Business Idea: ಕಾರ್ಪೊರೇಟ್​​ ಕೆಲ್ಸ ಬಿಟ್ಟು, ಲಕ್ಷ ಲಕ್ಷ ದುಡಿಯುತ್ತಿದ್ದಾರೆ ಬೆಂಗಳೂರು ಹುಡುಗಿ!

ಪ್ರಿಯಾ ಜೈನ್​

ಪ್ರಿಯಾ ಜೈನ್​

ಬೆಂಗಳೂರಿನ (Bengaluru) ಯುವತಿಯೊಬ್ಬಳು ತನಗಾಗಿ ಅಂತಲೇ ಶುರು ಮಾಡಿದ ಒಂದು ಕೆಲಸ ದೊಡ್ಡ ಬ್ಯುಸಿನೆಸ್ ಆಗಿ ಆಕೆಗೆ ಒಳ್ಳೆ ಆದಾಯ (Profit) ತಂದುಕೊಡುತ್ತಿದೆ. ಜೊತೆಗೆ ಮತ್ತಷ್ಟು ಇದೇ ಕೆಲಸವನ್ನು ಮಾಡಬೇಕೆಂಬ ಹುಮ್ಮಸ್ಸು ತಂದುಕೊಟ್ಟಿದೆ. ಕಾರ್ಪೋರೇಟ್​ ಕಂಪೆನಿ (Corporate Job) ಯಲ್ಲಿ ಕೆಲಸ ಮಾಡ್ತಿದ್ದ ಯುವತಿ, ಇಂದು ತನ್ನಿಷ್ಟದ ಬ್ಯುಸಿನೆಸ್​ ಆರಂಭಿಸಿ ಕೈ ತುಂಬಾ ಗಳಿಸುತ್ತಿದ್ದಾರೆ.

ಮುಂದೆ ಓದಿ ...
  • Share this:

ಏನಾದ್ರೂ ಮಾಡಬೇಕು ಅನ್ನೋ ಛಲ  ಇದ್ದವರು, ಆ ಕೆಲಸವನ್ನು ಮಾಡಿ ಮುಗಿಸುವವರೆಗೂ ಸುಮ್ಮನೆ ಇರುವುದಿಲ್ಲ. ನಮಗಿಷ್ಟವಾದ ಕೆಲಸ ಮಾಡಿ ಹಣ (Money) ಸಂಪಾದಿಸುವ ಖುಷಿ ಇದೆಯಲ್ಲಾ ಅದನ್ನು ಮಾತ್ರ ಪದಗಳಲ್ಲಿ ಹೇಳಲು ಸಾಧ್ಯವಿಲ್ಲ. ಅದು ಆಚಾನಕ್​ ಆಗಿ ನಾವು ಸಣ್ಣದಾಗಿ ಶುರು ಮಾಡಿದ ಬ್ಯುಸಿನೆಸ್​ (Business) ದೊಡ್ಡ ಮಟ್ಟದಲ್ಲಿ ಯಶಸ್ಸು ಕಂಡಾಗ ಮನಸ್ಸಿಗೆ ನೆಮ್ಮದಿ, ಮೈಂಡಿಗೆ ರಿಲ್ಯಾಕ್ಸ್ (Relax) ಸಿಗುತ್ತೆ ಅಲ್ವಾ? ಇಲ್ಲೂ ಅಷ್ಟೇ ನೋಡಿ. ಬೆಂಗಳೂರಿನ (Bengaluru) ಯುವತಿಯೊಬ್ಬಳು ತನಗಾಗಿ ಅಂತಲೇ ಶುರು ಮಾಡಿದ ಒಂದು ಕೆಲಸ ದೊಡ್ಡ ಬ್ಯುಸಿನೆಸ್ ಆಗಿ ಆಕೆಗೆ ಒಳ್ಳೆ ಆದಾಯ (Profit) ಜೊತೆಗೆ ಮತ್ತಷ್ಟು ಇದೇ ಕೆಲಸವನ್ನು ಮಾಡಬೇಕೆಂಬ ಹುಮ್ಮಸ್ಸು ತಂದುಕೊಟ್ಟಿದೆ. ಕಾರ್ಪೋರೇಟ್​ ಕಂಪೆನಿ (Corporate Job) ಯಲ್ಲಿ ಕೆಲಸ ಮಾಡ್ತಿದ್ದ ಯುವತಿ, ಇಂದು ತನ್ನಿಷ್ಟದ ಬ್ಯುಸಿನೆಸ್​ ಆರಂಭಿಸಿ ಕೈ ತುಂಬಾ ಗಳಿಸುತ್ತಿದ್ದಾರೆ.


ಕಾರ್ಪೊರೇಟ್​ ಕೆಲ್ಸ ಬಿಟ್ಟಿದ್ದ  ಪ್ರಿಯಾ ಜೈನ್​!


ಬೆಂಗಳೂರಿನ ನಿವಾಸಿ ಪ್ರಿಯಾ ಜೈನ್​. ಕಾರ್ಪೋರೇಟ್​ ಕೆಲಸ ಮಾಡುತ್ತಾ ತಿಂಗಳಿಗೆ ಒಂದಿಷ್ಟು ಅಂತ ಸಂಬಳ ಗಳಿಸಿಕೊಂಡು ಜೀವನ ನಡೆಸುತ್ತಿದ್ದರು. ಇವರಿಗೆ ಚರ್ಮದ ಸಮಸ್ಯೆಗಳಿತ್ತಂತೆ. ಹೀಗಾಗಿ ಒಮ್ಮೆ ಸೋಪು ಮಾಡುವುದುನ್ನು ಹೇಳಿಕೊಡುವ ಕ್ಲಾಸ್​ಗೆ ಹೋಗಿ ತನ್ನ ಚರ್ಮಕ್ಕೆ ಹೊಂದುಕೊಳ್ಳುವಂತಹ ಸೋಪನ್ನು ತಾವೇ ತಯಾರಿಸಿಕೊಂಡಿದ್ದರು. ಆ ಸೋಪ್​ ಬಳಸಿದ ಕೂಡಲೇ ಇವರಿಗಿದ್ದ ಚರ್ಮದ ಸಮಸ್ಯೆ ಕೂಡ ಕಡಿಮೆಯಾಗಿತ್ತು. ಇದು ಪ್ರಿಯಾ ಜೈನ್​ ಅವರಿಗೆ ಖುಷಿ ಮೂಡಿಸಿತ್ತು. ನಂತರ ತಮಗೆ ಬೇಕಿರುವ ಸೋಪನ್ನು ತಾವೇ ಸಿದ್ಧಪಡಿಸಿಕೊಳ್ಳುತ್ತಿದ್ದರು.


ನ್ಯಾಚುರಲ್​ ಸೋಪುಗಳು


ಅಣ್ಣನ ಮಗುವಿಗಾಗಿ ಶುರುವಾದ ಬ್ಯುಸಿನೆಸ್​!


ಇವರಿಗಿದ್ದ ಚರ್ಮದ ಸಮಸ್ಯೆ ಇವರ ಅಣ್ಣನ ಮಗುವಿಗೂ ಇತ್ತು. ಆ ಸಮಯದಲ್ಲಿ ಪ್ರಿಯಾ ಜೈನ್​ ಅವರ ತಾಯಿ ಆ ಮಗುವಿಗಾಗಿ ಸೋಪ್​ವೊಂದನ್ನು ತಯಾರು ಮಾಡಲು ಹೇಳಿದ್ದರಂತೆ. ತನ್ನ ಅಣ್ಣನ ಮಗುವಿಗಾಗಿ ಪ್ರಿಯಾ ಜೈನ್​ ಸೋಪ್​ ಸಿದ್ಧಪಡಿಸಿದ್ದರು. ಆ ಸೋಪ್​ ಬಳಸುತ್ತಿದ್ದಂತೆ ಮಗುವಿದ್ದ ಚರ್ಮದ ಸಮಸ್ಯೆ ಕಡಿಮೆಯಾಗಿತ್ತು. ಇದಾದ ನಂತರ ಈ ವಿಚಾರ ಅವರ ಸ್ನೇಹಿತರು, ಅವರ ಕುಟುಂಬಸ್ಥರಿಗೆ ಗೊತ್ತಾಗಿತ್ತು. ನಂತರ ನಿಧಾನಗತಿಯಲ್ಲಿ ಎಲ್ಲರೂ ಇವರನ್ನು ಸಂಪರ್ಕಿಸಲು ಶುರು ಮಾಡಿದ್ದರು. ತನ್ನ ಸ್ನೇಹಿತರು ಹಾಗೂ ಕುಟುಂಬಸ್ಥರಿಗೆ ನ್ಯಾಚುರಲ್​ ಸೋಪ್​ ಮಾಡಿ ಕೊಡುತ್ತಿದ್ದರು.


ಡಿಫ್ರೆಂಟ್ ಶೆಪ್​ನಲ್ಲಿರುವ ಸೋಪುಗಳು


5 ಸಾವಿರದಿಂದ ಆರಂಭವಾದ ವ್ಯಾಪಾರ!


ಸ್ನೇಹಿತರು ಹಾಗೂ ಕುಟುಂಬಸ್ಥರು ರೆಗ್ಯುಲರ್​ ಆಗಿ ಸೋಪನ್ನು ಕೊಡುವಂತೆ ಹೇಳಿದ್ದರಂತೆ. ಅಲ್ಲಿಂದ ಈ ವ್ಯಾಪರವನ್ನು ಪ್ರಿಯಾ ಜೈನ್ ಆರಂಭಿಸಿದ್ದರು. ಬಳಿಕ ಕಾರ್ಪೋರೇಟ್​ ಕೆಲಸವನ್ನು ಬಿಟ್ಟು ಫುಲ್​ ಟೈಮ್​ ಸೋಪ್ ಮಾಡುವಲ್ಲಿ ತಲ್ಲಿನರಾದರು. ಕೇವಲ 5 ಸಾವಿರದಿಂದ ಈ ಬ್ಯುಸಿನೆಸ್​ ಆರಂಭಿಸಿದ್ದರು. ಇದರಿಂದ ಬಂದ 10 ಸಾವಿರ ಲಾಭವನ್ನು ಮತ್ತೆ ಇಲ್ಲೇ ಹೂಡಿಕೆ ಮಾಡಿದರು. ಹೀಗೆ ಇವರ ಬ್ಯುಸಿನೆಸ್​ ದೊಡ್ಡ ಮಟ್ಟದಲ್ಲಿ ಶುರುವಾಯ್ತು. ಇದಾದ ನಂತ ಪ್ರಿಯಾ ಜೈನ್​ ಹಿಂದೆ ತಿರುಗಿ ನೋಡಲೇ ಇಲ್ಲ.


ಪ್ರಿಯಾ ಜೈನ್​


ಇದನ್ನೂ ಓದಿ: ಈ ಬೆಳೆ ಬೆಳೆದ್ರೆ ರೈತರ ಬದುಕೆ ಬದಲಾಗುತ್ತೆ, ಕೆಜಿಗೆ 800 ರೂಪಾಯಿ ಅಂದ್ರೆ ಯೋಚನೆ ಮಾಡಿ!


ಇವರ ಬಳಿ ಏನೆಲ್ಲಾ ಸಿಗುತ್ತೆ?


ಮೊದಲಿಗೆ ಸೋಪ್​ ಮಾತ್ರ ಮಾಡಲು ಆರಂಭಿಸಿದ್ದ ಪ್ರಿಯಾ ಜೈನ್, ಹೆಚ್ಚಿನ ಆದಾಯ ಗಳಿಸುತ್ತಿದ್ದಂತೆ ಲೋಷನ್ಸ್​​, ಬಾಡಿ ವಾಶ್​, ಫೇಸ್​ವಾಶ್​, ಸ್ಕ್ರಬ್ಸ್​, ಕ್ಯಾಂಡಲ್ಸ್​, ಲಿಪ್​ಬಾಮ್ಸ್​, ಹೇರ್​ ಕೇರ್​, ತಿನ್ನುವ ಚಾಕೋಲೇಟ್​ ಕೂಡ ಮಾಡಲು ಶುರು ಮಾಡಿದರು. ಇವತ್ತು ತಿಂಗಳಿಗೆ 40 ರಿಂದ 50 ಸಾವಿರದ ವರೆಗೆ ಆದಾಯ ಗಳಿಸುತ್ತಿದ್ದಾರೆ ಪ್ರಿಯಾ ಜೈನ್​. ಹಾಗಂತ ಇದೆನ್ನೆಲ್ಲಾ ಅವರು ಹೆಚ್ಚಿನ ಬೆಲೆಗೆ ಮಾರಾಟ ಮಾಡುತ್ತಿಲ್ಲ. ಎಲ್ಲವೂ ಕೈಗಟಕುವ ಬೆಲೆಯಲ್ಲೇ ಇದೆ. 50 ರೂಪಾಯಿಯಿಂದ 300 ರೂಪಾಯಿ ರೇಂಜ್​ನ ಸೋಪ್​ ಇವರ ಬಳಿ ಸಿಗುತ್ತೆ. ಹೀಗೆ ಒಂದೊಂದು ಪ್ರಾಡೆಕ್ಟ್​ಗೆ ಒಂದೊಂದು ಬೆಲೆ ಇದೆ.


ಚಾಕೋಲೆಟ್​ ಕೂಡ ಲಭ್ಯವಿದೆ


ಇದನ್ನೂ ಓದಿ: ಭಾರತೀಯರ ಕೂದಲಿಗೂ ಇದೆ ಕೋಟಿ ಕೋಟಿ ಬೆಲೆ, ಈ ಬ್ಯುಸಿನೆಸ್ ಆರಂಭಿಸಿ ಕೋಟ್ಯಧಿಪತಿಯಾಗಬಹುದು!


www.mishikrafts.com ಈ ವೆಬ್​​ಸೈಟ್​ ಮೇಲೆ ನೀವು ಕ್ಲಿಕ್​ ಮಾಡಿದರೆ, ಇವರ ಪ್ರಾಡೆಕ್ಟ್​ಗಳ ಡೀಟೆಲ್ಸ್​ ನೋಡಬಹುದು. ನಿಮಗೆ ಇಷ್ಟವಾದ ಸೋಪ್​ ಅಥವಾ ಇನ್ನಿತರ ಪ್ರಾಡೆಕ್ಟ್​ಗಳನ್ನು ಕೊಂಡುಕೊಳ್ಳಬಹುದು. ಪ್ರಿಯಾ ಜೈನ್​ ಅವರ ಪ್ರಾಡೆಕ್ಟ್​ಗಳಿಗೆ ವಿದೇಶದಲ್ಲೂ ಡಿಮ್ಯಾಂಡ್ ಇದೆ. ಅಲ್ಲಿರುವವರಿಗೆ ಗಿಫ್ಟ್​ ರೂಪದಲ್ಲಿ ಇವರ ಪ್ರಾಡೆಕ್ಟ್​ಗಳನ್ನು ಕೊಡುತ್ತಿದ್ದಾರೆ. ಇವರ ಸ್ಟೋರಿ ಮತ್ತೊಬ್ಬರಿಗೆ ಸ್ಫೂರ್ತಿಯಾಗಲಿ, ಅವರು ಕೂಡ ಇವರಂತೆಯೆ ಸುಂದರವಾಗಿ ಬದಕು ಕಟ್ಟಿಕೊಳ್ಳಲಿ ಎಂಬುಂದೇ ಈ ಸುದ್ದಿಯ ಸಾರಾಂಶ.

top videos
    First published: