• Home
  • »
  • News
  • »
  • business
  • »
  • Business Ideas: ಹೀಗೊಂದು ಬ್ಯುಸಿನೆಸ್ ಐಡಿಯಾ ಸ್ಪರ್ಧೆ- ವಿಜೇತರಿಗೆ 5 ಲಕ್ಷ ರೂ. ಬಹುಮಾನ

Business Ideas: ಹೀಗೊಂದು ಬ್ಯುಸಿನೆಸ್ ಐಡಿಯಾ ಸ್ಪರ್ಧೆ- ವಿಜೇತರಿಗೆ 5 ಲಕ್ಷ ರೂ. ಬಹುಮಾನ

ಪ್ರಾತಿನಿಧಿಕ ಚಿತ್ರ

ಪ್ರಾತಿನಿಧಿಕ ಚಿತ್ರ

ಮೊದಲ ಸುತ್ತಿನಲ್ಲಿ, ಸಲ್ಲಿಸಿದ ಆಲೋಚನೆಗಳನ್ನು ಶಾರ್ಟ್‌ಲಿಸ್ಟ್ ಮಾಡಲಾಗುತ್ತದೆ, ನಂತರ 100 ಸ್ಪರ್ಧಿಗಳನ್ನು ಮುಂದಿನ ಸುತ್ತಿಗೆ ಜನವರಿ 18, 2023 ರಂದು ಘೋಷಿಸಲಾಗುತ್ತದೆ.

  • Share this:

ಕೇರಳ ಸರ್ಕಾರ(Kerala Government) 2022-23 ಅನ್ನು 'ಉದ್ಯಮಶೀಲತೆಯ ವರ್ಷ' ಎಂದು ಘೋಷಿಸಿದ್ದು, ಅದರಡಿ ಹಲವು ಕಾರ್ಯಕ್ರಮಗಳನ್ನು (Programmes) ಜಾರಿಗೆ ತರುತ್ತಿದೆ. ಉದ್ಯಮಶೀಲತೆ ಅಭಿವೃದ್ಧಿ ಉಪಕ್ರಮಗಳ ಭಾಗವಾಗಿ, ಕೈಗಾರಿಕೆಗಳು ಮತ್ತು ವಾಣಿಜ್ಯ ಇಲಾಖೆಯು ಉದ್ಯಮಕ್ಷೇತ್ರವನ್ನು ಪ್ರೋತ್ಸಾಹಿಸಲು ಕೇರಳದಲ್ಲಿ ವಿಭಿನ್ನವಾದ ಸ್ಪರ್ಧೆಯನ್ನು ಆಯೋಜಿಸಿದೆ.


 ಕೇರಳದಲ್ಲಿ "ಡ್ರೀಮ್‌ವೆಸ್ಟರ್" ಸ್ಪರ್ಧೆ


ಉದ್ಯಮಕ್ಕೆ ಉತ್ತೇಜನ ನೀಡಲು, ಹೊಸ ಪರಿಕಲ್ಪನೆಯನ್ನು ಪ್ರೋತ್ಸಾಹಿಸಲು, ಯುವ ಪ್ರತಿಭೆಗಳಿಗೆ ಅವಕಾಶ ನೀಡಲು, ಭಿನ್ನ ಮತ್ತು ವಿಶೇಷ ಆಲೋಚನೆಗಳಿಗೆ ಕಾಯಕಲ್ಪ ಒದಗಿಸಲು ಕೇರಳದ ವಾಣಿಜ್ಯ ಇಲಾಖೆಯು "ಡ್ರೀಮ್‌ವೆಸ್ಟರ್" ಎಂಬ ಸ್ಪರ್ಧೆಯನ್ನು ಆಯೋಜಿಸಿದೆ. ಸ್ಪರ್ಧೆಯಲ್ಲಿ ಭಾಗವಹಿಸುವವರು ತಮ್ಮ ಹೊಸ ಉದ್ಯಮ ಪರಿಕಲ್ಪನೆಗಳನ್ನು ನೇಮಕ ಮಾಡಿದ ಪ್ರಖ್ಯಾತ ಸಮಿತಿಯ ಮುಂದೆ ಮಂಡಿಸಬೇಕು.


ಇನ್ನೂ ಸ್ಪರ್ಧೆಯಲ್ಲಿ ಗೆದ್ದ ವಿಜೇತರಿಗೆ ಭರ್ಜರಿ ಬಹುಮಾನ ಕೂಡ ಇದೆ. "ಡ್ರೀಮ್‌ವೆಸ್ಟರ್" ಸ್ಪರ್ಧೆಯ ಮೊದಲ ಬಹುಮಾನವಾಗಿ 5 ಲಕ್ಷ ರೂಪಾಯಿಗಳನ್ನು ಘೋಷಿಸಲಾಗಿದೆ. ಕೇರಳದ ರಾಜ್ಯ ಕೈಗಾರಿಕಾ ಸಚಿವ ಪಿ.ರಾಜೀವ್ ಅವರು ಸ್ಪರ್ಧೆಗೆ ಅಧಿಕೃತವಾಗಿ ಚಾಲನೆ ನೀಡಿ ಮಾತನಾಡಿ, ಆಯ್ದ ಐಡಿಯಾಗಳಿಗೆ ಸರ್ಕಾರಿ ಸ್ವಾಮ್ಯದ ಬಿಸಿನೆಸ್ ಇನ್‌ಕ್ಯುಬೇಶನ್ ಸೆಂಟರ್‌ಗಳಲ್ಲಿ ಇನ್‌ಕ್ಯುಬೇಶನ್ ಜಾಗದ ಪ್ರವೇಶ, ಮಾರ್ಗದರ್ಶನ ಬೆಂಬಲ, ಬಂಡವಾಳ ಸಹಾಯ, ಮಾರುಕಟ್ಟೆ ಸಂಪರ್ಕಗಳ ಪ್ರವೇಶದಂತಹ ಅಗತ್ಯ ಬೆಂಬಲವನ್ನು ಒದಗಿಸಲಾಗುವುದು ಎಂದು ಹೇಳಿದರು. ಸರ್ಕಾರವು ಯುವಜನರಲ್ಲಿ ಉದ್ಯಮಶೀಲತೆಯನ್ನು ಉತ್ತೇಜಿಸಲು ನೀತಿಗಳನ್ನು ರೂಪಿಸುತ್ತಿದೆ ಎಂದು ಸಚಿವರು ಕಾರ್ಯಕ್ರಮದಲ್ಲಿ ತಿಳಿಸಿದರು.


ಇದನ್ನೂ ಓದಿ: Money Mantra: ನಿಮ್ಮ ಕ್ರಿಯೇಟಿವಿಟಿ ಕೆಲಸವು ನಿಮಗೆ ಲಾಭವನ್ನು ತರುತ್ತದೆ, ಹೋದಲ್ಲೆಲ್ಲಾ ಹಣ!


ಸ್ಪರ್ಧೆಯಲ್ಲಿ ಭಾಗವಹಿಸುವುದು ಹೇಗೆ?


* ರಾಜ್ಯದ ವಿವಿಧ ವಲಯಗಳ ನಿರೀಕ್ಷಿತ ಆವಿಷ್ಕಾರಕರು ತಮ್ಮ ಆಲೋಚನೆಗಳನ್ನು ಮಾರುಕಟ್ಟೆ ಯೋಜನೆಗಳೊಂದಿಗೆ ಅಧಿಕೃತ ವೆಬ್‌ಸೈಟ್ -www.dreamvetor.in ಮೂಲಕ ಅರ್ಜಿ ಸಲ್ಲಿಸಲು ಅವಕಾಶವನ್ನು ಪಡೆಯುತ್ತಾರೆ. ನವೆಂಬರ್ 24 ರಿಂದ ಅರ್ಜಿ ಸಲ್ಲಿಸಲು ಅವಕಾಶವಿದೆ.


* ವೆಬ್‌ಸೈಟ್ ಮೂಲಕ ಸಲ್ಲಿಸಲಾದ ಆಲೋಚನೆಗಳು/ಪರಿಕಲ್ಪನೆಗಳನ್ನು ತೀರ್ಪುಗಾರರ ಸಮಿತಿಯು ಮೌಲ್ಯಮಾಪನ ಮಾಡುತ್ತದೆ ಮತ್ತು ಆಯ್ದ 100 ಐಡಿಯಾಗಳಿಗೆ ಕ್ವಾರ್ಟರ್-ಫೈನಲ್‌ನಲ್ಲಿ ತಮ್ಮ ಆಲೋಚನೆಗಳನ್ನು ವಿವರಿಸಲು ಅವಕಾಶವನ್ನು ನೀಡುತ್ತದೆ.


* ನಂತರ ಸೆಮಿ-ಫೈನಲ್‌ನಲ್ಲಿ 50 ಆಲೋಚನೆಗಳು/ಪರಿಕಲ್ಪನೆಗಳನ್ನು ಆಯ್ಕೆ ಮಾಡಲಾಗುತ್ತದೆ. ಈ 50 ಜನರ ಐಡಿಯಾಗಳನ್ನು ಕೊನೆಯದಾಗಿ ಫಿಲ್ಟರ್‌ ಮಾಡಿ ಫೈನಲ್‌ಗೆ 20 ಜನರ ಕಲ್ಪನೆಗಳನ್ನು ಆಯ್ಕೆ ಮಾಡಲಾಗುತ್ತದೆ.


* 18-35 ವರ್ಷದೊಳಗಿನವರು ಅರ್ಜಿ ಸಲ್ಲಿಸಬಹುದು.


* ಒಬ್ಬ ಸ್ಪರ್ಧಿಯು ಕೇವಲ ಒಂದು ವ್ಯವಹಾರ ಕಲ್ಪನೆ/ಪರಿಕಲ್ಪನೆಯನ್ನು ಮಾತ್ರ ಸಲ್ಲಿಸಬಹುದು.


* ಮೊದಲ ಸುತ್ತಿನಲ್ಲಿ, ಸಲ್ಲಿಸಿದ ಆಲೋಚನೆಗಳನ್ನು ಶಾರ್ಟ್‌ಲಿಸ್ಟ್ ಮಾಡಲಾಗುತ್ತದೆ, ನಂತರ 100 ಸ್ಪರ್ಧಿಗಳನ್ನು ಮುಂದಿನ ಸುತ್ತಿಗೆ ಜನವರಿ 18, 2023 ರಂದು ಘೋಷಿಸಲಾಗುತ್ತದೆ.


* 2 ನೇ ಸುತ್ತಿನಲ್ಲಿ ಎರಡು ನಿಮಿಷಗಳ ಪಿಚ್ ಎಲಿವೇಟರ್ ವೀಡಿಯೊಗಳ ಸಲ್ಲಿಕೆ ಮತ್ತು ಫೆಬ್ರವರಿ 8 ರಂದು ಮುಂದಿನ ಸುತ್ತಿಗೆ 50 ಸ್ಪರ್ಧಿಗಳ ಘೋಷಣೆಯಾಗುತ್ತದೆ.


* 3 ನೇ ಸುತ್ತಿನಲ್ಲಿ, ಸ್ಪರ್ಧಿಗಳು ಮಾರ್ಕೆಟಿಂಗ್ ಪ್ಲಾನ್ ವಿವರಣೆ ನೀಡಬೇಕಾಗುತ್ತದೆ ಮತ್ತು 20 ಫೈನಲಿಸ್ಟ್‌ಗಳ ಹೆಸರನ್ನು ಫೆಬ್ರವರಿ 20 ರಂದು ಪ್ರಕಟಿಸಲಾಗುವುದು.


* 4 ನೇ ಸುತ್ತಿನಲ್ಲಿ, ಸ್ಪರ್ಧೆಯ ಅಂತಿಮ ಕಾರ್ಯಕ್ರಮವು ಮಾರ್ಚ್ 1 ರಂದು ತಿರುವನಂತಪುರಂನಲ್ಲಿ ಆಫ್‌ಲೈನ್ ಮೋಡ್‌ನಲ್ಲಿ ನಡೆಯಲಿದೆ.


ವಿಜೇತರಿಗೆ ಭರ್ಜರಿ ಬಹುಮಾನ


ಪ್ರಥಮ ಬಹುಮಾನ ವಿಜೇತರಿಗೆ 5 ಲಕ್ಷ ರೂ., ದ್ವಿತೀಯ ಹಾಗೂ ತೃತೀಯ ಬಹುಮಾನ ಪಡೆದವರಿಗೆ ಕ್ರಮವಾಗಿ 3 ಲಕ್ಷ ಹಾಗೂ 2 ಲಕ್ಷ ರೂ. 4ರಿಂದ 10ನೇ ಸ್ಥಾನ ಪಡೆಯುವವರಿಗೆ ತಲಾ 1 ಲಕ್ಷ ರೂ, 11ರಿಂದ 20ನೇ ಸ್ಥಾನದಲ್ಲಿರುವವರಿಗೆ ತಲಾ 25 ಸಾವಿರ ರೂ. ನೀಡಲಾಗುತ್ತದೆ. ಬಹುಮಾನದ ಜೊತೆ 20 ಅಂತಿಮ ಸ್ಪರ್ಧಿಗಳಿಗೆ ಪ್ರಮಾಣಪತ್ರಗಳು ಮತ್ತು ಸ್ಮರಣಿಕೆಗಳನ್ನು ನೀಡಲಾಗುತ್ತದೆ.


ಇದನ್ನೂ ಓದಿ: TDS Deduction: ಟಿಡಿಎಸ್ ಕಡಿತದಿಂದ ವಿನಾಯಿತಿ: ಅರ್ಜಿ ಸಲ್ಲಿಸೋದು ಹೇಗೆ ಎಂಬ ಮಾಹಿತಿ ಇಲ್ಲಿದೆ


ಕೇರಳದಲ್ಲಿ ಒಂದು ಲಕ್ಷ ಹೊಸ ಉದ್ಯಮಗಳನ್ನು ಸ್ಥಾಪಿಸುವ ಗುರಿಯನ್ನು ಸರ್ಕಾರ ಹೊಂದಿದೆ. ಈ ನವೀನ ಉಪಕ್ರಮದ ಮೂಲಕ ಅಂದಾಜು 1,000 ಕೋಟಿ ಹೂಡಿಕೆ ಮತ್ತು 45,000 ಉದ್ಯೋಗಾವಕಾಶಗಳನ್ನು ನಿರೀಕ್ಷಿಸಲಾಗಿದೆ.

Published by:Latha CG
First published: