• Home
  • »
  • News
  • »
  • business
  • »
  • Business Idea: ನಿಂಬೆ ಕೃಷಿಯಿಂದ ಸಿಗುತ್ತೆ ಬಂಪರ್​ ಲಾಭ, ಒಮ್ಮೆ ನೆಟ್ರೆ 10 ವರ್ಷ ಇಳುವರಿ!

Business Idea: ನಿಂಬೆ ಕೃಷಿಯಿಂದ ಸಿಗುತ್ತೆ ಬಂಪರ್​ ಲಾಭ, ಒಮ್ಮೆ ನೆಟ್ರೆ 10 ವರ್ಷ ಇಳುವರಿ!

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಕೈಲಾಗದು ಎಂದು ಕೈ ಕಟ್ಟಿ ಕುಳಿತರೆ ಸಾಗದು ಕೆಲಸವು ಮುಂದೆ ಎಂಬ ಸಾಲನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಂಡು ಕೃಷಿ (Agriculture) ಯತ್ತ ಮುಖಮಾಡಿದ್ದರು. ನೀವು ಕೂಡ ಈ ಕೃಷಿ ಬೆಳೆದು ಕೈ ತುಂಬಾ ಆದಾಯಗಳಿಸಬಹುದು. ಯಾವುದಪ್ಪಾ ಆ ಕೃಷಿ ಅಂತೀರಾ? ಮುಂದೆ ನೋಡಿ.

  • Share this:

ಪ್ರತಿಯೊಬ್ಬರಿಗೂ ತಾನೂ ಒಂದು ಸ್ವಂತ ಬ್ಯುಸಿನೆಸ್ (Business)​ ಶುರು ಮಾಡಿ ಹಣ (Money) ಸಂಪಾದಿಸಬೇಕೆಂಬ ಆಸೆ ಇರುತ್ತದೆ. ಆದರೆ, ಯಾವ ಬ್ಯುಸಿನೆಸ್​ ಶುರು ಮಾಡಿದರೆ ಏನೆಲ್ಲಾ ಸಿಗುತ್ತೆ. ಹಾಗೇ ಏನೆಲ್ಲಾ ರಿಸ್ಕ್ (Risk)​ ಇರುತ್ತದೆ ಎಂದು ಗೊತ್ತಿರಲ್ಲ. ಕಡಿಮೆ ಹೂಡಿಕೆ (Invest) ಮಾಡಿ ಹೆಚ್ಚಿನ ಲಾಭ ಮಾಡಬೇಕು ಅಂತ ಇರುತ್ತಾರೆ. ಡಾ ರಾಜ್​ಕುಮಾರ್ (Dr Rajkumar)​ ಅಭಿನಯದ ಬಂಗಾರದ ಮನುಷ್ಯ ಸಿನಿಮಾ ನೋಡಿ, ಅದೆಷ್ಟೋ ಮಂದಿ ಸಿಟಿ ಬಿಟ್ಟು ಹಳ್ಳಿಗಳಿಗೆ ವಾಪಸ್​ ಆಗಿದ್ದರು. ಕೈಲಾಗದು ಎಂದು ಕೈ ಕಟ್ಟಿ ಕುಳಿತರೆ ಸಾಗದು ಕೆಲಸವು ಮುಂದೆ ಎಂಬ ಸಾಲನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಂಡು ಕೃಷಿ (Agriculture) ಯತ್ತ ಮುಖಮಾಡಿದ್ದರು. ನೀವು ಕೂಡ ಈ ಕೃಷಿ ಬೆಳೆದು ಕೈ ತುಂಬಾ ಆದಾಯಗಳಿಸಬಹುದು. ಯಾವುದಪ್ಪಾ ಆ ಕೃಷಿ ಅಂತೀರಾ? ಮುಂದೆ ನೋಡಿ.


ನಿಂಬೆಹಣ್ಣು ಬೆಳೆಯಿಂದ ಲಕ್ಷ ಲಕ್ಷ ಗಳಿಸಿ!


ಪೆಟ್ರೋಲ್, ಡೀಸೆಲ್, ಅಡುಗೆ ಅನಿಲ ಸೇರಿದಂತೆ ಹಲವು ದಿನಬಳಕೆ ವಸ್ತುಗಳ ಬೆಲೆಯಲ್ಲಿ ಏರಿಕೆಯಾಗಿದೆ. ಏತನ್ಮಧ್ಯೆ, ನಿಂಬೆ ಹಣ್ಣಿನ ಬೆಲೆ ಗಗನಕ್ಕೇರಿದ್ದು, ನಿಂಬೆಹಣ್ಣುಗಳನ್ನು ಜನರಿಗೆ ತಲುಪದಂತೆ ಮಾಡಿದೆ. ನಿಂಬೆಹಣ್ಣಿನಿಂದ ಆರೋಗ್ಯಕ್ಕೂ ಸಿಕ್ಕಾಪಟ್ಟೆ ಉತ್ತಮ. ಒಂದು ತಿಂಗಳಲ್ಲಿ 70ರಿಂದ 400 ರೂ.ಗೆ ನಿಂಬೆ ಹಣ್ಣಾಗಿದೆ. ತರಕಾರಿ ಮಾರಾಟಗಾರರು 1 ನಿಂಬೆ ಹಣ್ಣನ್ನು 10 ರೂಪಾಯಿಗೆ ಮಾಡುತ್ತಿದ್ದಾರೆ. ತಜ್ಞರ ಪ್ರಕಾರ ಮುಂದಿನ ದಿನಗಳಲ್ಲಿ ಇದರ ಬೆಲೆ ಕಡಿಮೆಯಾಗುವ ಸಾಧ್ಯತೆ ಇಲ್ಲ.


ವರ್ಷವಿಡೀ ನಿಂಬೆಹಣ್ಣಿಗಿದೆ ಡಿಮ್ಯಾಂಡ್​!


ಇದು ಅನೇಕ ಔಷಧೀಯ ಗುಣಗಳನ್ನು ಒಳಗೊಂಡಿದೆ. ಇದು ಮಾರುಕಟ್ಟೆಯಲ್ಲಿ ಅದರ ಬೇಡಿಕೆ ವರ್ಷವಿಡೀ ಉಳಿಯಲು ಕಾರಣವಾಗಿದೆ. ಭಾರತವು ವಿಶ್ವದಲ್ಲೇ ಅತಿ ಹೆಚ್ಚು ನಿಂಬೆ ಉತ್ಪಾದಿಸುವ ದೇಶವಾಗಿದೆ. ಇದು ಅನೇಕ ಔಷಧೀಯ ಗುಣಗಳನ್ನು ಒಳಗೊಂಡಿದೆ. ಇದು ಮಾರುಕಟ್ಟೆಯಲ್ಲಿ ಅದರ ಬೇಡಿಕೆ ವರ್ಷವಿಡೀ ಉಳಿಯಲು ಕಾರಣವಾಗಿದೆ. ಭಾರತವು ವಿಶ್ವದಲ್ಲೇ ಅತಿ ಹೆಚ್ಚು ನಿಂಬೆ ಉತ್ಪಾದಿಸುವ ದೇಶವಾಗಿದೆ.


ಇದನ್ನೂ ಓದಿ: ಉದ್ಯೋಗದ ಜೊತೆಗೆ ಸುಲಭವಾಗಿ ಮಾಡಬಹುದಾದ ವ್ಯಾಪಾರಗಳಿವು, ಡಬಲ್​ ಆದಾಯ!


ಒಮ್ಮೆ ನೆಟ್ಟರೆ 10 ವರ್ಷಗಳವರೆಗೆ ಇಳುವರಿ!


ವಿವಿಧ ರಾಜ್ಯಗಳಲ್ಲಿ ರೈತರು ವಿವಿಧ ತಳಿಯ ನಿಂಬೆಯನ್ನು ಬೆಳೆಯುತ್ತಾರೆ. ನಿಂಬೆ ಗಿಡವನ್ನು ಒಮ್ಮೆ ನೆಟ್ಟರೆ 10 ವರ್ಷಗಳವರೆಗೆ ಇಳುವರಿ ಪಡೆಯಬಹುದು . ನಿಂಬೆ ಗಿಡವು ಸುಮಾರು 3 ವರ್ಷಗಳ ನಂತರ ಚೆನ್ನಾಗಿ ಬೆಳೆಯುತ್ತದೆ. ಇದರ ಸಸ್ಯಗಳು ವರ್ಷವಿಡೀ ಇಳುವರಿಯನ್ನು ನೀಡುತ್ತವೆ. ಒಂದು ಎಕರೆಯಲ್ಲಿ ನಿಂಬೆ ಬೆಳೆಯಲ್ಲಿ ವಾರ್ಷಿಕವಾಗಿ ಸುಮಾರು 4 ರಿಂದ 5 ಲಕ್ಷ ರೂಪಾಯಿ ಆದಾಯ ಪಡೆಯಬಹುದು.  ದೇಶದ ಹಲವಾರು ರೈತರು ನಿಂಬೆ ಬೆಳೆಯಿಂದ ಸಾಕಷ್ಟು ಲಾಭವನ್ನು ಗಳಿಸುತ್ತಿದ್ದಾರೆ.


ಇದನ್ನೂ ಓದಿ: ರೈತರ ಕಣ್ಣೀರು ಒರೆಸುವ ಬೆಳ್ಳುಳ್ಳಿ ಬೆಳೆ, 10 ಲಕ್ಷ ಆದಾಯ ಫಿಕ್ಸ್​!


ನಿಂಬೆಯನ್ನು ಹೆಚ್ಚು ಲಾಭದಾಯಕ ಕೃಷಿಯಾಗಿ ಬೆಳೆಸಲಾಗುತ್ತದೆ. ಇದರ ಸಸ್ಯಗಳು, ಒಮ್ಮೆ ಸಂಪೂರ್ಣವಾಗಿ ಬೆಳೆದು, ಹಲವು ವರ್ಷಗಳವರೆಗೆ  ಇಳುವರಿಯನ್ನು ನೀಡುತ್ತವೆ. ನೆಟ್ಟ ನಂತರ ಮಾತ್ರ ಅವರಿಗೆ ಆರೈಕೆಯ ಅಗತ್ಯವಿರುತ್ತದೆ. ಪ್ರತಿ ವರ್ಷ ಇದರ ಇಳುವರಿಯೂ ಹೆಚ್ಚುತ್ತದೆ. ಒಂದು ಮರದಲ್ಲಿ 20 ರಿಂದ 30 ಕಿಲೋಗಳಷ್ಟು ನಿಂಬೆಹಣ್ಣುಗಳನ್ನು ಕಾಣಬಹುದು. ಆದರೆ ದಪ್ಪ ಸಿಪ್ಪೆಯೊಂದಿಗೆ ನಿಂಬೆಹಣ್ಣುಗಳು 30 ರಿಂದ 40 ಕಿಲೋಗಳವರೆಗೆ ಇಳುವರಿಯನ್ನು ಪಡೆಯಬಹುದು. ಮಾರುಕಟ್ಟೆಯಲ್ಲಿ ನಿಂಬೆ ಹಣ್ಣಿಗೆ ವರ್ಷವಿಡೀ ಬೇಡಿಕೆ ಇರುತ್ತದೆ.


ವಾರ್ಷಿಕವಾಗಿ ಸುಮಾರು 4 ರಿಂದ 5 ಲಕ್ಷ ರೂಪಾಯಿಗಳನ್ನು ಸುಲಭವಾಗಿ ಗಳಿಸಬಹುದು.  ಕಡಿಮೆ ಹೂಡಿಕೆ ಮಾಡಿ ಹೆಚ್ಚಿನ ಲಾಭಗಳಿಸಬಹುದು ಅಂತ ಅಂದುಕೊಳ್ಳವವರಿಗೆ ನಿಂಬೆ ಹಣ್ಣು ಬೆಳೆ ಬೆಳೆಯಬಹುದು.

Published by:ವಾಸುದೇವ್ ಎಂ
First published: