Best Business Idea: 1 ಕೆಜಿ ಮಾಂಸಕ್ಕೆ 1200 ರೂಪಾಯಿ! ಈ ಕೋಳಿಗಳಿಂದ ರೈತರು ಲಕ್ಷಾಧಿಪತಿಗಳಾಗಬಹುದು

ಕೆಲವರಿಗೆ ಕಡಿಮೆ ಹೂಡಿಕೆ ಮಾಡಿ ಹೆಚ್ಚು ಲಾಭಗಳಿಸುವ ಆಸೆಯನ್ನು ಹೊಂದಿರುತ್ತಾರೆ. ಇಂಥವರಿಗಾಗಿ ಇಲ್ಲಿ ಒಂದು ಸೂಪರ್​ ಬ್ಯುಸಿನೆಸ್ ​ ಐಡಿಯಾ (Business Idea) ಇಲ್ಲಿದೆ ನೋಡಿ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ದುಡ್ಡು (Money) ಮಾಡುವುದಕ್ಕೆ ಸಾವಿರಾರು ದಾರಿಗಳಿವೆ. ಆದರೆ ಯಾವತ್ತೂ ಒಳ್ಳೆಯ ದಾರಿಯಲ್ಲಿ ಮಾಡಿದ ಹಣವೇ ಕೊನೆವರೆಗೂ ಇರುತ್ತೆ. ಹೀಗೆ ಕೊರೋನಾ (Corona) ಬಂದು ಹೋದಮೇಲೆ ಅದೆಷ್ಟೋ ಮಂದಿ ಹಣ ಇಲ್ಲದೆ ಪರದಾಡುತ್ತಿದ್ದಾರೆ. ದೊಡ್ಡ ದೊಡ್ಡವರ ಉದ್ಯೋಗಗಳೇ ನೆಲಕಚ್ಚಿವೆ.  ಏನಾದರೂ ಬ್ಯುಸಿನೆಸ್ (Business)​​ ಮಾಡೋಣ ಎಂದು ಕೊಂಡರೇ ಎಲ್ಲಿ ಲಾಸ್ (Loss)​ ಆಗುತ್ತೋ ಅನ್ನುವ ಭಯದಲ್ಲಿದ್ದಾರೆ. ಇನ್ನು ಕೆಲವರಿಗೆ ದುಡ್ಡು ಇದ್ದರೂ ತಲೆಯಲ್ಲಿ ಐಡಿಯಾ(Idea) ಇರೋದಿಲ್ಲ. ಇನ್ನೂ ಕೆಲವರಿಗೆ ಕಡಿಮೆ ಹೂಡಿಕೆ ಮಾಡಿ ಹೆಚ್ಚು ಲಾಭಗಳಿಸುವ ಆಸೆಯನ್ನು ಹೊಂದಿರುತ್ತಾರೆ. ಇಂಥವರಿಗಾಗಿ ಇಲ್ಲಿ ಒಂದು ಸೂಪರ್​ ಬ್ಯುಸಿನೆಸ್ ​ ಐಡಿಯಾ (Business Idea) ಇಲ್ಲಿದೆ ನೋಡಿ.

ಬೆಸ್ಟ್​ ಬ್ಯುಸಿನೆಸ್​ ಐಡಿಯಾ!

ಇತ್ತೀಚಿನ ದಿನಗಳಲ್ಲಿ ಯುವಜನತೆಯಲ್ಲಿ ಉದ್ಯೋಗಕ್ಕಿಂತ ಸ್ವಂತ ಉದ್ಯಮಕ್ಕೆ ಆದ್ಯತೆ ನೀಡುವ ಪ್ರವೃತ್ತಿ ಹೆಚ್ಚುತ್ತಿದೆ. ಕೆಲಸ ಸಿಗದವರು, ಖಾಸಗಿ ಕೆಲಸ ಮಾಡಲು ಬಾರದವರು, ವ್ಯಾಪಾರ ಮಾಡಲು ಒಲವು ತೋರುತ್ತಾರೆ. ತಮ್ಮ ಸ್ವಂತ ಹಳ್ಳಿಯಲ್ಲಿ ರಾಜನಂತೆ ಬದುಕುವ ಕನಸು ಕಾಣುತ್ತಾರೆ. ಅದರಲ್ಲಿಯೂ ಲಕ್ಷಗಟ್ಟಲೆ ಲಾಭ ಮಾಡುವ ವ್ಯಾಪರಗಳ ಬಗ್ಗೆ ತಿಳಿದುಕೊಳ್ಳುತ್ತಿದ್ದಾರೆ. ನೀವು ಅದೇ ಮನಸ್ಥಿತಿಯವರಾಗಿದ್ದರೆ, ನಿಮಗೆ ಉತ್ತಮವಾಗಿರುವ ವ್ಯಾಪಾರ ಕಲ್ಪನೆ ತರಲಾಗಿದೆ.

ಕಡಕ್‌ನಾತ್​ ಚಿಕನ್​ ವ್ಯಾಪರ ಶುರು ಮಾಡಿ!

ಅದು ಕಡಕ್‌ನಾತ್ ಚಿಕನ್ ವ್ಯಾಪಾರ. ಈ ಕಡಕ್‌ನಾತ್ ಕೋಳಿಗಳು ಇತ್ತೀಚೆಗೆ ಮಾರುಕಟ್ಟೆಯಲ್ಲಿ ಸದ್ದು ಮಾಡುತ್ತಿವೆ. ಅವು ಕಪ್ಪು ಬಣ್ಣದಲ್ಲಿರುತ್ತವೆ. ರಕ್ತ ಮತ್ತು ಮಾಂಸ ಕೂಡ ಕಪ್ಪು. ಕಡಕ್‌ನಾತ್ಕೋ ಳಿಗಳು ಅನೇಕ ಔಷಧೀಯ ಗುಣಗಳನ್ನು ಹೊಂದಿದೆ. ಇದರಲ್ಲಿ ಕಬ್ಬಿಣ ಮತ್ತು ಪ್ರೊಟೀನ್ ಸಮೃದ್ಧವಾಗಿದೆ. ಕೊಲೆಸ್ಟ್ರಾಲ್ ಕಡಿಮೆ. ಕಡಕ್‌ನಾತ್ ಕೋಳಿ ಮಾಂಸವು ಹೃದಯ ಮತ್ತು ಮಧುಮೇಹ ರೋಗಿಗಳಿಗೆ ತುಂಬಾ ಒಳ್ಳೆಯದು. ಇದನ್ನು ನಿಯಮಿತವಾಗಿ ಸೇವಿಸುವುದರಿಂದ ದೇಹಕ್ಕೆ ಹಲವಾರು ಪೋಷಕಾಂಶಗಳು ದೊರೆಯುತ್ತವೆ. ಅದಕ್ಕೇ ಕಡಕ್‌ನಾತ್ ಮಾಂಸಕ್ಕೆ ಮಾರುಕಟ್ಟೆಯಲ್ಲಿ ಹೆಚ್ಚಿನ ಬೇಡಿಕೆಯಿದೆ

ಇದನ್ನೂ ಓದಿ: ಸಿಂಪಲ್ಲಾಗಿ ಈ ಬ್ಯುಸಿನೆಸ್​ ಸ್ಟಾರ್ಟ್ ಮಾಡಿ! ಹೋಗ್ತಾ ಹೋಗ್ತಾ ಮೈ ತುಂಬಾ ಜೋಶು, ಕೈ ತುಂಬಾ ಕಾಸು

ನಮ್ಮ ದೇಶದಲ್ಲಿ ಮಧ್ಯಪ್ರದೇಶ, ಛತ್ತೀಸ್‌ಗಢ ರಾಜ್ಯಗಳಲ್ಲಿ ಈ ರೀತಿಯ ಕಡಕ್​ನಾತ್​ ಕೋಳಿಗಳನ್ನು ಹೆಚ್ಚು ಹೆಚ್ಚು ಸಾಕಲಾಗುತ್ತದೆ. ಕಡಕ್‌ನಾತ್ ಕೋಳಿಗಳನ್ನು ಈ ರಾಜ್ಯಗಳ ಬುಡಕಟ್ಟು ಪ್ರದೇಶದ ಜನರು ಕಾಳಿಮಾಸಿ ಎಂದು ಕರೆಯುತ್ತಾರೆ. ಈ ಎರಡು ರಾಜ್ಯಗಳಲ್ಲಿರುವ ಕೃಷಿ ವಿಜ್ಞಾನ ಕೇಂದ್ರಗಳಿಗೆ ಸಕಾಲಕ್ಕೆ ಕಡಕ್‌ನಾತ್ ಮರಿಗಳನ್ನು ನೀಡಲು ಸಾಧ್ಯವಾಗುತ್ತಿಲ್ಲ. ಭಾರತೀಯ ಕ್ರಿಕೆಟ್ ತಂಡದ ಮಾಜಿ ನಾಯಕ ಎಂಎಸ್ ಧೋನಿ ಕೂಡ ಕಡಕ್‌ನಾತ್ ಕೋಳಿಗಳನ್ನು ಸಾಕುತ್ತಿದ್ದಾರೆ.

ನೀವು ಕಡಕ್​​ನಾತ್​ ಕೋಳಿ ಸಾಕಾಣಿಕೆ ವ್ಯವಹಾರವನ್ನು ಪ್ರಾರಂಭಿಸಲು ಬಯಸಿದರೆ ನೀವು ಕೃಷಿ ವಿಜ್ಞಾನ ಕೇಂದ್ರದಿಂದ ಮರಿಗಳು ಪಡೆಯಬಹುದು. ಒಂದು ಕಡಕ್​​ನಾತ್ ಮರಿ ಬೆಲೆ 70-100 ರೂಪಾಯಿ. ಒಂದು ಮೊಟ್ಟೆ ರೂ.20-30ಕ್ಕೆ ಲಭ್ಯವಿದೆ. ಛತ್ತೀಸ್‌ಗಢಅಲ್ಲಿ ಸರ್ಕಾರ ಸಬ್ಸಿಡಿ ನೀಡುತ್ತಿರುವುದರಿಂದ ಅಲ್ಲಿನ ಜನರಿಗೆ ಹೂಡಿಕೆ ಕಡಿಮೆ ಆಗುತ್ತದೆ. ಸ್ವಂತ ಹಣದಲ್ಲಿ ಕೋಳಿ ಖರೀದಿಸಿ ಸಾಕಬೇಕು. ತಲಾ ರೂ.70ರಂತೆ 1000 ಸಾವಿರ ಮರಿಗಳನ್ನು ಖರೀದಿಸಿದರೆ, ವೆಚ್ಚ ರೂ.70 ಸಾವಿರ. ಶೆಡ್ ನಿರ್ಮಿಸಲು ಹೆಚ್ಚು ವೆಚ್ಚವಾಗುತ್ತದೆ.

ನಾಲ್ಕು ಲಕ್ಷವರೆಗೂ ಆದಾಯ ಗಳಿಸಬಹುದು!

ಆರಂಭದಲ್ಲಿ ಪಂಜರದಲ್ಲಿ ಬೆಳೆಸಬಹುದು. ಊಟ ಮತ್ತು ಇತರ ಖರ್ಚು ಸೇರಿದರೆ, ನಿಮಗೆ ಇನ್ನೂ 3 ಲಕ್ಷ ಖರ್ಚಾಗುತ್ತದೆ. ಕಡಕ್​​ನಾತ್ ಕೋಳಿಗಳನ್ನು ಒಟ್ಟು 1000 ಮರಿಗಳೊಂದಿಗೆ ವ್ಯಾಪಾರ ಮಾಡಿದರೆ 4 ಲಕ್ಷ ರೂ.ವರೆಗೆ ಸಿಗುತ್ತದೆ. ಒಂದಿಷ್ಟು ಕಾಳಜಿಯಿಂದ ಮರಿಗಳನ್ನು ಸಾಕಿದರೆ ಎಲ್ಲ ಮುನ್ನೆಚ್ಚರಿಕೆ ವಹಿಸಿ ಮೂರ್ನಾಲ್ಕು ತಿಂಗಳಲ್ಲಿ ಮಾರಾಟಕ್ಕೆ ಲಭ್ಯವಾಗಲಿದೆ.

ಇದನ್ನೂ ಓದಿ: ಮಹಿಳೆಯರಿಗೆ ಇಲ್ಲಿದೆ ಉತ್ತಮ ಅವಕಾಶ, ಮನೆಯಿಂದಲೇ ವ್ಯಾಪಾರ ಮಾಡಿ ಲಕ್ಷಗಳಲ್ಲಿ ಆದಾಯ ಗಳಿಸಿ

ಒಂದು ಕಿಲೋ ಕಡಕ್​ನಾತ್​​ ಮಾಂಸ 1000-1200 ರೂಪಾಯಿವರೆಗೆ ಇರುತ್ತದೆ. ಅದೇ ಜೀವಂತ ಕೋಳಿಯಾದರೆ 800 ರೂ.ವರೆಗೆ ಆಗುತ್ತದೆ. ನೀವು ಯಾವುದೇ ಕಂಪನಿಗೆ ಮಾರಾಟ ಮಾಡಬಹುದು. ಎಲ್ಲಾ ಕೋಳಿಗಳನ್ನು ಕೆ.ಜಿ.ಗೆ 500 ರೂ.ಗೆ ಒಮ್ಮೆ ಮಾರಾಟ ಮಾಡಬಹುದು. ಈ ಲೆಕ್ಕಾಚಾರದ ಪ್ರಕಾರ 1800 ಕೆಜಿಗೆ 9 ಲಕ್ಷ ರೂ. ಖರ್ಚು ಹೋದರೆ 5 ಲಕ್ಷ ರೂ. ಅಂದರೆ ಮೂರ್ನಾಲ್ಕು ತಿಂಗಳೊಳಗೆ ಇಷ್ಟು ಆದಾಯ ಬರಲಿದೆ.
Published by:Vasudeva M
First published: