Business Idea: ರೈತರನ್ನು ಲಕ್ಷಾಧಿಪತಿ ಮಾಡುವ ಮರ ಇದು, ಒಂದು ಎಕರೆಗೆ 5 ಲಕ್ಷ ಆದಾಯ!

ರೈತರಿಗೆ ಅಪಾರ ಆದಾಯ ತರುವ ಅನೇಕ ಬೆಳೆಗಳಿವೆ. ಅಂತಹ ಬೆಳೆಯ ಬಗ್ಗೆ ಇಂದು ತಿಳಿಯೋಣ. ಹತ್ತಿ ಮರಗಳನ್ನು ಬೆಳೆಸುವ ಮೂಲಕ ನೀವು ದೊಡ್ಡ ಆದಾಯವನ್ನು ಗಳಿಸಬಹುದು. ಈ ಮರಗಳ ಬೇಡಿಕೆಯು ದೇಶದಲ್ಲಿ ಮಾತ್ರವಲ್ಲದೆ ಪ್ರಪಂಚದಾದ್ಯಂತ ವೇಗವಾಗಿ ಹೆಚ್ಚುತ್ತಿದೆ.

ತುರ್ತು ಪರಿಸ್ಥಿತಿಯಲ್ಲಿ ಪಿಎಫ್‌ನಿಂದ ಹಣವನ್ನು ಹಿಂಪಡೆಯಲು ಬಯಸಿದರೆ, ನೀವು ನಿಮ್ಮ ಉಳಿತಾಯವನ್ನು ಹಿಂಪಡೆಯಬಹುದು. ಒಂದು ಗಂಟೆಯಲ್ಲಿ ನಿಮ್ಮ ಬ್ಯಾಂಕ್ ಖಾತೆಗೆ ಪಿಎಫ್ ಹಣ ಬರುತ್ತದೆ. (ಸಾಂದರ್ಭಿಕ ಚಿತ್ರ)

ತುರ್ತು ಪರಿಸ್ಥಿತಿಯಲ್ಲಿ ಪಿಎಫ್‌ನಿಂದ ಹಣವನ್ನು ಹಿಂಪಡೆಯಲು ಬಯಸಿದರೆ, ನೀವು ನಿಮ್ಮ ಉಳಿತಾಯವನ್ನು ಹಿಂಪಡೆಯಬಹುದು. ಒಂದು ಗಂಟೆಯಲ್ಲಿ ನಿಮ್ಮ ಬ್ಯಾಂಕ್ ಖಾತೆಗೆ ಪಿಎಫ್ ಹಣ ಬರುತ್ತದೆ. (ಸಾಂದರ್ಭಿಕ ಚಿತ್ರ)

  • Share this:
ನಮ್ಮ ದೇಶ ಕೃಷಿ (Agriculture) ಆಧಾರಿತ ದೇಶ. ಇಲ್ಲಿ ಶೇ.60ರಷ್ಟು ಜನಸಂಖ್ಯೆ ಕೃಷಿಯನ್ನೇ ಅವಲಂಬಿಸಿ ಬದುಕುತ್ತಾರೆ. ಬಹುತೇಕ ಕುಟುಂಬಗಳು ಕೃಷಿಕರು. ಒಂದಾನೊಂದು ಕಾಲದಲ್ಲಿ ಬದುಕಲಾರದವನು ಕೃಷಿ ಮಾಡಿದವನು ಎಂಬ ಮಾತಿತ್ತು. ಆದರೆ ಈಗ ಪರಿಸ್ಥಿತಿ ಬದಲಾಗಿದೆ. ಕಂಪ್ಯೂಟರ್‌ (Computer) ಗಳ ಮುಂದೆ ಕುಳಿತೆ ಸಾಫ್ಟ್‌ವೇರ್ (Software) ಉದ್ಯೋಗ ಮಾಡುವವರೂ ಕೃಷಿಯತ್ತ ಹೋಗುತ್ತಿದ್ದಾರೆ. ವಿವಿಧ ಬೆಳೆಗಳನ್ನು ಬೆಳೆದು ಲಕ್ಷ ಕೋಟಿ (Crore) ಗಳಿಸುತ್ತಿದ್ದಾರೆ. ರೈತರಿಗೆ ಅಪಾರ ಆದಾಯ ತರುವ ಅನೇಕ ಬೆಳೆಗಳಿವೆ. ಅಂತಹ ಬೆಳೆಯ ಬಗ್ಗೆ ಇಂದು ತಿಳಿಯೋಣ. ಹತ್ತಿ ಮರಗಳ (Cottonwood Tree) ನ್ನು ಬೆಳೆಸುವ ಮೂಲಕ ನೀವು ದೊಡ್ಡ ಆದಾಯವನ್ನು ಗಳಿಸಬಹುದು. ಈ ಮರಗಳ ಬೇಡಿಕೆಯು ದೇಶದಲ್ಲಿ ಮಾತ್ರವಲ್ಲದೆ ಪ್ರಪಂಚದಾದ್ಯಂತ ವೇಗವಾಗಿ ಹೆಚ್ಚುತ್ತಿದೆ.

ಭಾರತದ ಹೊರತಾಗಿ ಪ್ರಪಂಚದ ಅನೇಕ ಭಾಗಗಳಲ್ಲಿ  ಹತ್ತಿ ಮರವನ್ನು ಬೆಳೆಸಲಾಗುತ್ತದೆ. ಏಷ್ಯಾ, ಉತ್ತರ ಅಮೆರಿಕಾ, ಯುರೋಪ್ ಮತ್ತು ಆಫ್ರಿಕಾದಲ್ಲಿ ಹತ್ತಿ ಮರಗಳು ಬೆಳೆಯುತ್ತವೆ. ಈ ಮರವನ್ನು ಕಾಗದ, ಲೈಟ್ ಪ್ಲೈವುಡ್, ಚಾಪ್​ಸ್ಟಿಕ್​ಗಳು, ಮರದ ಪೆಟ್ಟಿಗೆಗಳು, ಬೆಂಕಿ ಕಡ್ಡಿಗಳು ಇತ್ಯಾದಿಗಳನ್ನು ತಯಾರಿಸಲು ಬಳಸಲಾಗುತ್ತದೆ. ಹಾಗಾಗಿ ಅವುಗಳಿಗೆ ಬೇಡಿಕೆ ಹೆಚ್ಚು. ಉತ್ತಮ ಆದಾಯವೂ ಕೂಡ ಸಿಗುತ್ತೆ.

ಹತ್ತಿ ಮರ ಬೆಳೆಸಿ, ಲಕ್ಷಾಧಿಪತಿಯಾಗಿ!

ಹತ್ತಿ ಮರಗಳನ್ನು ಕಾಟನ್ ವುಡ್ ಎಂದೂ ಕರೆಯುತ್ತಾರೆ.  ಈ ಕೃಷಿಗೆ 5 ° C ನಿಂದ 45 ° C ತಾಪಮಾನದ ಅಗತ್ಯವಿದೆ. ಸಾಕಷ್ಟು ಸೂರ್ಯನ ಬೆಳಕು ಇರುವಲ್ಲಿ ಉತ್ತಮವಾಗಿ ಬೆಳೆಯುತ್ತದೆ. ಮಣ್ಣಿನ pH ಮೌಲ್ಯವು 6 ರಿಂದ 8.5 pH ನಡುವೆ ಇರಬೇಕು. ಒಂದು ಮರದಿಂದ ಇನ್ನೊಂದು ಮರಕ್ಕೆ 12 ರಿಂದ 15 ಅಡಿ ಅಂತರವಿರಬೇಕು. ಈ ಮರಗಳು ನೆಲದಿಂದ 80 ಅಡಿಗಳವರೆಗೆ ಬೆಳೆಯುತ್ತವೆ. ತುಂಬಾ ಭಾರವಾಗಿರುತ್ತದೆ. ನಾಟಿ ಮಾಡಿದ ಐದು ವರ್ಷಗಳ ನಂತರ ಕೊಯ್ಲು ಮಾಡಲಾಗುತ್ತದೆ. ಮರಗಳನ್ನೇ ಅವಲಂಬಿಸುವ ಬದಲು.. ಅವುಗಳ ನಡುವೆ ಅಂತರ ಬೆಳೆಯನ್ನೂ ಹಾಕಬಹುದು.

ಇದನ್ನೂ ಓದಿ: ಕೈಯಲ್ಲಿ 25 ಸಾವಿರ ಇಟ್ಕೊಂಡು ಈ ಬ್ಯುಸಿನೆಸ್​ ಆರಂಭಿಸಿ, ತಿಂಗಳಿಗೆ ಲಕ್ಷ ಲಕ್ಷ ಎಣಿಸಿ!

ಅದರ ಜೊತೆ ಈ ಬೆಳೆ ಬೆಳೆಯಿರಿ!

ಕಬ್ಬು, ಅರಿಶಿನ, ಆಲೂಗಡ್ಡೆ, ಕೊತ್ತಂಬರಿ, ಟೊಮೇಟೊ ಇತ್ಯಾದಿಗಳನ್ನು ಬೆಳೆಯಬಹುದು. ಈ ಬೆಳೆಗಳಿಂದ ನಿಮಗೆ ಆದಾಯವೂ ಸಿಗುತ್ತದೆ. ಹಿಮಪಾತ ಹೆಚ್ಚಿರುವ ಹಿಮಾಚಲ ಮತ್ತು ಜಮ್ಮು ಮತ್ತು ಕಾಶ್ಮೀರದಂತಹ ಪ್ರದೇಶಗಳಲ್ಲಿ ಹತ್ತಿ ಮರಗಳನ್ನು ಬೆಳೆಸುವಂತಿಲ್ಲ.

ಆನ್​ಲೈನ್​ನಲ್ಲಿ ಗಿಡಗಳನ್ನು ಖರೀದಿಸಿ!

ಉತ್ತರ ಪ್ರದೇಶದ ಬಿಜ್ನೋರ್ ಜಿಲ್ಲೆಯ ಅನೇಕ ರೈತರು ಈ ಮರಗಳನ್ನು ಬೆಳೆಯುತ್ತಿದ್ದಾರೆ. ಮರಗಳ ನಡುವೆ ಇತರ ಬೆಳೆಗಳನ್ನು ಸಹ ಬೆಳೆಯಲಾಗುತ್ತದೆ. ಹತ್ತಿ ಮರಗಳು ಕಬ್ಬಿಗಿಂತ ಹೆಚ್ಚಿನ ಆದಾಯವನ್ನು ನೀಡುತ್ತವೆ ಎಂದು ಹೇಳಲಾಗುತ್ತದೆ. ಹತ್ತಿ ಮರದ ಮೊಳಕೆಗಳನ್ನು ಮಾರಾಟ ಮಾಡುವ ಅನೇಕ ಕಂಪನಿಗಳಿವೆ. ಆನ್​ಲೈನ್​ ಮೂಲಕ ಗಿಡಗಳನ್ನು ಖರೀದಿಸಬಹುದು. ಪಾಪ್ಲರ್ ಮರಕ್ಕೆ ಮಾರುಕಟ್ಟೆಯಲ್ಲಿ ಉತ್ತಮ ದರ ಸಿಗುತ್ತದೆ.

ಇದನ್ನೂ ಓದಿ: ಮನೆಯಿಂದಲೇ ಸಿಂಪಲ್ಲಾಗಿ ಈ ಬ್ಯುಸಿನೆಸ್ ಆರಂಭಿಸಿ, ತಿಂಗಳಿಗೆ 25 ಸಾವಿರ ಗಳಿಸಿ!

ಈ ಮರಗಳ ಮರದ ಬೆಲೆ ಕ್ವಿಂಟಲ್‌ಗೆ 700-800 ರೂಪಾಯಿ. ಒಂದು ಮರದ ದಿಮ್ಮಿಯನ್ನು 2000 ರೂಪಾಯಿಗಳವರೆಗೆ ಮಾರಾಟ ಮಾಡಬಹುದು. ಒಂದು ಹೆಕ್ಟೇರ್ ಭೂಮಿಯಲ್ಲಿ 250 ಮರಗಳನ್ನು ನೆಡಬಹುದು. 1 ಹೆಕ್ಟೇರ್ ಭೂಮಿಯಲ್ಲಿ ಪೋಪ್ಲರ್ ಮರಗಳನ್ನು ಬೆಳೆಸುವುದರಿಂದ ಸುಲಭವಾಗಿ ರೂ.5 ಲಕ್ಷದವರೆಗೆ ಗಳಿಸಬಹುದು.

( ಇದು ಕೇವಲ ಮಾಹಿತಿಯನ್ನು ಒದಗಿಸುವ ಲೇಖನವಾಗಿದೆ. ಎಲ್ಲೇ ಹೂಡಿಕೆ ಮಾಡುವ ಮುನ್ನ ತಜ್ಞರೊಂದಿಗೆ ಚರ್ಚಿಸಿ ಮುಂದಿನ ನಿರ್ಧಾರ ಮಾಡಿ. ಈ ವಿಚಾರಕ್ಕೆ ಸಂಬಂಧಿಸಿದಂತೆ ನ್ಯೂಸ್​ 18 ಕನ್ನಡ ಜವಾಬ್ದಾರನಾಗುವುದಿಲ್ಲ.)
Published by:ವಾಸುದೇವ್ ಎಂ
First published: