• Home
  • »
  • News
  • »
  • business
  • »
  • Business Idea: ಗಿಡಮೂಲಿಕೆಗಳಿಂದ ಹಣ ಸಂಪಾದಿಸಲು ಇಲ್ಲಿವೆ 7 ಸಲಹೆಗಳು! ಫಾಲೋ ಮಾಡಿ ಜೇಬು ತುಂಬಿಸಿಕೊಳ್ಳಿ!

Business Idea: ಗಿಡಮೂಲಿಕೆಗಳಿಂದ ಹಣ ಸಂಪಾದಿಸಲು ಇಲ್ಲಿವೆ 7 ಸಲಹೆಗಳು! ಫಾಲೋ ಮಾಡಿ ಜೇಬು ತುಂಬಿಸಿಕೊಳ್ಳಿ!

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ತಮ್ಮ ದೈನಂದಿನ ಅವಶ್ಯಕತೆಗಳಿಗೆ ಗಿಡಮೂಲಿಕೆಗಳನ್ನು ಮನೆಯಲ್ಲೇ ಬೆಳೆಸುವ ಜನರು ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಮಾರುಕಟ್ಟೆಯಲ್ಲಿ ಮೂಲಿಕೆಗಳ ಉತ್ಪನ್ನಗಳನ್ನು ತಯಾರಿಸಿ ಮಾರಾಟ ಮಾಡುತ್ತಿದ್ದಾರೆ.

  • Share this:

ಇತ್ತೀಚಿನ ದಿನಗಳಲ್ಲಿ ಗಿಡಮೂಲಿಕೆ ಉತ್ಪನ್ನ(Herbal Product)  ಗಳಿಗೆ ಹೆಚ್ಚಿನ ಬೇಡಿಕೆ ಇದ್ದು, ಸೌಂದರ್ಯವರ್ಧಕಗಳು (Cosmetics) , ಸುವಾಸಿತ ಉತ್ಪನ್ನಗಳು (Flavored Products), ದೈನಂದಿನ ಬಳಕೆ (Daily Use Product) , ವೈದ್ಯಕೀಯ ಅಗತ್ಯ (Medical Necessity) , ಕೃಷಿ ಪದ್ಧತಿ (Agricultural Practice) ಹೀಗೆ ಹೆಚ್ಚಿನ ಕ್ಷೇತ್ರಗಳಲ್ಲಿ ಬೇಡಿಕೆ ಕಂಡುಕೊಂಡಿದೆ. ಗಿಡಮೂಲಿಕೆ (Herb) ಹಾಗೂ ಅವುಗಳ ಬಗ್ಗೆ ಆಸಕ್ತಿ ಹಾಗೂ ಜ್ಞಾನವಿದ್ದರೆ ಅದನ್ನು ಲಾಭದಾಯಕ ವ್ಯಾಪಾರವನ್ನಾಗಿ ಕೂಡ ಮಾರ್ಪಡಿಸಿಕೊಳ್ಳಬಹುದು. ಗಿಡಮೂಲಿಕೆ ಆಧಾರಿತ ವ್ಯವಹಾರಗಳು (Business) ಅಥವಾ ಸ್ಟಾರ್ಟ್-ಅಪ್‌ (Startup) ಗಳಿಂದ ಲಾಭದಾಯಕ ವ್ಯವಹಾರಗಳನ್ನು ಹೇಗೆ ಗಳಿಸಬಹುದು ಅದಕ್ಕಾಗಿ ಕೆಲವೊಂದು ವಿಧಾನಗಳು ಹಾಗೂ ಸಲಹೆಗಳನ್ನು ನೀಡಲಾಗಿದ್ದು ಇವುಗಳು ಉಪಯೋಗಕಾರಿಯಾಗಿವೆ.


1.ಗಿಡಮೂಲಿಕೆಗಳ ಮಾರಾಟ


ತಮ್ಮ ದೈನಂದಿನ ಅವಶ್ಯಕತೆಗಳಿಗೆ ಗಿಡಮೂಲಿಕೆಗಳನ್ನು ಮನೆಯಲ್ಲೇ ಬೆಳೆಸುವ ಜನರು ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಮಾರುಕಟ್ಟೆಯಲ್ಲಿ ಮೂಲಿಕೆಗಳ ಉತ್ಪನ್ನಗಳನ್ನು ತಯಾರಿಸಿ ಮಾರಾಟ ಮಾಡುತ್ತಿದ್ದಾರೆ. ಇದರಿಂದ ಸ್ಥಳೀಯ ಮೂಲಿಕೆ ಬೆಳೆಗಾರರಿಗೆ ತಮ್ಮ ಗಿಡಮೂಲಿಕೆಗಳನ್ನು ನೇರವಾಗಿ ಗ್ರಾಹಕರಿಗೆ ಮಾರಾಟ ಮಾಡಲು ಅವಕಾಶ ದೊರೆತಿದೆ. ದೊಡ್ಡ ಕಂಪನಿ ಹಾಗೂ ಸಂಸ್ಥೆಗಳಿಗೂ ಮಾರಾಟ ಮಾಡಬಹುದು.


2.ಗಿಡಮೂಲಿಕೆಗಳ ಸಾರಗಳನ್ನು ಅಭಿವೃದ್ಧಿಪಡಿಸುವುದು


ಗಿಡಮೂಲಿಕೆ ಮತ್ತು ಸಾವಯವ ಉತ್ಪನ್ನಗಳಿಗೆ ಸಕಾರಾತ್ಮಕ ಬೇಡಿಕೆ ಇದ್ದರೂ, ಎಲ್ಲರೂ ಗಿಡಮೂಲಿಕೆ ಉತ್ಪನ್ನಗಳನ್ನು ತಯಾರಿಸಲು ಅಗತ್ಯ ಶ್ರಮ ಮತ್ತು ಸಮಯವನ್ನು ವ್ಯಯಿಸಲು ಬಯಸುವುದಿಲ್ಲ ಅಂತೆಯೇ ಗಿಡಮೂಲಿಕೆಗಳ ಸಾರವನ್ನು ಮಾರುಕಟ್ಟೆಯಲ್ಲಿ ನೇರವಾಗಿ ಮಾರುವ ಇರಾದೆಯನ್ನು ಹೊಂದಿರುತ್ತಾರೆ.


ಮೂಲಿಕೆ ಅಥವಾ ಗಿಡಮೂಲಿಕೆಗಳ ಸಂಯೋಜನೆಯಿಂದ ಸಾರಗಳನ್ನು ತಯಾರಿಸಬಹುದು, ಇದನ್ನು ಸ್ಥಳೀಯ ರಿಟೇಲ್ ವ್ಯಾಪಾರಿಗಳಿಗೆ, ದೊಡ್ಡ ದೊಡ್ಡ ಸಂಸ್ಥೆಗೆ ಅಥವಾ ಇ-ಕಾಮರ್ಸ್ ವೆಬ್‌ಸೈಟ್‌ಗಳಲ್ಲಿಯೂ ಮಾರಾಟ ಮಾಡಬಹುದು.


ಇದನ್ನೂ ಓದಿ: ಟ್ವಿಟರ್​​ನಲ್ಲಿ ತುಟಿಕ್​-ಪಿಟಿಕ್​ ಅಂದ್ರೆ ಅಷ್ಟೇ! ಎಲಾನ್​ ಮಸ್ಕ್​ಗೆ ವಾರ್ನಿಂಗ್​ ಕೊಟ್ಟ ಆ್ಯಪಲ್​ ಸಂಸ್ಥೆ!


3.ತ್ವಚೆ ಹಾಗೂ ಕೂದಲಿನ ಪೋಷಣೆಗೆ


ತ್ವಚೆ ಮತ್ತು ಕೂದಲಿನ ಆರೈಕೆ-ಅಭಿವೃದ್ಧಿಗಾಗಿ ಗಿಡಮೂಲಿಕೆಗಳು ಹೆಚ್ಚು ಜನಪ್ರಿಯವಾಗಿವೆ. ರಾಸಾಯನಿಕಗಳಿಂದ ಮುಕ್ತವಾಗಿರುವ ತ್ವಚೆ ಮತ್ತು ಕೂದಲ ರಕ್ಷಣೆಯ ಉತ್ಪನ್ನಗಳನ್ನು ಸ್ಥಳೀಯ ಅಂಗಡಿಗಳಲ್ಲಿ ಅಥವಾ ಆನ್‌ಲೈನ್ ಸಂಪರ್ಕಗಳ ಮೂಲಕ ರಿಟೇಲ್ ಮಾರುಕಟ್ಟೆಯಲ್ಲಿ ಮಾರಾಟ ಮಾಡಬಹುದು.


4.ಕ್ಲಿನಿಕಲ್ ಅಭ್ಯಾಸ


ಪ್ರಮಾಣೀಕೃತ ಗಿಡಮೂಲಿಕೆ ತಜ್ಞರಾಗಿದ್ದರೆ ಅಥವಾ ಕ್ಲಿನಿಕಲ್ ಪದವಿಯನ್ನು ಹೊಂದಿದ್ದರೆ, ವೈದ್ಯಕೀಯ ಸಮಸ್ಯೆಗಳನ್ನು ತೊಡೆದುಹಾಕಲು ಗಿಡಮೂಲಿಕೆ ಚಿಕಿತ್ಸೆಗಳಿಗೆ ಒಳಗಾಗಲು ಬಯಸುವವರಿಗೆ ಸಹಾಯ ಮಾಡಲು ಗಿಡಮೂಲಿಕೆಗಳ ಚಿಕಿತ್ಸಾ ಪದ್ಧತಿಯನ್ನು ಆರಂಭಿಸಬಹುದು. ಅದಕ್ಕೂ ಮುನ್ನ ನೀವು ಮಾನ್ಯವಾದ ವೈದ್ಯಕೀಯ ಪರವಾನಗಿಯನ್ನು ಹೊಂದಿರಬೇಕು.


5.ಗಿಡಮೂಲಿಕೆಗಳ ಮಹತ್ವದ ಕುರಿತು ಬೋಧನೆ


ಕ್ಲಿನಿಕಲ್ ಅಭ್ಯಾಸದ ಹೊರತಾಗಿ, ಗಿಡಮೂಲಿಕೆಗಳ ಬಗ್ಗೆ ಹೆಚ್ಚಿನ ಮಾಹಿತಿ ಕಲೆಹಾಕುವ ಮೂಲಕ ಅವನ್ನು ಬೋಧಿಸುವ ಮೂಲಕ ಜ್ಞಾನ ಮತ್ತು ಅರಿವನ್ನು ಹರಡಬಹುದು. ಆನ್‌ಲೈನ್ ತರಗತಿಗಳು, ಗಿಡಮೂಲಿಕೆಗಳ ಬಗ್ಗೆ ತರಬೇತಿ ನೀಡುವುದು ಮೊದಲಾದ ವಿಧಾನಗಳನ್ನು ಅಳವಡಿಸಿಕೊಳ್ಳಬಹುದಾಗಿದೆ. ಗಿಡಮೂಲಿಕೆಗಳ ವ್ಯಾಪಾರವನ್ನು ಹೊಂದಿದ್ದರೆ ವಿವಿಧ ಗಿಡಮೂಲಿಕೆಗಳನ್ನು ಹೇಗೆ ಬಳಸುವುದು ಎಂಬುದರ ಕುರಿತು ಜನರಿಗೆ ಮಾರ್ಗದರ್ಶನ ನೀಡುವ ಮೂಲಕ ನಿಮ್ಮ ಮಾರಾಟವನ್ನು ಹೆಚ್ಚಿಸಬಹುದು.


6.ಅರೋಮಾಥೆರಪಿಸ್ಟ್


ಅರೋಮಾಥೆರಪಿಯು ಗಿಡಮೂಲಿಕೆಗಳ ಪ್ರಾಚೀನ ಅಭ್ಯಾಸಗಳಲ್ಲಿ ಮೂಲಾಂಶವನ್ನು ಹೊಂದಿದೆ, ಆದರೆ ಈ ತಂತ್ರದಲ್ಲಿ ಪರಿಶೋಧನೆ ಮಾಡುವುದು ಹೆಚ್ಚು ಮುಖ್ಯವಾಗಿದೆ. ಈ ವಿಧಾನದ ಮೂಲಕ ತಜ್ಞರು ರೋಗಿಗಳು ಇಲ್ಲವೇ ಗ್ರಾಹಕರ ಮೇಲೆ ಚಿಕಿತ್ಸೆಗಳನ್ನು ನಡೆಸಲು ಗಿಡಮೂಲಿಕೆಗಳು ಮತ್ತು ಸಾರಭೂತ ತೈಲಗಳನ್ನು ಬಳಸಿ ಕಾಯಿಲೆ ಗುಣಪಡಿಸಲು ಸಾಂಪ್ರದಾಯಿಕ ವಿಧಾನಗಳನ್ನು ಮೀರಿ ಗಿಡಮೂಲಿಕೆಗಳ ಚಿಕಿತ್ಸೆಯನ್ನು ಬಳಸುತ್ತಾರೆ.


ಸಂಬಂಧಿತ ಪ್ರಮಾಣಪತ್ರದೊಂದಿಗೆ ಆಸಕ್ತಿ ಮತ್ತು ಜ್ಞಾನದ ಸರಿಯಾದ ಬಳಕೆ ಈ ಕ್ಷೇತ್ರಕ್ಕೆ ಉತ್ತಮ ವಿಧಾನವಾಗಿದೆ.


ಇದನ್ನೂ ಓದಿ: ನಿಮ್​ ಹತ್ರ 100 ರೂಪಾಯಿ ಇದ್ರೆ ಇಲ್ಲಿ ಹೂಡಿಕೆ ಮಾಡಿ, ಬ್ಯುಸಿನೆಸ್​ ಮೆನ್​ಗಳೆಲ್ಲ ಹೀಗೆ ದುಡ್ಡು ಮಾಡೋದು!


7.ಬರವಣಿಗೆ


ಇತರ ಯಾವುದೇ ಕ್ಷೇತ್ರದಂತೆ, ಗಿಡಮೂಲಿಕೆಗಳಿಗೆ ಸಂಬಂಧಿಸಿದ ಬಹುತೇಕ ಎಲ್ಲಾ ವ್ಯವಹಾರಗಳು ಅಥವಾ ಸ್ಟಾರ್ಟ್-ಅಪ್‌ಗಳು ಸೇವೆಯನ್ನು ಒದಗಿಸುವ ಮೂಲಕ ಗ್ರಾಹಕರನ್ನು ಸೆಳೆಯುತ್ತವೆ. ಇದಕ್ಕಾಗಿ ಉತ್ತಮ ಬರಹಗಾರರ ಅವಶ್ಯಕತೆ ಇರುತ್ತದೆ. ಅಲ್ಲದೆ ಗಿಡಮೂಲಿಕೆಗಳ ಬಗ್ಗೆ ತಮ್ಮ ಜ್ಞಾನವನ್ನು ವ್ಯಕ್ತಪಡಿಸುವವರಿಗೆ ಇಲ್ಲಿ ಅವಕಾಶವಿದೆ. ಗಿಡಮೂಲಿಕೆಗಳ ಕುರಿತು ತಮ್ಮದೇ ಆದ ಬ್ಲಾಗ್‌ಗಳು, ವೆಬ್‌ಸೈಟ್‌ಗಳು, ಲೇಖನಗಳನ್ನು ಬರೆದು ಚೆನ್ನಾಗಿ ಸಂಪಾದಿಸಬಹುದು.

Published by:ವಾಸುದೇವ್ ಎಂ
First published:

ಸುದ್ದಿ 18ಕನ್ನಡ ಟ್ರೆಂಡಿಂಗ್

ಮತ್ತಷ್ಟು ಓದು