• Home
  • »
  • News
  • »
  • business
  • »
  • Business Idea: ನೋಡೋಕೆ ಮಾತ್ರ ಈ ಹಣ್ಣು ಮುಳ್ಳು! ಈ ಬೆಳೆ ಬೆಳೆದ್ರೆ ರೈತರ ಹಣೆ ಬರಹವೇ ಬದಲಾಗುತ್ತೆ

Business Idea: ನೋಡೋಕೆ ಮಾತ್ರ ಈ ಹಣ್ಣು ಮುಳ್ಳು! ಈ ಬೆಳೆ ಬೆಳೆದ್ರೆ ರೈತರ ಹಣೆ ಬರಹವೇ ಬದಲಾಗುತ್ತೆ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ನೀವು   ಸಾಂಪ್ರದಾಯಿಕ ಬೆಳೆ (Traditional Crop) ಗಳನ್ನು ಬೆಳೆದರೆ ಲಾಭ ಕಡಿಮೆ. ವಾಣಿಜ್ಯ ಬೆಳೆಗಳನ್ನು ಬೆಳೆದರೆ ಮಾತ್ರ ಹೆಚ್ಚಿನ ಆದಾಯ ಪಡೆಯಬಹುದು.

  • Share this:

ಇತ್ತೀಚಿನ ದಿನಗಳಲ್ಲಿ ಅನೇಕ ಯುವಕರು ಕೃಷಿ (Agriculture) ಯತ್ತ ಹೆಜ್ಜೆ ಹಾಕುತ್ತಿದ್ದಾರೆ. ತಮ್ಮ ಕೆಲಸ (Job) ದಲ್ಲಿ ಏನನ್ನೂ ಸಾಧಿಸಲಾಗದೇ ಆ ಕೆಲಸವನ್ನು ಬಿಟ್ಟು, ಭೂಮಿ (Earth) ನಂಬಿ ಹಳ್ಳಿಗಳತ್ತ ಆಗಮಿಸುತ್ತಿದ್ದಾರೆ. ಮೇಲಾಗಿ ದೊಡ್ಡ ದೊಡ್ಡ  ನಗರಗಳಲ್ಲಿ ಸಾಫ್ಟ್ ವೇರ್ (Software) ಕೆಲಸ ಮಾಡುತ್ತಿರುವ ಉದ್ಯೋಗಿಗಳೂ ರಾಜೀನಾಮೆ (Resign)  ನೀಡಿ ತಮ್ಮ ಹಳ್ಳಿಗಳತ್ತ ಹೋಗುತ್ತಿದ್ದಾರೆ. ಹಸಿರು ಗದ್ದೆಗಳಲ್ಲಿ ಕೃಷಿ ಮಾಡಿ ಲಕ್ಷಗಟ್ಟಲೆ ಆದಾಯ ಗಳಿಸುತ್ತಿದ್ದಾರೆ. ನೀವೂ ಕೂಡ ಕೃಷಿ ಮಾಡಿ ಹಣ ಸಂಪಾದಿಸಬೇಕೆಂಬ ಆಸೆ ಇದ್ಯಾ?  ಆದರೆ, ನೀವು   ಸಾಂಪ್ರದಾಯಿಕ ಬೆಳೆ (Traditional Crop) ಗಳನ್ನು ಬೆಳೆದರೆ ಲಾಭ ಕಡಿಮೆ. ವಾಣಿಜ್ಯ ಬೆಳೆಗಳನ್ನು ಬೆಳೆದರೆ ಮಾತ್ರ ಹೆಚ್ಚಿನ ಆದಾಯ ಪಡೆಯಬಹುದು.


ವಾಣಿಜ್ಯ ಬೆಳೆಗಳನ್ನು ಬೆಳೆದೆರೆ ಹೆಚ್ಚಿನ ಲಾಭ!


ಸದ್ಯ ಮಾರುಕಟ್ಟೆಯಲ್ಲಿ ಹೆಚ್ಚಿನ ಬೇಡಿಕೆ ಇದೆ ಅಂದರೆ ಅದು ಅನಾನಸ್​ ಹಣ್ಣಿಗೆ. ಅನಾನಸ್​ ಳೆ ಬೆಳೆದರೆ  ಲಕ್ಷಗಟ್ಟಲೆ ಆದಾಯ ಬರುತ್ತದೆ. ಹಲವು ರಾಜ್ಯಗಳ ರೈತರು ಈ ಬೆಳೆ ಬೆಳೆಯುವ ಮೂಲಕ ಭಾರಿ ಲಾಭ ಪಡೆಯುತ್ತಿದ್ದಾರೆ. ಅನಾನಸ್‌ನಿಂದ ಅನೇಕ ಆರೋಗ್ಯ ಪ್ರಯೋಜನಗಳಿವೆ. ಇದು ಹಸಿವನ್ನು ಹೆಚ್ಚಿಸುತ್ತದೆ. ಹೊಟ್ಟೆಗೆ ಸಂಬಂಧಿಸಿದ ಸಮಸ್ಯೆಗಳನ್ನು ಹೋಗಲಾಡಿಸಲು ಉಪಯುಕ್ತವಾಗಿದೆ. ಅನಾನಸ್ ಅನ್ನು ವಿವಿಧ ಔಷಧಿಗಳಲ್ಲಿಯೂ ಬಳಸಲಾಗುತ್ತದೆ.


ಹಾಗಾಗಿಯೇ ಮಾರುಕಟ್ಟೆಯಲ್ಲಿ ಹಲ್ಲುಗಳಿಗೆ ಬೇಡಿಕೆ ಹೆಚ್ಚು. ಇತರ ಬೆಳೆಗಳಿಗೆ ಹೋಲಿಸಿದರೆ, ಅನಾನಸ್‌ನಿಂದ ಹೆಚ್ಚಿನ ಆದಾಯದ ಸಾಮರ್ಥ್ಯವಿದೆ. ಅನಾನಸ್ ಬಿಸಿ ವಾತಾವರಣದಲ್ಲಿ ಉತ್ತಮವಾಗಿ ಬೆಳೆಯುತ್ತದೆ. ಅವುಗಳನ್ನು ವರ್ಷಪೂರ್ತಿ ಬೆಳೆಸಬಹುದು.


ಇದನ್ನೂ ಓದಿ: ಉಪ್ಪಿನಕಾಯಿ ಬ್ಯುಸಿನೆಸ್‌ನಿಂದ ಲಕ್ಷಗಟ್ಟಲೆ ಆದಾಯ; ಇಳಿವಯಸ್ಸಿನಲ್ಲೂ ಉತ್ತಮ ಸಾಧನೆ!


ಕ್ಯಾಕ್ಟಸ್​ ಜಾತಿಗೆ ಸೇರಿರುವ ಅನಾನಸ್​!


ಅನಾನಸ್ ಸಸ್ಯವು ಕ್ಯಾಕ್ಟಸ್ ಜಾತಿಗೆ ಸೇರಿದೆ. ಈ ಬೆಳೆಯ ನಿರ್ವಹಣೆಯೂ ತುಂಬಾ ಸುಲಭ. ದಿನವೂ ಗದ್ದೆಗೆ ಹೋಗಿ.. ನೀರು ಹಾಕಿ.. ಆರೈಕೆ ಮಾಡಬೇಕಿಲ್ಲ. ಹವಾಮಾನದ ಬಗ್ಗೆ ಚಿಂತಿಸಬೇಕಾಗಿಲ್ಲ. ರೈತರಂತೆ ಹಲವು ರಾಜ್ಯಗಳಲ್ಲಿ 12 ತಿಂಗಳ ಕಾಲ ಈ ಬೆಳೆಯನ್ನು ಬೆಳೆಯುತ್ತಾರೆ. ಇತರ ಬೆಳೆಗಳು ಮತ್ತು ಸಸ್ಯಗಳಿಗೆ ಹೋಲಿಸಿದರೆ ಅನಾನಸ್‌ಗೆ ಕಡಿಮೆ ನೀರು ಬೇಕಾಗುತ್ತದೆ.


ಬಿತ್ತನೆಯಿಂದ ಹಣ್ಣುಗಳು ಹಣ್ಣಾಗಲು ಸುಮಾರು 18-20 ತಿಂಗಳುಗಳು ಬೇಕಾಗುತ್ತದೆ. ಹಣ್ಣು ಹಣ್ಣಾದಾಗ, ಅದರ ಬಣ್ಣವು ಕೆಂಪು-ಹಳದಿ ಬಣ್ಣಕ್ಕೆ ತಿರುಗುತ್ತದೆ. ಅದರ ನಂತರ ಕತ್ತರಿಸುವ ಕೆಲಸ ಪ್ರಾರಂಭವಾಗುತ್ತದೆ. ಮಾರುಕಟ್ಟೆಯಲ್ಲಿ ಅನಾನಸ್​​ಗೆ ಹೆಚ್ಚಿನ ಬೇಡಿಕೆ ಇದೆ. ಎಲ್ಲ ಸೀಸನ್​ನಲ್ಲೂ ಜನರು ಈ ಅನಾನಸ್​ ಹಣ್ಣನ್ನು ತಿನ್ನಲು ಇಷ್ಟಪಡುತ್ತಾರೆ.


ಲಕ್ಷಗಟ್ಟಲೇ ಆಧಾರ ಸಿಗುತ್ತೆ!


ಆಯುರ್ವೇದ ಔಷಧಿಗಳ ತಯಾರಿಕೆಯಲ್ಲಿ ಅನಾನಸ್ ಸಹ ಬಳಸಲಾಗುತ್ತದೆ. ಹಾಗಾಗಿಯೇ ಇವುಗಳಿಗೆ ಮಾರುಕಟ್ಟೆಯಲ್ಲಿ ಬೇಡಿಕೆ ಹೆಚ್ಚಿದೆ. ಮಾರುಕಟ್ಟೆಯಲ್ಲಿ ಈ ಹಣ್ಣನ್ನು ಕೆಜಿಗೆ 150 ರಿಂದ 200 ರೂಪಾಯಿ ಮಾರಾಟ ಮಾಡಲಾಗುತ್ತೆ. ಇಂತಹ ಪರಿಸ್ಥಿತಿಯಲ್ಲಿ ರೈತರು ಹೆಕ್ಟೇರಿಗೆ 30 ಟನ್ ಅನಾನಸ್ ಉತ್ಪಾದಿಸಿದರೆ ಲಕ್ಷಗಟ್ಟಲೆ ಆದಾಯ ಬರುತ್ತದೆ. ಬೆಳೆ ಹಂಗಾಮು ದೀರ್ಘವಾಗಿದ್ದರೂ ಮಾರುಕಟ್ಟೆ ದರದಿಂದಾಗಿ ಹೆಚ್ಚಿನ ಆದಾಯ ಪಡೆಯುತ್ತಾರೆ.


ಇದನ್ನೂ ಓದಿ: ಬೈಕ್​ನಲ್ಲೇ ಇಡ್ಲಿ ವ್ಯಾಪಾರ: ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಯ್ತು ಪದವೀಧರನ ಕಥೆ


(ಈ ಲೇಖನವನ್ನು ಕೇವಲ ವರದಿಗಳು, ಅಂತರ್ಜಾಲದಲ್ಲಿ ಲಭ್ಯವಿರುವ ಮಾಹಿತಿಯ ಆಧಾರದ ಮೇಲೆ ನೀಡಲಾಗಿದೆ. ಈ ಬೆಳೆಯನ್ನು ನೆಡುವ ಮೊದಲು, ಆಳವಾದ ಅಧ್ಯಯನವನ್ನು ಮಾಡಲು ಸಲಹೆ ನೀಡಲಾಗುತ್ತದೆ, ವ್ಯವಹಾರವನ್ನು ಪ್ರಾರಂಭಿಸುವ ಮೊದಲು ಸಂಬಂಧಿತ ಮಾರುಕಟ್ಟೆ ತಜ್ಞರನ್ನು ಸಂಪರ್ಕಿಸಿ)

Published by:ವಾಸುದೇವ್ ಎಂ
First published: