Bonsai: ಬೋನ್ಸಾಯ್ ಗಿಡ ಬೆಳೆಸಿ ವರ್ಷಕ್ಕೆ 50 ಲಕ್ಷ ರೂ ಆದಾಯ ಗಳಿಸ್ತಿದ್ದಾರೆ, ನೀವೂ ಮಾಡ್ಬಹುದು ನೋಡಿ

ಬೋನ್ಸಾಯಿ ಎಂದರೆ ಜಪಾನಿ ಭಾಷೆಯಲ್ಲಿ ತಟ್ಟೆಯಲ್ಲಿ ಮರ ಎಂದಾಗುತ್ತದೆ ಹಾಗೂ ಪೆಂಜಿಂಗ್ ಎನ್ನುವುದು ಚೈನೀಸ್ ಭಾಷೆಯಲ್ಲಿ ಲ್ಯಾಂಡ್ ಸ್ಕೇಪ್ ಎಂಬರ್ಥ ನೀಡುತ್ತದೆ. ಹಾಗಾಗಿ ಸೌಮಿಕ್ ಅವರ ಬೋನ್ಸಾಯಿ ಲ್ಯಾಂಡ್ ಸ್ಕೇಪ್ ರೀತಿಯಲ್ಲಿರುವುದರಿಂದ ಇತರೆ ಬೋನ್ಸಾಯಿಗಳಿಗಿಂತ ಭಿನ್ನವಾಗಿ ಕಾಣುತ್ತದೆ.

ಪ್ರಾತಿನಿಧಿಕ ಚಿತ್ರ

ಪ್ರಾತಿನಿಧಿಕ ಚಿತ್ರ

  • Share this:
52 ವರ್ಷ ಪ್ರಾಯದ ಸೌಮಿಕ್ (Soumik Das) ದಾಸ್‌ರಿಗೆ ಬೋನ್ಸಾಯ್‌ ಗಿಡಗಳೆಂದರೆ ಎಲ್ಲಿಲ್ಲದ ಪ್ರೀತಿ. ಮೊದಲ ಬಾರಿಗೆ ಅವರು ಬೋನ್ಸಾಯಿ ಗಿಡವನ್ನು 90ರ ದಶಕದಲ್ಲಿ ದೆಹಲಿಯ ತಲ್ಕಟೋರಾ ಕ್ರೀಡಾಂಗಣದಲ್ಲಿ ಆಯೋಜಿಸಲಾಗಿದ್ದ ತೋಟಗಾರಿಕೆ ಉತ್ಸವದಲ್ಲಿ (Gardening festival) ನೋಡಿದ್ದರು. ಅಂದಿನಿಂದಲೇ ಅವರಿಗೆ ಬೋನ್ಸಾಯಿಯ ಬಗ್ಗೆ ಆಕರ್ಷಣೆ( Bonsai's fascination) ಉಂಟಾಗಿತ್ತು. ಆ ಉತ್ಸವದಲ್ಲಿ ವಿದ್ಯಾರ್ಥಿಯಾಗಿದ್ದ ಅವರು ಅದನ್ನು ಮುಟ್ಟಲು ಹೋದಾಗ ಅಲ್ಲಿದ್ದ ಗಾರ್ಡ್ ಅವರನ್ನು ತಡೆದಿದ್ದರು ಹಾಗೂ ಅವು ಮೌಲ್ಯದ್ದು ಎಂದು ತಿಳಿಸಿದ್ದರು.ತದನಂತರ ಅವರು ಆ ಬಗ್ಗೆ ಸಾಕಷ್ಟು ಯೋಚನೆ ಮಾಡಿದ್ದರು. ಈಗ ದಶಕದ ನಂತರ ವೃತ್ತಿಯಲ್ಲಿ ಬಾರ್ ಕೋಡ್ ಉತ್ಪಾದಿಸುವ ಸಂಸ್ಥೆ ನಡೆಸುತ್ತಿದ್ದರೂ ಪ್ರವೃತ್ತಿಯಿಂದ ನೋಯಿಡಾದಲ್ಲಿ ಗ್ರೋ ಗ್ರೀನ್ (Grow Green) ಬೋನ್ಸಾಯಿ ನರ್ಸರಿ ಹೊಂದಿದ್ದು ಸಾವಿರಕ್ಕೂ ಹೆಚ್ಚು ಬೋನ್ಸಾಯಿಗಳನ್ನು ತಮ್ಮ ನರ್ಸರಿಯಲ್ಲಿ(Nursery) ಹೊಂದಿದ್ದಾರೆ.

200 ಬೋನ್ಸಾಯಿ ಗಿಡ
ನಾನು ಬೋನ್ಸಾಯಿ ಬಗ್ಗೆ ಹೊಂದಿರುವ ಪ್ರೇಮದಿಂದಾಗಿ ಅವುಗಳನ್ನು ಬೆಳೆಯಲಾರಂಭಿಸಿದೆ. ಇವು ಜೀವಿತವಿರುವ ಕಲೆಯ ಪರಮೋಚ್ಛ ರೂಪವಾಗಿದೆ. ಈ ಗಿಡಗಳನ್ನು ಚೆನ್ನಾಗಿ ಪೋಷಿಸಿದರೆ 400 ವರ್ಷಗಳ ಕಾಲ ಇವು ಬದುಕುತ್ತವೆ ಹಾಗೂ ನಿಮ್ಮ ಮುಂದಿನ ಪೀಳಿಗೆಯವರಿಗೂ ಇದನ್ನು ನೀವು ಹಸ್ತಾಂತರಿಸಬಹುದು. ನಾನು ಈ ಹಿಂದೆ ವಾಸಿಸುತ್ತಿದ್ದ ಮನೆಯಲ್ಲಿ 200 ಬೋನ್ಸಾಯಿ ಗಿಡಗಳನ್ನು ನನ್ನ ಮನೆಯ ಮಾಳಿಗೆಯ ಮೇಲೆ ಬೆಳೆಸಿದ್ದೆ. ಇದು ನನಗೆ ಬೋನ್ಸಾಯಿ ಬಗೆಗಿರುವ ಆಸಕ್ತಿಯನ್ನು ತೋರಿಸುತ್ತಿತ್ತು. ಹಾಗಾಗಿ ಇಂಡಿಯನ್ ಬೋನ್ಸಾಯಿ ಅಸೋಸಿಯೇಷನ್ ನನ್ನನ್ನು ಸದಸ್ಯನನ್ನಾಗಿ ಮಾಡಿಕೊಂಡರು ಎಂದು ಸೌಮಿಕ್ ಸಂತಸದಿಂದ ಹೇಳುತ್ತಾರೆ.

ಸಸ್ಯಪ್ರೀಯರಲ್ಲಿ ಪ್ರಚಾರ
ತದನಂತರ ನನಗೆ ದೆಹಲಿ ಹಾಗೂ ಇತರೆ ಭಾಗಗಳ ಹಲವು ತೋಟಗಾರಿಕಾ ತಜ್ಞರೊಂದಿಗೆ ಭೇಟಿಯಾಗುವ ಅವಕಶಗಳು ದೊರೆತವು. ನನಗೆ ಸಿಕ್ಕ ಅವಕಾಶಗಳಲ್ಲೆಲ್ಲ ನಾನು ಬೆಳೆದಂತಹ ಬೋನ್ಸಾಯಿ ಗಿಡಗಳನ್ನು ಉತ್ಸವಗಳಲ್ಲಿ ಪ್ರದರ್ಶಿಸಿದೆ. ನನ್ನ ಸ್ನೇಹಿತರು ಹಾಗೂ ಕುಟುಂಬದವರಿಂದ ಪ್ರೋತ್ಸಾಹ ದೊರೆತು ಈ ಬಗ್ಗೆ ಯೋಚಿಸಿ ಬೋನ್ಸಾಯಿ ಉದ್ಯಮಕ್ಕೆ ಪ್ರವೇಸಿಸಲು ಚಿಂತಿಸಿದೆ. 2018ರ ನಂತರ ಮುಂದಿನ ವರ್ಷದಲ್ಲಿ ಗ್ರೋ ಗ್ರೀನ್ ಬೋನ್ಸಾಯಿ ಪ್ರಾರಂಭವಾಗಿಯೇ ಬಿಟ್ಟಿತು. "ಈ ನರ್ಸರಿಯಲ್ಲಿ ನಾನು ಕ್ಯಾಕ್ಟಸ್ ಹಾಗೂ ಇತರೆ ಎಕ್ಸೋಟಿಕ್ ಸಸ್ಯಗಳನ್ನು ಬೆಳೆಯುತ್ತಿದ್ದು ಅದರ ಮುಖ್ಯ ಉದ್ದೇಶವೆಂದರೆ ಇವುಗಳನ್ನು ಕೊಳ್ಳ ಬಯಸುವ ಸಸ್ಯಪ್ರೀಯರಲ್ಲಿ ಬೋನ್ಸಾಯಿ ಕುರಿತು ಪ್ರಚಾರ ಮಾಡುವುದೇ ಆಗಿದೆ ಎನ್ನುತ್ತಾರೆ ಸೌಮಿಕ್.

ಇದನ್ನೂ ಓದಿ: Mental Health: ಕೈದೋಟದಲ್ಲಿ ಕಾಲಕಳೆಯುವುದರಿಂದ ನಿಮ್ಮಮಾನಸಿಕ ಆರೋಗ್ಯವನ್ನು ನಿವಾರಿಸಿಕೊಳ್ಳಬಹುದಂತೆ..!

30 ಬಗೆಯ ಬೋನ್ಸಾಯಿ
ಇಂದು ಅವರು ದೆಹಲಿ ಹಾಗೂ ಸುತ್ತಮುತ್ತಲಿನ ಪ್ರದೇಶದ ಕಾರ್ಪೊರೇಟ್ ಉದ್ಯೋಗಿಗಳು ತಮ್ಮ ಆಪ್ತರಿಗೆ ಸುಸ್ಥಿರವಾದ ಕೊಡುಗೆ ನೀಡ ಬಯಸಿದ್ದಲ್ಲಿ ಬೋನ್ಸಾಯಿ ನೀಡಲು ಹುರುದುಂಬಿಸುತ್ತಾರೆ ಹಾಗೂ ಆರ್ಡರ್ ಮಾಡುವವರ ಮನೆಬಾಗಿಲಿಗೆ ತಲುಪಿಸುವ ಸೇವೆಯನ್ನೂ ನೀಡುತ್ತಿದ್ದಾರೆ. ಒಂದು ಒಳ್ಳೆಯ ಬೋನ್ಸಾಯಿ ಬೆಲೆ 1500 ರೂ. ಆಗುತ್ತದೆ ಎಂದು ಅವರು ಹೇಳುತ್ತಾರೆ. ನೋಯ್ಡಾದ ಎಕ್ಸ್‌ಪ್ರೆಸ್‌ ವೇನಲ್ಲಿ ಸ್ಥಿತವಿರುವ ಗ್ರೋ ಗ್ರೀನ್ ಫಾರ್ಮ್ ನರಸರಿಯು 4000 ಚದರ ಯಾರ್ಡ್‌ಗಳಷ್ಟು ವಿಸ್ತೃತವಾಗಿದೆ. ಇಲ್ಲಿ ವಿವಿಧ ಸಿರಾಮಿಕ್ ಪ್ಲೇಟುಗಳಲ್ಲಿ ಬೆಳೆಯಲಾದ 30 ಬಗೆಯ ಬೋನ್ಸಾಯಿ ಗಿಡಗಳಿವೆ, ಈ ಫಾರ್ಮ್ ನರ್ಸರಿಯಲ್ಲಿ ನಾಲ್ಕು ಜನ ಮಾಲಿಗಳು ಹಾಗೂ ಬಾತುಕೋಳಿಗಳೂ ಸಹ ಸುತ್ತಾಡುವುದನ್ನು ಕಾಣಬಹುದು.

ತೋಟಗಾರಿಕಾ ಉತ್ಸವ
ಸೌಮಿಕ್ ಒಬ್ಬ ಉದ್ಯಮಿಯಾಗಿ ಭಾರತದಲ್ಲಿರುವ ತೋಟಗಾರಿಕಾ ಸಮುದಾಯಗಳಲ್ಲಿ ಪ್ರಮುಖ ಹೆಸರನ್ನು ಹೊಂದಿದ್ದು ಸೌತ್ ಏಷ್ಯಾ ಬೋನ್ಸಾಯಿ ಫೆಡರೇಷನ್‌ಗೆ ರಾಯಭಾರಿಯೂ ಆಗಿದ್ದಾರೆ. "ನಾನು ಚಿಕ್ಕವನಾಗಿದ್ದಾಗಿನಿಂದಲೂ ತೋಟಗಾರಿಕೆಯಲ್ಲಿ ಸಾಕಷ್ಟು ಆಸಕ್ತಿ ಹೊಂದಿದ್ದೆ. ನನ್ನ ತಂದೆ ಸರ್ಕಾರಿ ಸಂಸ್ಥೆಯೊಂದರಲ್ಲಿ ಕಲಾ ನಿರ್ದೇಶಕರಾಗಿದ್ದರು. ನಾನು ಯಾವಾಗಲೂ ನನ್ನ ಅಪ್ಪ-ಅಮ್ಮನೊಂದಿಗೆ ತೋಟಗಾರಿಕಾ ಉತ್ಸವಕ್ಕೆ ಹೋಗುವುದನ್ನು ಇಷ್ಟಪಡುತ್ತಿದ್ದೆ. ಇದರಲ್ಲೇ ನನ್ನ ವೃತ್ತಿ ಮಾಡಬೇಕೆಂದು ನಿಶ್ಚಯಿಸಿದಾಗ ಇದರ ಬಗ್ಗೆ ಸಾಕಷ್ಟು ಸಂಶೋಧನೆ ಮಾಡಿದೆ ಹಾಗೂ ಹಲವು ವಿಷಯಗಳನ್ನು ಕಲಿತೆ. ಕೊನೆಯದಾಗಿ ಬೋನ್ಸಾಯಿ ಬೆಳೆಯಲು ನಿರ್ಧರಿಸಿದೆ" ಎನ್ನುತ್ತಾರೆ ಸೌಮಿಕ್.

ಉತ್ತರ ಭಾರತದ ಹವಾಮಾನಕ್ಕೆ ತಕ್ಕಂತೆ ಸೌಮಿಕ್ ಬೋನ್ಸಾಯಿ ಗಿಡಗಳ ಕೃಷಿ ಆರಂಭಿಸಿದರು. ದ್ವೀಪಗಳಲ್ಲಿ ಕಂಡುಬರುವ ಮರಗಳು, ಆಲದ ಮರ, ಹಾಗೂ ಭಾರತೀಯ ಶೈಲಿಯ ಕೆಲ ಮರಗಳು ಉದಾಹರಣೆಗೆ ಮುರಯ್ಯಾ ರೀತಿಯ ಮರಗಳ ಬೋನ್ಸಾಯಿ ಬೆಳೆಯಲು ಸೌಮಿಕ್ ಆರಂಭಿಸಿದರು. ಇವರ ಬೋನ್ಸಾಯಿ ಫಾರ್ಮ್ ಇತರೆ ಬೋನ್ಸಾಯಿ ಫಾರ್ಮ್‌ಗಳಿಗಿಂತ ಭಿನ್ನವಾಗಿದೆ. ಏಕೆಂದರೆ ಇಲ್ಲಿ ಅವರು ಪೆಂಜಿಂಗ್ ಬೋನ್ಸಾಯಿಯನ್ನು ಬೆಳೆಯುತ್ತಾರೆ. ಇಲ್ಲಿ ತಿಳಿಯಬೇಕಾದ ಅಂಶವೆಂದರೆ ಬೋನ್ಸಾಯಿ ಎಂದರೆ ಜಪಾನಿ ಭಾಷೆಯಲ್ಲಿ ತಟ್ಟೆಯಲ್ಲಿ ಮರ ಎಂದಾಗುತ್ತದೆ ಹಾಗೂ ಪೆಂಜಿಂಗ್ ಎನ್ನುವುದು ಚೈನೀಸ್ ಭಾಷೆಯಲ್ಲಿ ಲ್ಯಾಂಡ್ ಸ್ಕೇಪ್ ಎಂಬರ್ಥ ನೀಡುತ್ತದೆ. ಹಾಗಾಗಿ ಸೌಮಿಕ್ ಅವರ ಬೋನ್ಸಾಯಿ ಲ್ಯಾಂಡ್ ಸ್ಕೇಪ್ ರೀತಿಯಲ್ಲಿರುವುದರಿಂದ ಇತರೆ ಬೋನ್ಸಾಯಿಗಳಿಗಿಂತ ಭಿನ್ನವಾಗಿ ಕಾಣುತ್ತದೆ. ಅವರೇ ಹೇಳುವಂತೆ ಈ ರೀತಿಯ ಪೆಂಜಿಂಗ್ ಶೈಲಿಯನ್ನು ಭಾರತಕ್ಕೆ ಅವರೇ ಮೊದಲು ಪರಿಚಯಿಸಿದ್ದಾರೆ.

ದುಬಾರಿ ಪೆಂಜಿಂಗ್ ಬೋನ್ಸಾಯಿ ಬೆಲೆ 2.5 ಲಕ್ಷ ರೂ
ಇವರ ಬಳಿ ಇರುವ ಅತಿ ಕಡಿಮೆ ಬೆಲೆಯ ಪೆಂಜಿಂಗ್ ಬೆಲೆ 800 ರೂ. ಆಗಿದ್ದರೆ ಬಲು ದುಬಾರಿ ಪೆಂಜಿಂಗ್ ಬೋನ್ಸಾಯಿ ಬೆಲೆ 2.5 ಲಕ್ಷ ರೂ. ಆಗಿದೆ. ಪ್ರಸ್ತುತ ಸೌಮಿಕ್ ಅವರ ಈ ಉದ್ಯಮದ ವಾರ್ಷಿಕ ವಹಿವಾಟು 35-50 ಲಕ್ಷ ರೂ. ಆಗಿದೆ. ನನ್ನ ಈ ನರ್ಸರಿ ಉದ್ಯಮವನ್ನು ಕೇವಲ ದುಡ್ಡನ್ನೇ ಪ್ರಧಾನವಾಗಿರಿಸಿಕೊಂಡು ನಡೆಸುತ್ತಿಲ್ಲ. ಬದಲಾಗಿ ವರ್ಟಿಕಲ್ ಪೆಂಜಿಂಗ್ ಬೋನ್ಸಾಯಿ ಬೆಳೆಸುವ ಕಲೆ ಇತರೆ ಆಸಕ್ತರಿಗೆ ತಿಳಿಸಿಕೊಡುವುದು ಹಾಗೂ ಈ ನರ್ಸರಿ ಹೀಗೆ ಮುಂದುವರೆಯುವಂತೆ ಮಾಡುವುದು ನನ್ನ ಉದ್ದೇಶ" ಎಂದು ಅವರು ಹೇಳಿದರು.

ಕಳೆದ 6 ವರ್ಷಗಳಲ್ಲಿ ಸೌಮಿಕ್ ತಮ್ಮ ಬೋನ್ಸಾಯಿ ಗಿಡಗಳನ್ನು ದೆಹಲಿ ಪ್ರವಾಸೋದ್ಯಮದವರೊಂದಿಗೆ ಸೇರಿ ದೆಹಲಿಯ ಗಾರ್ಡನ್ ಆಫ್ ಫೈವ್ ಸೆನ್ಸಸ್‌ನಲ್ಲಿ ಪ್ರತಿ ಫೆಬ್ರವರಿಯಲ್ಲಿ ಪ್ರದರ್ಶನ ಮಾಡುತ್ತಿದ್ದಾರೆ. ಅಲ್ಲದೆ, ದೂರದರ್ಶನದವರ ಡಿಡಿ ಕಿಸಾನ್ ಯುಟ್ಯೂಬ್ ವಾಹಿನಿಗಾಗಿ ವರ್ಟಿಕಲ್ ಪೆಂಜಿಂಗ್ ಬೋನ್ಸಾಯಿ ಬೆಳೆಯುವ ಬಗೆಯ ಕುರಿತು 4 ಭಾಗಗಳಲ್ಲಿ ವಿಡಿಯೋ ಮಾಡಿದ್ದು ಅದು 50,000ಕ್ಕಿಂತಲೂ ಹೆಚ್ಚು ಬಾರಿ ವೀಕ್ಷಿಸಲ್ಪಟ್ಟಿದೆ.

ಇದನ್ನೂ ಓದಿ: Health Tips: ಮುಟ್ಟಿದರೆ ಮುನಿಯುವ ಸೊಪ್ಪಿಗೆ ಕಿಡ್ನಿಯಲ್ಲಿನ ಕಲ್ಲು ಕರಗಿಸುವ ಶಕ್ತಿಯಿದೆ!

ಆರೈಕೆ ತುಂಬಾ ಮುಖ್ಯ
ಕಳೆದ ವರ್ಷದ ಸೆಪ್ಟೆಂಬರ್‌ನಲ್ಲಿ ಸೌಮಿಕ್ ತಮ್ಮ ಫಾರ್ಮ್‌ನಲ್ಲಿ 'ಪ್ಲ್ಯಾಂಟ್ ಡೇ ಕೇರ್ ಘಟಕ' ಆರಂಭಿಸಿದ್ದಾರೆ. ಸಸ್ಯಪ್ರಿಯರು ದೀರ್ಘ ಕಾಲ ಹೊರ ಹೋಗಬೇಕಾದ ಸಂದರ್ಭ ಬಂದರೆ ತಾತ್ಕಾಲಿಕವಾಗಿ ಅವರು ತಮ್ಮ ಸಸ್ಯಗಳ ಪೋಷಣೆ/ಆರೈಕೆಗಾಗಿ ಇಲ್ಲಿಟ್ಟು ಹೋಗಬಹುದಾಗಿದೆ. ಸೌಮಿಕ್ ಪ್ರಕಾರ, ಬೋನ್ಸಾಯಿಗಳನ್ನು ಒಮ್ಮೆ ಮನೆಗೆ ತಂದರೆ ಅವುಗಳ ಬೇರುಗಳ ಆರೈಕೆ ತುಂಬಾ ಮುಖ್ಯವಾಗಿರುತ್ತದೆ ಹಾಗೂ ಇದು ಅಷ್ಟೊಂದು ಕಷ್ಟದಾಯಕ ಕ್ರಿಯೆ ಅಂತೂ ಅಲ್ಲವೇ ಅಲ್ಲ. ನಿರಂತರ ನೀರುಣಿಸುವಿಕೆ ಹಾಗೂ ರಾಸಾಯನಿಕ ಮುಕ್ತ ಗೊಬ್ಬರ ಸಿಂಪಡಿಸುತ್ತಿರಬೇಕು. ಪ್ರತಿ 25-30 ದಿನಗಳಿಗೊಮ್ಮೆ ಬೂಸ್ಟರ್‌ ನೀಡುತ್ತಿದ್ದರೆ ಬೋನ್ಸಾಯಿಗಳು ಚೆನ್ನಾಗಿರುತ್ತವೆ ಎಂದು ಅವರು ನುಡಿಯುತ್ತಾರೆ.

ಸೌಮಿಕ್ ತಮ್ಮ ಬೋನ್ಸಾಯಿ ಬೆಳೆಯುವಿಕೆಗೆ ಸಂಬಂಧಿಸಿದಂತೆ ಬೇಡಿಕೆ ಬಂದಾಗಲೆಲ್ಲ ನೋಯ್ಡಾದ ತೋಟಗಾರಿಕೆ ಇಲಾಖೆಯಲ್ಲಿ ತರಬೇತಿ ಕೊಡುತ್ತಾರೆ. ಅವರು ನರ್ಸರಿ ಹಾಗೂ ಕಿಚನ್ ಗಾರ್ಡನ್‌ಗೆ ಸಂಬಂಧಿಸಿದಂತೆ ಕೋಲ್ಕತ್ತಾ, ಲೂಧಿಯಾನಾ, ಆಗ್ರಾ, ವಿಜಯವಾಡದಲ್ಲಿ ಕಾರ್ಯಾಗಾರಗಳನ್ನು ನಡೆಸಿದ್ದಾರೆ. ಅಲ್ಲದೆ ಆನ್ಲೈನ್ ಮೂಲಕವೂ ತರಬೇತಿ ನೀಡುತ್ತಾರೆ. ಅವರ ತರಬೇತಿ ಪಡೆಯಲು ಒಬ್ಬ ವ್ಯಕ್ತಿ 2800 ರೂ. ನೀಡಬೇಕಾಗಿದ್ದು ಅದಕ್ಕೆ ಪ್ರತಿಯಾಗಿ ತರಬೇತಿ ಪಡೆದವರು ಅಂತಿಮವಾಗಿ ''ಉಚಿತ ಅನುಭವ'' ಪಡೆದು ಮರಳುತ್ತಾರೆ ಎಂದು ಅವರು ನುಡಿಯುತ್ತಾರೆ.
Published by:vanithasanjevani vanithasanjevani
First published: