Business Idea: ಈ ಹಣ್ಣನ್ನು ಬೆಳೆದರೆ ನಿಮ್ಮ ಹಣೆ ಬರಹವೇ ಬದಲಾಗುತ್ತೆ! ಸದ್ಯಕ್ಕೆ ಸಿಕ್ಕಾಪಟ್ಟೆ ಡಿಮ್ಯಾಂಡ್​ ಇರೋ ಫ್ರೂಟ್​

ಹಣ್ಣುಗಳನ್ನು ತಿನ್ನುವುದರಿಂದ ಆರೋಗ್ಯಕ್ಕೆ ಉತ್ತಮ ಎಂಬುದನ್ನು ಎಲ್ಲರೂ ಕೇಳಿದ್ದೇವೆ. ಆದರೆ, ಒಂದು ಹಣ್ಣನ್ನು ಬೆಳೆಯುವಾಗ ರೈತ ಎಷ್ಟು ಶ್ರಮ ಪಡುತ್ತಾನೆ ಎಂದು ಯಾರಿಗೂ ಗೊತ್ತಾಗಲ್ಲ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಪ್ರತಿಯೊಬ್ಬರಿಗೂ ತಾನೂ ಒಂದು ಸ್ವಂತ ಬ್ಯುಸಿನೆಸ್ (Business)​ ಶುರು ಮಾಡಿ ಹಣ (Money) ಸಂಪಾದಿಸಬೇಕೆಂಬ ಆಸೆ ಇರುತ್ತದೆ. ಆದರೆ, ಯಾವ ಬ್ಯುಸಿನೆಸ್​ ಶುರು ಮಾಡಿದರೆ ಏನೆಲ್ಲಾ ಸಿಗುತ್ತೆ. ಹಾಗೇ ಏನೆಲ್ಲಾ ರಿಸ್ಕ್ (Risk)​ ಇರುತ್ತದೆ ಎಂದು ಗೊತ್ತಿರಲ್ಲ. ಕಡಿಮೆ ಹೂಡಿಕೆ (Invest) ಮಾಡಿ ಹೆಚ್ಚಿನ ಲಾಭ ಮಾಡಬೇಕು ಅಂತ ಇರುತ್ತಾರೆ. ಡಾ ರಾಜ್​ಕುಮಾರ್ (Dr Rajkumar)​ ಅಭಿನಯದ ಬಂಗಾರದ ಮನುಷ್ಯ ಸಿನಿಮಾ ನೋಡಿ, ಅದೆಷ್ಟೋ ಮಂದಿ ಸಿಟಿ ಬಿಟ್ಟು ಹಳ್ಳಿಗಳಿಗೆ ವಾಪಸ್​ ಆಗಿದ್ದರು. ಕೈಲಾಗದು ಎಂದು ಕೈ ಕಟ್ಟಿ ಕುಳಿತರೆ ಸಾಗದು ಕೆಲಸವು ಮುಂದೆ ಎಂಬ ಸಾಲನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಂಡು ಕೃಷಿ (Agriculture) ಯತ್ತ ಮುಖಮಾಡಿದ್ದರು. ನೀವು ಕೂಡ ಈ ಬೆಳೆ ಬೆಳೆದು ಸಾಕಷ್ಟು ಲಾಭ ಗಳಿಸಬಹುದು.

ಅನಾನಸ್​ ಹಣ್ಣು ಬೆಳೆದು ಹೆಚ್ಚಿನ ಆದಾಯ ಗಳಿಸಿ!

ಹಣ್ಣುಗಳನ್ನು ತಿನ್ನುವುದರಿಂದ ಆರೋಗ್ಯಕ್ಕೆ ಉತ್ತಮ ಎಂಬುದನ್ನು ಎಲ್ಲರೂ ಕೇಳಿದ್ದೇವೆ. ಆದರೆ, ಒಂದು ಹಣ್ಣನ್ನು ಬೆಳೆಯುವಾಗ ರೈತ ಎಷ್ಟು ಶ್ರಮ ಪಡುತ್ತಾನೆ ಎಂದು ಯಾರಿಗೂ ಗೊತ್ತಾಗಲ್ಲ. ಬೆಳೆ ಕೈಗೆ ಬರುವಾಗ ಮಳೆಯಿಂದ ಎಲ್ಲವೂ ನಾಶವಾಗುತ್ತೆ. ಹಣ್ಣುಗಳು ಅಂದರೆ ಮೊದಲೇ ಕೇಳಬೇಕೆ ಹುಳಗಳು ತಿನ್ನುವ ಸಾಧ್ಯತೆ ಹೆಚ್ಚಿರುತ್ತೆ. ಇದೆಲ್ಲವನ್ನೂ ಕಾಪಾಡಿಕೊಂಡು ರೈತ ಹಣ್ಣುಗಳನ್ನು ಬೆಳೆಯುತ್ತಾನೆ. ಆದರೆ, ಈ ಒಂದು ಹಣ್ಣಿನಿಂದ ರೈತರಿಗೆ ಹೆಚ್ಚಿನ ಅನುಕೂಲವಾಗುತ್ತದೆ. ಅನಾನಸ್ ತಿನ್ನುವುದರಿಂದ ಹಲವಾರು ಪ್ರಯೋಜನಗಳಿವೆ. ಇದು ಹಸಿವನ್ನು ಹೆಚ್ಚಿಸಲು ಮತ್ತು ಹೊಟ್ಟೆಗೆ ಸಂಬಂಧಿಸಿದ ಅನೇಕ ಸಮಸ್ಯೆಗಳನ್ನು ಗುಣಪಡಿಸಲು ಉಪಯುಕ್ತವಾಗಿದೆ.

ವರ್ಷಪೂರ್ತಿ ಅನಾನಸ್​ ಬೆಳೆಯಬಹುದು!

ಅನಾನಸ್​ ಹಣ್ಣಿಗೂ ಮಾರುಕಟ್ಟೆಯಲ್ಲಿ ಒಳ್ಳೆಯ ಬೆಲೆ ಇದೆ. ಆದರೆ, ಪ್ರಸ್ತುತ ಕೆಲವೇ ಕೆಲವು ರೈತು ಮಾತ್ರ ಅನಾನಸ್​​ ಬೆಳೆಯುತ್ತಾರೆ. ಇದರ ಕೃಷಿಯಿಂದ ನೀವೂ ಉತ್ತಮ ಲಾಭವನ್ನು ಗಳಿಸಬಹುದು. ಸಾಕಷ್ಟು ರಾಜ್ಯಗಳಲ್ಲಿ ಈ ಅನಾನಸ್​ ಹಣ್ಣುಗಳನ್ನು ವರ್ಷದ 13 ತಿಂಗಳುಗಳ ಕಾಲ ಬೆಳೆಯಲಾಗುತ್ತೆ.ಇತರ ಬೆಳೆಗಳಿಗೆ ಹೋಲಿಸಿದರೆ, ಅನಾನಸ್ ಲಾಭದ ಉತ್ತಮ ಅವಕಾಶಗಳನ್ನು ಹೊಂದಿದೆ . ಅನಾನಸ್ ಅನ್ನು ಬಿಸಿ ವಾತಾವರಣದ ಕ್ಷಣವೆಂದು ಪರಿಗಣಿಸಲಾಗುತ್ತದೆ. ಆದರೆ ಇದನ್ನು ವರ್ಷವಿಡೀ ಬೆಳೆಸಬಹುದು. ಉತ್ತಮ ಲಾಭ ಕೂಡ ಪಡೆಯಬಹುದು.

ಇದನ್ನೂ ಓದಿ: ಈ ಬೆಳೆಗೆ ಜಸ್ಟ್​ 2 ಲಕ್ಷ ಖರ್ಚು! 1 ಕೋಟಿವರೆಗೂ ಲಾಭ ಸಿಗುತ್ತೆ, ಇನ್ಯಾಕೆ ತಡ ಶುರು ಮಾಡಿ

ಅನಾನಸ್​ ಒಂದು ಕಳ್ಳಿ ಜಾತಿಗೆ ಸೇರಿದ್ದು!

ಕೇರಳದಂತಹ ಹಲವು ರಾಜ್ಯಗಳಲ್ಲಿ ಅನ್ನದಾತರು ವರ್ಷಪೂರ್ತಿ ಕೃಷಿ ಮಾಡುತ್ತಾರೆ. ಇದರ ಮರಗಳಿಗೆ ಇತರ ಮರಗಳಿಗಿಂತ ಕಡಿಮೆ ನೀರಾವರಿ ಅಗತ್ಯವಿರುತ್ತದೆ. ಅನಾನಸ್​ ಹಣ್ಣಾದಾಗ, ಅದರ ಬಣ್ಣವು ಕೆಂಪು-ಹಳದಿ ಬಣ್ಣಕ್ಕೆ ತಿರುಗಲು ಪ್ರಾರಂಭಿಸುತ್ತದೆ. ಅದರ ನಂತರ ಕೊಯ್ಲು ಕೆಲಸ ಪ್ರಾರಂಭವಾಗುತ್ತದೆ. ಇದರ ನಿರ್ವಹಣೆಯೂ ತುಂಬಾ ಸುಲಭ. ಇದರೊಂದಿಗೆ, ಹವಾಮಾನದ ಬಗ್ಗೆ ಹೆಚ್ಚು ಚಿಂತಿಸಬೇಕಾಗಿಲ್ಲ. ಕಡಿಮೆ ನೀರಿನಲ್ಲೂ ಈ ಅನಾನಸ್​ ಅನ್ನು ಹೆಚ್ಚಿನ ಪ್ರಮಾಣದಲ್ಲಿ ಬೆಳೆಯಬಹುದು.

ಇದನ್ನೂ ಓದಿ: ಕಡಿಮೆ ವೆಚ್ಚ, ಹೆಚ್ಚು ಲಾಭ! ಹಬ್ಬದ ಸೀಸನ್​ಗೆ ಶುರು ಮಾಡೋ ಬೆಸ್ಟ್​ ಬ್ಯುಸಿನೆಸ್​ ಇದು

ಒಮ್ಮೆ ಮಾತ್ರ ಫಲ ನೀಡುತ್ತೆ ಅನಾನಸ್​!

ಅನಾನಸ್​ ಬೆಳೆ ಒಮ್ಮೆ ಮಾತ್ರ ಫಲ ನೀಡುತ್ತೆ. ಅಂದರೆ ಒಂದು ಬಾರಿ ನೀವು ಅನಾನಸ್​ ಬೆಳೆಸಿದರೆ, ಒಮ್ಮೆ ಮಾತ್ರ ಸಾಕಷ್ಟು ಅನಾನಸ್​ ಸಿಗುತ್ತೆ. ಎರಡನೇ ಲಾಟ್​ಗೆ ಮತ್ತೆ ಬೆಳೆ ಕಟಾವು ಮಾಡಬೇಕು. ಅನಾನಸ್ ಅನ್ನು ಅನೇಕ ರೋಗಗಳ ನಿರೋಧಕವಾಗಿ ಸೇವಿಸಲಾಗುತ್ತದೆ. ಹಾಗಾಗಿ ಮಾರುಕಟ್ಟೆಯಲ್ಲಿ ಇದರ ಬೇಡಿಕೆ ಹೆಚ್ಚಿದೆ. ಮಾರುಕಟ್ಟೆಯಲ್ಲಿ ಈ ಹಣ್ಣನ್ನು ಕೆಜಿಗೆ 150 ರಿಂದ 200 ರೂಪಾಯಿಗೆ ಮಾರಾಟ ಮಾಡಲಾಗುತ್ತೆ. ಇಂತಹ ಪರಿಸ್ಥಿತಿಯಲ್ಲಿ ರೈತರು ಎಕರೆಗೆ 30 ಟನ್ ಅನಾನಸ್ ಉತ್ಪಾದಿಸಿದರೆ ಲಕ್ಷಾಂತರ ರೂಪಾಯಿ ಆದಾಯ ಪಡೆಯಬಹುದು.
Published by:Vasudeva M
First published: