ಈ ಬಾರಿಯ ಬಜೆಟ್ (Budget)ಭಾಷಣದಲ್ಲಿ ನಮ್ಮ ದೇಶದ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಮಹಿಳೆಯರಿಗಾಗಿ ಹೊಸದಾದ ಒಂದು ಸಣ್ಣ ಉಳಿತಾಯ ಯೋಜನೆಯನ್ನು ಘೋಷಿಸಿದರು. ನೀವು ಅದರ ಬಗ್ಗೆ ಕೇಳಿದ್ದರೆ, ಒಳ್ಳೆಯದು. ಅದರ ಬಗ್ಗೆ ಕೇಳದೆ ಹೋಗಿದ್ದರೆ, ಇದರ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ನೀಡುತ್ತೇವೆ ನೋಡಿ. ದೇಶದ ‘ಆಜಾದಿ ಕಾ ಅಮೃತ್ ಮಹೋತ್ಸವ್’ ಆಚರಣೆಯ ಅಂಗವಾಗಿ ನಿರ್ಮಲಾ ಸೀತಾರಾಮನ್ ಅವರು ಎಂಎಸ್ಎಸ್‌ಸಿ ಯೋಜನೆಯು ಮಹಿಳೆಯರು (Women) ಅಥವಾ ಬಾಲಕಿಯರ ಹೆಸರಿನಲ್ಲಿ 2 ವರ್ಷಗಳವರೆಗೆ ಎಂದರೆ ಮಾರ್ಚ್ 2025 ರವರೆಗೆ 7.5% ನಿಗದಿತ ಬಡ್ಡಿ ದರದಲ್ಲಿ ಭಾಗಶಃ ಹಿಂತೆಗೆದುಕೊಳ್ಳುವ ಆಯ್ಕೆಯೊಂದಿಗೆ 2 ಲಕ್ಷ ರೂಪಾಯಿಗಳವರೆಗೆ ಠೇವಣಿ ಸೌಲಭ್ಯವನ್ನು ನೀಡುತ್ತದೆ.
ಏನದು ಮಹಿಳೆಯರಿಗಾಗಿ ಘೋಷಣೆ ಮಾಡಿದ ಯೋಜನೆ?
ಈ ಎಂಎಸ್ಎಸ್‌ಸಿ ಯೋಜನೆಗೆ ಔಪಚಾರಿಕ ಅಧಿಸೂಚನೆ ಶೀಘ್ರದಲ್ಲಿಯೇ ಹೊರಬೀಳಲಿದ್ದು, ಈ ಯೋಜನೆಯಲ್ಲಿ 2 ಲಕ್ಷ ರೂಪಾಯಿಗಳ ಹೂಡಿಕೆಯು ನೀಡುವ ಆದಾಯ ಮತ್ತು ಇದು ತೆರಿಗೆ ಮುಕ್ತವಾಗಿದೆಯೇ ಎಂಬುದರ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ ನೋಡಿ.
ಎಂಎಸ್ಎಸ್‌ಸಿ ಯೋಜನೆಯ ಬಡ್ಡಿ ಆದಾಯದ ಲೆಕ್ಕಾಚಾರವು ಅಂಚೆ ಕಚೇರಿ ನೀಡುವ ಇತರ ಸಣ್ಣ ಉಳಿತಾಯ ಯೋಜನೆಗಳಂತೆಯೇ ಇರುತ್ತದೆ.
7.5% ಬಡ್ಡಿಯಲ್ಲಿ, ಎಂಎಸ್ಎಸ್‌ಸಿ ಯೋಜನೆಯು ಒಂದು ವರ್ಷದಲ್ಲಿ 15,427 ರೂಪಾಯಿ ಮತ್ತು ಎರಡು ವರ್ಷಗಳಲ್ಲಿ 32,044 ರೂಪಾಯಿ ಹೆಚ್ಚುವರಿಯಾಗಿ ನೀಡುತ್ತದೆ. ಎಂದರೆ ಎರಡು ವರ್ಷಗಳಲ್ಲಿ 2 ಲಕ್ಷ ರೂಪಾಯಿಗಳ ಈ ಹೂಡಿಕೆಯ ಒಟ್ಟು ಮೌಲ್ಯವು 2.32 ಲಕ್ಷ ರೂಪಾಯಿಗಳಾಗುತ್ತದೆ.
ಎಂಎಸ್ಎಸ್‌ಸಿ ಯೋಜನೆ ತೆರಿಗೆ ಮುಕ್ತವಾಗಿರಲಿದೆಯೇ?
ಎಂಎಸ್ಎಸ್‌ಸಿ ಯೋಜನೆಯಡಿ ಹೂಡಿಕೆಯು ಆದಾಯ ತೆರಿಗೆ ಕಾಯ್ದೆಯಡಿ ಕಡಿತಕ್ಕೆ ಅರ್ಹವಾಗಿದೆಯೇ ಅಥವಾ ಇಲ್ಲವೇ ಎಂಬುದನ್ನು ಹಣಕಾಸು ಸಚಿವರು ಇನ್ನೂ ಸ್ಪಷ್ಟಪಡಿಸಿಲ್ಲ. ಎಂಎಸ್ಎಸ್‌ಸಿ ಯೋಜನೆಯಡಿ ಮಾಡಿದ ಹೂಡಿಕೆಗಳ ತೆರಿಗೆಯ ಬಗ್ಗೆ ಸ್ಪಷ್ಟತೆಗಾಗಿ ನೀವು ಅಧಿಕೃತ ಅಧಿಸೂಚನೆಗಾಗಿ ಇನ್ನೂ ಕಾಯಬೇಕಾಗುತ್ತದೆ.
"ದೇಶದಲ್ಲಿ ಉಳಿತಾಯವನ್ನು ಉತ್ತೇಜಿಸಲು ಇದು ಉತ್ತಮವಾದ ಹೆಜ್ಜೆಯಾಗಿದೆ, ಜೊತೆಗೆ ವಿತ್ತೀಯ ಕೊರತೆಗೆ ಹಣಕಾಸು ಒದಗಿಸಲು ಸರ್ಕಾರಕ್ಕೆ ಸಹಾಯ ಮಾಡುತ್ತದೆ” ಎಂದು ತಜ್ಞರು ಹೇಳುತ್ತಾರೆ.
ಇದನ್ನೂ ಓದಿ: ಕಿಸ್ ಕೊಟ್ಟ 5 ನಿಮಿಷಕ್ಕೇ ಕೈ ಕೊಟ್ಟ ಹುಡುಗಿ, ನೋವಿನಲ್ಲಿ ಮತ್ತೊಬ್ಬರನ್ನು ತಬ್ಬಿಕೊಂಡ ಡಾಕ್ಟರ್ ಬ್ರೋ!
ಪ್ರಸ್ತುತ ಬ್ಯಾಂಕ್ ಗಳಲ್ಲಿನ ಎಫ್ ಡಿ ಬಡ್ಡಿ ದರ 6.75% ಗೆ ಹೋಲಿಸಿದರೆ 7.5% ಕೊಡುಗೆ ದರವು ಹೇಗೆ ಕಾರ್ಯನಿರ್ವಹಿಸುತ್ತದೆ ಎಂಬುದನ್ನು ಇನ್ನೂ ಕಾದು ನೋಡಬೇಕಾಗಿದೆ. ಸರ್ಕಾರದ ಎಂಎಸ್ಎಸ್‌ಸಿ ಯನ್ನು "ವಿನಾಯಿತಿ ಹೂಡಿಕೆ ಎಂದು ಗುರುತಿಸಬಹುದು" ಎಂದು ಎಸ್‌ಬಿಐ ರಿಸರ್ಚ್ ಬಜೆಟ್ 2023 ರ ಬಗ್ಗೆ ಮಾಡಿದ ವಿಶೇಷ ವರದಿಯಲ್ಲಿ ತಿಳಿಸಿದೆ.
ಎಂಎಸ್ಎಸ್‌ಸಿ ಖಾತೆಯನ್ನು ಎಲ್ಲಿ ತೆರೆಯಬಹುದು?
ಎಂಎಸ್ಎಸ್‌ಸಿ ಖಾತೆ ತೆರೆಯುವ ಸೌಲಭ್ಯವು ಅಂಚೆ ಕಚೇರಿಯಲ್ಲಿ ಲಭ್ಯವಾಗುವ ಸಾಧ್ಯತೆಯಿದೆ. ಆದಾಗ್ಯೂ, ಈ ಯೋಜನೆಯನ್ನು ನೀಡಲು ಸರ್ಕಾರವು ಕೆಲವು ಬ್ಯಾಂಕುಗಳಿಗೂ ಸಹ ಅವಕಾಶವನ್ನು ನೀಡಬಹುದು. ಸ್ಪಷ್ಟತೆಗಾಗಿ ನೀವು ಅಧಿಕೃತ ಅಧಿಸೂಚನೆಗಾಗಿ ಕಾಯಬೇಕು.
ಎಂಎಸ್ಎಸ್‌ಸಿ ಯೋಜನೆಯಲ್ಲಿ ಯಾರೆಲ್ಲಾ ಹೂಡಿಕೆ ಮಾಡಬಹುದು?
ಯೋಗ್ಯ ಆದಾಯದೊಂದಿಗೆ ಸುರಕ್ಷಿತ ಹೂಡಿಕೆ ಆಯ್ಕೆಗಳನ್ನು ಹುಡುಕುತ್ತಿರುವ ಮಹಿಳಾ ಹೂಡಿಕೆದಾರರು, ಠೇವಣಿ ಇಡಲು ಬಯಸುವವರು ಈ ಯೋಜನೆಯನ್ನು ಪರಿಗಣಿಸಬಹುದು.
ಇದು 7.5% ಬಡ್ಡಿಯನ್ನು ಒದಗಿಸುತ್ತದೆ, ಇದು ಬ್ಯಾಂಕುಗಳು ಮತ್ತು ಅಂಚೆ ಕಚೇರಿ ನೀಡುವ ವಿವಿಧ ಅವಧಿಯ ಫಿಕ್ಸೆಡ್ ಡೆಪಾಸಿಟ್ ಯೋಜನೆಗಳಿಗಿಂತ ಉತ್ತಮವಾಗಿದೆ. ಪ್ರಸ್ತುತ, ಪೋಸ್ಟ್ ಆಫೀಸ್ 2 ವರ್ಷಗಳ ಅವಧಿಗೆ ನೀಡುವ ಫಿಕ್ಸೆಡ್ ಡೆಪಾಸಿಟ್ ಬಡ್ಡಿ 6.8% ಆಗಿದೆ.
ನೀವು ಈ ಖಾತೆಯನ್ನು ಯಾವಾಗ ತೆರೆಯಬಹುದು?
ಎಂಎಸ್ಎಸ್‌ಸಿ ಯೋಜನೆಯ ಖಾತೆ ತೆರೆಯುವ ಸೌಲಭ್ಯವು ಏಪ್ರಿಲ್ 1, 2023 ರಿಂದ ಅಥವಾ ಭಾರತ ಸರ್ಕಾರ ಘೋಷಿಸಿದಾಗ ಲಭ್ಯವಾಗುವ ಸಾಧ್ಯತೆಯಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ