Business Idea: ಒಮ್ಮೆ ಇನ್ವೆಸ್ಟ್​ ಮಾಡಿ ಕಾರ್​​ ಖರೀದಿಸಿ! ಇಲ್ಲಿ ಬಾಡಿಗೆಗೆ ಬಿಟ್ಟು ತಿಂಗಳಿಗೆ 50 ಸಾವಿರ ಗಳಿಸಿ

ನೀವು ಮನೆಯಲ್ಲಿಯೇ ವ್ಯವಹಾರವನ್ನು ಪ್ರಾರಂಭಿಸಲು ಬಯಸಿದರೆ, ಇಂದು ನಾವು ನಿಮಗೆ ಒಳ್ಳೆಯ ಉಪಾಯವನ್ನು ನೀಡಲಿದ್ದೇವೆ. ಇದರಲ್ಲಿ ನೀವು ಕಡಿಮೆ ಖರ್ಚುಗಳೊಂದಿಗೆ ಮನೆಯಲ್ಲಿ ಕುಳಿತು ಪ್ರತಿ ತಿಂಗಳು ಉತ್ತಮ ಹಣವನ್ನು ಗಳಿಸಬಹುದು.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ದುಡ್ಡು (Money), ಹಣ, ಕಾಸು, ಪೈಸಾ, ಇದನ್ನು ಕಂಡರೆ ಯಾರಿಗೆ ಇಷ್ಟ ಇಲ್ಲ ಹೇಳಿ. ಹಣ ಎಂದರೆ ಹೆಣ ಕೂಡ ಎದ್ದು ಕೂರುತ್ತೆ ಅಂತಾರೆ. ದುಡ್ಡು ಮಾಡುವುದಕ್ಕೆ ಸಾವಿರಾರು ದಾರಿಗಳಿವೆ. ಆದರೆ ಯಾವತ್ತೂ ಒಳ್ಳೆಯ ದಾರಿಯಲ್ಲಿ ಮಾಡಿದ ಹಣವೇ ಕೊನೆವರೆಗೂ ಇರುತ್ತೆ. ಹೀಗೆ ಕೊರೋನಾ (Corona) ಬಂದು ಹೋದಮೇಲೆ ಅದೆಷ್ಟೋ ಮಂದಿ ಹಣ ಇಲ್ಲದೆ ಪರದಾಡುತ್ತಿದ್ದಾರೆ. ಇನ್ನೂ ಕೆಲವರು ಯಾವುದಾದರೂ ಬ್ಯುಸಿನೆಸ್​ ಶುರುಮಾಡಬೇಕು ಎಂಬ ಆಸೆ ಇರುತ್ತೆ. ಆದರೆ ಐಡಿಯಾ ಇರುವುದಿಲ್ಲ. ಇಂಥವರಿಗಾಗಿಯೇ ನ್ಯೂಸ್​ 18 ಕನ್ನಡ ಪ್ರತಿ ದಿನ ಬೆಸ್ಟ್​ ಬ್ಯುಸಿನೆಸ್​ ಐಡಿಯಾಗಳನ್ನು ನಿಮ್ಮ ಮುಂದೆ ತೆರೆದಿಡುತ್ತಿದೆ. ಈ ವ್ಯಾಪರಾಗಳನ್ನು ನೀವು ಆರಂಭಿಸಿ ಹೆಚ್ಚಿನ ಆದಾಯವನ್ನು ಗಳಿಸಬಹುದು.

ಮನೆಯಲ್ಲಿದ್ದುಕೊಂಡೇ ಈ ಬ್ಯುಸಿನೆಸ್ ಆರಂಭಿಸಿ!

ನೀವು ಮನೆಯಲ್ಲಿಯೇ ವ್ಯವಹಾರವನ್ನು ಪ್ರಾರಂಭಿಸಲು ಬಯಸಿದರೆ, ಇಂದು ನಾವು ನಿಮಗೆ ಒಳ್ಳೆಯ ಉಪಾಯವನ್ನು ನೀಡಲಿದ್ದೇವೆ. ಇದರಲ್ಲಿ ನೀವು ಕಡಿಮೆ ಖರ್ಚುಗಳೊಂದಿಗೆ ಮನೆಯಲ್ಲಿ ಕುಳಿತು ಪ್ರತಿ ತಿಂಗಳು ಉತ್ತಮ ಹಣವನ್ನು ಗಳಿಸಬಹುದು. ನೀವು ಟ್ರಾವೆಲ್ ಸೆಕ್ಟರ್‌ನಲ್ಲಿ ಯಾವುದೇ ವ್ಯವಹಾರವನ್ನು ಮಾಡಲು ಬಯಸಿದರೆ ಈ ಅವಕಾಶವು ನಿಮಗೆ  ಸುಲಭವಾಗುತ್ತದೆ. ಸೆಕೆಂಡ್ ಹ್ಯಾಂಡ್ ಕಾರನ್ನು ಖರೀದಿಸಿ ಮತ್ತು ಬಾಡಿಗೆಗೆ ನೀಡುವ ಮೂಲಕ ನೀವು ಉತ್ತಮ ಆದಾಯ ಗಳಿಸಬಹುದು.

ಕಾರನ್ನು ಬಾಡಿಗೆ ಬಿಟ್ಟು ಆದಾಯಗಳಿಸಿ!

ನೀವು ಓಲಾದೊಂದಿಗೆ ಈ ಸಣ್ಣ ವ್ಯಾಪಾರವನ್ನು ಪ್ರಾರಂಭಿಸಬಹುದು. ಈ ವ್ಯವಹಾರದ ಮೂಲಕ ನೀವು ಸುಲಭವಾಗಿ 50,0000 ರೂಪಾಯಿಗಳವರೆಗೆ ಗಳಿಸಬಹುದು. ಓಲಾ ತನ್ನ ಪ್ಲಾಟ್‌ಫಾರ್ಮ್‌ನಲ್ಲಿ ಫ್ಲೀಟ್ ಅಟ್ಯಾಚ್ ಅನ್ನು ನೀಡುತ್ತಿದೆ ಅಂದರೆ 2-3 ಅಥವಾ ಹೆಚ್ಚಿನ ಕಾರುಗಳನ್ನು ಒಟ್ಟಿಗೆ ಸಂಪರ್ಕಿಸುತ್ತದೆ. ವ್ಯಾಪಾರದಲ್ಲಿ ನೀವು ಹೊಂದಿರುವ ಎಲ್ಲಾ ಕಾರುಗಳನ್ನು ಸಂಯೋಜಿಸುವ ಮೂಲಕ ನೀವು ಈ ಅವಕಾಶದಲ್ಲಿ ಗಳಿಸಬಹುದು. ನಿಮ್ಮ ಇಚ್ಛೆಯಂತೆ ನೀವು ಕಾರುಗಳ ಸಂಖ್ಯೆಯನ್ನು ಹೆಚ್ಚಿಸಬಹುದು. ಯಾವುದೇ ಮಿತಿಯಿಲ್ಲ. ನೀವು ಹೆಚ್ಚು ಕಾರುಗಳನ್ನು ಬಾಡಿಗೆ ಕೊಟ್ಟರೆ, ನೀವು ಹೆಚ್ಚು ಗಳಿಸುತ್ತೀರಿ.

ಇದನ್ನೂ ಓದಿ: ಮೇಕೆ ಸಾಕಿದ್ರೆ ಬರೀ ಮಾಂಸದಿಂದಷ್ಟೇ ಅಲ್ಲ ದುಡ್ಡು! ಹಾಲಿಗೂ ಸಿಕ್ಕಾಪಟ್ಟೆ ಡಿಮ್ಯಾಂಡ್​

ಓಲಾಗೆ ನಿಮ್ಮ ಕಾರನ್ನು ಬಾಡಿಗೆ ಬಿಡಿ!

ಈ ರೀತಿಯ ಸಣ್ಣ ಉದ್ಯಮಗಳನ್ನು ಪ್ರಾರಂಭಿಸುವ ಜನರಿಗೆ ಓಲಾ ಬಹಳ ಸುಲಭವಾದ ಪ್ರಕ್ರಿಯೆಯನ್ನು ಒದಗಿಸುತ್ತಿದೆ. ಈಗ ನೀವು ಒಂದೇ ಅಪ್ಲಿಕೇಶನ್ ಮೂಲಕ ನಿಮ್ಮ ಪ್ರತಿಯೊಂದು ಟ್ಯಾಕ್ಸಿಗಳ ಗಳಿಕೆ ಮತ್ತು ಕಾರ್ಯಕ್ಷಮತೆಯ ಬಗ್ಗೆ ಮಾಹಿತಿಯನ್ನು ಪಡೆಯಬಹುದು. ಓಲಾ ತನ್ನ ವೆಬ್‌ಸೈಟ್‌ನಲ್ಲಿ ಈ ಮಾಹಿತಿಯನ್ನು ನೀಡಿದೆ. ಓಲಾ ತನ್ನ ವೆಬ್‌ಸೈಟ್‌ನಲ್ಲಿ ಈ ಬಗ್ಗೆ ಸಂಪೂರ್ಣ ಮಾಹಿತಿಯನ್ನು ನೀಡಿದೆ. ಹೆಚ್ಚಿನ ಮಾಹಿತಿಗಾಗಿ ನೀವು https://partners.olacabs.com/attach ಗೆ ಭೇಟಿ ನೀಡಬಹುದು.

ಬೇಕಿರುವ ದಾಖಲೆಗಳೇನು?

ಇದಕ್ಕಾಗಿ ನೀವು ಪ್ಯಾನ್ ಕಾರ್ಡ್, ರದ್ದಾದ ಚೆಕ್, ಆಧಾರ್ ಕಾರ್ಡ್, ಮನೆ ವಿಳಾಸ ಪುರಾವೆಗಳನ್ನು ಒದಗಿಸಬೇಕು. ಇದಲ್ಲದೇ ವಾಹನದ ಆರ್ ಸಿ ಪುಸ್ತಕ, ವಾಹನದ ಪರವಾನಿಗೆ, ವಿಮೆ ಮೊದಲಾದ ದಾಖಲೆಗಳು ಬೇಕಾಗುತ್ತವೆ. ಇದಲ್ಲದೇ ಡ್ರೈವಿಂಗ್ ಲೈಸೆನ್ಸ್, ಆಧಾರ್ ಕಾರ್ಡ್ ಮತ್ತು ಮನೆ ವಿಳಾಸದಂತಹ ಚಾಲಕರ ದಾಖಲೆಗಳು ಬೇಕಾಗುತ್ತವೆ.

ಇದನ್ನೂ ಓದಿ: ಈ ಬೆಳೆಗೆ ಜಸ್ಟ್​ 2 ಲಕ್ಷ ಖರ್ಚು! 1 ಕೋಟಿವರೆಗೂ ಲಾಭ ಸಿಗುತ್ತೆ, ಇನ್ಯಾಕೆ ತಡ ಶುರು ಮಾಡಿ

Ola ಈಗ ಸ್ವಲ್ಪ ಸಮಯದಿಂದ ತನ್ನ ಚಾಲಕರ ಪಾಲುದಾರಿಕೆ ಕಾರ್ಯಕ್ರಮವನ್ನು ನಡೆಸುತ್ತಿದೆ. ಓಲಾಗೆ ಕಾರನ್ನು ಕನೆಕ್ಟ್ ಮಾಡಿದ್ದರೆ ಎಲ್ಲ ಖರ್ಚು ಕಳೆದರೆ ತಿಂಗಳಿಗೆ 40ರಿಂದ 50 ಸಾವಿರ ಆದಾಯ ಬರುವ ಸಾಧ್ಯತೆ ಇದೆ. ಓಲಾಗೆ ಸಂಪರ್ಕಗೊಂಡಿರುವ ಕಾರುಗಳ ಸಂಖ್ಯೆಯನ್ನು ಅವಲಂಬಿಸಿ ಒಟ್ಟು ಮೊತ್ತವನ್ನು ನಿಮ್ಮ ಬ್ಯಾಂಕ್ ಖಾತೆಗೆ ಜಮಾ ಮಾಡಲಾಗುತ್ತದೆ. ಅದರಲ್ಲಿ ನೀವು ಚಾಲಕನ ಸಂಬಳವನ್ನು ಪಾವತಿಸಬೇಕು.

ಮೊದಲಿಗೆ ಓಲಾ ಕಚೇರಿಗೆ ಭೇಟಿ ನೀಡಬೇಕು. ಅಲ್ಲಿ ಎಲ್ಲಾ ದಾಖಲೆಗಳನ್ನು ಸಲ್ಲಿಸಿದ ನಂತರ ವಾಣಿಜ್ಯ ದಾಖಲೆಗಳಿಗಾಗಿ ನಿಮ್ಮನ್ನು ಕೇಳಲಾಗುತ್ತದೆ. ದಾಖಲೆಗಳನ್ನು ಪರಿಶೀಲಿಸಿದ ನಂತರ ನಿಮ್ಮ ನೋಂದಣಿ ಪ್ರಾರಂಭವಾಗುತ್ತದೆ. ಈ ಪ್ರಕ್ರಿಯೆಯು 8-10 ದಿನಗಳನ್ನು ತೆಗೆದುಕೊಳ್ಳುತ್ತದೆ. ಅದರ ನಂತರ ನಿಮ್ಮ ಕಾರುಗಳು ಓಲಾದೊಂದಿಗೆ ಓಡಲು ಪ್ರಾರಂಭಿಸುತ್ತವೆ.
Published by:Vasudeva M
First published: