• Home
  • »
  • News
  • »
  • business
  • »
  • Trading: ಸ್ಟಾಕ್​ಗಳು 60% ರವರೆಗೂ ರಿಟರ್ನ್ಸ್ ಕೊಡುತ್ತವಂತೆ ಟ್ರೇಡಿಂಗ್ ಮಾಡಬೇಕೆ? ಇಷ್ಟು ಮಾಡಿ ಸಾಕು

Trading: ಸ್ಟಾಕ್​ಗಳು 60% ರವರೆಗೂ ರಿಟರ್ನ್ಸ್ ಕೊಡುತ್ತವಂತೆ ಟ್ರೇಡಿಂಗ್ ಮಾಡಬೇಕೆ? ಇಷ್ಟು ಮಾಡಿ ಸಾಕು

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

Business: ಟ್ರೇಡಿಂಗ್ ಎಂದಾಗ ಕೆಲವರು ಮುಹೂರ್ತ್ ಅಂತ ಅಂತೆಲ್ಲ ನೋಡಿ ತಮಗೆ ಸರಿಯ ಅನಿಸುವ ಘಳಿಗೆ ಸಮಯಗಳಲ್ಲಿ ಸ್ಟಾಕ್ ಖರೀದಿಸುತ್ತಾರೆಂದರೆ ಸುಳ್ಳಲ್ಲ. ಈಗ ದೀಪಾವಳಿ ಸಮೀಪಿಸುತ್ತಿದೆ, ಇದು ಧನತ್ರಯೋದಶಿಯ ಕಾಲ, ಬಹಳಷ್ಟು ಜನರು ಆಭರಣ ಕೊಳ್ಳಲು ಬಯಸಿದರೆ ಇನ್ನೂ ಕೆಲವರು ಇದು ಟ್ರೇಡಿಂಗ್ ಮಾಡಲು ಉತ್ತಮ ಸಮಯ ಎಂದು ಪರಿಗಣಿಸುತ್ತಾರೆ.

ಮುಂದೆ ಓದಿ ...
  • Share this:

ಈಗಿಗಂತೂ ಬಹಳಷ್ಟು ಜನರು ಡಿಮ್ಯಾಟ್ (Demate) ಖಾತೆ  ತೆರೆದುಕೊಂಡು ಟ್ರೇಡಿಂಗ್ ನಂತಹ ವ್ಯವಹಾರದಲ್ಲಿ ತೊಡಗಿಸಿಕೊಳ್ಳುತ್ತಿದ್ದು ಹೆಚ್ಚುವರಿ ಆದಾಯವನ್ನು ಗಳಿಸುತ್ತಿದ್ದಾರೆಂದರೆ ತಪ್ಪಾಗಲಾರದು. ಇನ್ನು, ಟ್ರೇಡಿಂಗ್ ಎಂದಾಗ ಕೆಲವರು ಮುಹೂರ್ತ್ ಅಂತ ಅಂತೆಲ್ಲ ನೋಡಿ ತಮಗೆ ಸರಿಯ ಅನಿಸುವ ಘಳಿಗೆ ಸಮಯಗಳಲ್ಲಿ ಸ್ಟಾಕ್ (Stock) ಖರೀದಿಸುತ್ತಾರೆಂದರೆ ಸುಳ್ಳಲ್ಲ. ಈಗ ದೀಪಾವಳಿ ಸಮೀಪಿಸುತ್ತಿದೆ, ಇದು ಧನತ್ರಯೋದಶಿಯ ಕಾಲ, ಬಹಳಷ್ಟು ಜನರು ಆಭರಣ ಕೊಳ್ಳಲು ಬಯಸಿದರೆ ಇನ್ನೂ ಕೆಲವರು ಇದು ಟ್ರೇಡಿಂಗ್ ಮಾಡಲು ಉತ್ತಮ ಸಮಯ ಎಂದು ಪರಿಗಣಿಸುತ್ತಾರೆ. ಈಗ ಹಿಂದು ಕ್ಯಾಲೆಂಡರ್ ಅನ್ವಯ 2078 ಸಂವತ್ಸರವು ಕೊನೆಗೊಳ್ಳಲಿದ್ದು ಅಕ್ಟೋಬರ್ 24 ರಿಂದ ಹೊಸ ಸಂವತ್ಸರ 2079 ಆರಂಭವಾಗಲಿದೆ. ಇದಕ್ಕೆ ಸಂಬಂಧಿಸಿದಂತೆ ದೇಶೀಯ ಬ್ರೋಕರೇಜ್ ಸಂಸ್ಥೆಯಾದ ಪ್ರಭುದಾಸ್ ಲಿಲ್ಲಾಧೇರ್ (Prabhudas  lilladher) ಈ ಬಗ್ಗೆ ಹೇಳಿಕೆಯಿಂದನ್ನು ನೀಡಿದ್ದು ಹಲವು ಕಷ್ಟ-ನಷ್ಟಗಳನ್ನೊಳಗೊಂಡಿದ್ದ 2078 ಸಂವತ್ಸರವು ಈಗ ಮಾಯವಾಗಲಿದೆ ಎಂದಿದೆ.


ಅಲ್ಲದೆ, ಈ ಬ್ರೋಕರೇಜ್ ಸಂಸ್ಥೆಯು ಭಾರತದ ಪ್ರಸ್ತುತ ಸ್ಥಾನಮಾನವನ್ನೂ ಬಣ್ಣಿಸಿದೆ. ಅದು ತನ್ನ ಹೇಳಿಕೆಯಲ್ಲಿ, "ವಿಶ್ವದಾದ್ಯಂತ ಮಸುಕಾಗಿರುವ, ಅಂಧಕಾರ ಆವರಿಸಿರುವ ಈ ವಾತಾವರಣದಲ್ಲಿ ಭಾರತವು ಸಾಗರದಾಳದ ಮುತ್ತಿನಂತೆ ಹೊಳೆಯುತ್ತಿದೆ, ಆಹಾರ ಸುರಕ್ಷತೆ, ಆರ್ಥಿಕ ಸಬಲತೆ, ಸದೃಢವಾಗಿರುವ ಬ್ಯಾಂಕಿಂಗ್ ವ್ಯವಸ್ಥೆ, ಉತ್ಪಾದನೆ, ರಕ್ಷಣೆ ಮುಂತಾದ ಕ್ಷೇತ್ರಗಳಲ್ಲಿರುವ ಪಿಎಲ್‍ಐ ಯೋಜನೆಗಳು, ಯುನಿಕಾರ್ನುಗಳಲ್ಲಿ ಹೆಚ್ಚುತ್ತಿರುವ ಹೂಡಿಕೆ ಮುಂತಾದ ಹಲವು ಅಂಶಗಳು ಭಾರತವನ್ನು ಆರ್ಥಿಕವಾಗಿ ಶಕ್ತವಾಗಿರುವಂತೆ ಇಟ್ಟಿದೆ" ಎಂದು ವಿವರಿಸಿದ್ದು ಈ ಸಂದರ್ಭದಲ್ಲಿ ಅಂದರೆ fiorganisations ದೀಪಾವಳಿಯ ಸಂದರ್ಭದಲ್ಲಿ ಯಾವ ಷೇರುಗಳಲ್ಲಿ ಹೂಡಿಕೆ ಉತ್ತಮ ಎಂಬುದರ ಬಗ್ಗೆ ತಿಳಿಸುತ್ತ ಕೆಲವು ಆಯ್ದ ಸ್ಟಾಕುಗಳನ್ನು ಪಟ್ಟಿ ಮಾಡಿದೆ. ಹಾಗಾದರೆ ಆ ಸ್ಟಾಕುಗಳು ಯಾವುವು ಎಂಬುದನ್ನು ಇಲ್ಲಿ ತಿಳಿಯೋಣ


ಲಾರ್ಜ್ ಕ್ಯಾಪ್ ಸ್ಟಾಕ್ ಪಿಕ್ಸ್


ಈ ಬ್ರೋಕರೇಜ್ ಸಂಸ್ಥೆ ಆರೋಗ್ಯ ಕ್ಷೇತ್ರಕ್ಕೆ ಸಂಬಂಧಿಸಿದಂತೆ ರೂ. 5000 ಬೆಲೆಯ ಟಾರ್ಗೆಟ್ ಪ್ರೈಸ್ ಹೊಂದಿರುವ ಅಪೋಲೊ ಹಾಸ್ಪಿಟಲ್ಸ್ ಎಂಟರ್ಪ್ರೈಸ್ ಅನ್ನು ಆಯ್ಕೆ ಮಾಡಿದೆ; ತದನಂತರ ಫುಡ್ ಮತ್ತು ಗ್ರಾಸರಿ ವಿಭಾಗದಲ್ಲಿ ಅದು ಆಯ್ಕೆ ಮಾಡಿರುವುದು ಅವೆನ್ಯೂ ಸೂಪರ್ಮಾರ್ಟ್ (ಟಿಪಿ: 5,121); ಇನ್ನುಳಿದಂತೆ ಅದು ಪಟ್ಟಿ ಮಾಡಿರುವ ಇತರೆ ಸ್ಟಾಕು ಖರೀದಿಸಬಹುದಾದ ಕಂಪನಿಗಳೆಂದರೆ, ಭಾರ್ತಿ ಏರ್ಟೆಲ್ (ಟಿಪಿ ರೂ. 1,032), ಐಸಿಐಸಿಐ (ಟಿಪಿ ರೂ. 950), ಮಹೀಂದ್ರಾ ಆಂಡ್ ಮಹೀಂದ್ರಾ (ಟಿಪಿ ರೂ. 1,500)


ಇದನ್ನೂಓದಿ: 1 ಆಧಾರ್​ ಕಾರ್ಡ್​ಗೆ ಎಷ್ಟು ಸಿಮ್​ ಕಾರ್ಡ್ ತಗೊಂಡಿದ್ದೀರಾ? ಹೀಗ್​ ಚೆಕ್​ ಮಾಡಿ


ಮಿಡ್ ಕ್ಯಾಪ್ ಸ್ಟಾಕ್ ಪಿಕ್ಸ್


ಲಾರ್ಜ್ ನಂತರ ಈ ಸಂಸ್ಥೆಯು ಮಧ್ಯಮ ಬೆಲೆಗಳಲ್ಲಿಯೂ ಕೆಲವು ಕಂಪನಿಗಳನ್ನು ಆಯ್ಕೆ ಮಾಡಿ ತನ್ನಗ್ರಾಹಕರಿಗೆ ತಿಳಿಸಿದೆ. ರೂ. 200 ಟಿಪಿ ಇರುವ ಅಶೋಕ್ ಲೆಲ್ಯಾಂಡ್ ಅನ್ನು ಇದು ಆಯ್ಕೆ ಮಾಡಿದೆ. ಮುಂಬರುವ ಸಮಯದಲ್ಲಿ ಈ ಸಂಸ್ಥೆಯು ತನ್ನ ಗತ ವೈಭವ ಮರಳಿ ಪಡೆಯಬಹುದೆಂಬ ವಿಶ್ವಾಸ ವ್ಯಕ್ತಪಡಿಸಿದೆ. ಇನ್ನುಳಿದಂತೆ ಇದು ಪಟ್ಟಿ ಮಾಡಿರುವ ಇತರೆ ಕಂಪನಿಗಳೆಂದರೆ, ಚಂಬಲ್ ಫರ್ಟಿಲೈಸರ್ಸ್ ಆಂಡ್ ಕೆಮಿಕಲ್ಸ್ (ಟಿಪಿ ರೂ. 480), ಫೆಡರಲ್ ಬ್ಯಾಂಕ್ (ಟಿಪಿ ರೂ. 165).


ಸ್ಮಾಲ್ ಕ್ಯಾಪ್ ಸ್ಟಾಕ್ ಪಿಕ್ಸ್


ಇನ್ನು, ಎಲ್ಲರೂ ದೊಡ್ಡ ಹಾಗೂ ಮಧ್ಯಮ ಕ್ಯಾಪ್ ಗಳಲ್ಲೇ ವ್ಯವಹರಿಸಲು ಮುಂದಾಗಲ್ಲ. ಅಂಥವರಿಗಾಗಿ ಸ್ಮಾಲ್ ಕ್ಯಾಪ್ ಸ್ಟಾಕುಗಳು ಸಹ ಲಭ್ಯವಿರುತ್ತದೆ. ಪ್ರಭುದಾಸ್ ಲಿಲ್ಲಾಧೇರ್ ಬ್ರೋಕರೇಜ್ ಸಂಸ್ಥೆಯು ಈ ನಿಟ್ಟಿನಲ್ಲೂ ತನ್ನ ಆಯ್ಕೆಗಳನ್ನು ನೀಡಿದೆ. ಈಗಾಗಲೇ ಅಮಎರಿಕ ಹಾಗೂ ಯುರೋಪ್ ನಲ್ಲಿ ಕುಸಿಯುತ್ತಿರುವ ಆರ್ಥಿಕತೆ, ಬರುತ್ತಿರುವ ಆರ್ಥಿಕ ಹಿಂಜರಿತ ಹಲವು ಟ್ರೇಡ್ ವ್ಯಾಪಾರಿಗಳನ್ನು ಪ್ರಭಾವಿಸಿದೆ. ಆದಾಗ್ಯೂ ಪ್ರಭುದಾಸ್ ಪ್ರಕಾರ, ಇಂತಹ ಕ್ಲಿಷ್ಟಕರ ಸಂದರ್ಭದಲ್ಲೂ ಭಾರತೀಯ ಮಾರುಕಟ್ಟೆ ಸುಗಮವಾಗಿ ಸಾಗಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದೆ.


ಈ ಸಂದರ್ಭದಲ್ಲಿ ಪಿಎಲ್ (ಪ್ರಭುದಾಸ್ ಲಿಲ್ಲೇಧರ್) ರೂ. 860 ಟಿಪಿಯುಳ್ಳ ಜ್ಯೂಬಿಲಂಟ್ ಇಂಗ್ರೆವಿಯಾ, ವಿಐಪಿ ಇಂಡಸ್ಟ್ರೀಸ್ (ಟಿಪಿ ರೂ. 1,020) ಹಾಗೂ ವೆಸ್ಟ್ ಲೈಫ್ ಡೆವೆಲಪ್ಮೆಂಟ್ (ಟಿಪಿ ರೂ. 847) ಕಂಪನಿಗಳ ಮೇಲೆ ಸಾಕಷ್ಟು ವಿಶ್ವಾಸ ವ್ಯಕ್ತಪಡಿಸುತ್ತದೆ.


ಈ ಸಂದರ್ಭದಲ್ಲಿ ಪಿಎಲ್ ಹೇಳುವ ಪ್ರಕಾರ ಜ್ಯೂಬಿಲಂಟ್ ಇಂಗ್ರೆವಿಯಾ ದೀರ್ಘಕಾಲಿಕ ಉತ್ತಮ ಆದಾಯ ಕೊಡುವ ನಿರೀಕ್ಷೆಯಿದೆ. ಅವರ ವೈವಿಧ್ಯಮಯ ಉತ್ಪನ್ನಗಳು, 22-25 ರ ಅವಧಿಯಲ್ಲಿ ಹೂಡಲಾಗುತ್ತಿರುವ 2,050 ಕೋಟಿ ಹೂಡಿಕೆ ಮುಂಬರುವ ದಿನಗಳಲ್ಲಿ ಸಂಸ್ಥೆಯು ಉತ್ತಮವಾಗಿ ಪ್ರದರ್ಶಿಸುವಂತೆ ಮಾಡಲಿದೆ.


ಇದನ್ನೂ ಓದಿ: ಪೆಟ್ರೋಲ್ ಹಾಕಿಸುವ ಮುನ್ನ ನಿಮ್ಮ ಜಿಲ್ಲೆಯಲ್ಲಿ ಬೆಲೆ ಎಷ್ಟಿದೆ ಚೆಕ್ ಮಾಡ್ಕೊಳಿ


ಹಾಗಾಗಿ, ನೀವೇನಾದರೂ ಸ್ಟಾಕುಗಳಲ್ಲಿ ಟ್ರೇಡಿಂಗ್ ಮಾಡಲು ಬಯಸ್ಸಿದ್ದಲ್ಲಿ ಈ ಮೇಲಿನ ಆಯ್ಕೆಗಳನ್ನು ಒಮ್ಮೆ ಪರಿಗಣಿಸಿ ನೋಡಿ. ಆದರೆ, ನೆನಪಿಡಿ ಈ ಸ್ಟಾಕ್/ಟ್ರೇಡಿಂಗ್ ವ್ಯವಹಾರಗಳು ಅನಿರೀಕ್ಷಿತತೆಗಳಿಂದ ಕೂಡಿದ್ದು ಲಾಭದ ಜೊತೆ ನಷ್ಟವನ್ನೂ ಸಹ ಹೊಂದಿರುತ್ತದೆ ಎಂದು.

First published: