ಬ್ಯುಸಿನೆಸ್ (Business) ಶುರು ಮಾಡಬೇಕು ಅನ್ನೋದು ಬಹುತೇಕರ ಕನಸು ಎಂದರೆ ತಪ್ಪಾಗಲ್ಲ. ಆದರೆ ಕೆಲವರು ಬಂಡವಾಳ (Investment) ಎಲ್ಲಿಂದ ತರೋದು ಅಂತ ಈ ವ್ಯಾಪಾರ ಆರಂಭಿಸಬೇಕು ಅನ್ನೋದನ್ನೆ ಮರೆತು ಬಿಡುತ್ತಾರೆ. ಅಂಥವರಿಗೆ ಇಲ್ಲೊಂದು ಸೂಪರ್ ಡೂಪರ್ ಬ್ಯುಸಿನೆಸ್ ಐಡಿಯಾ (Business Idea) ಇದೆ. ಈ ವ್ಯವಹಾರವನ್ನು ಪ್ರಾರಂಭಿಸಲು ಯಾವುದೇ ದೊಡ್ಡ ಹಣದ ಅಗತ್ಯವಿಲ್ಲ. ಕಡಿಮೆ ಹಣವನ್ನು (Money) ಹೂಡಿಕೆ ಮಾಡುವ ಮೂಲಕ, ನೀವು ಅದರಲ್ಲಿ ದೊಡ್ಡ ಲಾಭವನ್ನು ಪಡೆಯಬಹುದು. ನಾವು ಗೋಲ್ಡ್ ಫಿಶ್ (Gold Fish) ವ್ಯವಹಾರದ ಬಗ್ಗೆ ಮಾತನಾಡುತ್ತಿದ್ದೇವೆ. ಗೋಲ್ಡ್ ಫಿಷ್ ಅನ್ನು ಮನೆಯಲ್ಲಿ ಇಡುವುದು ಅದೃಷ್ಟ ಎಂದು ಪರಿಗಣಿಸಲಾಗುತ್ತದೆ.
ಗೋಲ್ಡ್ ಫಿಶ್ ಸಾಕಾಣಿಕೆ ಆರಂಭಿಸೋಕೆ ಎಷ್ಟು ದುಡ್ಡು ಬೇಕು?
ಗೋಲ್ಡ್ ಫಿಶ್ ಸಾಕಣೆ ಆರಂಭಿಸಲು ಸುಮಾರು 1 ಲಕ್ಷದಿಂದ 2.5 ಲಕ್ಷ ರೂಪಾಯಿ ಬೇಕಾಗಬಹುದು. ಈ ವ್ಯವಹಾರವನ್ನು ಪ್ರಾರಂಭಿಸಲು ನೀವು 100 ಚದರ ಅಡಿ ಅಕ್ವೇರಿಯಂ ಅನ್ನು ಖರೀದಿಸಬೇಕು. ಈ ಅಕ್ವೇರಿಯಂ ಖರೀದಿಸಲು ನೀವು 50 ಸಾವಿರ ರೂಪಾಯಿ ಖರ್ಚು ಮಾಡಬೇಕು. ಅಲ್ಲದೆ, ಇತರ ಅಗತ್ಯ ವಸ್ತುಗಳನ್ನು ಖರೀದಿಸಲು ನೀವು ಸರಿಸುಮಾರು 50,000 ರೂಪಾಯಿಗಳನ್ನು ಖರ್ಚು ಮಾಡಬೇಕಾಗುತ್ತದೆ. ಈ ಮೀನು ಸಾಕಣೆಗೆ ಕೆಲವು ವಿಷಯಗಳನ್ನು ನೆನಪಿನಲ್ಲಿಡಬೇಕು.
6 ತಿಂಗಳಿಗೆ ಲಕ್ಷ ಲಕ್ಷ ಆದಾಯ!
ಮತ್ತೊಂದೆಡೆ, ಈ ಮೀನು ಸಾಕಣೆಗೆ ಸೂಕ್ತವಾದ ಊಟದ ಅಗತ್ಯವಿರುತ್ತದೆ. ಮೀನಿನ ಸಸಿಗಳನ್ನು ಖರೀದಿಸುವಾಗ, ಗಂಡು ಮತ್ತು ಹೆಣ್ಣು ಅನುಪಾತವು 4: 1 ಆಗಿರಬೇಕು ಎಂದು ನೆನಪಿನಲ್ಲಿಟ್ಟುಕೊಳ್ಳಿ. ಮೀನನ್ನು ಈ ಅಕ್ವೇರಿಯಂನಲ್ಲಿ ಬಿಟ್ಟರೆ 4ರಿಂದ 6 ತಿಂಗಳ ನಂತರ ಮಾರಾಟಕ್ಕೆ ಸಿದ್ಧವಾಗಲಿದೆ.
ಭಾರತದಲ್ಲಿ, ಜನರು ದೊಡ್ಡ ಪ್ರಮಾಣದಲ್ಲಿ ಗೋಲ್ಡ್ ಫಿಶ್ ಅನ್ನು ಸಾಕುತ್ತಿದ್ದಾರೆ. ಮಾರುಕಟ್ಟೆಯಲ್ಲಿ ಬೇಡಿಕೆ ಹೆಚ್ಚಿರುವುದೇ ಇದಕ್ಕೆ ದೊಡ್ಡ ಕಾರಣ. ಮಾರುಕಟ್ಟೆಯಲ್ಲಿ ಗೋಲ್ಡ್ ಮೀನುಗಳನ್ನು ಅವುಗಳ ಗಾತ್ರಕ್ಕೆ ಅನುಗುಣವಾಗಿ 2,500 ರಿಂದ 30,000 ರೂಪಾಯಿಗಳಿಗೆ ಮಾರಾಟ ಮಾಡಲಾಗುತ್ತದೆ. ಈ ವ್ಯವಹಾರದ ಮೂಲಕ ನೀವು ತಿಂಗಳಿಗೆ ಲಕ್ಷಗಳನ್ನು ಗಳಿಸಬಹುದು.
ಇದನ್ನೂ ಓದಿ: ದಂಪತಿಗಳ ಕೈ ಹಿಡಿದ ಫಿಶ್ ಫಾರ್ಮಿಂಗ್, ಲಕ್ಷ ಲಕ್ಷ ಸಂಪಾದನೆ!
600 ಕೆಜಿಗಿಂತ ಹೆಚ್ಚು ಮೀನು ಮಾರಾಟ
ಮೀನು ಸಾಕಣಿಕೆಯಲ್ಲಿ ಬಯೋಫ್ಲೋಕ್ ತಂತ್ರವನ್ನು ಬಳಸಿ, ದಂಪತಿಗಳು ಒಂದೇ ಕೊಯ್ಲಿಗೆ ರೂ 1 ಲಕ್ಷ ಗಳಿಸಿದ್ದಾರೆ. ಟಿಲಾಪಿಯಾ ಮೀನು ಸಾಕಣೆಯಲ್ಲಿ ಬಯೋಫ್ಲೋಕ್ ತಂತ್ರಜ್ಞಾನವನ್ನು (Biofloc technology) ಬಳಸಿ ಆರು ತಿಂಗಳೊಳಗೆ 600 ಕೆಜಿಗಿಂತ ಹೆಚ್ಚು ಮೀನು ಮಾರಾಟ ಮಾಡಿದ್ದಾರೆ. ಬಯೋಫ್ಲೋಕ್ ತಂತ್ರಜ್ಞಾನ ಎಂದರೆ ಕಡಿಮೆ ನೀರಿನ ಜಾಗದಲ್ಲಿ ಹೆಚ್ಚು ಮೀನುಗಳನ್ನು ಬೆಳೆಸುವುದು.
ಎರ್ನಾಕುಳಂ ಮೂಲದ ದಂಪತಿಯ ಮೀನಿನ ಬ್ಯುಸಿನೆಸ್
ಕೇರಳದ ಎರ್ನಾಕುಲಂ ಮೂಲದ ದಂಪತಿಗಳಾದ ರಮಿತಾ ದಿನು ಮತ್ತು ದಿನು ತಂಕನ್ ಅವರು ಹೆಚ್ಚುವರಿ ಆದಾಯದ ಮೂಲವಾಗಿ ಮತ್ತು ಸಾಂಕ್ರಾಮಿಕ ರೋಗದಿಂದಾಗಿ ಸಂಭವಿಸಿದ ಆರ್ಥಿಕ ಅಸಮತೋಲನವನ್ನು ಸರಿದೂಗಿಸಲು ಮೀನು ಕೃಷಿಯನ್ನು ಪ್ರಾರಂಭಿಸಿದರು. ದಿನು ಸಣ್ಣ ವ್ಯಾಪಾರ ನಡೆಸುತ್ತಿದ್ದರು ಮತ್ತು ರಮಿತಾ ಅರೆಕಾಲಿಕ ಫ್ರೆಂಚ್ ಬೋಧಕರಾಗಿ (French Teacher) ಕೆಲಸ ಮಾಡುತ್ತಿದ್ದರು.
ಬಯೋಫ್ಲೋಕ್ ತಂತ್ರಜ್ಞಾನ
2020 ರಲ್ಲಿ ಲಾಕ್‌ಡೌನ್ ಸಮಯದಲ್ಲಿ ಕುಟುಂಬದ ಸ್ನೇಹಿತ, ಕೇಂದ್ರ ಮೀನುಗಾರಿಕೆ ಸಂಶೋಧನಾ ಕೇಂದ್ರದ ಮಾಜಿ ಉಪ ನಿರ್ದೇಶಕ ಶಾಜಿ ಅವರ ಮೂಲಕ ಮೀನು ಸಾಕಣೆ ಬಗ್ಗೆ ತಿಳಿದುಕೊಂಡರು. ಶಾಜಿ ಇವರಿಗೆ ಬಯೋಫ್ಲೋಕ್ ತಂತ್ರಜ್ಞಾನವನ್ನು ಸಹ ಪರಿಚಯಿಸಿದ್ದರು. ನಂತರ ತಜ್ಞರ ಮಾರ್ಗದರ್ಶನದಲ್ಲಿ, ದಂಪತಿಗಳು ತಮ್ಮ ಹಿತ್ತಲಿನಲ್ಲಿ ಟ್ಯಾಂಕ್ ನಿರ್ಮಿಸಿ 1,500 ಟಿಲಾಪಿಯಾ ಮೀನು ಮರಿಗಳನ್ನು ಹಾಕಿದ್ದರು, ಪ್ರಸ್ತುತ ದಂಪತಿಗಳು ಇದರಲ್ಲಿ ಯಶಸ್ವಿಯಾಗಿದ್ದು, ಮೊದಲ ಬೇಟೆಯಲ್ಲಿ 1 ಲಕ್ಷ ರೂ ಸಂಪಾದಿಸಿದ್ದಾರೆ.
ಬಯೋಫ್ಲೋಕ್ ತಂತ್ರಜ್ಞಾನದಿಂದಾಗಿ “ಆರು ತಿಂಗಳೊಳಗೆ, ಪ್ರತಿ ಮೀನು ಸರಾಸರಿ 350-400 ಗ್ರಾಂ ಗಾತ್ರಕ್ಕೆ ಬೆಳೆಯಿತು. ಮೊದಲ ಇಳುವರಿಯನ್ನು ಬೇಗ ಮಾರಾಟ ಮಾಡಿದ್ದರಿಂದ ಕೆ.ಜಿ.ಗೆ 300 ರೂ.ಗೆ ಮಾರಾಟ ಮಾಡಲು ಸಾಧ್ಯವಾಯಿತು’ ಎನ್ನುತ್ತಾರೆ ರಮಿತಾ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ