Business Idea: ಈ ಬ್ಯುಸಿನೆಸ್​ ಶುರು ಮಾಡೋಕೆ ಇದು ರೈಟ್​ ಟೈಮ್​! ತಿಂಗಳಿಗೆ 70 ಸಾವಿರ ಲಾಭ, ಸರ್ಕಾರನೇ ಬಂಡವಾಳ ಕೊಡುತ್ತೆ

ಕಡಿಮೆ ಬಂಡವಾಳದಲ್ಲಿ ಈ ವ್ಯವಹಾರ ಮಾಡಬಹುದು. ಸ್ಥಳೀಯ ಮಾರುಕಟ್ಟೆಯಲ್ಲಿ ಮಾರಾಟ ಮಾಡುವ ಮೂಲಕ ನೀವು ಪ್ರತಿ ತಿಂಗಳು ಉತ್ತಮ ಆದಾಯವನ್ನು ಪಡೆಯಬಹುದು. 

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಯಾವುದೇ ಬ್ಯುಸಿನೆಸ್ (Business) ಶುರು ಮಾಡುವ ನೂರು ಬಾರಿ ಯೋಚನೆ ಮಾಡುವುದು ಕಾಮನ್. ಯಾಕೆಂದರೆ ಬಂಡವಾಳ ಮತ್ತೆ ವಾಪಸ್​ ಬರುತ್ತಾ ಅನ್ನುವ ಪ್ರಶ್ನೆ ಎಲ್ಲರನ್ನೂ ಕಾಡುತ್ತೆ. ಬ್ಯುಸಿನೆಸ್​ ಮಾಡಲು ಯಾವ ಸಮಯ (Time) ಉತ್ತಮ ಎಂದು ತಿಳಿದುಕೊಂಡು ಶುರು ಮಾಡಿದರೆ ಡಬಲ್​ ಪ್ರಾಫಿಟ್ (Double Profit) ಬರೋದು ಕೂಡ ಕನ್ಫರ್ಮ್. ನೀವು ಕೆಲಸ ಮಾಡುವ ಆಸಕ್ತಿಯನ್ನು ಕಳೆದುಕೊಂಡಿದ್ದೀರಾ? ನಿಮ್ಮ ಸ್ವಂತ ವ್ಯವಹಾರ (Own Business) ವನ್ನು ಪ್ರಾರಂಭಿಸಲು ಬಯಸುವಿರಾ? ನೀವು ಕಡಿಮೆ ಹೂಡಿಕೆಯೊಂದಿಗೆ ಮಾಡಬಹುದಾದ ವ್ಯವಹಾರಗಳನ್ನು ಹುಡುಕುತ್ತಿದ್ದೀರಾ? ಹಾಗಿದ್ರೆ ನಿಮಗಾಗಿ ಬೆಸ್ಟ್ ಬ್ಯುಸಿನೆಸ್ ಐಡಿಯಾ ಇಲ್ಲಿದೆ ನೋಡಿ.  ಕಡಿಮೆ ಬಂಡವಾಳದಲ್ಲಿ ಈ ವ್ಯವಹಾರ ಮಾಡಬಹುದು. ಸ್ಥಳೀಯ ಮಾರುಕಟ್ಟೆಯಲ್ಲಿ ಮಾರಾಟ ಮಾಡುವ ಮೂಲಕ ನೀವು ಪ್ರತಿ ತಿಂಗಳು ಉತ್ತಮ ಆದಾಯವನ್ನು ಪಡೆಯಬಹುದು. 

ಪೇಪರ್ ಕಪ್​ ಉದ್ಯಮಕ್ಕೆ ಬೇಕಿಲ್ಲ ಹೆಚ್ಚಿನ ಹಣ!

ಕೇಂದ್ರ ಸರ್ಕಾರ ಹಲವಾರು ಪ್ಲಾಸ್ಟಿಕ್ ಉತ್ಪನ್ನಗಳ ಮೇಲೆ ನಿಷೇಧ ಹೇರಿದೆ. ಜನರಲ್ಲಿಯೂ ಪ್ಲಾಸ್ಟಿಕ್ ಬಗ್ಗೆ ಜಾಗೃತಿ ಮೂಡಿದೆ. ಪರಿಸರದ ಬಗ್ಗೆ ಜನರಲ್ಲಿ ಜಾಗೃತಿ ಮೂಡಿರುವುದರಿಂದ ಪೇಪರ್ ಕಪ್ ಗಳಿಗೆ ದಿನದಿಂದ ದಿನಕ್ಕೆ ಬೇಡಿಕೆ ಹೆಚ್ಚುತ್ತಿದೆ. ಈ ಹಿನ್ನೆಲೆಯಲ್ಲಿ ಪೇಪರ್ ಕಪ್ ತಯಾರಿಸುವ ಘಟಕ ಆರಂಭಿಸಿದರೆ ಉತ್ತಮ ಲಾಭ ಬರುತ್ತದೆ.  ಪೇಪರ್ ಕಪ್ ತಯಾರಿಕಾ ಘಟಕ ಸ್ಥಾಪನೆಗೆ ಕೇಂದ್ರ ಸರ್ಕಾರ ಮುದ್ರಾ ಯೋಜನೆಯಡಿ ಸಾಲವನ್ನೂ ನೀಡುತ್ತಿದೆ. ಕಡಿಮೆ ಬಂಡವಾಳದಲ್ಲಿ ಪೇಪರ್ ಕಪ್ ತಯಾರಿಕಾ ಘಟಕವನ್ನು ಸ್ಥಾಪಿಸಬಹುದು. ನೀವು ಹೆಚ್ಚು ಹೂಡಿಕೆ ಮಾಡಲು ಬಯಸಿದರೆ.. ನೀವು ದೊಡ್ಡ ಘಟಕವನ್ನು ಪ್ರಾರಂಭಿಸಬಹುದು.

ಸರ್ಕಾರದಿಂದ ಸಿಗುತ್ತೆ ಸಾಲ!

ಕಾಗದದ ಕಪ್‌ಗಳನ್ನು ತಯಾರಿಸುವ ಕಚ್ಚಾ ಸಾಮಗ್ರಿಗಳು ಮತ್ತು ಯಂತ್ರೋಪಕರಣಗಳು ಮಾರುಕಟ್ಟೆಯಲ್ಲಿ ಸುಲಭವಾಗಿ ಲಭ್ಯವಿವೆ. ಪೇಪರ್ ಕಪ್‌ಗಳನ್ನು ತಯಾರಿಸಲು ಪೇಪರ್ ರೀಲ್, ಬಾಟಮ್ ರೀಲ್ ಮತ್ತು ಇತರ ಯಂತ್ರಗಳು ಬೇಕಾಗುತ್ತವೆ. ಮಾರುಕಟ್ಟೆಯಲ್ಲಿ ಹಲವು ಬಗೆಯ ಯಂತ್ರಗಳು ಲಭ್ಯವಿವೆ. ಆನ್‌ಲೈನ್‌ನಲ್ಲಿ ಸಂಪರ್ಕಿಸುವ ಮೂಲಕ ದೆಹಲಿ ಮತ್ತು ಜೈಪುರದಂತಹ ದೊಡ್ಡ ನಗರಗಳಿಂದ ಸುಲಭವಾಗಿ ಪೇಪರ್ ರೀಲ್ ಮತ್ತು ಬಾಟಮ್ ರೀಲ್ ಅನ್ನು ಖರೀದಿಸಬಹುದು. ಪೇಪರ್ ರೀಲ್ ಬೆಲೆ ಕೆಜಿಗೆ 90 ರೂ.ನಿಂದ ಪ್ರಾರಂಭವಾಗುತ್ತದೆ. ತಳದ ರೀಲಿನ ಬೆಲೆಯೂ ಕೆಜಿಗೆ 80 ರೂ.ವರೆಗೆ ಇದೆ. ಪೇಪರ್ ಕಪ್ ಫ್ರೇಮಿಂಗ್ ಮೆಷಿನ್ 5 ಲಕ್ಷ ರೂಪಾಯಿ ಬೇಕಾಗುತ್ತದೆ,

ಇದನ್ನೂ ಓದಿ: ಜನ ಏನೇ ಬಿಟ್ರೂ, ಹೊಸ ಬಟ್ಟೆ ತಗೋಳೋದು ಬಿಡಲ್ಲ! ಕಡಿಮೆ ದುಡ್ಡಲ್ಲಿ ಹೀಗೆ Boutique ಪ್ರಾರಂಭಿಸಿ

ಈ ಪೇಪರ್​ ಕಪ್​ ಉದ್ಯಮಕ್ಕೆ 8 ರಿಂದ 10 ಲಕ್ಷ ಬೇಕಾಗುತ್ತೆ. ಈ ಫ್ರೇಮಿಂಗ್​ ಮಿಷಿನ್​ನಿಂದ ಎಲ್ಲಾ ಗಾತ್ರದ ಕಪ್​ಗಳನ್ನು ತಯಾರಿಸಬಹುದು. ಪೇಪರ್ ಕಪ್ ತಯಾರಿಕಾ ಘಟಕ ಸ್ಥಾಪಿಸಲು ಕೇಂದ್ರ ಸರ್ಕಾರ ಸಾಲ ನೀಡಲಿದೆ. ಮುದ್ರಾ ಯೋಜನೆ ಯೋಜನೆಯಡಿ ನೀವು ಈ ಸಾಲವನ್ನು ಪಡೆಯಬಹುದು. ಯೋಜನೆಯ ಒಟ್ಟು ವೆಚ್ಚದ 25% ಅನ್ನು ನೀವು ನಿಮ್ಮದೇ ಆದ ಮೇಲೆ ಹೂಡಿಕೆ ಮಾಡಬೇಕು.

ಇದನ್ನೂ ಓದಿ: ಮನೆಯಲ್ಲೇ ಕೂತು ಸಿಂಪಲ್ಲಾಗಿ ದುಡ್ಡು ಮಾಡ್ಬಹುದು! ಇಂಟ್ರೆಸ್ಟ್​ ಇದ್ರೆ ಇಲ್ಲಿದೆ ನೋಡಿ ಸುವರ್ಣಾವಾಕಾಶ

ಮುದ್ರಾ ಯೋಜನೆಯಡಿ ಸರ್ಕಾರ ಶೇ.75ರಷ್ಟು ಸಾಲ ನೀಡುತ್ತದೆ. ಸಾಮಾನ್ಯವಾಗಿ ಪೇಪರ್ ಕಪ್ ತಯಾರಿಸುವ ಯಂತ್ರವು ಪ್ರತಿ ತಿಂಗಳು 15 ಲಕ್ಷ ಕಪ್‌ಗಳನ್ನು ಉತ್ಪಾದಿಸುತ್ತದೆ. ಒಂದು ಕಪ್ ಅನ್ನು 30 ಪೈಸೆಗೆ ಮಾರಿದರೂ, ಸುಮಾರು 4,70,000 ರೂಪಾಯಿ ಆದಾಯ ಗಳಿಸಬಹುದು. ಇದಕ್ಕೆ 4 ಲಕ್ಷ ಖರ್ಚು ಮಾಡಿದರೂ ಸುಮಾರು 70 ಸಾವಿರ ಉಳಿಯುತ್ತದೆ. ಉತ್ಪಾದನಾ ಸಾಮರ್ಥ್ಯ ಹೆಚ್ಚಾದರೆ. ಹೆಚ್ಚು ಆದಾಯ ಬರುತ್ತದೆ. ಒಳ್ಳೆಯ ಉದ್ದೇಶ ಇದ್ದರೆ ಯಾವ ಕೆಲಸ ಮಾಡಿದರೂ ಹೆಚ್ಚಿನ ಆದಾಯ ಸಿಗುತ್ತದೆ.
Published by:Vasudeva M
First published: