Tax Benefits: ಎಲೆಕ್ಟ್ರಿಕ್ ವಾಹನ ಖರೀದಿಸಿದ್ರೆ ಭಾರೀ ಮೊತ್ತದ ಟ್ಯಾಕ್ಸ್ ಉಳಿಸಬಹುದು, ಫುಲ್ ಡೀಟೆಲ್ಸ್ ಇಲ್ಲಿದೆ

Electric Vehicle Tax Benefit: ಸೆಕ್ಷನ್ 80EEB ಅಡಿಯಲ್ಲಿ, ಸಾಲದ ಮೇಲೆ ಎಲೆಕ್ಟ್ರಿಕಲ್ ವಾಹನ ಖರೀದಿಸಲು ಆಯ್ಕೆ ಮಾಡುವ ವ್ಯಕ್ತಿಗಳು ಸಾಲದ ಮೊತ್ತದ ಮೇಲೆ ಪಾವತಿಸಿದ ಬಡ್ಡಿಯ ಮೇಲೆ 1.5 ಲಕ್ಷ ರೂಪಾಯಿಗಳ ತೆರಿಗೆ ವಿನಾಯಿತಿಗಳಿಗೆ ಅರ್ಹರಾಗಿರುತ್ತಾರೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
    Save Tax: ದಿನದಿಂದ ದಿನಕ್ಕೆ ಪೆಟ್ರೋಲ್- ಡೀಸೆಲ್(Petrol -Diesel) ಬೆಲೆ ನಾಗಾಲೋಟದಲ್ಲಿ ಏರಿಕೆಯಾಗುತ್ತಿದೆ.. ವಾಹನಗಳನ್ನು ಹೊರತೆಗೆಯುವುದಕ್ಕಿಂತ ಮನೆಯಲ್ಲಿಯೇ ಇರುವುದು ಉತ್ತಮ ಎನ್ನುವ ಮಟ್ಟಿಗೆ ವಾಹನ ಸವಾರರು ಚಿಂತೆ ಮಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.. ಹೀಗಾಗಿ ಪೆಟ್ರೋಲ್ -ಡೀಸೆಲ್ ಬೆಲೆ (Price Hike) ಹೆಚ್ಚಳವಾಗುತ್ತಿರುವುದರಿಂದ ಜನರು ಎಲೆಕ್ಟ್ರಿಕಲ್ ವಾಹನಗಳ(Electrical Vehicles) ಖರೀದಿಗೆ ಆಸಕ್ತಿ ತೋರುತ್ತಿದ್ದಾರೆ.. ಜೊತೆಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಸಹ ಜನರು ಎಲೆಕ್ಟ್ರಿಕಲ್ ವಾಹನ ಖರೀದಿ ಮಾಡುವಂತೆ ಉತ್ತೇಜನ ನೀಡುತ್ತಿದೆ.. ಹೀಗಾಗಿಯೇ ಎಲೆಕ್ಟ್ರಿಕಲ್ ವಾಹನಗಳಿಗೆ ವರ್ಷದ ಆರಂಭದಲ್ಲಿಯೇ ಕೇಂದ್ರ ಸರ್ಕಾರ (Central Govt )ನೋಂದಣಿ ಶುಲ್ಕದಿಂದ ವಿನಾಯಿತಿ ನೀಡಿದೆ.. ಹೀಗಾಗಿ ಎಲೆಕ್ಟ್ರಿಕಲ್ ಕಾರು ಖರೀದಿ ಮಾಡುವುದರಿಂದ ಪೆಟ್ರೋಲ್ ಡೀಸೆಲ್ ಬೆಲೆ ಏರಿಕೆಯ ಬಿಸಿ ಇಲ್ಲದೆ,ಆದಾಯ ತೆರಿಗೆಯಲ್ಲಿಯು ಭಾರಿ ವಿನಾಯಿತಿ ಪಡೆಯಬಹುದಾಗಿದೆ..

    ಎಲೆಕ್ಟ್ರಿಕಲ್ ವಾಹನ ಖರೀದಿಯಿಂದ ಆದಾಯ ತೆರಿಗೆಯಲ್ಲಿ ಪಡೆಯಬಹುದು ವಿನಾಯಿತಿ

    ಪ್ರಸ್ತುತ ಜಗತ್ತಿನಾದ್ಯಂತ ಪೆಟ್ರೋಲ್ ಹಾಗೂ ಡೀಸೆಲ್ ಬಳಸಿ ಓಡಿಸುವ ವಾಹನಗಳಿಗಿಂತ ವಿದ್ಯುತ್ ಚಾಲಿತ ಬ್ಯಾಟರಿ ಇರುವ ವಾಹನಗಳಿಗೆ ಡಿಮ್ಯಾಂಡ್ ಹೆಚ್ಚಾಗುತ್ತಿದೆ.. ಹೀಗಾಗಿ ಅದೆಷ್ಟೋ ಜನರು ತಮ್ಮ ಹಳೆಯ ವಾಹನಗಳನ್ನು ಮಾರಾಟ ಮಾಡಿ ಎಲೆಕ್ಟ್ರಿಕಲ್ ವಾಹನಗಳ ಮೊರೆಹೋಗುತ್ತಿದ್ದಾರೆ.. ಈಗಾಗಲೇ ಅಮೇರಿಕಾದಂತಹ ದೇಶಗಳಲ್ಲಿ ಎಲೆಕ್ಟ್ರಿಕಲ್ ಕಾರು ಹಾಗೂ ಸ್ಕೂಟರ್ ಗಳ ದರ್ಬಾರ್ ಶುರುವಾಗಿದೆ.. ಹಣ ಮತ್ತು ಇಂಧನ ಉಳಿತಾಯ ಮಾಡುವುದರಿಂದ ಎಲೆಕ್ಟ್ರಿಕಲ್ ವಾಹನ ಖರೀದಿ ಮಾಡಲು ಜನರು ಸಹ ತೀವ್ರ ಆಸಕ್ತಿ ತೋರುತ್ತಿದ್ದಾರೆ..ಜೊತೆಗೆ ವಾಹನ ತಯಾರಿಕಾ ಕಂಪನಿಗಳು ಕೂಡ ಎಲೆಕ್ಟ್ರಿಕ್ ವಾಹನಗಳ ತಯಾರಿಕೆಗೆ ಮುಂದಾಗಿವೆ.. ಹೀಗಿರುವಾಗ ಭಾರತದಲ್ಲಿ ಎಲೆಕ್ಟ್ರಿಕ್ ವಾಹನಗಳ ಬಳಕೆ ಉತ್ತೇಜಿಸಲು ಕೇಂದ್ರ ಸರ್ಕಾರ ಆದಾಯ ತೆರಿಗೆಯಲ್ಲಿ ವಿನಾಯ್ತಿಯನ್ನು ಕೂಡ ನೀಡುತ್ತಿದೆ.

    ಭಾರತದ ಆದಾಯ ತೆರಿಗೆ ನಿಯಮಗಳ ಪ್ರಕಾರ, ವೈಯಕ್ತಿಕ ಬಳಕೆಗಾಗಿ ಕಾರುಗಳನ್ನು ಐಷಾರಾಮಿ ಉತ್ಪನ್ನಗಳೆಂದು ಪರಿಗಣಿಸಲಾಗುತ್ತದೆ ಮತ್ತು ಆದ್ದರಿಂದ ಸಂಬಳ ಪಡೆಯುವ ವೃತ್ತಿಪರರು ಕಾರ್ ಲೋನ್‌ಗಳ ಮೇಲೆ ಯಾವುದೇ ತೆರಿಗೆ ಪ್ರಯೋಜನಗಳನ್ನು ಪಡೆಯುವುದಿಲ್ಲ.ಆದ್ರೆ ಎಲೆಕ್ಟ್ರಿಕಲ್ ವಾಹನ ಖರೀದಿ ಮಾಡುವ ಗ್ರಾಹಕರು 80EEB ಎಂಬ ಇತ್ತೀಚೆಗೆ ಸೇರಿಸಿದ ವಿಭಾಗದ ಅಡಿಯಲ್ಲಿ ತಮ್ಮ ಸಾಲಗಳ ಮೇಲೆ ತೆರಿಗೆ ಪ್ರಯೋಜನಗಳನ್ನು ಪಡೆಯಬಹುದಾಗಿದೆ.

    ಇದನ್ನೂ ಓದಿ: Detel EV: ಕೇವಲ 40 ಸಾವಿರಕ್ಕೆ ಸಿಗುತ್ತೆ ಒಂದು ಚಾರ್ಜ್​​ನಲ್ಲಿ 60 ಕಿ.ಮೀ ಓಡುವ ಇ-ಬೈಕ್!

    ಇನ್ನು ಸೆಕ್ಷನ್ 80EEB ಅಡಿಯಲ್ಲಿ, ಸಾಲದ ಮೇಲೆ ಎಲೆಕ್ಟ್ರಿಕಲ್ ವಾಹನ ಖರೀದಿಸಲು ಆಯ್ಕೆ ಮಾಡುವ ವ್ಯಕ್ತಿಗಳು ಸಾಲದ ಮೊತ್ತದ ಮೇಲೆ ಪಾವತಿಸಿದ ಬಡ್ಡಿಯ ಮೇಲೆ 1.5 ಲಕ್ಷ ರೂಪಾಯಿಗಳ ತೆರಿಗೆ ವಿನಾಯಿತಿಗಳಿಗೆ ಅರ್ಹರಾಗಿರುತ್ತಾರೆ.. ಈ ತೆರಿಗೆ ವಿನಾಯಿತಿಯು 4-ಚಕ್ರ ಮತ್ತು 2-ಚಕ್ರ ಎಲೆಕ್ಟ್ರಿಕಲ್ ವಾಹನ ಖರೀದಿಗಳಿಗೆ ಲಭ್ಯವಿದೆ.

    80EEB ಅಡಿಯಲ್ಲಿ ತೆರಿಗೆ ವಿನಾಯಿತಿ ಪಡೆಯಲು ಬೇಕಾದ ಅರ್ಹತೆಗಳು

    1) 80EEB ಅಡಿಯಲ್ಲಿ ತೆರಿಗೆ ವಿನಾಯ್ತಿಯನ್ನು ಯಾವುದೇ ವ್ಯಕ್ತಿಯು ಕೇವಲ ಒಂದು ಬಾರಿ ಮಾತ್ರ ಪಡೆಯಬಹುದಾಗಿದೆ..

    2) ಈ ಮೊದಲು ಎಲೆಕ್ಟ್ರಿಕಲ್ ವಾಹನ ಹೊಂದಿರದ ವ್ಯಕ್ತಿ ಮಾತ್ರ ಸೆಕ್ಷನ್ 80EEB ಅಡಿಯಲ್ಲಿ ಸಾಲದ ಮೇಲೆ ತೆರಿಗೆ ವಿನಾಯಿತಿಯನ್ನು ಪಡೆಯಬಹುದು.

    3) ರಿಯಾಯಿತಿ ಸಾಲದ ಮೇಲೆ ಎಲೆಕ್ಟ್ರಿಕ್ ವಾಹನವನ್ನು ಖರೀದಿಸುವ ಜನರಿಗೆ ಮಾತ್ರ. ಎಲೆಕ್ಟ್ರಿಕ್ ವಾಹನಕ್ಕಾಗಿ ಸಾಲವನ್ನು ಹಣಕಾಸು ಸಂಸ್ಥೆ ಅಥವಾ NBFC ಯಿಂದ ತೆಗೆದುಕೊಳ್ಳಬೇಕು.

    ಇದನ್ನೂ ಓದಿ:ಎಲೆಕ್ಟ್ರಿಕ್​​ ವಾಹನಕ್ಕೆ ಹೆಚ್ಚಿದ ಬೇಡಿಕೆ; ಭವಿಷ್ಯದ ಸಾರಿಗೆ ವ್ಯವಸ್ಥೆಯಲ್ಲಿ ಮಹತ್ತರ ಬದಲಾವಣೆ

    4) ಸೆಕ್ಷನ್ 80EEB ಅಡಿಯಲ್ಲಿ ನೀಡುವ ವಿನಾಯತಿ ವ್ಯವಹಾರಗಳಿಗೆ ಅನ್ವಯವಾಗುವುದಿಲ್ಲ.. ತೆರಿಗೆ ವಿನಾಯಿತಿಯನ್ನು ಕೇವಲ ಎಲೆಕ್ಟ್ರಿಕಲ್ ವಾಹನ ಖರೀದಿ ಮಾಡುವ ವ್ಯಕ್ತಿಗಳು ಮಾತ್ರ ಪಡೆದುಕೊಳ್ಳಬಹುದಾಗಿದೆ..

    5) ಏಪ್ರಿಲ್ 1, 2019 ರಿಂದ ಮಾರ್ಚ್ 31, 2023 ರ ಅವಧಿಯಲ್ಲಿ ತೆಗೆದುಕೊಂಡ ಎಲ್ಲಾ EV ಸಾಲದ ಪಾವತಿಗಳಿಗೆ ವಿಭಾಗದ ಅಡಿಯಲ್ಲಿ ತೆರಿಗೆ ವಿನಾಯಿತಿಯನ್ನು ಪಡೆಯಬಹುದು.ಸೆಕ್ಷನ್ 80EEB ಅಡಿಯಲ್ಲಿ ತೆರಿಗೆ ಪ್ರಯೋಜನಗಳನ್ನು FY 2020-2021 ರಿಂದ ಪಡೆಯಬಹುದಾಗಿದೆ.
    Published by:ranjumbkgowda1 ranjumbkgowda1
    First published: