ನಿಮ್ಮ ವೃತ್ತಿಜೀವನದ ಆರಂಭದಲ್ಲೇ ಮನೆ ಖರೀದಿಸೋ ಪ್ಲಾನ್ ಮಾಡಿದ್ದೀರಾ? ಹಾಗಾದ್ರೆ ಈ ವಿಚಾರ ತಿಳಿಯಲೇಬೇಕು

ಇಂದಿನ ಪೀಳಿಗೆಯವರನ್ನು ಸೂಕ್ಷ್ಮವಾಗಿ ಗಮನಿಸಿದರೆ ಸಾಕಷ್ಟು ಯುವ ವಯಸ್ಕರು ತಮ್ಮ ಕರಿಯರ್ ಆರಂಭವಾದ ಕೇವಲ 6-8 ವರ್ಷಗಳಲ್ಲೇ ದೊಡ್ಡ ಮೊತ್ತದ ಗೃಹ ಸಾಲ ಪಡೆಯುತ್ತಾರೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ವಿದ್ಯಾಭ್ಯಾಸ (Education)  ಪಡೆದು ಕೆಲಸ ಹಿಡಿದು ಮದುವೆಯಾಗಿ ತನ್ನ ಕುಟುಂಬಕ್ಕೆಂದು ಒಂದು ಸ್ವಂತ ಮನೆಯನ್ನು ಮಾಡಿಕೊಳ್ಳಬೇಕೆಂಬ ಕನಸು ಪ್ರತಿ ವ್ಯಕ್ತಿಯದ್ದಾಗಿರುತ್ತದೆ ಎಂದರೆ ತಪ್ಪಾಗಲಿಕ್ಕಿಲ್ಲ. ದೊಡ್ಡ ದೊಡ್ಡ ಕಂಪನಿಗಳಲ್ಲಿ ಕೆಲಸ ಗಿಟ್ಟಿಸಿಕೊಳ್ಳುವ ಪ್ರತಿ ವ್ಯಕ್ತಿ ತನ್ನದೆ ಸ್ವಂತ ಮನೆ (House) ಕಟ್ಟುವ ಅಥವಾ ಕೊಳ್ಳುವ ಆಸೆಯನ್ನು ಇಟ್ಟುಕೊಂಡೇ ಇರುತ್ತಾನೆ. ಕೆಲವರು ಅತಿ ಚಿಕ್ಕ ವಯಸ್ಸಿನಲ್ಲೇ ತಮ್ಮ ಕರಿಯರ್ (Career) ಈಗಷ್ಟೆ ನೆಲೆಸುತ್ತಿದೆ ಎಂಬುವಾಗಲೇ ಮನೆಯನ್ನು ಕೊಂಡು ಬೇಗನೇ ಇಎಂಐಗಳನ್ನು(EMI)  ಮುಗಿಸಿ ಮುಂದೆ ಹಾಯಾಗಿರಬಹುದೆಂದು ಲೆಕ್ಕ ಹಾಕುತ್ತಾರೆ. ಆದರೆ ಬೇಗನೆ ಮನೆ ಕೊಳ್ಳುವ ನಿರ್ಧಾರ ಸರಿಯೇ?

ಈಗ ಸದ್ಯಕ್ಕಂತೂ ಬಹಳಷ್ಟು ಜನ ಆರ್ಥಿಕ ಸ್ವಾತಂತ್ರ್ಯದ ಬಗ್ಗೆ ಮಾತನಾಡುತ್ತಿದ್ದಾರೆ. ಅಷ್ಟಕ್ಕೂ ಆರ್ಥಿಕ ಸ್ವಾತಂತ್ರ್ಯ ಎಂದರೇನು ಎಂಬ ಪ್ರಶ್ನೆ ಬಹು ಜನರ ತಲೆಯಲ್ಲಿ ಮೂಡಬಹುದು. ಹೂಡಿಕೆಗಳಲ್ಲಿ ಹಣ ತೊಡಗಿಸಿ ಮುಂದೆ ಅದರಿಂದ ಬಹಳಷ್ಟು ಹಣದ ಲಾಭಗಳಿಸಿ ತದನಂತರ ಯಾವುದೇ ಆದಾಯವಿಲ್ಲದಿದ್ದರೂ ಆ ಹೂಡಿಕೆಗಳಿಂದ ಗಳಿಸಿದ ಲಾಭದ ಹಣದಿಂದಲೇ ನಿರಾಯಾಸವಾಗಿ ಬದುಕುವುದನ್ನು ಆರ್ಥಿಕ ಸ್ವಾತಂತ್ರ್ಯ ಎಂದು ಕರೆಯಬಹುದಾಗಿದೆ.

ಜಾಗತಿಕ ಮಟ್ಟದಲ್ಲಿ ಇತ್ತೀಚೆಗೆ FIRE ಎಂಬ ಪರಿಕಲ್ಪನೆ ಬಹಳ ಮಹತ್ವ ಪಡೆಯುತ್ತಿದೆ. ಇದರ ಅರ್ಥ ಫೈನಾನ್ಶಿಯಲ್ಲಿ ಇಂಡಿಪೆಂಡೆಂಟ್ ರಿಟೈರ್ ಅರ್ಲಿ ಎಂಬುದಾಗಿದೆ. ಆದರೆ, ಭಾರತದ ಮಟ್ಟಿಗೆ ಹೇಳುವುದಾದರೆ ಇದೊಂದು ಹೊಸ ಅಂಶವಾಗಿದೆ ಎಂದೇ ಹೇಳಬಹುದು. ಅಲ್ಲದೆ, ಈ ಬಗ್ಗೆ ಭಾರತದಲ್ಲಿ ಗಮನಾರ್ಹ ಪ್ರಮಾಣದ ಜನರಿಗೆ ಇದರ ಪರಿಕಲ್ಪನೆ ತಿಳಿದೇ ಇಲ್ಲ ಎಂದರೂ ತಪ್ಪಾಗಲಾರದು.

ಆದರೆ, ಒಂದು ಗಮನಿಸಬೇಕಾದ ಅಂಶವೆಂದರೆ ಆರ್ಥಿಕ ಸ್ವಾತಂತ್ರ್ಯ ಪಡೆಯುವುದು ಅಷ್ಟೊಂದು ಕಷ್ಟಕರ ಸಾಧನೆಯಂತೂ ಅಲ್ಲವೇ ಅಲ್ಲ ಎಂಬುದು. ಇದರ ಹಿಂದೆ ಯಾವ ದೊಡ್ಡ ರಾಕೆಟ್ ಸೈನ್ಸ್ ಸಹ ಇಲ್ಲ, ಆದರೆ, ಸರಿಯಾದ ಸಮಯದಲ್ಲಿ ಸರಿಯಾದ ಕೆಲಸ ಮಾಡುವ ಜಾಣ್ಮೆ ಇರುವುದು ಆರ್ಥಿಕ ಸ್ವಾತಂತ್ರ್ಯ ಪಡೆಯಲು ಇರಬೇಕಾದ ಪ್ರಮುಖ ಅರ್ಹತೆಯಾಗಿದೆ. ಸಾಮಾನ್ಯವಾಗಿ ಬಹುತೇಕ ಜನರು ಮಾಡಬಹುದಾದ ಮೂರು ಪ್ರಮಾದಗಳ ಬಗ್ಗೆ ಇಲ್ಲಿ ತಿಳಿಯೋಣ.

ಮನೆ ಕೊಳ್ಳಲು ಬಹು ಬೇಗನೆ ಸಾಲ ಮಾಡುವುದು

ಇಂದಿನ ಪೀಳಿಗೆಯವರನ್ನು ಸೂಕ್ಷ್ಮವಾಗಿ ಗಮನಿಸಿದರೆ ಸಾಕಷ್ಟು ಯುವ ವಯಸ್ಕರು ತಮ್ಮ ಕರಿಯರ್ ಆರಂಭವಾದ ಕೇವಲ 6-8 ವರ್ಷಗಳಲ್ಲೇ ದೊಡ್ಡ ಮೊತ್ತದ ಗೃಹ ಸಾಲ ಪಡೆಯುತ್ತಾರೆ. ಇದಕ್ಕೆ ಅವರಿಗೆ ಅವರದ್ದೇ ಆದ ಹಲವು ಕಾರಣಗಳಿರಬಹುದು, ಬೇಗನೇ ಮನೆ ತೆಗೆದುಕೊಂಡು ಬೇಗನೇ ಇಎಂಐ ಗಳನ್ನು ಮುಗಿಸಿ ಮುಂದೆ ಹಾಯಾಗಿರಬಹುದಾದ ವಿಚಾರ ಒಂದೆಡೆಯಾದರೆ ಸಮಾಜದಲ್ಲಿ ಕೆಲವರಿಗೆ ಪ್ರತಿಷ್ಠೆಯ ವಿಷಯವಾಗಿಯೋ ಅಥವಾ ಯಾವುದೋ ಒಂದು ರೀತಿಯ ಒತ್ತಡದಿಂದಾಗಿಯೋ ಅವರು ಬೇಗನೆ ಮನೆ ಕೊಳ್ಳಲು ಸಾಲ ಮಡುವ ನಿರ್ಧಾರ ಮಾಡಿಬಿಡುತ್ತಾರೆ.

ಇದು ಮಧ್ಯ ವಯಸ್ಕದವರಿಗೆ ಯಾವುದೋ ಒಂದು ಬಗೆಯ ಸಮಾಧಾನ ತಂದು ಕೊಡಬಹುದಾದರೂ ನಮ್ಮ ವ್ಯಾಪ್ತಿಯನ್ನು ಮೀರಿ ಸಾಲ ಪಡೆದಿದ್ದರ ಪರಿಣಾಮ ಯಾವ ಉಳಿತಾಯ ಇಲ್ಲದಂತಾಗಿ ಇನ್ನೊಂದು ರೀತಿಯ ಒತ್ತಡ ತರಬಹುದು. ಅಲ್ಲದೆ ಆಗ ತಾನೇ ವ್ಯಕ್ತಿತ್ವ ಮತ್ತಷ್ಟು ವಿಕಸನ ಹೊಂದುತ್ತಿರುವುದರಿಂದ ಮುಂದೆ ಎದುರಾಗಬಹುದಾದ ಕೆಲವು ಅನಿರೀಕ್ಷಿತ ಸಮಸ್ಯೆಗಳಿಗೆ ನಮ್ಮನ್ನು ನಾವು ಒಡ್ಡಿಕೊಂಡಂತಾಗಬಹುದು. ಅಲ್ಲದೆ ಕೆಲ ಸಮಯ ಕಳೆದ ನಂತರ ನಾವು ಕೊಂಡ ಸ್ಥಳದಲ್ಲಿಯೇ ಹೊಸ ಮಾದರಿಯ ಮನೆಗಳು ಲಭ್ಯವಾಗುವ ಸಾಧ್ಯತೆ ಹೆಚ್ಚಾಗುವುದರಿಂದ ನಾವು ಈಗಾಗಲೇ ಕೊಂಡಿರುವ ಮನೆಯ ಬೆಲೆ ಕುಸಿತವಾಗಬಹುದು.

ಮನೆ ಕೊಳ್ಳುವ ಮುನ್ನ ಲೆಕ್ಕಚಾರ ಸರಿಯಾಗಿರಲಿ

ಬನ್ನಿ, ಬೇಗನೆ ಮನೆ ಕೊಳ್ಳುವುದರಿಂದ ನಾವು ಎಲ್ಲಿ ಏನನ್ನು ಕಳೆದುಕೊಳ್ಳಬಹುದೆಂಬುದನ್ನು ಒಂದು ಉದಾಹರಣೆ ಮೂಲಕ ಸರಳವಾಗಿ ತಿಳಿದುಕೊಳ್ಳಲು ಪ್ರಯತ್ನಿಸೋಣ. ಕಲ್ಪಿಸಿಕೊಳ್ಳಿ 12% ರಿಟರ್ನ್ ಇದೆ ಎಂದು. ಈಗ ಮುಂದಿನ 20 ವರ್ಷಗಳ ಕಾಲ (ಅಂದರೆ 30 ರಿಂದ 50 ಪ್ರಾಯದವರೆಗೆ) ಮಾಸಿಕವಾಗಿ 10,000 ಉಳಿಸುತ್ತ ಹೋದರೆ ಅವಧಿಯ ಮುಕ್ತಾಯದಲ್ಲಿ ಅಂದರೆ 24 ಲಕ್ಷ ರೂ. ಕ್ಯಾಪಿಟಲ್ ಮೊತ್ತಕ್ಕೆ ಕಂಪೌಂಡೆಡ್ ಬಡ್ಡಿದರ ಲೆಕ್ಕ ಹಾಕಿ ಕಾರ್ಪಸ್ ಮೊತ್ತವಾದ 98 ಲಕ್ಷ ರೂ. ಸಿಗುತ್ತದೆ. ಅದೇ 40 ರಿಂದ 50 ಪ್ರಾಯದವರೆಗೆ ಮುಂದಿನ ಹತ್ತು ವರ್ಷಗಳ ಕಾಲ ಮಾಸಿಕವಾಗಿ 40,000 ಉಳಿತಾಯ ಮಾಡುತ್ತ ಹೋದರೆ ಕಂಪೌಂಡೆಡ್ ಬಡ್ಡಿದರ ಲೆಕ್ಕ ಹಾಕಿ ಕಾರ್ಪಸ್ ಮೊತ್ತವಾದ 92 ಲಕ್ಷ ರೂ. ಸಿಗುತ್ತದೆ.

ಆರಂಭದಲ್ಲಿ ಮನೆಯನ್ನು ಖರೀದಿಸುವುದು ತಪ್ಪು

ಅಲ್ಲದೆ, ನೀವು ಈ ರೀತಿಯಾಗಿ ಮನೆ ಕೊಂಡಿದ್ದು ಅಲ್ಪ ಕಾಲದಲ್ಲಿಯೇ ಇದು ನಿಮಗೆ ನಿರೀಕ್ಷಿಸಿದಷ್ಟು ಲಾಭ ಕೊಡದೆ ಇರಬಹುದು. ಅಥವಾ ಆ ಸಮಯಬರುವವರೆಗೆ ಅದು ಹಳೆಯದ್ದೆಂದು ಅನಿಸಲೂಬಹುದು. ಇನ್ನೊಂದೆಡೆ ಈ ಸಮಯದಲ್ಲಿ ನೀವು ಹೆಚ್ಚು ಇಎಂಐ ಕಟ್ಟುತ್ತಿರುವುದರಿಂದ ನಿಮಗೆ ಉಳಿತಾಯ ಮಾಡಲು ಶಕ್ಯವಾಗದೆ ಇರಬಹುದು.

ಇನ್ನೊಂದು ಸಮಸ್ಯೆ ಎಂದರೆ, ಬಹುತೇಕ ವಯಸ್ಕರು 4045 ಪ್ರಾಯದವರು ಒಂದೇ ಬಗೆಯ ಆಸ್ತಿಯಲ್ಲಿ ಹೆಚ್ಚಿನ ಗಮನ ಹೊಂದಿರುತ್ತಾರೆ ಮತ್ತು ಅಲ್ಲಿಯೇ ಹೂಡಿಕೆ ಮಾಡಲು ಇಷ್ಟಪಡುತ್ತಾರೆ. ಇದು ಕೂಡ ಒಳ್ಳೆಯ ವಿಷಯವಲ್ಲ ಎನ್ನಬಹುದು.

ಇದನ್ನೂ ಓದಿ: Loan: ಮಾಡಿದ ಸಾಲ ಭಾರವಾಗದಂತೆ ನೋಡಿಕೊಳ್ಳಬೇಕೆ? ಇಲ್ಲಿದೆ ಕೆಲವು ಮಾರ್ಗಗಳು!

ಒಂದು ಉದಾಹರಣೆಯಲ್ಲಿ ಒಂದು ಕುಟುಂಬದ ಒಟ್ಟಾರೆ ಹೂಡಿಕೆಯು ಬಹುಮನೆಗಳ ಮೇಲೆ ಅವಲಂಬಿತವಾಗಿತ್ತು. ಮುಂದೆ ಸಮಯ ಕಳೆದಂತೆ ಅವರ ಮಕ್ಕಳ ವಿದೇಶದಲ್ಲಿನ ವಿದ್ಯಾಭ್ಯಾಸಕ್ಕೆ ಹಣ ಹೊಂದಿಸಲು ಈ ಮನೆಗಳನ್ನು ಲಿಕ್ವಿಡೇಟ್ ಮಾಡಿ ಹಣ ಹೊಂದಿಸುವುದು ಬಹಳವೇ ಕಷ್ಟವಾಯಿತು. ಪ್ರಸ್ತುತ ಕೆಲವು ಸಮಯಗಳಿಂದ ರಿಯಲ್ ಎಸ್ಟೇಟ್ ಕ್ಷೇತ್ರವು ಚೇತರಿಸಿಕೊಳ್ಳುತ್ತಿಲ್ಲ. ಇದರಿಂದಾಗಿಯೇ ಅವರಿಗೆ ಮನೆಗಳ ಮೂಲಕ ನಿರೀಕ್ಷಿಸಿದಷ್ಟು ಹಣ ಬರಲು ಸಾಧ್ಯವೇ ಆಗಲಿಲ್ಲ.

ಇನ್ನೊಂದು ಉದಾಹರಣೆಯಲ್ಲಿ ಒಬ್ಬರು ಅಪಾಯ ಬಾರದೆ ಇರುವಂತೆ ಮಾರ್ಕೆಟ್ ಗಳಿಗೆ ಲಿಂಕ್ ಮಾಡಲಾದ ಬ್ಯಾಂಕ್ ಡಿಪಾಸಿಟ್ ಗೆ ಹೆಚ್ಚಿನ ಪ್ರಾಶಸ್ತ್ಯ ನೀಡಿದರು. ಅಲ್ಲಿ ಅವರಿಗೆ 1-2% ಹೆಚ್ಚು ಆದಾಯ ಸಿಗಬಹುದೆಂಬ ನಿರೀಕ್ಷೆಯಿಂದ ದೊಡ್ಡ ಮೊತ್ತವನ್ನು ಅವರು ಠೇವಣಿಯಾಗಿ ಆ ಒಂದು ನಿರ್ದಿಷ್ಟ ಸಹಕಾರಿ ಬ್ಯಾಂಕಿನಲ್ಲಿ ಇಟ್ಟರು. ಆದರೆ, ದುರದೃಷ್ಟವಶಾತ್ ಆ ಸಹಕಾರಿ ಬ್ಯಾಂಕ್ ಇದ್ದಕ್ಕಿದ್ದಂತೆಯೇ ವ್ಯವಹಾರ ನಿಲ್ಲಿಸಿ ಬಿಟ್ಟಿತು ಹಾಗೂ ಈ ಗ್ರಾಹಕರ ಎಲ್ಲ ಮೊತ್ತವು ಮುಳುಗಡೆಯಾಗಿಬಿಟ್ಟಿತು.

ಹಾಗಾಗಿ, ಹೆಚ್ಚಿನ ಮೊತ್ತದ ಆಸೆಗೆ ಬೀಳದೆ ನಿಮ್ಮ ವೈಯಕ್ತಿಕ ಅವಶ್ಯಕತೆಗಳನ್ನು ಈಡೇರಿಸಬಲ್ಲ ಅಸೆಟ್ ಅಲೋಕೇಶನ್ ಬಗ್ಗೆ ಹೆಚ್ಚು ಒತ್ತು ನೀಡುವುದು ಉತ್ತಮ.

ಆರ್ಥಿಕ ಹೊಡೆದ ಬೀಳಬಹುದು

ಇನ್ನು ಮೂರನೇ ಸಮಸ್ಯೆ ಎಂದರೆ ಕೆಲವು ಅನವಶ್ಯಕ ಬೇಡಿಕೆಗಳಿಗೆ ಮಣಿಯುವುದು. ಈ ಸಮಸ್ಯೆ ಮಿಕ್ಕೆರಡರಕ್ಕಿಂತ ಭಿನ್ನವಾಗಿದ್ದು ಇದು ಆಯಾ ವ್ಯಕ್ತಿಯ ಮಾನಸಿಕ ಸ್ಥಿತಿಯ ಮೇಲೆ ಅವಲಂಬಿತವಾಗಿರುತ್ತದೆ. ಉದಾಹರಣೆಗೆ ನಿಮ್ಮ ಬಳಿ ಈಗಾಗಲೇ ಕಾರೊಂದಿದೆ. ಆದರೆ, ಮಾರುಕಟ್ಟೆಯಲ್ಲಿ ಅದರ ಹೊಸ ಅಪ್ಗ್ರೇಡ್ ಬಂದಿರುತ್ತದೆ. ಹಾಗಾಗಿ ಆ ಅಪ್ಗ್ರೇಡ್ ಆದ ಕಾರನ್ನು ಪಡೆಯಲು ನೀವು ಈಗಾಗಲೇ ಒಂದು ನಿರ್ದಿಷ್ಟ ಉದ್ದೇಶಕ್ಕೆಂದು ಹಣ ಉಳಿಸುತ್ತಿದ್ದರೆ ಅದನ್ನು ಕಡಿತ ಮಾಡಿ ಅದನ್ನು ಈ ವಿಚಾರದಲ್ಲಿ ಅಳವಡಿಸಿಕೊಳ್ಳುವುದು. ನಿಮಗೆ ಈ ರೀತಿ ಮಾಡುವ ಮೂಲಕ ಮುಂದಿನ ವರ್ಷ ಅಂತರವನ್ನು ಮ್ಯಾಚ್ ಮಾಡಬಹುದೆಂದು ಅನಿಸಿದರೂ ಕಂಪೌಂಡೆಡ್ ಬಡ್ಡಿದರದ ವಿಷಯದಲ್ಲಿ ಇದು ದುಬಾರಿಯಾಗಬಹುದು.

ಇದನ್ನೂ ಓದಿ: ಈ 5 ಬ್ಯಾಂಕ್​​ಗಳು ಅತ್ಯಂತ ಕಡಿಮೆ ಬಡ್ಡಿ ದರದಲ್ಲಿ Home Loans ನೀಡುತ್ತಿವೆ.. ಸಂಪೂರ್ಣ ಮಾಹಿತಿ ಇಲ್ಲಿದೆ

ಒಟ್ಟಿನಲ್ಲಿ ಹೇಳಬೇಕೆಂದರೆ ಆರ್ಥಿಕ ಪ್ರಮಾದಗಳಲ್ಲಿ ಮುಖ್ಯವಾಗಿ ಎರಡು ವಿಧಗಳು, ಒಂದು ಸರಿಪಡಿಸಬಹುದಾದ ಪ್ರಮಾದ ಇನ್ನೊಂದು ಸರಿಪಡಿಸಲಾಗದ ಪ್ರಮಾದ. ಹಾಗಾಗಿ, ನಿಮ್ಮ ಆರ್ಥಿಕ ಸ್ಥಿತಿಗತಿಗಳನ್ನಾಧರಿಸಿ ನಿಮ್ಮ ವೈಯಕ್ತಿಕ ಅವಶ್ಯಕತೆಗಳನ್ನು ಈಡೇರಿಸುವಂತಹ ಗೋಲುಗಳನ್ನು ಪರಿಗಣಿಸಿ ಜಾಣ್ಮೆಯಿಂದ ಹಣ ಉಳಿತಾಯ ಮಾಡುವುದು ಉತ್ತಮವಾಗಿದೆ.
Published by:Pavana HS
First published: