• ಹೋಂ
 • »
 • ನ್ಯೂಸ್
 • »
 • ಬ್ಯುಸಿನೆಸ್
 • »
 • Electric Vehicle: ಎಲೆಕ್ಟ್ರಿಕ್ ಸ್ಕೂಟರ್ ಖರೀದಿಸುತ್ತಿದ್ದೀರಾ? ಅದಕ್ಕಿಂತ ಮೊದಲು ಈ ವಿಷಯ ನೀವು ತಿಳಿದಿರಲೇಬೇಕು

Electric Vehicle: ಎಲೆಕ್ಟ್ರಿಕ್ ಸ್ಕೂಟರ್ ಖರೀದಿಸುತ್ತಿದ್ದೀರಾ? ಅದಕ್ಕಿಂತ ಮೊದಲು ಈ ವಿಷಯ ನೀವು ತಿಳಿದಿರಲೇಬೇಕು

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

ಬ್ಯಾಟರಿ ಚಾಲಿತ ಎಲೆಕ್ಟ್ರಿಕ್ ಮೋಟಾರು ಆಧಾರಿತ ವಿವಿಧ ಬೈಕುಗಳು ಮತ್ತು ಕಾರುಗಳು ಮಾರುಕಟ್ಟೆಯಲ್ಲಿ ಲಭ್ಯವಿವೆ. ಯಾವ ಸಂಸ್ಥೆಗಳು ಎಷ್ಟು ದರಗಳಲ್ಲಿ ತಮ್ಮ ವಾಹನಗಳನ್ನು ಗ್ರಾಹಕರಿಗೆ ನೀಡುತ್ತಿದೆ. ಈ ಬಗ್ಗೆ ಮೊದಲಾದ ವಿವರಗಳು ಈ ಲೇಖನದಲ್ಲಿದೆ.

 • Share this:

ಇತ್ತೀಚಿನ ದಿನಗಳಲ್ಲಿ ಹೆಚ್ಚಿನ ಸವಾರರು ಎಲೆಕ್ಟ್ರಿಕ್ ವಾಹನಗಳನ್ನೇ (Electric Vehicles) ಆರಿಸಿಕೊಳ್ಳುತ್ತಿದ್ದಾರೆ. ಮಾಲಿನ್ಯ ಮುಕ್ತ ಪರಿಸರಕ್ಕಾಗಿ ಎಲೆಕ್ಟ್ರಿಕ್ ಬೈಕ್ (Electric Bike), ಕಾರು ಹಾಗೂ ಬಸ್‌ಗಳ ಅಳವಡಿಕೆಯನ್ನು ಉತ್ತೇಜಿಸುವುದಕ್ಕಾಗಿ ಸರಕಾರ ಕೂಡ ಇವಿ ವಾಹನಗಳಿಗಾಗಿ ಸಬ್ಸಿಡಿ (Subsidy) ನೀಡುತ್ತಿದ್ದು ಪ್ರಯಾಣಿಕರು ಸಂಚಾರಕ್ಕಾಗಿ ಹೆಚ್ಚು ಹೆಚ್ಚು ಎಲೆಕ್ಟ್ರಿಕ್ ವಾಹನಗಳನ್ನೇ ಆಯ್ಕೆಮಾಡಿಕೊಳ್ಳುತ್ತಿದ್ದಾರೆ. ಬ್ಯಾಟರಿ ಚಾಲಿತ ಎಲೆಕ್ಟ್ರಿಕ್ ಮೋಟಾರು ಆಧಾರಿತ ವಿವಿಧ ಬೈಕುಗಳು ಮತ್ತು ಕಾರುಗಳು ಮಾರುಕಟ್ಟೆಯಲ್ಲಿ ಲಭ್ಯವಿವೆ. ಯಾವ ಸಂಸ್ಥೆಗಳು ಎಷ್ಟು ದರಗಳಲ್ಲಿ ತಮ್ಮ ವಾಹನಗಳನ್ನು ಗ್ರಾಹಕರಿಗೆ ನೀಡುತ್ತಿದೆ. ಈ ಬಗ್ಗೆ ಮೊದಲಾದ ವಿವರಗಳನ್ನು ಈ ಕೆಳಗಿನ ಲೇಖನದ ಮೂಲಕ ತಿಳಿದುಕೊಳ್ಳೋಣ.


ಎಲೆಕ್ಟ್ರಿಕ್ ಸ್ಕೂಟರ್‌ಗಳ ಬೆಲೆ


ಓಲಾ, ಅಥರ್, ಟಿವಿಎಸ್ ಮತ್ತು ರಿವೋಲ್ಟ್ ಕಂಪನಿಗಳು ಗ್ರಾಹಕರಿಗೆ ಎಲೆಕ್ಟ್ರಿಕ್ ಸ್ಕೂಟರ್‌ಗಳನ್ನು ಒದಗಿಸುತ್ತಿದೆ. ಅದರಲ್ಲಿ ಓಲಾ ಎಸ್‌1 ಪ್ರೋ ಬೆಲೆ ರೂ 1,33,000 ಆಗಿದ್ದು, ಅಥರ್‌ 450X ನ ಬೆಲೆ ರೂ 1,37,000 ಆಗಿದೆ ಅಂತೆಯೇ ಟಿವಿಎಸ್ iQube ನ ದರವು ರೂ 1,61,000 ಆಗಿದೆ.


FAME ಯೋಜನೆಯಡಿಯಲ್ಲಿ EV ಸಬ್ಸಿಡಿಗೆ ಯಾರು ಅರ್ಹರು?


ಎಲೆಕ್ಟ್ರಿಕ್ ದ್ವಿಚಕ್ರ ವಾಹನವನ್ನು ಖರೀದಿಸುವವರಿಗೆ ಪ್ರತಿ KWh ಬ್ಯಾಟರಿ ಸಾಮರ್ಥ್ಯಕ್ಕೆ ರೂ 15,000 ಪ್ರೋತ್ಸಾಹ ಧನವನ್ನು ನೀಡಲಾಗುತ್ತಿದ್ದು, ಈ ಹಿಂದೆ ಪ್ರತಿ KWh ಬ್ಯಾಟರಿ ಸಾಮರ್ಥ್ಯಕ್ಕೆ ರೂ 10,000 ಪ್ರೋತ್ಸಾಹ ಧನವಾಗಿತ್ತು.


ಇದನ್ನೂ ಓದಿ: ಪಾತಾಳಕ್ಕೆ ಕುಸಿದ ಟೊಮ್ಯಾಟೋ ಬೆಲೆ, 1 ಕೆಜಿಗೆ ಕೇವಲ 3 ರೂಪಾಯಿ!


ಭಾರತದ ಫೇಮ್ ಇಂಡಿಯಾ ಹಂತ II ರಲ್ಲಿ ಎಲೆಕ್ಟ್ರಿಕ್ ವಾಹನಗಳ ವೇಗದ ಅಳವಡಿಕೆ ಮತ್ತು ತಯಾರಿಕೆಯ ಯೋಜನೆಯ ಪ್ರಕಾರ ಒಟ್ಟಾರೆ ಸಬ್ಸಿಡಿಯು ವಾಹನಗಳ ವೆಚ್ಚದ ಶೇಕಡಾ 40 ಕ್ಕೆ ಸೀಮಿತವಾಗಿದೆ. ಅಲ್ಲದೆ, 1.5 ಲಕ್ಷದವರೆಗಿನ ಬೆಲೆಯ ದ್ವಿಚಕ್ರ ವಾಹನಗಳ ಮೇಲೆ ಸಬ್ಸಿಡಿ ಲಭ್ಯವಿದೆ.


ಸಾಂಕೇತಿಕ ಚಿತ್ರ


ಎಲೆಕ್ಟ್ರಿಕ್ ವಾಹನಗಳ ವೇಗದ ಅಳವಡಿಕೆ ಮತ್ತು ತಯಾರಿಕೆ (FAME) ಪ್ರೋತ್ಸಾಹವು ದೇಶಾದ್ಯಂತವಿರುವ ಗ್ರಾಹಕರಿಗೆ ಅನ್ವಯಿಸುತ್ತದೆ ಕಡಿಮೆ ಬೆಲೆಯನ್ನು ಪಾವತಿಸುವ ಮೂಲಕ xEV ಅನ್ನು ಖರೀದಿಸುವ ಸಮಯದಲ್ಲಿ ಗ್ರಾಹಕರ ಮುಂಗಡವಾಗಿ ಬೇಡಿಕೆಯ ಪ್ರೋತ್ಸಾಹಕ ಪ್ರಯೋಜನವನ್ನು ಒದಗಿಸಲಾಗುತ್ತದೆ.


ಚಾರ್ಜರ್ ಬಿಲ್ಲಿಂಗ್ ಪ್ರತ್ಯೇಕವಾಗಿ, EMI ಗಳ ಲೆಕ್ಕಾಚಾರ


Ola S1 Pro ಮತ್ತು Ather 450X ಪ್ರಸ್ತುತ ಎರಡು ಜನಪ್ರಿಯ ಎಲೆಕ್ಟ್ರಿಕ್ ಸ್ಕೂಟರ್‌ಗಳಾಗಿವೆ. Ola S1 Pro ಸುಮಾರು 1,33,000 ರೂಗಳಲ್ಲಿ ಲಭ್ಯವಿದೆ, ಆದರೆ Ather 450X 1,37,000 ರೂಗಳಲ್ಲಿ ಲಭ್ಯವಿದೆ.


Ather 450X ಖರೀದಿಸುವಾಗ, ಈ ಎಲೆಕ್ಟ್ರಿಕ್ ಸ್ಕೂಟರ್ ಪ್ರೊ ಪ್ಯಾಕ್‌ನೊಂದಿಗೆ ಅಥರ್ 450X 1,37,000 ರೂಗಳಲ್ಲಿ ಲಭ್ಯವಿದ್ದು ಸಂಸ್ಥೆ ಚಾರ್ಜರ್ ಅನ್ನು ಪ್ರತ್ಯೇಕವಾಗಿ ಬಿಲ್ ಮಾಡಿದರೆ ಗ್ರಾಹಕರು ಈ ಬೆಲೆ ತೆತ್ತು ಖರೀದಿಸಬೇಕಾಗುತ್ತದೆ.


ಚಾರ್ಜರ್‌ನ ಬೆಲೆಯನ್ನು (ರೂ. 10,000 ರಿಂದ 20,000 ರವರೆಗೆ) ಬಿಲ್‌ಗೆ ಸೇರಿಸಿದರೆ, ಸ್ಕೂಟರ್‌ನ ಬೆಲೆ ರೂ. 1.5 ಲಕ್ಷ ಮಿತಿಯನ್ನು ದಾಟುತ್ತದೆ, ಹೀಗಾಗಿ ಯಾವುದೇ ಸಬ್ಸಿಡಿಯನ್ನು ಕ್ಲೈಮ್ ಮಾಡಲಾಗುವುದಿಲ್ಲ ದೆಹಲಿ ಶೋರೂಮ್‌ ಮಾರಾಟ ಕಾರ್ಯನಿರ್ವಾಹಕರು ತಿಳಿಸುತ್ತಾರೆ.


ಅಂದಾಜು EMI ಲೆಕ್ಕಾಚಾರ


Ather 450X Pro Pack ಗೆ ದೆಹಲಿಯಲ್ಲಿ ರೂ 1,55,567 (ಎಲ್ಲವನ್ನೂ ಒಳಗೊಂಡಂತೆ) ನಿಗದಿಪಡಿಸಿರುವ ಶುಲ್ಕವಾಗಿದೆ. ಖರೀದಿದಾರರು ರೂ 30,000 ಡೌನ್ ಪೇಮೆಂಟ್ ಮಾಡಿದರೆ 7.5 ಶೇಕಡಾ ಬಡ್ಡಿ ದರದಲ್ಲಿ 23 ತಿಂಗಳಿಗೆ ಇಎಮ್‌ಐ ರೂಪದಲ್ಲಿ ರೂ 6,525 ಅನ್ನು ಪಾವತಿಸಬೇಕು. ಅಂತೆಯೇ 35 ತಿಂಗಳಿಗೆ ರೂ 4,580 ರಂತೆ ಇಎಮ್‌ಐ ಪಾವತಿಸಬೇಕು.


top videos  ಖರೀದಿದಾರ ರೂ 50,000 ಡೌನ್ ಪೇಮೆಂಟ್ ಮಾಡಿದರೆ, ಮಾಸಿಕ ಇಎಂಐ 23 ತಿಂಗಳಿಗೆ ರೂ.5,495 ಮತ್ತು 35 ತಿಂಗಳಿಗೆ ರೂ.3,859 ಆಗಿರುತ್ತದೆ. ಖರೀದಿಗೆ ಅಗತ್ಯವಿರುವ ದಾಖಲೆಗಳೆಂದರೆ ಆಧಾರ್, ಪ್ಯಾನ್ ಕಾರ್ಡ್, ಪಾಸ್‌ಬುಕ್, ಕ್ಯಾನ್ಸಲ್ ಮಾಡಿರುವ ಚೆಕ್‌ಗಳು ಮತ್ತು 2 ಪಾಸ್‌ಪೋರ್ಟ್ ಗಾತ್ರದ ಫೋಟೋಗಳ ಪ್ರತಿಗಳಾಗಿವೆ.

  First published: