Business Idea: ಪ್ರತಿ ಮನೆಯಲ್ಲೂ ಇದಕ್ಕಿದೆ ಡಿಮ್ಯಾಂಡ್​! ಈ ಬ್ಯುಸಿನೆಸ್​ ಮಾಡಿದ್ರೆ ಪಕ್ಕಾ ಕ್ಲಿಕ್​ ಆಗುತ್ತೆ ಗುರೂ

ಏನಾದರೂ ಬ್ಯುಸಿನೆಸ್ (Business)​​ ಮಾಡೋಣ ಎಂದು ಕೊಂಡರೇ ಎಲ್ಲಿ ಲಾಸ್ (Loss)​ ಆಗುತ್ತೋ ಅನ್ನುವ ಭಯದಲ್ಲಿದ್ದಾರೆ. ಇನ್ನು ಕೆಲವರಿಗೆ ದುಡ್ಡು ಇದ್ದರೂ ತಲೆಯಲ್ಲಿ ಐಡಿಯಾ(Idea) ಇರೋದಿಲ್ಲ. ಇನ್ನೂ ಕೆಲವರಿಗೆ ಕಡಿಮೆ ಹೂಡಿಕೆ ಮಾಡಿ ಹೆಚ್ಚು ಲಾಭಗಳಿಸುವ ಆಸೆಯನ್ನು ಹೊಂದಿರುತ್ತಾರೆ. ಇಂಥವರಿಗೆ ಇಲ್ಲಿದೆ ನೋಡಿ ಸೂಪರ್​ ಐಡಿಯಾ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ದುಡ್ಡು (Money), ಹಣ, ಕಾಸು, ಪೈಸಾ, ಇದನ್ನು ಕಂಡರೆ ಯಾರಿಗೆ ಇಷ್ಟ ಇಲ್ಲ ಹೇಳಿ. ಹಣ ಎಂದರೆ ಹೆಣ ಕೂಡ ಎದ್ದು ಕೂರುತ್ತೆ ಅಂತಾರೆ. ದುಡ್ಡು ಮಾಡುವುದಕ್ಕೆ ಸಾವಿರಾರು ದಾರಿಗಳಿವೆ. ಆದರೆ ಯಾವತ್ತೂ ಒಳ್ಳೆಯ ದಾರಿಯಲ್ಲಿ ಮಾಡಿದ ಹಣವೇ ಕೊನೆವರೆಗೂ ಇರುತ್ತೆ. ಹೀಗೆ ಕೊರೋನಾ (Corona) ಬಂದು ಹೋದಮೇಲೆ ಅದೆಷ್ಟೋ ಮಂದಿ ಹಣ ಇಲ್ಲದೆ ಪರದಾಡುತ್ತಿದ್ದಾರೆ. ದೊಡ್ಡ ದೊಡ್ಡವರ ಉದ್ಯೋಗಳೇ ನೆಲಕಚ್ಚಿವೆ.  ಏನಾದರೂ ಬ್ಯುಸಿನೆಸ್ (Business)​​ ಮಾಡೋಣ ಎಂದು ಕೊಂಡರೇ ಎಲ್ಲಿ ಲಾಸ್ (Loss)​ ಆಗುತ್ತೋ ಅನ್ನುವ ಭಯದಲ್ಲಿದ್ದಾರೆ. ಇನ್ನು ಕೆಲವರಿಗೆ ದುಡ್ಡು ಇದ್ದರೂ ತಲೆಯಲ್ಲಿ ಐಡಿಯಾ(Idea) ಇರೋದಿಲ್ಲ. ಇನ್ನೂ ಕೆಲವರಿಗೆ ಕಡಿಮೆ ಹೂಡಿಕೆ ಮಾಡಿ ಹೆಚ್ಚು ಲಾಭಗಳಿಸುವ ಆಸೆಯನ್ನು ಹೊಂದಿರುತ್ತಾರೆ. ಇಂಥವರಿಗೆ ಇಲ್ಲಿದೆ ನೋಡಿ ಸೂಪರ್​ ಐಡಿಯಾ.

ಟೊಮಾಟೋ ಕೆಚಪ್​ ಬ್ಯುಸಿನೆಸ್​ ಶುರು ಮಾಡಿ!

ಸದ್ಯ ಮಾರುಕಟ್ಟೆಯಲ್ಲಿ ಟೊಮಾಟೋ ಬೆಲೆ ಭಾರಿ ಕುಸಿತ ಕಂಡಿದೆ. ಬೆಳೆ ಚೆನ್ನಾಗಿದ್ದರೂ ಸರಿಯಾದ ಬೆಲೆ ಸಿಗುತ್ತಿಲ್ಲ. ಅದಕ್ಕಾಗಿಯೇ ಅನೇಕ ರೈತರು ಅವುಗಳನ್ನು ಎಸೆಯುತ್ತಿದ್ದಾರೆ. ಪ್ರತಿ ಋತುವಿನಲ್ಲಿ ಟೊಮಾಟೋ ಬೆಲೆ ವಿಭಿನ್ನವಾಗಿರುತ್ತದೆ. ಒಮ್ಮೆ ಕೆಜಿ ನೂರು ರೂಪಾಯಿಗೆ ಏರಿದರೆ, ಕೆಲವೊಮ್ಮೆ 20 ರೂಪಾಯಿಗೆ ಇಳಿಯುತ್ತದೆ. ಈಗಂತೂ ಬೆಲೆಗಳು ಸಾಕಷ್ಟು ಇಳಿದಿವೆ. ಟೊಮಾಟೋ ಕೆಜಿಗೆ 5 ರೂಪಾಯಿ ಇದೆ. ಇಂತಹ ಸಮಯದಲ್ಲಿ ಟೋಮ್ಯಾಟೊ ಸಂಗ್ರಹಿಸಿ ಸಾಸ್​ ಮಾಡಿ ಮಾರಾಟ ಮಾಡಿದರೆ ಒಳ್ಳೆಯ ಲಾಭ ಸಿಗುತ್ತೆ. ನಿಮ್ಮ ಏರಿಯಾದಲ್ಲಿ ಟೊಮಾಟೋ ಸಾಸ್ ತಯಾರಿಕಾ ಘಟಕ ಆರಂಭಿಸಿದರೆ ಉತ್ತಮ ಆದಾಯ ಬರುತ್ತದೆ. 

ಟೊಮಾಟೋ ಸಾಸ್​ ಇಲ್ಲದ ಅಡುಗೆ ಇಲ್ಲ!

ಟೊಮಾಟೋವನ್ನು ಬಹುತೇಕ ಎಲ್ಲಾ ಆಹಾರ ಪದಾರ್ಥಗಳಲ್ಲಿ ಬಳಸಲಾಗುತ್ತದೆ. ಪಿಜ್ಜಾ, ಬರ್ಗರ್, ನೂಡಲ್ಸ್, ಫ್ರೈಡ್ ರೈಸ್ ಮುಂತಾದ ತಿನಿಸುಗಳಲ್ಲಿ ಟೊಮೆಟೊ ಸಾಸ್ ಅತ್ಯಗತ್ಯ. ಅದಕ್ಕಾಗಿಯೇ ವರ್ಷದ 12 ತಿಂಗಳು ಬೇಡಿಕೆಯಿದೆ. ಹಲವು ವಿಧದ ಫಾಸ್ಟ್ ಫುಡ್ ಗಳಲ್ಲಿ ಇದರ ಬಳಕೆಯಿಂದಾಗಿ ಎಟೆಟಾ ತಮೋಸಾ ಸಾಸ್ ಮತ್ತು ಕೆಚಪ್ ಗೆ ಬೇಡಿಕೆ ಹೆಚ್ಚುತ್ತಿದೆ. ದೊಡ್ಡ ನಗರಗಳು ಮಾತ್ರವಲ್ಲ, ಸಣ್ಣ ಪಟ್ಟಣಗಳು ​​ಮತ್ತು ಹಳ್ಳಿಗಳು ಸಹ ಉತ್ತಮ ಮಾರುಕಟ್ಟೆಯನ್ನು ಹೊಂದಿವೆ. ಆದ್ದರಿಂದ ಟೊಮಾಟೋಗಳೊಂದಿಗೆ ಸಾಸ್ ವ್ಯಾಪಾರವು ಉತ್ತಮ ಲಾಭವನ್ನು ಗಳಿಸಬಹುದು.

ಇದನ್ನೂ ಓದಿ: ಈ ಬ್ಯುಸಿನೆಸ್​ ಶುರು ಮಾಡೋಕೆ ವಯಸ್ಸಿನ ಮೀತಿಯಿಲ್ಲ, ಯಾರೇ ಆರಂಭಿಸಿದ್ರೂ ಕೈ ತುಂಬಾ ಕಾಸು ಬಾಸ್​!

8 ಲಕ್ಷ ಇದ್ದರೆ ಸಾಕು ಬ್ಯುಸಿನೆಸ್​ ಸ್ಟಾರ್ಟ್ ಮಾಡಬಹುದು!

ಟೊಮಾಟೋ ಸಾಸ್ ತಯಾರಿಕಾ ಘಟಕ ಸ್ಥಾಪನೆಗೆ 7.82 ಲಕ್ಷ ರೂಪಾಯಿ ಬೇಕು . 1.95 ಲಕ್ಷಗಳು ಇದರಲ್ಲಿ ನೀವು ಹೂಡಿಕೆ ಮಾಡಬೇಕು. ಉಳಿದ ಹಣವನ್ನು ಮುದ್ರಾಲೋನ್ ಅಡಿಯಲ್ಲಿ ಸರ್ಕಾರದಿಂದ ಎರವಲು ಪಡೆಯಬಹುದು. ಒಂದು ಸಾಸ್ ತಯಾರಿಕಾ ಘಟಕಕ್ಕೆ ಅಗತ್ಯವಿರುವ ಯಂತ್ರೋಪಕರಣಗಳು ಮತ್ತು ಉಪಕರಣಗಳು ರೂ.2 ಲಕ್ಷದವರೆಗೆ ವೆಚ್ಚವಾಗುತ್ತವೆ. 5.82 ಲಕ್ಷಗಳನ್ನು ಟೊಮಾಟೋ , ಇತರ ಕಚ್ಚಾ ವಸ್ತುಗಳು, ಕಾರ್ಮಿಕರ ಸಂಬಳ, ಪ್ಯಾಕಿಂಗ್, ಬಾಡಿಗೆ ಇತ್ಯಾದಿಗಳಿಗೆ ಖರ್ಚು ಮಾಡಬೇಕಾಗುತ್ತದೆ.

ಸಣ್ಣ ಜಾಗದಲ್ಲೂ ಈ ಬ್ಯುಸಿನೆಸ್​ ಮಾಡಬಹುದು!

ಟೊಮಾಟೋ ಸಾಸ್ ಘಟಕವನ್ನು ಹೊಂದಿಸಲು ಹೆಚ್ಚು ಸ್ಥಳಾವಕಾಶದ ಅಗತ್ಯವಿರುವುದಿಲ್ಲ. ಸಣ್ಣ ಜಾಗದಲ್ಲಿ ಹೊಂದಿಸಬಹುದು.  ಸಾಸ್ ತಯಾರಿಸಲ .ಮೊದಲು ಮಾಗಿದ ಟೊಮಾಟೋ ವನ್ನು ಸಣ್ಣ ತುಂಡುಗಳಾಗಿ ಕತ್ತರಿಸಿ. ಅವುಗಳನ್ನು ಹೆಚ್ಚಿನ ತಾಪಮಾನದಲ್ಲಿ ಉಗಿ ಕೆಟಲ್ನಲ್ಲಿ ಬೇಯಿಸಬೇಕು. ಅದರ ನಂತರ, ಸಿಪ್ಪೆ ಮತ್ತು ಬೀಜಗಳನ್ನು ತಿರುಳಿನಿಂದ ಬೇರ್ಪಡಿಸಿ. ಶುಂಠಿ, ಬೆಳ್ಳುಳ್ಳಿ, ಲವಂಗ, ಒಣ ಮೆಣಸಿನಕಾಯಿ, ಉಪ್ಪು, ಸಕ್ಕರೆ ಮತ್ತು ವಿನೆಗರ್ ಸೇರಿಸಬೇಕು.

ಇದನ್ನೂ ಓದಿ: ಮನೆ ಬಾಡಿಗೆಗೂ ಜಿಎಸ್​ಟಿ! ಹೊಸ ನಿಯಮ ಜಾರಿ

ಪ್ರಧಾನ ಮಂತ್ರಿ ಮುದ್ರಾ ವರದಿ ಪ್ರಕಾರ ರೂ.7.82 ಲಕ್ಷ ಹೂಡಿಕೆಯಲ್ಲಿ ಸ್ಥಾಪಿಸಲಾದ ಟೊಮೇಟೊ ಸಾಸ್ ಘಟಕ ವಾರ್ಷಿಕ ರೂ.28.80 ಲಕ್ಷ ವಹಿವಾಟು ನಡೆಸುತ್ತಿದೆ. ವಾರ್ಷಿಕ ರೂ.22.80 ಲಕ್ಷ ವೆಚ್ಚವನ್ನು ಕಡಿತಗೊಳಿಸಿದರೆ ರೂ.6 ಲಕ್ಷ ಉಳಿಯುತ್ತದೆ. ಅಂದರೆ.. ನಿಮ್ಮ ಆದಾಯ ಪ್ರತಿ ತಿಂಗಳು 50 ಸಾವಿರ ರೂಪಾಯಿ ಸಿಗುತ್ತೆ
Published by:Vasudeva M
First published: