• Home
  • »
  • News
  • »
  • business
  • »
  • Ravi Modi: ಭಾರತದ ಶ್ರೀಮಂತರ ಪಟ್ಟಿಯಲ್ಲಿ ಉದ್ಯಮಿ ರವಿ ಮೋದಿ; ಇವರ ಆಸ್ತಿ ಬಗ್ಗೆ ಗೊತ್ತಾದ್ರೆ ಶಾಕ್ ಆಗ್ತೀರಾ!

Ravi Modi: ಭಾರತದ ಶ್ರೀಮಂತರ ಪಟ್ಟಿಯಲ್ಲಿ ಉದ್ಯಮಿ ರವಿ ಮೋದಿ; ಇವರ ಆಸ್ತಿ ಬಗ್ಗೆ ಗೊತ್ತಾದ್ರೆ ಶಾಕ್ ಆಗ್ತೀರಾ!

ರವಿ ಮೋದಿ

ರವಿ ಮೋದಿ

ಕೆಲವರು ಕನಸನ್ನು ನನಸು ಮಾಡಿಕೊಳ್ಳೋಕೆ ಸಾಕಷ್ಟು ಶ್ರಮ ಹಾಕ್ತಾರೆ. ಬದುಕನ್ನು ಅಂದುಕೊಂಡಂತೆ ಬದುಕ್ತಾರೆ. ಅಂಥವರಲ್ಲಿ ಒಬ್ಬರು ರವಿ ಮೋದಿ. ಸಾಮಾನ್ಯ ಬಡ ಕುಟುಂಬದಲ್ಲಿ ಹುಟ್ಟಿರುವ ರವಿ ಮೋದಿ ಇಂದು ಶ್ರೀಮಂತರ ಪಟ್ಟಿಯಲ್ಲಿ ಹೆಸರು ಪಡೆದಿದ್ದಾರೆ.

  • Share this:

ಮ್ಮ ಸಮಾಜದಲ್ಲಿ ಕೆಲವಷ್ಟು ಜನರು ತಮ್ಮ ಬದುಕು ಹೀಗೆಯೇ ಇರಬೇಕು ಅಂದುಕೊಳ್ತಾರೆ. ಅವರು ಕೇವಲ ಕನಸು (Dream) ಕಾಣೋದು ಮಾತ್ರವಲ್ಲ. ಬದಲಾಗಿ ಕನಸನ್ನು ನನಸು ಮಾಡಿಕೊಳ್ಳೋಕೆ ಸಾಕಷ್ಟು ಶ್ರಮ (Effort) ಹಾಕ್ತಾರೆ. ಬದುಕನ್ನು ಅಂದುಕೊಂಡಂತೆ ಬದುಕ್ತಾರೆ. ಅಂಥವರಲ್ಲಿ ಒಬ್ಬರು ರವಿ ಮೋದಿ (Ravi Modi). ಸಾಮಾನ್ಯ ಬಡ ಕುಟುಂಬದಲ್ಲಿ ಹುಟ್ಟಿರುವ ರವಿ ಮೋದಿ ಇಂದು ಶ್ರೀಮಂತರ ಪಟ್ಟಿಯಲ್ಲಿ ಹೆಸರು ಪಡೆದಿದ್ದಾರೆ. ನೀವು ಜನಪ್ರಿಯ ಎಥ್ನಿಕ್ ವೇರ್ ಬ್ರ್ಯಾಂಡ್ 'ಮಾನ್ಯವರ್' (Manyavar) ಹೆಸರನ್ನು ಕೇಳಿಯೇ ಇರ್ತೀರ. ಆ ಫೇಮಸ್‌ ಬ್ರಾಂಡ್‌ ಹಿಂದಿರುವ ವ್ಯಕ್ತಿ ಹೆಸರೇ ರವಿ ಮೋದಿ.


ಅವರು ಇತ್ತೀಚಿಗೆ ಬಿಡುಗಡೆಯಾದ IIFL ವೆಲ್ತ್ ಹುರುನ್ ಇಂಡಿಯಾ ರಿಚ್ ಲಿಸ್ಟ್ 2022 ರಲ್ಲಿ ವರ್ಷದ ಅತ್ಯಂತ ಹೆಚ್ಚು ಸಂಪತ್ತು ಗಳಿಸಿದ ಭಾರತೀಯರಾಗಿ ಹೊರಹೊಮ್ಮಿದ್ದಾರೆ.


ಮಾನ್ಯವರ್‌ ಮತ್ತು ವೇದಾಂತ್ ಫ್ಯಾಶನ್ಸ್‌ನ ಸಂಸ್ಥಾಪಕ
ಮಾನ್ಯವರ್‌ ಮಾಲೀಕ ಮತ್ತು ವೇದಾಂತ್ ಫ್ಯಾಶನ್ಸ್‌ನ ಸಂಸ್ಥಾಪಕ ಹಾಗೂ ಎಂಡಿ ಆಗಿರುವ ರವಿ ಮೋದಿ ಅವರ ಸಂಪತ್ತು ಈ ವರ್ಷ ಶೇಕಡಾ 376 ರಷ್ಟು ಏರಿಕೆ ಕಂಡಿದೆ. ಅವರು Nykaa ಸಂಸ್ಥಾಪಕ ಮತ್ತು ಭಾರತದ ಅತ್ಯಂತ ಶ್ರೀಮಂತ ಸೆಲ್ಫ್‌ ಮೇಡ್‌ ಮಹಿಳೆ ಫಲ್ಗುಣಿ ನಾಯರ್ ಅವರನ್ನು ಹೊರತುಪಡಿಸಿ, 345% ನಷ್ಟು ಸಂಪತ್ತು ಹೆಚ್ಚಳ ಹೊಂದಿದವರಾಗಿದ್ದಾರೆ. ಶ್ರೀಮಂತರ ಪಟ್ಟಿಯ ಪ್ರಕಾರ ಮೋದಿಯವರ ನಿವ್ವಳ ಆಸ್ತಿ ಮೌಲ್ಯ 32,400 ಕೋಟಿ ರೂ.ಗೆ ಏರಿಕೆಯಾಗಿದೆ. ಇನ್ನು ಫೋರ್ಬ್ಸ್ ಪ್ರಕಾರ, ಅವರ ನೈಜ ಆಸ್ತಿಯ ನಿವ್ವಳ ಮೌಲ್ಯವು 3.7 ಬಿಲಿಯನ್ ಆಗಿದೆ.


ಇದನ್ನೂ ಓದಿ:  Neha Narkhede: ಭಾರತದ ಅತ್ಯಂತ ಕಿರಿಯ 'ಸೆಲ್ಪ್‌ ಮೇಡ್‌' ಶ್ರೀಮಂತ ಮಹಿಳೆ ನೇಹಾ ನಾರ್ಖೆಡೆ!


ಎಥ್ನಿಕ್ ವೇರ್ ಫ್ಯಾಶನ್ ಮತ್ತು ಬ್ರೈಡಲ್ ವೇರ್ ಶಾಪಿಂಗ್‌ನಲ್ಲಿ ಮೋದಿಯವರ ಮಾನ್ಯವರ್‌ ಬ್ರಾಂಡ್‌ ತುಂಬಾ ಜನಪ್ರಿಯ. ಈ ಉದ್ಯಮದಲ್ಲಿ ಆದಂತಹ ಲಾಭವು ಅವರನ್ನು ಶ್ರೀಮಂತರ ಪಟ್ಟಿಯಲ್ಲಿ 246 ನೇ ಸ್ಥಾನದಿಂದ 41 ನೇ ಸ್ಥಾನಕ್ಕೆ ಏರುವಂತೆ ಮಾಡಿದೆ. ಇನ್ನು ಮಾನ್ಯವರ್ ಹೊರತುಪಡಿಸಿ, ಮೋದಿಯ ವೇದಾಂತ್ ಫ್ಯಾಷನ್‌ಗಳು ಮೋಹೆ, ಮಂಥನ್, ಮೆಬಾಜ್, ತ್ವಮೇವ್‌ನಂತಹ ಇತರ ಬ್ರ್ಯಾಂಡ್‌ಗಳನ್ನು ಸಹ ಒಳಗೊಂಡಿದೆ.


ರವಿ ಮೋದಿ ವ್ಯಾಪಾರ ಸಾಮ್ರಾಜ್ಯ ಕಟ್ಟಿದ್ದು ಹೇಗೆ?
ಅಂದಹಾಗೆ ರವಿ ಮೋದಿ ಹುಟ್ಟಿದ್ದು ಬಡತನದಲ್ಲಿಯೇ. ಅವರ ತಂದೆ ಸಣ್ಣ ಬಟ್ಟೆ ಅಂಗಡಿ ಹೊಂದಿದ್ದರು. ತಮ್ಮ 13 ನೇ ವಯಸ್ಸಿನಿಂದಲೇ ಕೆಲಸ ಆರಂಭಿಸಿದ ರವಿ ಮೋದಿ, ತಂದೆಯ ಅಂಗಡಿಯಲ್ಲಿ ಮಾರಾಟಗಾರನಾಗಿ ಅನುಭವ ಪಡೆದರು. ಇನ್ನು ಮಾಧ್ಯಮದ ವರದಿ ಪ್ರಕಾರ, ಕೆಲ ಕಾಲದ ನಂತರ ಅವರು ಉತ್ತರ ಪ್ರದೇಶದಲ್ಲಿ ತಮ್ಮದೇ ಆದ ಜನಾಂಗೀಯ ಉಡುಗೆಗಳನ್ನು ತಯಾರಿಸಲು ನಿರ್ಧರಿಸಿದರು.


2002 ರಲ್ಲಿ ಅವರು ಅವರು ವೇದಾಂತ್‌ ಫ್ಯಾಷನ್ಸ್‌ ತೆರೆದರು. ಅಲ್ಲಿಂದ ಮುಂದೆ ಇವರ ವ್ಯಾಪಾರ ಯಶಸ್ವಿಯಾಗಿ ಸಾಗಿತು. ಸದ್ಯ ವೇದಾಂತ್ ಫ್ಯಾಶನ್ಸ್ ದೇಶಾದ್ಯಂತ 600 ಮಳಿಗೆಗಳನ್ನು ಮತ್ತು ಅಂತಾರಾಷ್ಟ್ರೀಯವಾಗಿ 11 ಮಳಿಗೆಗಳನ್ನು ನಡೆಸುತ್ತಿದೆ. ಇವರ ಮಗ ವೇದಾಂತ್‌ ಈಗ ಕಂಪನಿಯ ಮುಖ್ಯ ಮಾರ್ಕೆಟಿಂಗ್‌ ಅಧಿಕಾರಿಯಾಗಿದ್ದಾರೆ. ಅವರ ಪತ್ನಿ ಶಿಪ್ಲಿ ಕೂಡ ವೇದಾಂತ್ ಫ್ಯಾಶನ್ಸ್‌ನಲ್ಲಿ ಮಂಡಳಿಯ ಸದಸ್ಯರಾಗಿದ್ದಾರೆ.


ಬಡತನದಿಂದ ಬಂದ ರವಿ ಮೋದಿ ಇಂದೂ ಕೂಡ ಸರಳವಾಗಿಯೇ ಬದುಕುತ್ತಿದ್ದಾರೆ. ಮಹಾನಗರದ ಜಂಜಾಟದಿಂದ ದೂರ ಅಂದರೆ ಕೋಲ್ಕತ್ತಾದ ಹೊರವಲಯದಲ್ಲಿ ಅವರು ವಾಸಿಸುತ್ತಿದ್ದಾರೆ.


ಕಾರ್‌ ಕೊಳ್ಳಲು 15 ವರ್ಷ ಕಾದಿದ್ದರಂತೆ!
ರವಿ ಅವರ ಬಗ್ಗೆ ಇನ್ನೊಂದು ಇಂಟೆರೆಸ್ಟಿಂಗ್‌ ಅಂಶ ಎಂದರೆ ಅವರು 2002 ರಲ್ಲಿ ಅವರ ವ್ಯಾಪಾರ ವ್ಯವಹಾರ ಚೆನ್ನಾಗಿ ನಡೆಯಲು ಶುರುವಾಗುತ್ತಿದ್ದಂತೆ ಅವರು, ಒಂದು ಮರ್ಸಿಡಿಸ್ ಬೆಂಜ್‌ ಕಾರನ್ನು ಖರೀದಿಸಲು ಬಯಸಿದ್ದರು.


ಇದನ್ನೂ ಓದಿ: Falguni Nair: ಈ ವಿಚಾರದಲ್ಲಿ ಕಿರಣ್ ಮಜುಂದಾರ್ ಶಾರನ್ನೇ ಹಿಂದಿಕ್ಕಿದ ಫಲ್ಗುಣಿ ನಾಯರ್!


ಆದರೆ ಮತ್ತೆ ಯೋಚಿಸಿ ತಮ್ಮ ನಿರ್ಧಾರವನ್ನು ಬದಲಾಯಿಸಿದರು. ಆಗ ತಾನೇ ಚೆನ್ನಾಗಿ ನಡೆಯುತ್ತಿದ್ದ ವ್ಯಾಪಾರದಿಂದ ಬಂದ ಲಾಭವನ್ನೆಲ್ಲ ವ್ಯಾಪಾರ ವಿಸ್ತರಣೆಗೆ ಬಳಸಿದರು. ಅಲ್ಲದೇ ಕಾರ್‌ ಕೊಳ್ಳುವ ಆಲೋಚನೆಯನ್ನು 15 ವರ್ಷಕ್ಕೆ ಮುಂದೂಡಿದರು. ಕೊನೆಗೂ ಅವರು ಮರ್ಸಿಡಿಸ್‌ ಕೊಂಡಿದ್ದು 2017 ರಲ್ಲಿ. ಹೀಗೆ ಬಡತನದಿಂದ ಬಂದು ಒಂದು ಬಟ್ಟೆ ವ್ಯಾಪಾರದ ಸಾಮ್ರಾಜ್ಯವನ್ನೇ ಕಟ್ಟಿರುವ ರವಿ ಮೋದಿ ಬಹಳಷ್ಟು ಜನರಿಗೆ ಸ್ಪೂರ್ತಿಯಾಗುತ್ತಾರೆ.

Published by:Ashwini Prabhu
First published: