Business Idea: ಈ ಸುದ್ದಿ ರೈತರಿಗೆ ಮಾತ್ರ!ಆಷಾಡದಲ್ಲೇ ಟೊಮ್ಯಾಟೋಗೆ ಸಖತ್​ ಡಿಮ್ಯಾಂಡ್​, ಕಾರಣ ನೋಡಿ ಅಚ್ಚರಿಯಾಗುತ್ತೆ

ರೈತರ (Farmers) ಕತೆಯಂತು ಕೇಳಲೇ ಬೇಡಿ. ಬೆವರು ಸುರಿಸಿ ಬೆಳೆ ಬೆಳದರೂ ಸರಿಯಾದ ಬೆಲೆ ಸಿಗುತ್ತಿಲ್ಲ. ಹೀಗಾಗಿ ಇಂಥ ರೈತರಿಗೆ ಇಂದು ನಾವು ಒಂದು ಒಳ್ಳೆಯ ಐಡಿಯಾ (Idea) ವನ್ನು ನೀಡುತ್ತಿದ್ದೇವೆ. ನೀವು ಈ ಬೆಳೆಯನ್ನು ತೆಗೆದರೆ ಮಾರುಕಟ್ಟೆ (Market) ಯಲ್ಲಿ ಹೆಚ್ಚಿನ ಬೇಡಿಕೆ ಇದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಹಣ (Money) ಎಂದರೆ ಹೆಣ ಕೂಡ ಎದ್ದು ಕೂರುತ್ತೆ ಅಂತಾರೆ. ದುಡ್ಡು ಮಾಡುವುದಕ್ಕೆ ಸಾವಿರಾರು ದಾರಿಗಳಿವೆ. ಆದರೆ ಯಾವತ್ತೂ ಒಳ್ಳೆಯ ದಾರಿಯಲ್ಲಿ ಮಾಡಿದ ಹಣವೇ ಕೊನೆವರೆಗೂ ಇರುತ್ತೆ. ಹೀಗೆ ಕೊರೋನಾ (Corona) ಬಂದು ಹೋದಮೇಲೆ ಅದೆಷ್ಟೋ ಮಂದಿ ಹಣ ಇಲ್ಲದೆ ಪರದಾಡುತ್ತಿದ್ದಾರೆ. ದೊಡ್ಡ ದೊಡ್ಡವರ ಉದ್ಯೋಗಳೇ ನೆಲಕಚ್ಚಿವೆ.  ಏನಾದರೂ ಬ್ಯುಸಿನೆಸ್ (Business)​​ ಮಾಡೋಣ ಎಂದು ಕೊಂಡರೇ ಎಲ್ಲಿ ಲಾಸ್ (Loss)​ ಆಗುತ್ತೋ ಅನ್ನುವ ಭಯದಲ್ಲಿದ್ದಾರೆ. ಇನ್ನು ಕೆಲವರಿಗೆ ದುಡ್ಡು ಇದ್ದರೂ ತಲೆಯಲ್ಲಿ ಐಡಿಯಾ(Idea) ಇರೋದಿಲ್ಲ. ಇನ್ನೂ ರೈತರ (Farmers) ಕತೆಯಂತು ಕೇಳಲೇ ಬೇಡಿ. ಬೆವರು ಸುರಿಸಿ ಬೆಳೆ ಬೆಳದರೂ ಸರಿಯಾದ ಬೆಲೆ ಸಿಗುತ್ತಿಲ್ಲ. ಹೀಗಾಗಿ ಇಂಥ ರೈತರಿಗೆ ಇಂದು ನಾವು ಒಂದು ಒಳ್ಳೆಯ ಐಡಿಯಾ (Idea) ವನ್ನು ನೀಡುತ್ತಿದ್ದೇವೆ. ನೀವು ಈ ಬೆಳೆಯನ್ನು ತೆಗೆದರೆ ಮಾರುಕಟ್ಟೆ (Market) ಯಲ್ಲಿ ಹೆಚ್ಚಿನ ಬೇಡಿಕೆ ಇದೆ.

ಟೊಮ್ಯಾಟೋಗೆ ಸಿಕ್ಕಾಪಟ್ಟೆ ಡಿಮ್ಯಾಂಡ್​!

ಭಾರತದಲ್ಲಿ ಟೊಮ್ಯಾಟೋ ಕೃಷಿಯು ಅತ್ಯಂತ ಲಾಭದಾಯಕ ಕೃಷಿ ವ್ಯಾಪಾರವಾಗಿದೆ. ಆಲೂಗಡ್ಡೆ ನಂತರ ಇದು ವಿಶ್ವದ ಎರಡನೇ ಪ್ರಮುಖ ಬೆಳೆಯಾಗಿದೆ. ಟೊಮ್ಯಾಟೋ ಇಲ್ಲದೇ ಹೆಚ್ಚು ಅಡುಗೆಗಳೇ ಆಗುವುದಿಲ್ಲ. ಉತ್ಕರ್ಷಣ ನಿರೋಧಕಗಳಿಂದ ಸಮೃದ್ಧವಾಗಿರುವ 'ಎ' ಮತ್ತು 'ಸಿ' ನಂತಹ ವಿಟಮಿನ್‌ಗಳನ್ನು ಟೊಮ್ಯಾಟೋ ಹೊಂದಿರುತ್ತದೆ. ಈ ಪ್ರಯೋಜನಗಳಿಂದಾಗಿ, ವರ್ಷವಿಡೀ ಟೊಮೆಟೊ ಬೇಡಿಕೆ ಹೆಚ್ಚಾಗಿರುತ್ತದೆ. ಹೀಗಾಗಿ ನೀವು ಟೊಮ್ಯಾಟೋ ಬೆಳೆದರೆ, ಹೆಚ್ಚಿನ ಲಾಭ ಗಳಿಸಬಹುದು.

ಟೊಮ್ಯಾಟೋ ಬೆಳೆಯುವ ಪ್ರಯೋಜನಗಳು!

- ಟೊಮ್ಯಾಟೋ ಅಲ್ಪಾವಧಿಯ ತರಕಾರಿ ಬೆಳೆ.

- ಹೊರಾಂಗಣದಲ್ಲಿ ಮತ್ತು ಒಳಾಂಗಣದಲ್ಲಿ ಟೊಮ್ಯಾಟೋಗಳನ್ನು ಬೆಳೆಯಬಹುದು

- ಟೊಮ್ಯಾಟಫ ಬೇಸಾಯವು ಧಾನ್ಯಗಳು, ದ್ವಿದಳ ಧಾನ್ಯಗಳು ಮತ್ತು ಎಣ್ಣೆಕಾಳುಗಳ ವಿವಿಧ ಬೆಳೆ ಪದ್ಧತಿಗಳಲ್ಲಿ ಉತ್ತಮವಾಗಿ ಹೊಂದಿಕೊಳ್ಳುತ್ತದೆ

- ಬೇಸಾಯವು ಹೆಚ್ಚಿನ ಇಳುವರಿಯನ್ನು ನೀಡುತ್ತದೆ ಆದ್ದರಿಂದ ಹೆಚ್ಚಿನ ಆರ್ಥಿಕ ಮೌಲ್ಯವನ್ನು ನೀಡುತ್ತದೆ.

ಇದನ್ನೂ ಓದಿ: 5 ಸಾವಿರ ಇದ್ರೆ ಈ ಬ್ಯುಸಿನೆಸ್​ ಶುರು ಮಾಡಿ! ತಿಂಗಳಿಗೆ 30 ಸಾವಿರದಿಂದ 1 ಲಕ್ಷ ದುಡ್ಡು ಮಾಡ್ಬಹುದು

- ಎಲ್ಲ ವಿಧದ ಮಣ್ಣುಗಳಲ್ಲಿ ಹಾಗೂ ಮೂರೂ ಕಾಲಗಳಲ್ಲಿ ಟೊಮ್ಯಾಟೋ ಬೆಳೆಯಬಹುದು.

- ಸೋಲೆನೆಸೀ (Solanaceae) ಕುಟುಂಬಕ್ಕೆ ಸೇರಿರುವ ಟೊಮ್ಯಾಟೋ

- ಇದರ ವೈಜ್ಞಾನಿಕ ಹೆಸರು ಲೈಕೊಪರ್ಸಿಕೊನ್ ಎಸ್ಕುಲೆಂಟಮ್ (Lycopersicon esculentum)

ಚಳಿಗಾಲದಲ್ಲಿ  ಬಹಳಷ್ಟು  ರೈತರು ಬಿಸಾಡುವ ಬೆಲೆಯಲ್ಲಿ ತಮ್ಮ ಟೊಮ್ಯಾಟೊ ಮಾರಾಟ ಮಾಡುತ್ತಾರೆ. ಗಣನೀಯ ಪ್ರಮಾಣದಲ್ಲಿ ಟೊಮ್ಯಾಟೋ ಕೆಟ್ಟುಹೋಗುತ್ತವೆ ಏಕೆಂದರೆ ಟೊಮ್ಯಾಟೋ ಒಂದು ಅತೀ ಬೇಗ ಕೆಟ್ಟು ಹೋಗುವ ತರಕಾರಿ. ಇದನ್ನು ತಪ್ಪಿಸಲು, ಮನೆಯಲ್ಲಿ ವಿವಿಧ ಮೌಲ್ಯವರ್ಧಿತ ಉತ್ಪನ್ನಗಳನ್ನು ತಯಾರಿಸಿ  ಬಳಸಬಹುದು. ಟೊಮ್ಯಾಟೋ ಹಣ್ಣಿನಿಂದ ಜಾಮ್, ಸಾಸ್, ಕೆಚಪ್, ಚಟ್ನಿ ಹೀಗೆ ಹಲವಾರು ಪದಾರ್ಥಗಳನ್ನು ತಯಾರಿಸಬಹುದು.

ಇದನ್ನೂ ಓದಿ: ಕೈಮಗ್ಗ ನೇಕಾರರರಿಗೆ ಸಾಲ ಸೌಲಭ್ಯ; ಅರ್ಜಿ ಸಲ್ಲಿಸುವುದು ಹೇಗೆ? ವಿವರ ಇಲ್ಲಿದೆ

ಸಾಮಾನ್ಯವಾಗಿ ಪ್ರತಿವರ್ಷ ಮೇ ಮತ್ತು ಜೂನ್ ತಿಂಗಳಲ್ಲಿ ಟೊಮ್ಯಾಟೋ ಬೆಲೆ ಗಗನಕ್ಕೇರಿರುತ್ತದೆ. ಯಾಕೆಂದರೆ, ಕಳೆದ 10 ವರ್ಷದಿಂದ ಮುಂಗಾರು ಮಳೆ ಮತ್ತು ಬೇಸಿಗೆ ಮಳೆ ವಾಡಿಕೆ ಮೀರಿ ಸುರಿಯುತ್ತಿದೆ. ಹೀಗಾಗಿ ನೆರೆಯ ರಾಜ್ಯಗಳಾದ ಮಹಾರಾಷ್ಟ್ರ ಮತ್ತು ಆಂಧ್ರ ಪ್ರದೇಶದಲ್ಲಿ ಟೊಮ್ಯಾಟೋ ಬೆಳೆ ಕ್ಷೀಣಿಸಿದೆ. ಫೆಬ್ರವರಿ ಎರಡನೇ ವಾರದಲ್ಲಿ ಟೊಮ್ಯಾಟೋ ನಾಟಿ ಮಾಡಿದ್ರೆ, ಮೇಲೆ ಜೂನ್ ತಿಂಗಳಲ್ಲಿ ಫಸಲು ಬರುತ್ತದೆ. ಈ ಅವಧಿಯಲ್ಲಿ ಆಂಧ್ರ ಪ್ರದೇಶ ಮತ್ತು ಮಹಾರಾಷ್ಟ್ರದಲ್ಲಿ ರೈತರು ಟೊಮ್ಯಾಟೋ ಬೆಳೆಯುವುದಿಲ್ಲ. ಹೀಗಾಗಿ ರಾಜ್ಯದ ರೈತರಿಗೆ ಸಹಜವಾಗಿ ನಿರೀಕ್ಷೆಗೂ ಮೀರಿ ಲಾಭ ಸಿಗುತ್ತದೆ.
Published by:Vasudeva M
First published: