Business Idea: ಈ ಅಕ್ಕಿಗೆ ಮಾರ್ಕೆಟ್​ನಲ್ಲಿ ಡಿಮ್ಯಾಂಡಪ್ಪೋ ಡಿಮ್ಯಾಂಡ್​! ಒಂದು ಕೆಜಿಗೆ 500 ರೂಪಾಯಿ

ಕೈಲಾಗದು ಎಂದು ಕೈ ಕಟ್ಟಿ ಕುಳಿತರೇ ಸಾಗದು ಕೆಲಸವು ಮುಂದೆ ಎಂಬ ಸಾಲನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಂಡು ಕೃಷಿ (Agriculture) ಯತ್ತ ಮುಖಮಾಡಿದ್ದರು. ಇತ್ತೀಚಿನ ದಿನಗಳಲ್ಲಿ ಅನೇಕರು ತಮ್ಮ ಕೆಲಸ ಬಿಟ್ಟು ಕೃಷಿಯತ್ತ ಹೆಜ್ಜೆ ಹಾಕುತ್ತಿದ್ದಾರೆ. 

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಪ್ರತಿಯೊಬ್ಬರಿಗೂ ತಾನೂ ಒಂದು ಸ್ವಂತ ಬ್ಯುಸಿನೆಸ್ (Business)​ ಶುರು ಮಾಡಿ ಹಣ (Money) ಸಂಪಾದಿಸಬೇಕೆಂಬ ಆಸೆ ಇರುತ್ತದೆ. ಆದರೆ, ಯಾವ ಬ್ಯುಸಿನೆಸ್​ ಶುರು ಮಾಡಿದರೆ ಏನೆಲ್ಲಾ ಸಿಗುತ್ತೆ. ಹಾಗೇ ಏನೆಲ್ಲಾ ರಿಸ್ಕ್ (Risk)​ ಇರುತ್ತದೆ ಎಂದು ಗೊತ್ತಿರಲ್ಲ. ಕಡಿಮೆ ಹೂಡಿಕೆ (Invest) ಮಾಡಿ ಹೆಚ್ಚಿನ ಲಾಭ ಮಾಡಬೇಕು ಅಂತ ಇರುತ್ತಾರೆ. ಡಾ ರಾಜ್​ಕುಮಾರ್ (Dr Rajkumar)​ ಅಭಿನಯದ ಬಂಗಾರದ ಮನುಷ್ಯ ಸಿನಿಮಾ ನೋಡಿ, ಅದೆಷ್ಟೋ ಮಂದಿ ಸಿಟಿ ಬಿಟ್ಟು ಹಳ್ಳಿಗಳಿಗೆ ವಾಪಸ್​ ಆಗಿದ್ದರು. ಕೈಲಾಗದು ಎಂದು ಕೈ ಕಟ್ಟಿ ಕುಳಿತರೇ ಸಾಗದು ಕೆಲಸವು ಮುಂದೆ ಎಂಬ ಸಾಲನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಂಡು ಕೃಷಿ (Agriculture) ಯತ್ತ ಮುಖಮಾಡಿದ್ದರು. ಇತ್ತೀಚಿನ ದಿನಗಳಲ್ಲಿ ಅನೇಕರು ತಮ್ಮ ಕೆಲಸ ಬಿಟ್ಟು ಕೃಷಿಯತ್ತ ಹೆಜ್ಜೆ ಹಾಕುತ್ತಿದ್ದಾರೆ. 

ಕೃಷಿಯತ್ತ ಹೊರಟ ಯುವಕ-ಯುವತಿಯರು!

ಈ ಹಿಂದೆ ಅವಿದ್ಯಾವಂತರೇ ಕೃಷಿ ಮಾಡುತ್ತಾರೆ ಎಂಬ ಮಾತಿತ್ತು. ಹಿಂದಿನ ಕಾಲದಲ್ಲಿ ಹೊಟ್ಟೆ ತುಂಬಿಸಿಕೊಳ್ಳಲು ಜನರು ಬೆಳೆ ಬೆಳೆಯುತ್ತಿದ್ದರು. ತಮ್ಮ ಹೊಲದಲ್ಲಿ ಬೆಳೆದ ಬೆಳೆಗಳಿಂದಲೇ ಹಸಿವನ್ನು ನೀಗಿಸಿಕೊಳ್ಳುತ್ತಾರೆ. ಆದರೆ ಕಾಲ ಬದಲಾಗಿದೆ. ಈಗಿನಂತಿಲ್ಲ. ಐಟಿ ಉದ್ಯೋಗಿಯಿಂದ ಹಿಡಿದು ಐಎಎಸ್ ಅಧಿಕಾರಿಗಳವರೆಗೆ ಎಲ್ಲರೂ ಕೃಷಿಯಲ್ಲಿ ತೊಡಗಿಸಿಕೊಂಡಿದ್ದಾರೆ. ಅವರೂ ದೊಡ್ಡ ಕೆಲಸಗಳಿಗೆ ರಾಜೀನಾಮೆ ಕೊಟ್ಟು ಫಾರ್ಮ್ ಗೆ ಹೋಗುತ್ತಿದ್ದಾರೆ. ಸಾಂಪ್ರದಾಯಿಕ ಬೆಳೆಗಳನ್ನು ಹೊರತುಪಡಿಸಿ, ವಾಣಿಜ್ಯ ಬೆಳೆಗಳನ್ನು ಬೆಳೆದು, ಲಕ್ಷಗಟ್ಟಲೆ ಆದಾಯ ಗಳಿಸುತ್ತಿದ್ದಾರೆ.

ಕಪ್ಪು ಅಕ್ಕಿಗೆ ಡಿಮ್ಯಾಂಡಪ್ಪೋ ಡಿಮ್ಯಾಂಡು!

ಇತ್ತೀಚಿನ ದಿನಗಳಲ್ಲಿ ಕಪ್ಪು ಅಕ್ಕಿಗೆ ಬೇಡಿಕೆ ಹೆಚ್ಚುತ್ತಿದೆ.ಮಾರುಕಟ್ಟೆಯಲ್ಲಿ ಉತ್ತಮ ದರ ಸಿಗುತ್ತಿದೆ. ಈ ಬೆಳೆ ಬೆಳೆದರೆ ಭಾರೀ ಲಾಭ ಪಡೆಯುವ ಅವಕಾಶವಿದೆ. ನಾವು ತಿನ್ನುವ ಸಾಮಾನ್ಯ ಅಕ್ಕಿಗೆ ಹೋಲಿಸಿದರೆ ಕಪ್ಪು ಅಕ್ಕಿಯಲ್ಲಿ ಹೆಚ್ಚಿನ ಪೋಷಕಾಂಶಗಳಿವೆ. ಇದರಲ್ಲಿ ಹೆಚ್ಚು ಔಷಧೀಯ ಗುಣಗಳೂ ಇವೆ. ಅದಕ್ಕಾಗಿಯೇ ಇದು ಮಧುಮೇಹ ಮತ್ತು ಬಿಪಿ ಕಾಯಿಲೆಗಳ ಮೇಲೆ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುತ್ತದೆ. ಈ ಅಕ್ಕಿಯನ್ನು ತಿನ್ನುವುದರಿಂದ ಶುಗರ್, ಬಿಪಿ ಮುಂತಾದ ರೋಗಗಳು ನಿಯಂತ್ರಣಕ್ಕೆ ಬರುತ್ತವೆ. ಅಷ್ಟೇ ಏಕೆ ಬೆಲೆ ಕೊಂಚ ಹೆಚ್ಚಾದರೂ ಕಪ್ಪು ಅಕ್ಕಿಯನ್ನು ತಿನ್ನಲು ಹಲವರು ಇಷ್ಟಪಡುತ್ತಾರೆ.

ಇದನ್ನೂ ಓದಿ: ಅಬ್ಬಬ್ಬಾ ಲಾಟರಿ! 6 ತಿಂಗಳಲ್ಲಿ ಮ್ಯಾಜಿಕ್​, ಒಂದು ಲಕ್ಷಕ್ಕೆ 6 ಲಕ್ಷ ಲಾಭ ಗುರೂ

ಚೀನಾದಲ್ಲಿ ಮೊದಲ ಕಪ್ಪು ಅಕ್ಕಿಯ ಬೆಳೆ!

ಆರಂಭದಲ್ಲಿ, ಈ ರೀತಿಯ ಅಕ್ಕಿಯನ್ನು ಚೀನಾದಲ್ಲಿ ಬೆಳೆಸಲಾಯಿತು. ಆರೋಗ್ಯ ಪ್ರಯೋಜನಗಳು ಹೆಚ್ಚಿರುವುದರಿಂದ, ಇದು ಇತರ ಪ್ರದೇಶಗಳಿಗೆ ಹರಡಿತು. ನಮ್ಮ ದೇಶದಲ್ಲಿ ಕಪ್ಪು ಅಕ್ಕಿಯ ಕೃಷಿಯು ಹೆಚ್ಚಾಗಿ ಸಿಕ್ಕಿಂ, ಮಣಿಪುರ ಮತ್ತು ಅಸ್ಸಾಂನಂತಹ ಈಶಾನ್ಯ ರಾಜ್ಯಗಳಲ್ಲಿ ಕಂಡುಬರುತ್ತದೆ. ಆದರೆ ಈಗ ಬೇರೆ ರಾಜ್ಯಗಳಲ್ಲೂ ಬೆಳೆಯಲಾಗುತ್ತಿದೆ. ಮಧ್ಯಪ್ರದೇಶ ಮತ್ತು ಮಹಾರಾಷ್ಟ್ರದ ಕೆಲವು ರೈತರು ಕಪ್ಪು ಅಕ್ಕಿಯನ್ನೂ ಬೆಳೆಯುತ್ತಿದ್ದಾರೆ.

ಕೊಯ್ಲು ಅವಧಿ ಸುಮಾರು 4 ತಿಂಗಳು!

ಕಪ್ಪು ಅಕ್ಕಿ ಕೊಯ್ಲು ಅವಧಿ ಸುಮಾರು 4 ತಿಂಗಳುಗಳು. ಭತ್ತದ ಕೊಯ್ಲು ಸಮಯದಿಂದ ಸುಮಾರು 100-120 ದಿನಗಳು ಬೇಕಾಗುತ್ತದೆ. ಕಪ್ಪು ಭತ್ತದ ಗಿಡಗಳು ಸಾಮಾನ್ಯ ಭತ್ತದ ಗಿಡಗಳಿಗಿಂತ ಸ್ವಲ್ಪ ಎತ್ತರವಾಗಿರುತ್ತವೆ. ಭತ್ತದ ಸಿಪ್ಪೆಯೂ ದೊಡ್ಡದಾಗಿದೆ. ಕಪ್ಪು ಅಕ್ಕಿ ಸಾಂಪ್ರದಾಯಿಕ ಅಕ್ಕಿಗಿಂತ 5 ಪಟ್ಟು ಹೆಚ್ಚು ಆದಾಯ ಗಳಿಸಬಹುದು. ಮಾರುಕಟ್ಟೆಯಲ್ಲಿ ಸಾಮಾನ್ಯ ಅಕ್ಕಿಯ ಬೆಲೆ ಕೆಜಿಗೆ 50-100 ಇದೆ. ಅದೇ ಕಪ್ಪು ಅಕ್ಕಿಯ ದರ 250-500 ರೂ. ದರವು ಗುಣಮಟ್ಟವನ್ನು ಅವಲಂಬಿಸಿರುತ್ತದೆ.

ಇದನ್ನೂ ಓದಿ: ಇದು ಅಂಚೆ ಕಚೇರಿಯ ಬೆಸ್ಟ್​ ಸ್ಕೀಮ್​! ಪ್ರತಿ ದಿನ 50 ರೂಪಾಯಿ ಕಟ್ಟಿ, ಕೊನೆಯಲ್ಲಿ 35 ಲಕ್ಷ ಪಡೆಯಿರಿ

ಸಾವಯವ ಪದ್ಧತಿಯಲ್ಲಿ ಕರಿ ಭತ್ತದ ಬೆಳೆ ಬೆಳೆದರೆ ದರ ಹೆಚ್ಚು. SMAM ಯೋಜನೆ ಅಡಿಯಲ್ಲಿ, ಕೇಂದ್ರ ಸರ್ಕಾರದಿಂದ ಪ್ರಯೋಜನಗಳು ಸಹ ಲಭ್ಯವಿದೆ. ಈ ಯೋಜನೆಯಡಿ ಕೃಷಿ ಉಪಕರಣಗಳು ಮತ್ತು ಯಂತ್ರೋಪಕರಣಗಳನ್ನು ಶೇ.50ರಿಂದ 80ರಷ್ಟು ಸಹಾಯಧನದಲ್ಲಿ ಪಡೆಯಬಹುದು. ಕಪ್ಪು ಅಕ್ಕಿ ಕಾಳು ಬೆಳೆದರೆ.. ನೀವೇ ಸಂಸ್ಕರಿಸಿ.. ಮಾರುಕಟ್ಟೆಯಲ್ಲಿ ಮಾರಾಟ ಮಾಡಿದರೆ.. ಲಕ್ಷಗಟ್ಟಲೆ ಆದಾಯ ಬರುತ್ತದೆ.
Published by:Vasudeva M
First published: