ಳೆಇಂದು ಜಗತ್ತು ಸಾಕಷ್ಟು ಮುಂದುವರೆದಿದೆ. ತಂತ್ರಜ್ಞಾನ (Technology) ವು ದಿನೇ ದಿನೇ ಅಭಿವೃದ್ಧಿಗೊಳ್ಳುತ್ತಿದ್ದು ಮನುಷ್ಯ (Human) ನ ಜೀವನಶೈಲಿ (Lifestyle) ಹಿಂದೆಂದಿಗಿಂತಲೂ ಅಭೂತಪೂರ್ವವಾಗಿ ಸುಧಾರಿತಗೊಂಡಿದೆ. ಹಿಂದೆ ಪಡುತ್ತಿದ್ದ ಅತಿಶ್ಯವಾದಂತಹ ದೇಹಶ್ರಮ ಇಂದು ಪಡಬೇಕಾಗಿಲ್ಲ, ಅಲ್ಲದೆ ಸಮಯವನ್ನೂ ಸಹ ಹಿಂದಿನಂತೆ ವ್ಯರ್ಥಗೊಳಿಸದ ಹಾಗೆ ಇಂದಿನ ತಂತ್ರಜ್ಞಾನ ನಮ್ಮನ್ನು ಸಲಹುತ್ತಿವೆ ಎಂದರೂ ತಪ್ಪಾಗದು. ಆದಾಗ್ಯೂ, ಇಂದು ಹಿಂದಿನ ಸಮಯಕ್ಕೆ ಹೋಲಿಸಿದರೆ ಒಂದು ಗಮನಾರ್ಹ ವ್ಯತ್ಯಾಸ (Difference) ಕಂಡುಬರುತ್ತದೆ. ಅದೇನೆಂದರೆ ಅನಾರೋಗ್ಯದ (Illness) ಸಮಸ್ಯೆ, ಅದರಲ್ಲೂ ವಿಶೇಷವಾಗಿ ಹಲವು ಬೊಜ್ಜು (Fat) ಸಂಬಂಧಿತ ಕಾಯಿಲೆಗಳು.
ಮನೆ ಟೆರಸ್ನಲ್ಲೇ ತರಕಾರಿ ಬೆಳೆದ ಕುಟುಂಬ!
ಹೌದು, ಇಂದಿನ ಜೀವನಶೈಲಿ ಹಿಂದಿನಂತಿಲ್ಲ, ಕಾರಣ ಇಂದು ಮನುಷ್ಯ ಆರೋಗ್ಯಕ್ಕೆ ಸಂಬಂಧಿಸಿದಂತೆ ಸಾಕಷ್ಟು ಸವಾಲು ಎದುರಿಸುವಂತಾಗಿದೆ. ನಾವು ತಿನ್ನುವ ಜಂಕ್ ಫುಡ್ ಮಾತ್ರವೇ ಅಲ್ಲದೆ ಇಂದಿನ ಬಹು ಪ್ರಮಾಣದ ತರಕಾರಿಗಳೂ ಸಹ ನಮ್ಮನ್ನು ಅನಾರೋಗ್ಯದೆಡೆ ದೂಡುತ್ತಿವೆ ಎಂದರೆ ತಪ್ಪಾಗದು. ಸಾಕಷ್ಟು ಜನರು ಇಂದು ಬೆಳೆ ಅಥವಾ ತರಕಾರಿಗಳನ್ನು ವೇಗವಾಗಿ ಬೆಳೆಯಲೆಂದೋ, ಚೆನ್ನಾಗಿ ಬೆಳೆಯಲೆಂದೋ ಹಲವು ಬಗೆಯ ರಾಸಾಯನಿಕಗಳನ್ನು ಅವುಗಳಿಗೆ ಸಿಂಪಡಿಸುತ್ತಾರೆ. ಆ ರಾಸಾಯನಿಕಗಳ ಅಂಶಗಳನ್ನು ಹೊಂದಿರುವ ತರಕಾರಿಗಳನ್ನು ಸೇವಿಸಿದಾಗ ನಮಗೂ ಸಹ ಕಾಯಿಲೆಗಳು ಬರುವುದರಲ್ಲಿ ಸಂಶಯವೇ ಇಲ್ಲ.
ರಾಸಾಯನಿಕ ಮುಕ್ತ ತರಕಾರಿ!
ಇಂತಹುದ್ದೇ ಒಂದು ಹಿನ್ನೆಲೆಯಿಂದ ಪ್ರಭಾವಿತರಾಗಿ ತಮ್ಮ ಹಾಗೂ ತಮ್ಮ ಕುಟುಂಬದ ಆರೋಗ್ಯ ಹಾಗೂ ಸುರಕ್ಷತೆಯನ್ನೇ ಪರಮ ಆದ್ಯತೆ ಮಾಡಿಕೊಂಡು ಸ್ವತಃ ತಾವೇ ರಾಸಾಯನಿಕ ಮುಕ್ತ ತರಕಾರಿ ಬೆಳೆಯಬೇಕೆಂದು ದೃಢ ನಿಶ್ಚಯ ಮಾಡಿಕೊಂಡು ಆ ಪಥದಲ್ಲಿ ಅವಿರತ ಶ್ರಮಪಟ್ಟು ಕೊನೆಗೆ ಅದರಿಂದಲೇ ಆರೋಗ್ಯವನ್ನೂ ಅಲ್ಲದೆ ಅತ್ಯುತ್ತಮವಾದ ಸಂಪಾದನೆಯನ್ನೂ ಸಹ ಗಳಿಸುತ್ತಿರುವ ರಾಮ್ವೀರ್ ಸಿಂಗ್ ಅವರ ಕಥೆ ನಿಜಕ್ಕೂ ಪ್ರೇರಣಾದಾಯಕವಾಗಿದೆ.
ರಾಮ್ವೀರ್ ಸಿಂಗ್ಗೆ ಸಿಕ್ಕ ಪ್ರೇರಣೆ!
ರಾಮ್ವೀರ್ ಅವರು ಒಬ್ಬ ಪೂರ್ಣಾವಧಿಯ ಪತ್ರಕರ್ತರಾಗಿ ಕೆಲಸ ಮಾಡುತ್ತಿದ್ದರು. ಎಲ್ಲವೂ ಚೆನ್ನಾಗಿಯೇ ನಡೆದಿತ್ತು. ಹೀಗಿರುವಾಗ ಅವರಿಗೆ ಒಮ್ಮೆ ಅವರ ಸ್ನೇಹಿತರೊಬ್ಬರ ತಂದೆ ಕ್ಯಾನ್ಸರ್ ನಿಂದ ಬಳಲುತ್ತಿರುವ ಸುದ್ದಿ ಗೊತ್ತಾಯಿತು. ಇದರಿಂದ ಅವರಿಗೆ ಸಾಕಷ್ಟು ಬೇಸರವಾಯಿತು. ಕೊನೆಗೆ ಅವರ ಸ್ನೇಹಿತನ ತಂದೆಯು ಸಾಕಷ್ಟು ರಾಸಾಯನಿಕ ಭರಿತ ತರಕಾರಿಗಳ ಸೇವನೆ ಮಾಡುತ್ತಿರುವ ಕಾರಣದಿಂದಲೇ ಕ್ಯಾನ್ಸರ್ ಕಾಯಿಲೆಯೊಂದಿಗೆ ಬಳಲುವಂತಾಯಿತೆಂಬ ವಿಷಯ ತಿಳಿಯಿತು.
ಈ ಕಾರಣವೇ ರಾಮ್ವೀರ್ ಅವರು ತಮ್ಮ ಹಾಗೂ ತಮ್ಮ ಕುಟುಂಬದವರ ಆರೋಗ್ಯ ಸುರಕ್ಷತೆಯ ಬಗ್ಗೆ ಗಂಭೀರವಾಗಿ ಚಿಂತಿಸುವಂತೆ ಮಾಡಿತು. ಅವರು ಈ ಬಗ್ಗೆ ಎಷ್ಟು ಗಂಭೀರವಾದರೆಂದರೆ ತಮ್ಮ ಪೂರ್ಣಾವಧಿಯ ಕೆಲಸ ತೊರೆದು ನೈಸರ್ಗಿಕ ತರಕಾರಿ ಕೃಷಿ ವಿಧಾನವನ್ನು ತಾವೇ ಸ್ವತಃ ತಮ್ಮ ಭೂಮಿಯಲ್ಲಿ ಮಾಡಲು ನಿಶ್ಚಯಿಸಿಯೇ ಬಿಟ್ಟರು.
ಕೃಷಿ ಭೂಮಿ
ಮೂಲತಃ ಬರೈಲಿಯಲ್ಲಿ ನಲೆಸಿದ್ದ ರಾಮ್ವೀರ್ ಒಂದೊಮ್ಮೆ ತಾವೇ ಸ್ವತಃ ತರಕಾರಿ ಬೆಳೆಯುವುದನ್ನು ನಿಶ್ಚಯಿಸಿದ ಮೇಲೆ ಅಲ್ಲಿಂದ 40 ಕಿ.ಮೀ ದೂರದಲ್ಲಿದ್ದ ತಮ್ಮ ಪೂರ್ವಜರ ಭೂಮಿಯಲ್ಲಿ ಈ ಫಾರ್ಮಿಂಗ್ ಕೆಲಸ ಮಾಡಲು ನಿರ್ಧರಿಸಿದರು.
ಇದನ್ನೂ ಓದಿ: ಅರ್ಧ ಲಕ್ಷ ಜನರಿಗೆ ಉದ್ಯೋಗ ನೀಡಿದ ಬಾಂಧಣಿ ತಯಾರಿಸುವ ಕೆಲಸ
ಈ ನಡುವೆ ದುಬೈನಲ್ಲಿ ನಡೆದಿದ್ದ ಕೃಷಿ ಸಮ್ಮೇಳನವೊಂದರಲ್ಲಿ ಭಾಗವಹಿಸಿದ್ದ ರಾಮ್ವೀರ್ ಅವರಿಗೆ ಅಲ್ಲಿ ಹೈಡ್ರೋಪೋನಿಕ್ಸ್ ಕೃಷಿ ವಿಧಾನದ ಬಗ್ಗೆ ತಿಳಿದು ಅದರಿಂದ ಸಾಕಷ್ಟು ಪ್ರಭಾವಿತರಾದರು. ಕೂಡಲೇ ಅವರು ತಮ್ಮ ಮೂರು ಮಹಡಿಗಳ ಮನೆ ಕಟ್ಟಡವನ್ನು ಹೈಡ್ರೋಪೋನಿಕ್ಸ್ ಫಾರ್ಮ್ ಆಗಿ ಪರಿವರ್ತಿಸಲು ನಿರ್ಧರಿಸಿದರು.
ಮನೆಯೇ ಈಗ ಫಾರ್ಮ್
ಅದರಂತೆ ಅವರು ತಮ್ಮ ಮನೆಯ ಎಲ್ಲ ಸಂಭವನೀಯ ಜಾಗಗಳನ್ನು ಗುರುತಿಸಿ ಹೈಡ್ರೋಪೋನಿಕ್ ಕೃಷಿ ವಿಧಾನವನ್ನು ಅಳವಡಿಸಿ ತರಕಾರಿ ಹಾಗೂ ಇತರೆ ಸಸ್ಯಗಳನ್ನು ಬೆಳೆಸಲು ಪ್ರಾರಂಭಿಸಿಯೇ ಬಿಟ್ಟರು. ಅವರು ತಮ್ಮ ಫಾರ್ಮಿನಲ್ಲಿ 10,000 ಕ್ಕೂ ಹೆಚ್ಚು ಸಸ್ಯಗಳನ್ನು ಬೆಳೆಸಿದರು. ಇವುಗಳಲ್ಲಿ ತರಕಾರಿ ಹಾಗೂ ಹಣ್ಣುಗಳ ಸಸ್ಯಗಳೂ ಸಹ ಸೇರಿದ್ದವು. ಅವರು ಈ ವಿಧಾನಕ್ಕಾಗಿ ಪೋಷಕಾಂಶಗಳಿಂದ ಸಂಪದ್ಭರಿತವಾದ ನೀರನ್ನು ಸಸಿಗಳಿಗೆ ಉಣಿಸಲು ಪ್ರಮುಖವಾಗಿ ಪಿವಿಸಿ ಪೈಪುಗಳನ್ನು ಬಳಸಿದ್ದಾರೆ.
ಇದನ್ನೂ ಓದಿ: 7000 ಕೋಟಿ ಆಸ್ತಿ ಭಾರ ಹೊರಲು ಒಪ್ಪದ ಮಗಳು! ಇದೇ ಕಾರಣಕ್ಕೆ ಬಿಸ್ಲೆರಿ ಮಾರಿದ್ರಾ ರಮೇಶ್ ಚೌಹಾಣ್?
ವಿಂಪಾ ಆರ್ಗ್ಯಾನಿಕ್ ಆಂಡ್ ಹೈಡ್ರೋಪೋನಿಕ್ಸ್
ಪ್ರಸ್ತುತ ಅವರ ಫಾರ್ಮಿಗೆ ವಿಂಪಾ ಆರ್ಗ್ಯಾನಿಕ್ ಆಂಡ್ ಹೈಡ್ರೋಪೋನಿಕ್ಸ್ ಎಂಬ ಹೆಸರಿನ್ನಿರಿಸಲಾಗಿದೆ. ಇಲ್ಲಿ ಬೆಳೆಯುವ ತರಕಾರಿಗಳು ಸಹಜವಾಗಿ ಬೆಳೆದೆ ಬೆಳೆಗಳಾಗಿದ್ದು ಯಾವುದೇ ರೀತಿಯ ರಾಸಾಯನಿಕಗಳಿಂದ ಮುಕ್ತವಾಗಿದೆ ಎಂಬುದೇ ವಿಶೇಷ. ಈಗ ಅದ್ಭುತವಾಗಿ ಗರಿಗೆದರಿರುವ ಅವರ ಫಾರ್ಮ್ ಕೇವಲ ನೋಡಲು ಮಾತ್ರ ಆಕರ್ಷಕವಾಗಿಲ್ಲ, ಬದಲಾಗಿ ಆಕರ್ಷಕವಾಗಿರುವಂತಹ ಸಂಪಾದನೆಯನ್ನೂ ಸಹ ಮಾಡುತ್ತದೆ. ಈ ಫಾರ್ಮ್ ಉತ್ಪನ್ನಗಳಿಂದಾಗಿ ರಾಮ್ವೀರ್ ವರ್ಷಕ್ಕೆ ಏನಿಲ್ಲವೆಂದರೂ 70 ಲಕ್ಷ ರೂಪಾಯಿಗಳಷ್ಟು ಆದಾಯವನ್ನೂ ಗಳಿಸುತ್ತಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ