• Home
  • »
  • News
  • »
  • business
  • »
  • Business Idea: ಸಾಲದ ಸುಳಿಯಲ್ಲಿ ಸಿಲುಕಿದ್ದವನ ಕೈ ಹಿಡಿದಿದ್ದು ತುಳಸಿ! ಇಂದು ವರ್ಷಕ್ಕೆ 10 ಲಕ್ಷ ಆದಾಯ

Business Idea: ಸಾಲದ ಸುಳಿಯಲ್ಲಿ ಸಿಲುಕಿದ್ದವನ ಕೈ ಹಿಡಿದಿದ್ದು ತುಳಸಿ! ಇಂದು ವರ್ಷಕ್ಕೆ 10 ಲಕ್ಷ ಆದಾಯ

ನದೀಮ್ ಖಾನ್​

ನದೀಮ್ ಖಾನ್​

ಉತ್ತರ ಪ್ರದೇಶದ ಪಿಲಿಭಿತ್‌ನ ಪುರನ್‌ಪುರ ಬ್ಲಾಕ್‌ನ ಶೇರ್ಪುರ್ ಕಾಲಾ ಗ್ರಾಮದಲ್ಲಿ ನದೀಮ್ ತುಳಸಿಯನ್ನು ಬೆಳೆಸಿದ್ದಾರೆ. ಕೃಷಿಯಲ್ಲಿ ಪ್ರಯೋಗಶೀಲರಾಗಿದ್ದ ಜಯೇಂದ್ರ ಸಿಂಗ್ ಅವರು ತುಳಸಿ ಬೆಳೆಯಲು ನದೀಮ್ ಅವರನ್ನು ಪ್ರೇರೇಪಿಸಿದರು. 

  • Share this:

ದೇಶದ ಹಲವು ರೈತರು ತುಳಸಿ (Tulasi) ಬೆಳೆಯುವ ಮೂಲಕ ಉತ್ತಮ ಲಾಭ ಗಳಿಸುತ್ತಿದ್ದರೂ, ತುಳಸಿ ಯುಪಿಯ ಪಿಲಿಭಿತ್‌ನಲ್ಲಿ ನೆಲೆಸಿರುವ ನದೀಮ್ ಖಾನ್ (Nadeem Khan) ಅವರ ಬದುಕನ್ನೇ ಬದಲಿಸಿದೆ. ನದೀಮ್ ಖಾನ್ ಈ ಹಿಂದೆ ತನ್ನ ಸರಳ ಕೃಷಿ (Agriculture) ಯಿಂದ ಹೆಚ್ಚು ಗಳಿಸಲು ಸಾಧ್ಯವಾಗಲಿಲ್ಲ, ಹವಾಮಾನ (Weather) ಮತ್ತು ಕೀಟಗಳ (Insects) ಉಲ್ಬಣದಿಂದಾಗಿ ಅವರು ಅನೇಕ ಸಮಸ್ಯೆಗಳನ್ನು ಎದುರಿಸಬೇಕಾಯಿತು. ಬೆಳೆಯನ್ನು ಬೆಳೆಸಲು ಅವರು ಹೂಡಿದ ಬಂಡವಾಳದ ಮೊತ್ತ, ಅದನ್ನು ಹೊರತೆಗೆಯಲು ಕಷ್ಟವಾಗಿತ್ತು. ಕೈಯಲ್ಲಿ ದುಡ್ಡಿ(Money) ಲ್ಲದೇ ಮುಂದೇನು ಮಾಡಬೇಕು ಅನ್ನುವ ಭಯ ಅವರನ್ನು ಕಾಡಿತ್ತು. ಸಾಲಗಾರರ ಕಾಟ ಬೇರೆ ಹೆಚ್ಚಾಗಿತ್ತು. ದಿಕ್ಕು ತೋಚದೆ ನದೀಮ್​ ಖಾನ್​ ಶುರು ಮಾಡಿದ್ದೇ ಈ ತುಳಸಿ ಗಿಡಗಳನ್ನು ಬೆಳೆಸುವ ಬ್ಯುಸಿನೆಸ್. ಇದಾದ ನಂತರ ಅವರ ಜೀವನವೇ ಬದಲಾಗಿತ್ತು.


ತುಳಸಿ ಕೃಷಿ ಅದೃಷ್ಟವನ್ನು ಬದಲಾಯಿಸಿತು


ಉತ್ತರ ಪ್ರದೇಶದ ಪಿಲಿಭಿತ್‌ನ ಪುರನ್‌ಪುರ ಬ್ಲಾಕ್‌ನ ಶೇರ್ಪುರ್ ಕಾಲಾ ಗ್ರಾಮದಲ್ಲಿ ನದೀಮ್ ತುಳಸಿಯನ್ನು ಬೆಳೆಸಿದ್ದಾರೆ. ಕೃಷಿಯಲ್ಲಿ ಪ್ರಯೋಗಶೀಲರಾಗಿದ್ದ ಜಯೇಂದ್ರ ಸಿಂಗ್ ಅವರು ತುಳಸಿ ಬೆಳೆಯಲು ನದೀಮ್ ಅವರನ್ನು ಪ್ರೇರೇಪಿಸಿದರು. ಇದಾದ ನಂತರ ಅವರು ತಮ್ಮ ಹೊಲದಲ್ಲಿ ತುಳಸಿ ಬೀಜಗಳನ್ನು ಬಿತ್ತಿದರು. ಕೆಲವು ವಾರಗಳ ನೀರಾವರಿ ನಂತರ, ತುಳಸಿ ಗಿಡಗಳು ಸಿದ್ಧವಾದವು. ಬೆಳೆ ಸಿದ್ಧವಾದ ಬಳಿಕ ಗಿಡಗಳನ್ನು ಕತ್ತರಿಸಿ ಒಣಗಿಸಿ ನಂತರ ಮಾರುಕಟ್ಟೆಯಲ್ಲಿ ಉತ್ತಮ ಬೆಲೆಗೆ ಮಾರಾಟ ಮಾಡಿದರು.


ಈ ಪ್ರವೃತ್ತಿ ಕಳೆದ 8 ವರ್ಷಗಳಿಂದ ನಿರಂತರವಾಗಿ ನಡೆಯುತ್ತಿದೆ. ಪ್ರಸ್ತುತ ತುಳಸಿ ಕೃಷಿಯಿಂದ ನದೀಮ್ ವಾರ್ಷಿಕ ₹10 ಲಕ್ಷದವರೆಗೆ ಆದಾಯ ಪಡೆಯುತ್ತಿದ್ದಾರೆ. ದೊಡ್ಡ ಔಷಧ ಕಂಪನಿಗಳಾದ ಡಾಬರ್, ಪತಂಜಲಿ, ಹಮ್ದರ್ದ್, ಬೈದ್ಯನಾಥ್, ಉಂಝಾ, ಝಂಡು ತುಳಸಿ ಎಲೆ ಮತ್ತು ಗಿಡಗಳನ್ನು ಪ್ರತಿ ಕ್ವಿಂಟಲ್‌ಗೆ ₹7000 ದರದಲ್ಲಿ ಖರೀದಿಸುತ್ತವೆ.


ಇದನ್ನೂ ಓದಿ : ಈ ಬೆಳೆ ಬೆಳೆದ್ರೆ ರೈತರ ಬದುಕೆ ಬದಲಾಗುತ್ತೆ, ಕೆಜಿಗೆ 800 ರೂಪಾಯಿ ಅಂದ್ರೆ ಯೋಚನೆ ಮಾಡಿ!


ತುಳಸಿ ಬೆಳೆಗೆ ತಗಲುವ ವೆಚ್ಚ ತುಂಬಾ ಕಡಿಮೆ ಒಟ್ಟಾರೆಯಾಗಿ, ತುಳಸಿ ಕೃಷಿಯು ರೈತರಿಗೆ ಉತ್ತಮ ಆದಾಯದ ಆಯ್ಕೆಯಾಗಿದೆ. ಆಯುರ್ವೇದದಿಂದ ಹೋಮಿಯೋಪತಿಯವರೆಗೆ ತುಳಸಿಗೆ ಹೆಚ್ಚಿನ ಬೇಡಿಕೆಯಿದೆ ಮತ್ತು ತುಳಸಿ ಬೆಳೆ ತಕ್ಷಣವೇ ಮಾರಾಟವಾಗುತ್ತದೆ.


1 ಬಿಗಾದಲ್ಲಿ ತುಳಸಿ ಕೃಷಿಗೆ ಗರಿಷ್ಠ 5 ಸಾವಿರ ರೂpಆಯಿ. ಬಿಗಾಗೆ ಒಂದೂವರೆಯಿಂದ ಎರಡು ಕ್ವಿಂಟಲ್ ಇಳುವರಿ. ಅದರ ನಂತರ ಆಯುರ್ವೇದ ಮತ್ತು ಔಷಧೀಯ ಕಂಪನಿಗಳು ರೈತರಿಂದ ತುಳಸಿಯನ್ನು ಕ್ವಿಂಟಲ್‌ಗೆ 7-10 ಸಾವಿರ ರೂಪಾಯಿಗೆ ಖರೀದಿಸುತ್ತವೆ. ಇದರಿಂದ ರೈತರಿಗೆ ಸಂತಸದ ಸುದ್ದಿ ಸಿಕ್ಕಿದೆ


ತುಳಸಿ ಎಣ್ಣೆಗೆ ಉತ್ತಮ ಬೇಡಿಕೆ ಇದೆ


ಮರಳು ಮಿಶ್ರಿತ ಭೂಮಿಯಲ್ಲಿ ತುಳಸಿ ಬೆಳೆಯಬಹುದು. ಇದನ್ನು ಮಾಡುವ ಮೊದಲು ಗದ್ದೆಯಿಂದ ನೀರು ತೆಗೆಯಲು ಸೂಕ್ತ ವ್ಯವಸ್ಥೆ ಮಾಡಬೇಕು.ಇದರ ಅತ್ಯುತ್ತಮ ಪ್ರಭೇದವೆಂದರೆ ಒಸಿಮಮ್ ಬೆಸಿಲಿಕಮ್. ಈ ಜಾತಿಯನ್ನು ತೈಲ ಉತ್ಪಾದನೆಗೆ ಬೆಳೆಯಲಾಗುತ್ತದೆ. ಇದನ್ನು ಹೆಚ್ಚಾಗಿ ಸುಗಂಧ ದ್ರವ್ಯಗಳು ಮತ್ತು ಔಷಧಿಗಳಿಗೆ ಬಳಸಲಾಗುತ್ತದೆ. ಕಾಸ್ಮೆಟಿಕ್ ಉದ್ಯಮದಲ್ಲಿ ತುಳಸಿ ಎಣ್ಣೆಗೆ ಹೆಚ್ಚಿನ ಬೇಡಿಕೆಯಿದೆ. ಜೂನ್-ಜುಲೈನಲ್ಲಿ ಬಿತ್ತಿದ ತುಳಸಿ ಬೆಳೆ ಚಳಿಗಾಲದ ಹೊತ್ತಿಗೆ ಉತ್ತಮ ಸ್ಥಿತಿಗೆ ಬರುತ್ತದೆ.


ಇದನ್ನೂ ಓದಿ: ಕೈಯಲ್ಲಿ 25 ಸಾವಿರ ಇಟ್ಕೊಂಡು ಈ ಬ್ಯುಸಿನೆಸ್​ ಆರಂಭಿಸಿ, ತಿಂಗಳಿಗೆ ಲಕ್ಷ ಲಕ್ಷ ಎಣಿಸಿ!


ತುಳಸಿ ಎಣ್ಣೆಯ ಬೆಲೆ ಎಷ್ಟು?


ತುಳಸಿ ಕ್ಷೇತ್ರವನ್ನು ಸ್ವಚ್ಛವಾಗಿ ಮತ್ತು ಅಚ್ಚುಕಟ್ಟಾಗಿ ಇರಿಸಲು, ಸುಮಾರು 3 ರಿಂದ 4 ವಾರಗಳಲ್ಲಿ ಕಾಲಕಾಲಕ್ಕೆ ಕಳೆ ಕೀಳಬೇಕು.ತುಳಸಿ ಗಿಡ ಸಿದ್ಧವಾದ ನಂತರ ಭಟ್ಟಿ ಇಳಿಸುವ ವಿಧಾನದಿಂದ ತುಳಸಿ ಗಿಡ ಮತ್ತು ಎಲೆಗಳಿಂದ ಎಣ್ಣೆಯನ್ನು ತೆಗೆಯಲಾಗುತ್ತದೆ. ಸುಮಾರು 1 ಹೆಕ್ಟೇರ್‌ನಲ್ಲಿ 100 ಕೆಜಿಗಿಂತ ಹೆಚ್ಚು ತೈಲವನ್ನು ಹೊರತೆಗೆಯಲಾಗುತ್ತದೆ. ಕಳೆದ ವರ್ಷ ತುಳಸಿ ಎಣ್ಣೆಯ ಬೆಲೆ ಲೀಟರ್‌ಗೆ 2000 ವರೆಗೆ ಇತ್ತು. ಕೊರೊನಾ ಅವಧಿಯಲ್ಲಿ ತುಳಸಿ ಎಣ್ಣೆಗೆ ಬೇಡಿಕೆ ಹೆಚ್ಚಿತ್ತು. ತುಳಸಿ ಕೃಷಿಯಲ್ಲೂ ಸಾಕಷ್ಟು ಲಾಭ ಗಳಿಸಿದ್ದರು.

Published by:ವಾಸುದೇವ್ ಎಂ
First published: