಪರ್ಗಳನ್ನು ಮಾತ್ರ ಬಳಸಲಾಗುತ್ತೆ. ಇಲ್ಲಿ ಬ್ಯಾಲೆಟ್ ಪೇಪರ್ನಿಂದ ಯಾವುದೇ ತೊಂದರೆಯಾಗಿಲ್ಲ ಹೀಗಾಗಿ ಅಲ್ಲಿ ಇವಿಎಂ ಮಷಿನ್ ಬಳಸುವ ಸ್ಥಿತಿ ಬಂದಿಲ್ಲ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ