• ಹೋಂ
  • »
  • ನ್ಯೂಸ್
  • »
  • ಬ್ಯುಸಿನೆಸ್
  • »
  • Success Story: ಪಾಕ್‌ನಿಂದ ಕುದುರೆಗಾಡಿಯಲ್ಲಿ ಭಾರತಕ್ಕೆ ಬಂದು ಮಸಾಲೆ ಮಾರಿದವರು! ಇದು ಕೋಟ್ಯಾಧಿಪತಿ ಎಂಡಿಎಚ್‌ ಸಾಹಸಗಾಥೆ

Success Story: ಪಾಕ್‌ನಿಂದ ಕುದುರೆಗಾಡಿಯಲ್ಲಿ ಭಾರತಕ್ಕೆ ಬಂದು ಮಸಾಲೆ ಮಾರಿದವರು! ಇದು ಕೋಟ್ಯಾಧಿಪತಿ ಎಂಡಿಎಚ್‌ ಸಾಹಸಗಾಥೆ

ಎಂ ಡಿ ಹೆಚ್​

ಎಂ ಡಿ ಹೆಚ್​

ಕೈಯಲ್ಲೇ ರುಬ್ಬಿದ ಮಸಾಲೆಗೆ ಹೆಸರುವಾಸಿಯಾಗಿರುವ ಎಮ್‌ಡಿಎಚ್ ಚೋಲೆ ಮಸಾಲೆ, ಬಿಂಡಿ ಮಸಾಲೆ, ಗರಮ್ ಮಸಾಲೆ, ಪುಲಾವ್ ಮಸಾಲೆಗಳ ವಿವಿಧ ಶ್ರೇಣಿಗಳನ್ನು ಹೊಂದಿದೆ.

  • Share this:
  • published by :

ಭಾರತದ (India) ಅತಿದೊಡ್ಡ ಮಸಾಲೆ ಉತ್ಪಾದಕ ಹಾಗೂ ಮಾರಾಟಗಾರ ಎಂದೆನಿಸಿರುವ ಎಮ್‌ಡಿಎಚ್ ಭಾರತದಲ್ಲಿ ಮಾತ್ರವಲ್ಲದೆ ವಿದೇಶದಲ್ಲಿ ಕೂಡ ಬಳಕೆದಾರರನ್ನು ಹೊಂದಿದೆ. ಎಮ್‌ಡಿಎಚ್ (MDH) ಹಲವಾರು ರೀತಿಯ ಗರಮ್ ಮಸಾಲೆಗಳನ್ನು ಸಿದ್ಧಪಡಿಸುವಲ್ಲಿ ಸಿದ್ಧಹಸ್ತ ಎಂದೆನಿಸಿದೆ. ಕೈಯಲ್ಲೇ ರುಬ್ಬಿದ ಮಸಾಲೆಗೆ ಹೆಸರುವಾಸಿಯಾಗಿರುವ ಎಮ್‌ಡಿಎಚ್ ಚೋಲೆ ಮಸಾಲೆ, ಬಿಂಡಿ ಮಸಾಲೆ, ಗರಮ್ ಮಸಾಲೆ, ಪುಲಾವ್ ಮಸಾಲೆಗಳ ವಿವಿಧ ಶ್ರೇಣಿಗಳನ್ನು ಹೊಂದಿದೆ. ಹೀಗೆ ಎಮ್‌ಡಿಎಚ್ ಪ್ರತಿ ಮನೆ ಮನೆಗಳಲ್ಲೂ ರಾರಾಜಿಸಿದೆ ಹಾಗೂ ಭಾರತೀಯರ ಮನೆ ಮನವನ್ನು ಗೆದ್ದಿದೆ.


ವಿದೇಶಗಳಲ್ಲೂ ಖ್ಯಾತಿ ಗಳಿಸಿರುವ ಎಮ್‌ಡಿಎಚ್


ಕೋಟ್ಯಾಂತರ ರೂಪಾಯಿ ವ್ಯವಹಾರ ನಡೆಸುವ ಎಮ್‌ಡಿಎಚ್ 1000 ಸ್ಟಾಕಿಸ್ಟ್‌ಗಳು ಮತ್ತು 4 ಲಕ್ಷಕ್ಕೂ ಹೆಚ್ಚು ಚಿಲ್ಲರೆ ವ್ಯಾಪಾರಿಗಳ ಜಾಲದ ಮೂಲಕ ಭಾರತ ಹಾಗೂ ವಿದೇಶಗಳಲ್ಲಿ ಖ್ಯಾತಿ ಗಳಿಸಿದೆ. ಎಮ್‌ಡಿಎಚ್ ಇಂದು 62 ಉತ್ಪನ್ನಗಳ ಶ್ರೇಣಿಯನ್ನು ಹೊಂದಿದೆ ಹಾಗೂ 150 ಕ್ಕೂ ವಿವಿಧ ಪ್ಯಾಕೇಜ್‌ಗಳಲ್ಲಿ ಲಭ್ಯವಿದೆ. ಇವುಗಳಲ್ಲಿ ರುಬ್ಬಿದ ಹಾಗೂ ಮಿಶ್ರಿತ ಮಸಾಲೆಗಳು ಸೇರಿವೆ.


ಇದನ್ನೂ ಓದಿ: ಎಟಿಎಂನಿಂದ ಹಣ ಡ್ರಾ ಮಾಡಿದ ಮೇಲೆ ಹೀಗೆ ಮಾಡಿ, ಇಲ್ಲದಿದ್ರೆ ಖಾತೆಯಲ್ಲಿರೋ ದುಡ್ಡೆಲ್ಲಾ ಗೋತಾ!


ಈ ಮಸಾಲೆಗಳ ವಿಶೇಷತೆ ಎಂದರೆ ಇದು ಯಾವುದೇ ಸಂರಕ್ಷಕಗಳನ್ನು ಹೊಂದಿಲ್ಲ ಎಂದಾಗಿದೆ. ಎಮ್‌ಡಿಎಚ್ ಕೇಸರಿಯಂತಹ ಇತರ ಉತ್ಪನ್ನಗಳನ್ನು ಕೂಡ ಮಾರಾಟ ಮಾಡುತ್ತದೆ.


ಮಸಾಲೆ ರಾಜ ಧರಂಪಾಲ್ ಗುಲಾಟಿ


ಮಸಾಲೆಯ ರಾಜ ಎಂದೇ ಹೆಸರುವಾಸಿಯಾಗಿದ್ದ ಎಂಡಿಎಚ್ ಮಾಲೀಕರಾದ ಧರಂಪಾಲ್ ಗುಲಾಟಿ ಡಿಸೆಂಬರ್ 2020 ರಲ್ಲಿ ತಮ್ಮ 98 ನೇ ವಯಸ್ಸಿನಲ್ಲಿ ನಿಧನರಾದರು.
ಇಂದಿಗೂ ಅವರು ಮಾಡಿದ ಸಾಧನೆ ಹಾಗೂ ಅವರ ಪ್ರಸಿದ್ಧಿ ಜನಪ್ರಿಯವಾಗಿದೆ. 1923 ರಲ್ಲಿ ಪಾಕಿಸ್ತಾನದಲ್ಲಿರುವ ಸಿಯಾಲ್‌ಕೋಟ್‌ನ ಮಸಾಲೆ ವ್ಯಾಪಾರಿ ಚುನ್ನಿ ಲಾಲ್‌ ದಂಪತಿಗಳ ಪುತ್ರನಾಗಿ ಧರಂಪಾಲ್ ಜನಿಸಿದರು.


ಮಹಾಶಯ್ ಚುನ್ನಿಲಾಲ್ ಗುಲಾಟಿ ಅವರು 1947 ರಿಂದ ಪ್ರಸ್ತುತ ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದಲ್ಲಿರುವ ಬ್ರಿಟಿಷ್ ಇಂಡಿಯಾದ ಸಿಯಾಲ್‌ಕೋಟ್‌ನಲ್ಲಿ 1919 ರಲ್ಲಿ ಮಸಾಲಾ ಕಂಪನಿಯನ್ನು ಸ್ಥಾಪಿಸಿದರು.


ಇದನ್ನೂ ಓದಿ: 150 ಬಾರಿ ತಿರಸ್ಕರಿಸಲ್ಪಟ್ಟಿತ್ತು ಡ್ರಿಮ್​ 11 ಐಡಿಯಾ, ಆದ್ರೆ ಇಂದು 65 ಸಾವಿರ ಕೋಟಿಯ ಕಂಪನಿ! ಇದರ ಹಿಂದಿದೆ ರೋಚಕ ಕಹಾನಿ


ಚಿಕ್ಕಂದಿನಿಂದ ತಂದೆಯ ಮಸಾಲೆ ವ್ಯಾಪಾರದಲ್ಲಿ ಸಹಾಯ ಮಾಡುತ್ತಿದ್ದ ಧರಂಪಾಲ್ ಕುಟುಂಬದ ವ್ಯಾಪಾರವನ್ನು ಶೀಘ್ರವೇ ಕಲಿತುಕೊಂಡರು. ದೇಶ ವಿಭಜನೆಯಾದಾಗ ಭಾರತಕ್ಕೆ ಬಂದ ಧರಂಪಾಲ್ ಜೇಬಿನಲ್ಲಿ ಆಗ ಇದ್ದಿದ್ದು ಬರೀ ರೂ 1,500.


ಧರಂಪಾಲ್ ಮಸಾಲೆ ಉದ್ಯಮವನ್ನು ಹೇಗೆ ಆರಂಭಿಸಿದರು


ರೂ 650 ಕ್ಕೆ ಒಂದು ಕುದುರೆ ಗಾಡಿ ಖರೀದಿಸಿ ಧರಂಪಾಲ್ ದೇಹಲಿಯ ಬೀದಿ ಬೀದಿಗಳಲ್ಲಿ ಮಸಾಲೆ ಮಾರಾಟ ಮಾಡಲಾರಂಭಿಸಿದರು. ನಂತರ ರಾಷ್ಟ್ರ ರಾಜಧಾನಿಯ ಕರೋಲ್ ಬಾಗ್ ಪ್ರದೇಶದಲ್ಲಿ ಸಣ್ಣ ಅಂಗಡಿಯನ್ನು ಆರಂಭಿಸಿದರು.


ತಮ್ಮ ಅಂಗಡಿಗೆ ಡೆಗ್ಗಿ ಮಿರ್ಚಿ ವಾಲೆ ಎಂಬ ಹೆಸರನ್ನಿಟ್ಟರು. 1959 ರಲ್ಲಿ ಅವರು ತಮ್ಮ ಸ್ವಂತ ಮಸಾಲೆ ಕಾರ್ಖಾನೆಯನ್ನು ಸ್ಥಾಪಿಸಲು ಕೀರ್ತಿ ನಗರದಲ್ಲಿ ಒಂದು ನಿವೇಶನವನ್ನು ಖರೀದಿಸಿದರು.


ತಮ್ಮ ನಿರಂತರ ಪರಿಶ್ರಮ ಹಾಗೂ ಕಠಿಣ ಕೆಲಸದಿಂದ ಗುಲಾಟಿ ಸಣ್ಣ ಅಂಗಡಿಯನ್ನು ಜಗತ್ತಿನಾದ್ಯಂತ ಪ್ರಸಿದ್ಧವಾದ ಬಹುಕೋಟಿ ಉದ್ಯಮವನ್ನಾಗಿ ರೂಪಿಸಿಕೊಂಡರು.


ಗುಣಮಟ್ಟದ ಉತ್ಪನ್ನವನ್ನು ದೇಶವಾಸಿಗಳಿಗೆ ನೀಡುವುದೇ ನನ್ನ ಉದ್ದೇಶವಾಗಿದೆ ಎಂದು ತಿಳಿಸಿರುವ ಧರಂಪಾಲ್, ನನ್ನ ಸಂಬಳದ ಸುಮಾರು 90% ಚಾರಿಟಿಗೆ ಹೋಗುತ್ತದೆ ಎಂದು ಸಂದರ್ಶನವೊಂದರಲ್ಲಿ ತಿಳಿಸುತ್ತಾರೆ.
ಧರಂಪಾಲ್ ನಿವ್ವಳ ಆದಾಯ


2017 ರಲ್ಲಿ ಉದ್ಯಮಿ ಧರಂಪಾಲ್ 21 ಕೋಟಿ ಆದಾಯವನ್ನೇ ಕೈಗೆ ಪಡೆದುಕೊಂಡಾಗ ಭಾರತದ FMCG ವಲಯದಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ಸಿಇಒ ಎಂಬ ಖ್ಯಾತಿಯನ್ನು ಪಡೆದರು.


ಅವರ ನಾಯಕತ್ವದಲ್ಲಿ ಎಂಡಿಎಚ್ ಮಸಾಲಾ 1,000 ಕೋಟಿ ವ್ಯವಹಾರವಾಯಿತು. ಅವರು ನಿಧನರಾದಾಗ ಅವರ ನಿವ್ವಳ ಮೌಲ್ಯ ಸುಮಾರು 5,000 ಕೋಟಿ ರೂಪಾಯಿಗಳಷ್ಟಿತ್ತು ಎಂದು ವರದಿ ತಿಳಿಸುತ್ತದೆ.

First published: